ವಿಶ್ವಕ್ಕೆ ನಂ1 ಆಗುತ್ತಾ ಇಸ್ರೋ? ಚಂದ್ರಯಾನಕ್ಕೆ ಯಾಕೆ ಪೈಪೋಟಿ?
3ನೇ ಲಾಂಚ್ ಪ್ಯಾಡ್ಗೆ 3,985 ಕೋಟಿ

ಇಸ್ರೋ ಭಾರತದ ಬಾಹ್ಯಾಕಾಶ ಇತಿಹಾಸದಲ್ಲೇ ಹೊಸ ಸಾಧನೆ ಮಾಡಿದ್ದು ಅಂತರಿಕ್ಷದಲ್ಲಿ ಈಗ ಮನುಷ್ಯರ ಸಹಾಯ ಇಲ್ಲದೆಯೇ, ಎರಡು ಉಪಗ್ರಹ ನಡುವೆ ಡಾಕಿಂಗ್ ಮಾಡಿದೆ. ಅಂದ್ರೆ, ಭೂಮಿಯ ಕಕ್ಷೆಯಲ್ಲಿ ಸುತ್ತುವ 2 ಉಪಗ್ರಹದ ಮೇಲೆ ಭೂಮಿ ಮೇಲಿಂದ ನಿಯಂತ್ರಣ ಸಾಧಿಸಿ & ಒಂದನ್ನು ಮತ್ತೊಂದಕ್ಕೆ ಕೂಡಿಸುವ ಪ್ರಕ್ರಿಯೆ ಈಗ ಯಶಸ್ವಿಯಾಗಿದೆ. ಈ ರೀತಿ ಸಾಧನೆ ಮಾಡಿರುವುದು ಜಗತ್ತಿನ ಕೆಲವೇ ಕೆಲವು ದೇಶಗಳು. ಆ ಪಟ್ಟಿಗೆ ಭಾರತದ ಹೆಮ್ಮೆ ‘ಇಸ್ರೋ’ ಸಂಸ್ಥೆ ಕೂಡ ಇದೀಗ ಸೇರ್ಪಡೆಯಾಗಿದೆ. ಇಸ್ರೋ ಯಾರು ಊಹಿಸದ ರೀತಿಯಲ್ಲಿ ಸಾಧನೆ ಮಾಡುತ್ತಿದ್ದು , ಭವಿಷ್ಯದಲ್ಲಿ ಹೊಸ ಇತಿಹಾಸಕ್ಕೆ ದೊಡ್ಡ ಹೆಜ್ಜೆಯನ್ನ ಇಟ್ಟಿದೆ.
ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯರು ಮಿಸ್ಸಿಂಗ್!- 20 ಸಾವಿರ ಸ್ಟೂಡೆಂಟ್ಸ್ ಹೋಗಿದ್ದು ಎಲ್ಲಿಗೆ?
2035ರಷ್ಟರಲ್ಲಿ ಸ್ವಂತ ಬಾಹ್ಯಾಕಾಶ ನಿಲ್ದಾಣ
2035ರಷ್ಟರಲ್ಲಿ ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದುವುದು ಭಾರತದ ಗುರಿಯಾಗಿದ್ದು, ಇಸ್ರೋ ಈ ಗುರಿ ಸಾಧನೆಗೆ ಮೊದಲ ಹೆಜ್ಜೆ ಇಟ್ಟಾಗಿದೆ. ಭಾರತಕ್ಕೆ ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದುವ ಸಾಮರ್ಥ್ಯವಿದೆ ಎಂದು ಜಗತ್ತಿಗೆ ತೋರಿಸಿದೆ. ಇಸ್ರೋದ ಸ್ಪಾಡೆಕ್ಸ್ ಮಿಷನ್ ಭವಿಷ್ಯದಲ್ಲಿ ಭಾರತವು ತನ್ನದೇ ಆದ ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದುವ ಗುರಿಯತ್ತ ಇಟ್ಟಿರುವ ಮೊದಲ ಹೆಜ್ಜೆಯಾಗಿದೆ. ಚಂದ್ರಯಾನ 4 ಸೇರಿದಂತೆ ಇಸ್ರೋದ ಭವಿಷ್ಯದ ಚಂದ್ರನ ಕಾರ್ಯಾಚರಣೆಗಳಿಗೆ ಈ ಮಿಷನ್ ಮುಖ್ಯವಾಗಿದೆ. ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವ ಭಾರತದ ಯೋಜನೆಗೆ ಇದು ಮುನ್ನುಡಿ ಬರೆದಿದೆ. ಇಲ್ಲಿಯವರೆಗೆ, ಎರಡು ಇತರ ಬಾಹ್ಯಾಕಾಶ ಕೇಂದ್ರಗಳಿವೆ – ಅಮೆರಿಕದ ನಾಸಾ ಮತ್ತು ರಷ್ಯಾ ನಿರ್ಮಿಸಿದ ಯುರೋಪಿಯನ್ ಸ್ಪೇಸ್ ಏಜೆನ್ಸಿ ಎರಡನೇ ಬಾಹ್ಯಾಕಾಶ ನಿಲ್ದಾಣವನ್ನು ಚೀನಾ . ಭಾರತವು ಮೂರನೆಯ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಭಾರತದ ಮಾನವಸಹಿತ ಬಾಹ್ಯಾಕಾಶ ಮಿಷನ್ ‘ಗಗನಯಾನ’ಕ್ಕೆ ಉಪಯುಕ್ತವಾಗಲಿದೆ.
