ಯುವಕನಿಗೆ ಸಾನ್ಯಾ ಐಯ್ಯರ್ ಕಪಾಳ ಮೋಕ್ಷ – ಪುತ್ತೂರಿನಲ್ಲಿ ನಡೆದಿದ್ದೇನು?

ಯುವಕನಿಗೆ ಸಾನ್ಯಾ ಐಯ್ಯರ್ ಕಪಾಳ ಮೋಕ್ಷ – ಪುತ್ತೂರಿನಲ್ಲಿ ನಡೆದಿದ್ದೇನು?

ಪುಟ್ಟ ಗೌರಿ ಮದುವೆ ಖ್ಯಾತಿಯ ಸಾನ್ಯಾ ಐಯ್ಯರ್ ಬಿಗ್ ಬಾಸ್ ಹೋಗಿ ಬಂದಾಗಿಂದ ಮತ್ತಷ್ಟು ಜನಮನ್ನಣೆ ಗಳಿಸಿದ್ದಾರೆ. ಹೀಗಾಗಿ ಅವರು ಹೋದಲ್ಲೆಲ್ಲಾ ಫ್ಯಾನ್ ಫಾಲೋಯಿಂಗ್ ಕೂಡಾ ಹೆಚ್ಚುತ್ತಲೇ ಇದೆ. ಇದರಿಂದಾಗಿ ಸಾನ್ಯಾ ಹೋದಲ್ಲೆಲ್ಲಾ ಸೆಲ್ಫಿಗಾಗಿ ಜನರು ಮುಗಿಬೀಳುತ್ತಿದ್ದಾರೆ. ಸಾನ್ಯಾ ಪುತ್ತೂರಿಗೆ ತೆರಳಿದ್ದಾಗ ವ್ಯಕ್ತಿಯೊಬ್ಬ ಸೆಲ್ಫಿ ತೆಗಿಸಿಕೊಳ್ಳುವ ನೆಪದಲ್ಲಿ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: “ನನ್ನ ಫೋಟೋ, ಧ್ವನಿ ಬಳಸಿದ್ರೆ ಹುಷಾರ್” – ರಜನಿಕಾಂತ್ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ?

ಶನಿವಾರ ಸಾನ್ಯಾ ಐಯ್ಯರ್ ಪುತ್ತೂರಿನಲ್ಲಿ ನಡೆದ 30 ನೇ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ ನೋಡಲು ಮಧ್ಯರಾತ್ರಿ ಸ್ನೇಹಿತರೊಂದಿಗೆ ಆಗಮಿಸಿದ್ದರು. ಅವರನ್ನು ನೋಡುತ್ತಿದ್ದಂತೆ ಒಂದಷ್ಟು ಮಂದಿ ಸೆಲ್ಫಿ ತೆಗೆದುಕೊಳ್ಳಲು ಮುಂದೆ ಬಂದಿದ್ದಾರೆ. ಈ ವೇಳೆ ಯುವಕನೋರ್ವ ಸಾನ್ಯಾ ಕೈಹಿಡಿದು ಎಳೆದಿದ್ದಾನೆ. ಇದರಿಂದ ಕೋಪಗೊಂಡ ಸಾನ್ಯಾ ಯುವಕನಿಗೆ ಕಪಾಳಮೋಕ್ಷ ಮಾಡಿದ್ದರು. ಸಿಟ್ಟಾದ ಆತ ಮರಳಿ ಸಾನ್ಯಾ ಕೆನ್ನೆಗೆ ಬಾರಿಸಿದ್ದಾನೆ. ಈ ಘಟನೆ ಬೆನ್ನಲ್ಲೇ ಸ್ಥಳೀಯರು ಯುವಕನಿಗೆ ಹೊಡೆದಿದ್ದಾರೆ.

ಈ ಘಟನೆಯಿಂದ ಸಾನ್ಯಾ ಕೋಪಗೊಂಡಿದ್ದಾರೆ. ಕಂಬಳ ಆಯೋಜಕರನ್ನು ಸಾನ್ಯಾ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಹೆಣ್ಣುಮಕ್ಕಳ ಮೈ ಮುಟ್ಟಿದ್ರೆ ಸರಿ ಇರಲ್ಲ’ ಎಂದು ಸಾನ್ಯಾ ಕೂಗಾಡಿರುವ ವಿಡಿಯೋ ವೈರಲ್ ಆಗುತ್ತಿದೆ.

suddiyaana