ಇಸ್ರೋದ ಮತ್ತೊಂದು ಐತಿಹಾಸಿಕ ಸಾಧನೆ – GSLV-F12 ರಾಕೆಟ್ ಯಶಸ್ವಿ ಉಡಾವಣೆ
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ನ್ಯಾವಿಗೇಶನ್ ಸ್ಯಾಟ್ಲೈಟ್ನ್ನ ಹೊತ್ತ GSLV-F12 ರಾಕೆಟ್ ಅನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಸುಮಾರು 20 ನಿಮಿಷಗಳ ಪ್ರಯಾಣದ ಬಳಿಕ ಸ್ಯಾಟ್ಲೈಟ್ ಕಕ್ಷೆಯನ್ನ ಸೇರ್ಪಡೆಯಾಗಿದೆ. ಭಾರತದ ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗೆ ಈ ಸ್ಯಾಟ್ಲೈಟ್ ಸಾಕಷ್ಟು ನೆರವಾಗಲಿದೆ ಅಂತಾ ಇಸ್ರೋ ಹೇಳಿದೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಬ್ಯಾಹ್ಯಾಕಾಶ ನಿಲ್ದಾಣದಲ್ಲಿ ಇನ್ನಷ್ಟು ದೊಡ್ಡ ಪ್ರಮಾಣದ ಪ್ಲೇಬೋರ್ಡ್ಗಳನ್ನ ಅಳವಡಿಸಲಾಗುವುದು ಅಂತಾನೂ ಇಸ್ರೋ ಮಾಹಿತಿ ನೀಡಿದೆ. ಈ ನಡುವೆ ಇಸ್ರೋ ಸಂಸ್ಥೆ ಇನ್ನೊಂದು ಗುಡ್ನ್ಯೂಸ್ ಕೂಡ ಕೊಟ್ಟಿದೆ. ಇದೇ ವರ್ಷ ಜುಲೈನಲ್ಲಿ ಚಂದ್ರಯಾನ-3 ಮಿಷನ್ ಲಾಂಚ್ ಮಾಡಲಿದೆ. ಚಂದ್ರನ ಅಂಗಳದಲ್ಲಿ ಸ್ಯಾಟ್ಲೈಟ್ ವಾಹನವೊಂದನ್ನ ಲ್ಯಾಂಡ್ ಮಾಡುವ ಯೋಜನೆ ಇದಾಗಿದ್ದು, ಇಸ್ರೋ ಭರದ ತಯಾರಿ ನಡೆಸುತ್ತಿದೆ. ಈ ಹಿಂದೆ ಚಂದ್ರಯಾನ-2 ಯೋಜನೆ ಕೊನೆಯ ಹಂತದಲ್ಲಿ ಲ್ಯಾಂಡಿಗ್ ವೇಳೆ ಸಮಸ್ಯೆ ಕಾಣಿಸಿಕೊಂಡು ವಿಫಲವಾಗಿತ್ತು.