ಭಾರತವೂ ‘ಭಾರತೀಯ ಅಂತರಿಕ ಸ್ಟೇಷನ್’ ಎಂಬ ಸ್ವಂತ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದು, ಅದಕ್ಕಾಗಿ ಡಾಕಿಂಗ್ ತಂತ್ರಜ್ಞಾನ ಅತ್ಯಂತ ಅಗತ್ಯವಾಗಿದೆ. ಚಂದ್ರನ ಮೇಲೆ ಸಾಗುವ ಯೋಜನೆಗಳಿಗೆ ಮತ್ತು ಚಂದ್ರನಾಚೆಗೆ ಪ್ರಯಾಣ ಬೆಳೆಸುವ ಯೋಜನೆಗಳಿಗೆ ಡಾಕಿಂಗ್ ವ್ಯವಸೆ ಮುಖ್ಯವಾಗಿದ್ದು, ಬಾಹ್ಯಾಕಾಶದಲ್ಲಿ ಬಾಹ್ಯಾಕಾಶ ನೌಕೆಗಳ ಜೋಡಣೆ, ಸಿಬ್ಬಂದಿ ಮತ್ತು ವಸ್ತುಗಳ ವರ್ಗಾವಣೆ ನಡೆಸಲು ಮತ್ತು ಇಂಧನ ಮರು ಪೂರಣ ಘಟಕಗಳ ನಿರ್ಮಾಣಕ್ಕೆ ಡಾಕಿಂಗ್ ತಂತ್ರಜ್ಞಾನ ಅನುವು ಮಾಡಿಕೊಡುತ್ತದೆ. ಒಂದು ನೋಟ ಸ್ಪೀಡೆಕ್ಸ್ ಯೋಜನೆ ಎರಡು ಉಪಗ್ರಹಗಳನ್ನು ಒಳಗೊಂಡಿತ್ತು. ಇದೊಂದು ಸಕ್ರಿಯ ಉಪಗ್ರಹವಾಗಿದ್ದು, ಅವಶ್ಯಕವಾದ ಚಲನೆ ನಡೆಸಿ, ಟಾರ್ಗೆಟ್ ಉಪಗ್ರಹದ ಜೊತೆ ಡಾಕಿಂಗ್ ನಡೆಸುವ ಜವಾಬ್ದಾರಿ ಹೊಂದಿತ್ತು. ಚಂದ್ರಯಾನ-4 ಭವಿಷ್ಯದಲ್ಲಿ ಭಾರತ ಕಿರ್ತಿ ಪಾತಕೆಯನ್ನ ಹಾರಿಸಲಿದೆ. ಈ ಕಾರ್ಯಾಚರಣೆಯು 2040 ರಲ್ಲಿ ಯೋಜಿಸಲಾದ ಮಾನವಸಹಿತ ಚಂದ್ರನ ಲ್ಯಾಂಡಿಂಗ್‌ನ ಭಾರತದ ಗುರಿಯತ್ತ ಪ್ರಮುಖ ಹೆಜ್ಜೆಯಾಗಿದೆ.
3ನೇ ಉಡಾವಣಾ ಕೇಂದ್ರ ಸ್ಥಾಪನೆಗೆ 3,984.86 ಕೋಟಿ
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಮೂರನೇ ಉಡಾವಣಾ ಕೇಂದ್ರ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಪ್ರಮುಖ ಯೋಜನೆಯು ಇಸ್ರೋದ ಮುಂದಿನ ಪೀಳಿಗೆಯ ಉಡಾವಣಾ ವಾಹನಗಳಿಗೆ ಪೂರಕವಾಗಿದೆ. ಅಸ್ತಿತ್ವದಲ್ಲಿರುವ ಎರಡನೇ ಉಡಾವಣಾ ಪ್ಯಾಡ್‌ಗೆ ಬ್ಯಾಕಪ್ ಆಗಿ ಕಾರ್ಯನಿರ್ವಹಿಸುತ್ತದೆ. TLP ಭವಿಷ್ಯದ ಮಾನವ ಬಾಹ್ಯಾಕಾಶ ಯಾನ ಮತ್ತು ಪರಿಶೋಧನಾ ಕಾರ್ಯಾಚರಣೆಗಳಿಗಾಗಿ ಭಾರತದ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ಒಟ್ಟು 3,984.86 ಕೋಟಿ ಬಜೆಟ್‌ನೊಂದಿಗೆ, ಯೋಜನೆಯು ಲಾಂಚ್ ಪ್ಯಾಡ್ ಮತ್ತು ಅದಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಸ್ಥಾಪಿಸುವುದನ್ನು ಒಳಗೊಂಡಿದೆ. ಹೆಚ್ಚಿನ ಉಡಾವಣಾ ಆವರ್ತನಗಳನ್ನು ಸಕ್ರಿಯಗೊಳಿಸಲು ಮತ್ತು ಭಾರತದ ಮಹತ್ವಾಕಾಂಕ್ಷೆಯ ಮಾನವ ಬಾಹ್ಯಾಕಾಶ ಯಾನ ಮತ್ತು ಬಾಹ್ಯಾಕಾಶ ಪರಿಶೋಧನೆಯ ಗುರಿಗಳನ್ನು ಬೆಂಬಲಿಸಲು ಇದು ರಾಷ್ಟ್ರೀಯ ಪ್ರಾಮುಖ್ಯತೆ ಮತ್ತು ನಿರ್ಣಾಯಕ ಯೋಜನೆ ಎಂದು ಪರಿಗಣಿಸಲಾಗಿದೆ.
ಚಂದ್ರಯಾನಕ್ಕೆ ಯಾಕೆ ಪೈಪೋಟಿ? ಲಾಭವೇನು?
ಕೆಲವರು ಚಂದ್ರನ ಅಧ್ಯಯನದಿಂದ ಜನರಿಗೆ ಏನು ಪ್ರಯೋಜನ? ಸುಮ್ಮನೆ ಯಾಕೆ ಹಣ ವ್ಯರ್ಥಿ ಮಾಡ್ತೀರಾ ಅನ್ನೋ ಪ್ರಶ್ನೆಗಳನ್ನ ಕೇಳ್ತಾರೆ. ಆದ್ರೆ ಅದು ದಡ್ಡತನದ ಪ್ರಶ್ನೆಗಳು.. ಚಂದ್ರಯಾನದಿಂದ ದೇಶಕ್ಕೆ ಬಹಳಷ್ಟು ಲಾಭಗಳಿವೆ, ಹಲವಾರು ಅವಕಾಶಗಳು ತೆರೆಯಲಿವೆ. ಈಗಾಗಲೇ ಅಮೇರಿಕ, ರಷ್ಯಾ, ಚೀನಾ ಚಂದ್ರನ ಆರ್ಥಿಕತೆಯ ಪಾಲುದಾರರಾಗಿದ್ದಾರೆ. ಹಾಗಾಗಿ ಚಂದ್ರನ ಆರ್ಥಿಕತೆ ಮೇಲೆ ಹಕ್ಕು ಸಾಧಿಸಲು ಭಾರತಕ್ಕೆ ಇದು ಒಳ್ಳೆಯ ಅವಕಾಶ.
ಏನಿದು ಚಂದ್ರನ ಆರ್ಥಿಕತೆ? ಪ್ರಯೋಜನವೇನು? ಮುಂತಾದ ಪ್ರಶ್ನೆಗಳು ನಿಮ್ಮನ್ನ ಕಾಡುತ್ತಿದೆ ಅಂತ ಗೊತ್ತು.. ನನಗೆ ಗೊತ್ತಿರುವ ಮಾಹಿತಿ ನಿಮ್ಮ ಮುಂದೆ ಇಡುತ್ತೇನೆ.. ಚಂದ್ರ ಮತ್ತು ಅದರ ಕಕ್ಷೆಗೆ ಸಂಬಂಧಪಟ್ಟ ಸಂಪನ್ಮೂಲಗಳ ಉತ್ಪಾದನೆ, ಬಳಕೆ ಮತ್ತು ವಿನಿಮಯದ ಚಟುವಟಿಕೆಯನ್ನು ಚಂದ್ರನ ಆರ್ಥಿಕತೆ ಒಳಗೊಂಡಿರುತ್ತದೆ. ಅಂದರೆ ಚಂದ್ರನ ಮೇಲೆ ರೋವರ್ ಯಶಸ್ವಿಯಾಗಿ ಇಳಿದು ಅಲ್ಲಿಂದ ಫೋಟೋ ಕಳಿಸಿಕೊಡುತ್ತದೆ. ಆ ಫೋಟೋ/ವಿವರ ಭಾರತದ ಆಸ್ತಿಯಾಗುತ್ತದೆ. ಈ ರೀತಿ ಅಲ್ಲಿ ನಡೆಸಿದ ಸಂಶೋಧನೆಗಳ ವರದಿ, ಮಣ್ಣಿನ ಮಾದರಿ, ವಿಡಿಯೋ ಮುಂತಾದವುಗಳನ್ನು ಯಾವ ದೇಶ ಅಥವಾ ಸಂಸ್ಥೆ ಸಂಗ್ರಹಿಸುತ್ತದೆಯೋ ಅದು ಚಂದ್ರನ ಆರ್ಥಿಕತೆಯಲ್ಲಿ ಸೇರುತ್ತದೆ. ಎಲ್ಲ ದೇಶಗಳಿಗೂ ಸಂಕೀರ್ಣ ಬಾಹ್ಯಾಕಾಶ ಕಾರ್ಯಾಚರಣೆ ಮಾಡುವ ತಂತ್ರಜ್ಞಾನ ಇರುವುದಿಲ್ಲ. ಹಾಗಾಗಿ ಬೇರೆ ದೇಶಗಳು ಸಂಗ್ರಹಿಸಿದ ಡೇಟಾಗಳ ಮೇಲೆ ಅವಲಂಬಿತವಾಗಿವೆ. ಚಂದ್ರನ ದಕ್ಷಿಣ ಧ್ರುವ ಮೇಲೆ ಬಾಹ್ಯಾಕಾಶ ಸಂಶೋಧಕರಿಗೆ ಬಹಳ ಕುತೂಹಲದ ಪ್ರದೇಶ. ಅಲ್ಲಿ ಸೂರ್ಯನ ಬೆಳಕು ಬೀಳುವುದಿಲ್ಲ, ಹೀಗಾಗಿ ಚಂದ್ರಯಾನ 3ಯಲ್ಲಿ ಆ ಭಾಗದಲ್ಲಿ ಪ್ರಯೋಗ ನಡೆದಿತ್ತು. ಚಂದ್ರಯಾನದಿಂದ ಚಂದ್ರನ ಬಗ್ಗೆ ತಿಳಿಯುವುದರ ಜತೆಗೆ ಅಲ್ಲಿನ ಪರಿಸರ, ತಾಪಮಾನ,ವಿಕಿರಣ ಮಟ್ಟ, ಆ ಪ್ರದೇಶದ ಆಕೃತಿ, ಧೂಳಿನ ಮಟ್ಟ, ಪ್ರಾಚೀನ ಬಂಡೆಗಳು ಮತ್ತು ಸಂಭಾವ್ಯ ಲಾವಾ ಟ್ಯೂಬ್ ಮುಂತಾದವುಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಈ ಪ್ರದೇಶವನ್ನು ಸಂಶೋಧಿಸುವುದರಿಂದ ಚಂದ್ರನ ಇತಿಹಾಸ ತಿಳಿಯಬಹುದು.
ಅಲ್ಲಿ ಸಿಗುವ ಮಣ್ಣು, ಧೂಳಿನ ಮಾದರಿಯಿಂದ ಸೌರ ಮಂಡಲದ ಸೃಷ್ಟಿಯ ಬಗ್ಗೆ ತಿಳಿಯಲು ಕೂಡ ಬಹಳ ಪ್ರಯೋಜನಕಾರಿ. ವೈಜ್ಞಾನಿಕ ಕ್ಷೇತ್ರದ ಜತೆ ಈ ಡೇಟಾ ಮನರಂಜನಾ ಕ್ಷೇತ್ರಕ್ಕೆ ಕೂಡ ಅಗತ್ಯವಿದೆ. ಅಲ್ಲಿನ ಫೋಟೋ, ವಿಡಿಯೋ, ಶಬ್ದಗಳನ್ನು ಸಿನಿಮಾ, ಸಾಕ್ಷ್ಯಚಿತ್ರ, ವಿಡಿಯೋ ಗೇಮ್ ಮುಂತಾದವುಗಳಲ್ಲಿ ಬಳಸಲು ಖರೀದಿಸುತ್ತಾರೆ. ಭಾರತ ಚಂದ್ರನ ವಿಶೇಷ ಪ್ರದೇಶವನ್ನು ಅನ್ವೇಷಿಸುತ್ತಿರುವ ಕಾರಣ ಬೇಡಿಕೆ ಇನ್ನೂ ಹೆಚ್ಚಾಗುತ್ತದೆ. 2021ರಲ್ಲಿ ಆರ್ಟೆಮಿಸ್ ಕಾರ್ಯಕ್ರಮದ ಮಾಹಿತಿಯಿಂದ ನಾಸಾ ಸುಮಾರು 2.2 ಬಿಲಿಯನ್ ಡಾಲರ್ ಸಂಪಾದನೆ ಮಾಡಿತು. ಅದರೊಂದಿಗೆ ಸುಮಾರು 37,000 ಉದ್ಯೋಗಗಳನ್ನೂ ಸೃಷ್ಟಿಸಿತು.
ಚಂದ್ರಯಾನದಿಂದ ಬಾಹ್ಯಾಕಾಶ ಸಂಶೋಧನೆಯಲ್ಲಿ ಮೇಲುಗೈ ಸಾಧಿಸುವುದರ ಜತೆಗೆ ದೇಶದ ಆರ್ಥಿಕತೆಯನ್ನು ಹೆಚ್ಚಿಸುತ್ತದೆ. ಉದ್ಯೋಗ ಅವಕಾಶ ಮತ್ತು ಖಾಸಗಿ ಹೂಡಿಕೆಗಳನ್ನು ಹೆಚ್ಚಿಸುವಲ್ಲಿ ಚಂದ್ರಯಾನ ಸಹಕಾರಿ. ಹಲವಾರು ವರ್ಷಗಳಿಂದ ಬಾಹ್ಯಾಕಾಶ ಕ್ಷೇತ್ರ ಉದ್ಯೋಗಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ. ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಸ್ಟಾರ್ಟ್ ಅಪ್ ದೇಶಗಳಲ್ಲಿ ಭಾರತಅಗ್ರಸ್ಥಾನದಲ್ಲಿದೆ. ಬಹಳಷ್ಟು ಖಾಸಗಿ ಬಾಹ್ಯಾಕಾಶ ತಂತ್ರಜ್ಞಾನದ ಸಂಸ್ಥೆಗಳು ಪ್ರಾರಂಭವಾಗುತ್ತಿವೆ. ಸುಮಾರು 140ಕ್ಕೂ ಹೆಚ್ಚು ಬಾಹ್ಯಾಕಾಶ ಸ್ಟಾರ್ಟ್ ಅಪ್‌ಗಳು ನೋಂದಣಿಯಾಗಿವೆ. ಸೆಟಲೈಟ್ ಫೋನ್ ಸಿಗ್ನಲ್, ಒಟಿಟಿ, 5ಜಿ ಮುಂತಾದ ದಿನನಿತ್ಯ ಬಳಕೆಯ ಉಪಕರಣಗಳನ್ನು ಈ ಸ್ಟಾರ್ಟ್‌ಅಪ್‌ಗಳು ಅಭಿವೃದ್ಧಿ ಪಡಿಸುತ್ತಿವೆ. 2020ರಲ್ಲಿ 9.6 ಬಿಲಿಯನ್ ಡಾಲರ್ ಮೌಲ್ಯವಿತ್ತು. 2025 ಮುಗಿಯುವ ವೇಳೆಗೆ ಸುಮಾರು 13 ಬಿಲಿಯನ್ ಡಾಲರ್ ಆಗಲಿದೆ ಎಂದು ವರದಿಗಳು ತಿಳಿಸುತ್ತವೆ. ಭಾರತಕ್ಕೆ ಜಂಟಿ ಹೂಡಿಕೆಗಳಿಂದ ಒಳ್ಳೆಯ ಲಾಭವಿದೆ. ಅದರೊಂದಿಗೆ ಬೇರೆ ದೇಶಗಳಿಗೆ ಕೂಡ ಭಾರತೀಯ ಉತ್ಪನ್ನಗಳ ಪೂರೈಕೆಗೆ ಮಾರ್ಗ ಸರಳವಾಗುತ್ತದೆ. ಇದೆಲ್ಲದರ ಜತೆ ಮತ್ತೊಂದು ಮಹತ್ತರ ಪ್ರಯೋಜನವೆಂದರೆ ನಾಸಾ ಮತ್ತು ಇಸ್ರೋ ಸಹಯೋಗದಂತೆ ಇತರ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗಳ ಜತೆ ಕೈ ಜೋಡಿಸಲು ಸಹಾಯವಾಗುತ್ತದೆ. ಇದರಿಂದ ಹೆಚ್ಚಿನ ಆರ್ಥಿಕ ನೆರವು ಸಿಗುತ್ತದೆ. ಜಾಗತಿಕ ಮಟ್ಟದಲ್ಲಿ ಒಳ್ಳೆಯ ಸ್ಥಾನ ಮತ್ತು ಸಂಬಂಧ ಕಾಪಾಡಿಕೊಳ್ಳಬಹುದು. ಇದರಿಂದ ಶಿಕ್ಷಣ, ಪ್ರವಾಸ ಮುಂತಾದ ಕ್ಷೇತ್ರಗಳಿಗೆ ಅನುಕೂಲವಾಗುತ್ತದೆ.
ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಮುನ್ನುಡಿ!
ಈ ಹಿಂದೆ ಎಲಾನ್ ಮಸ್ಕಿನ ಸ್ಪೇಸ್‌ಎಕ್ಸ್ ಸಂಸ್ಥೆ ಬಾಹ್ಯಾಕಾಶ ಪ್ರವಾಸ ಆಯೋಜಿಸಿತ್ತು. ಚಂದ್ರಯಾನದ ಯಶಸ್ಸಿನಿಂದ ಮುಂದೆ ಈ ರೀತಿಯ ಬಾಹ್ಯಾಕಾಶ ಪ್ರವಾಸ ಹೆಚ್ಚಾಗುತ್ತದೆ. ಚಂದ್ರನ ಮೇಲ್ಮನಲ್ಲಿ ಮಾನವನ ಉಪಸ್ಥಿತಿ ಸ್ಥಾಪಿಸಲು ಪ್ರಯತ್ನಗಳು ಹೆಚ್ಚಾಗುತ್ತವೆ. ಮನುಷ್ಯರನ್ನು ಚಂದ್ರನ ಮೇಲೆ ಕಳುಹಿಸಲು ಅಮೆರಿಕ ಸಜ್ಜಾಗುತ್ತಿದೆ. ಚೀನಾ ಕೂಡ ಮಾನವ ಕಾರ್ಯಚರಣೆಯನ್ನು ಮಾಡಲು ಸಿದ್ದವಾಗುತ್ತಿದೆ. ಈ ರೀತಿ ಬಾಹ್ಯಾಕಾಶ ಸಾರಿಗೆಯನ್ನು ಕಲ್ಪಿಸುವುದರಿಂದ ದೇಶಕ್ಕೆ ಆದಾಯ ಹೆಚ್ಚಾಗುತ್ತದೆ. ಸ್ಪೇಸ್ ಪ್ರೋಗ್ರಾಮ್ನನ್ನು ಬಹಳ ಕಡಿಮೆ ವೆಚ್ಚದಲ್ಲಿ ಮಾಡಲಾಗುತ್ತದೆ ಎಂಬ ಹೆಗ್ಗಳಿಕೆ ನಮ್ಮ ದೇಶಕ್ಕಿದೆ. ಇದರಿಂದ ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಲಾಭ ಪಡೆಯಬಹುದು. ಚಂದ್ರನ ಆರ್ಥಿಕತೆ ಬಹಳ ಪ್ರಾರಂಭಿಕ ಹಂತದಲ್ಲಿದೆ. ಹಾಗಾಗಿ ಚಂದ್ರಯಾನ-4 ಯಶಸ್ವಿಯಾದರೆ ಭವಿಷ್ಯದಲ್ಲಿ ಬಹಳಷ್ಟು ಲಾಭ ಗಳಿಸಬಹುದು.
1969 ರಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ‘ಅಪೋಲೋ-11’ ನೌಕೆ ಮೂಲಕ ಈ ಐತಿಹಾಸಿಕ ಸಾಧನೆ ಮಾಡಿ ಇಡೀ ವಿಶ್ವವನ್ನೇ ನಿಬ್ಬೆರಗು ಮಾಡಿತ್ತು.ಎಲ್ಲಾ ವಿಘ್ನಗಳನ್ನು ಮೀರಿ ಜುಲೈ 15 ರಂದು ಅಮೆರಿಕ ಮಾನವ ಸಹಿತ ಚಂದ್ರಯಾನಕ್ಕೆ ಸಿದ್ಧವಾಯಿತು. ಮೊಟ್ಟ ಮೊದಲ ಬಾರಿಗೆ ಚಂದ್ರನ ಮೇಲೆ ಕಾಲಿಟ್ಟ ನೀಲ್ ಆಮ್ ರ್ಸ್ಟ್ರಾಂಗ್ ‘ಒಬ್ಬ ಮನುಷ್ಯನಿಗೆ ಅದೊಂದು ಪುಟ್ಟ ಹೆಜ್ಜೆ. ಆದರೆ ಮಾನವ ಕುಲಕ್ಕೆ ಅದೊಂದು ದೈತ್ಯ ಹೆಜ್ಜೆ’ ಎಂದಿದ್ದು ಭೂಮಿಯ ಟಿವಿಗಳಲ್ಲಿ ಪ್ರಸಾರವಾಗಿತ್ತು. ಅವರು ಕಾಲಿಟ್ಟ 20 ನಿಮಿಷದ ನಂತರ ಬುಝ್ ಅಲ್ಡ್ರಿನ್ ಚಂದ್ರನಲ್ಲಿ ಪಾದಾರ್ಪಣೆ ಮಾಡಿದರು. ಮೈಕಲ್ ಕಾಲಿನ್ಸ್ ಮಾಡ್ಯೂಲ್ ಪೈಲಟ್ ಆಗಿದ್ದರಿಂದ ಅವರು ಚಂದ್ರನ ಮೇಲೆ ನಡೆದಾಡಲು ಸಾಧ್ಯವಾಗಲಿಲ್ಲ.
ಚಂದ್ರಯಾನ ಮಾಡಿದ ಮೂವರಲ್ಲಿ ಇಬ್ಬರು ಲೂನಾರ್ ಮಾಡ್ಯೂಲ್‌ನಿಂದ ಆಚೆ ಬಂದು, ಚಂದ್ರನ ಮೇಲೆ 21 ಗಂಟೆ 36 ನಿಮಿಷ ಕಾಲ ಕಳೆದರು. ಈ ವೇಳೆ ಚಂದ್ರ ಮೇಲ್ಮೈನಲ್ಲಿ ಲಭ್ಯವಿರುವ ಮಣ್ಣು ಮತ್ತು ಧೂಲಿನ ಮಾದರಿ ಪಡೆದಿದ್ದರು. ಅದು ಮುಂದೆ ಹಲವು ವೈಜ್ಞಾನಿಕ ಅನ್ವೇಷಣೆಗಳಿಗೆ ಕಾರಣೀಭೂತವಾಯಿತು. ಇಂತಹ ಸಾಧನೆಗಳನ್ನ ಇಸ್ರೋ ಮಾಡೋಕೆ ಹೊರಟ್ಟಿದ್ದು, ಇಸ್ರೋ ಕಾರ್ಯಕ್ಕೆ ನಮ್ಮದ್ದೊಂದು ಸಲಾಂ..