ಇಸ್ರೋದಿಂದ ಮತ್ತೊಂದು ಐತಿಹಾಸಿಕ ಮೈಲಿಗಲ್ಲು.. EOS-8 ಮಿಷನ್ ಉಡಾವಣೆ ಯಶಸ್ವಿ!

ಇಸ್ರೋದಿಂದ ಮತ್ತೊಂದು ಐತಿಹಾಸಿಕ ಮೈಲಿಗಲ್ಲು.. EOS-8 ಮಿಷನ್ ಉಡಾವಣೆ ಯಶಸ್ವಿ!

ಚಂದ್ರಯಾನ 3 ಮೂಲಕ ಇಡೀ ಜಗತ್ತು ದೇಶದತ್ತ ತಿರುಗಿ ನೋಡುವಂತೆ ಮಾಡಿದ ಭಾರತೀಯ ಬಾಹ್ಯಕಾಶ ಸಂಸ್ಥೆ ಇಸ್ರೋ. ಇದೀಗ ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ಇಸ್ರೋ ಇಂದು ತನ್ನ EOS-8 ಮಿಷನ್ ಉಡಾವಣೆ ಯಶಸ್ವಿಯಾಗಿ ನಡೆಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ರಾಜಕೀಯ ನಂಟಿಲ್ಲದ ಲಕ್ಷ ಯುವಕರಿಗೆ ನಾಯಕತ್ವ | ಏನಿದು ಪ್ರಧಾನಿ ಮೋದಿ ಪ್ಲ್ಯಾನ್?

ಈ ಬಗ್ಗೆ ಇಸ್ರೋ ತನ್ನ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಆಂಧ್ರ ಪ್ರದೇಶದ ಶೀಹರಿಕೋಟದಿಂದ ಬೆಳಗ್ಗೆ 9.17ಕ್ಕೆ ಸರಿಯಾಗಿ ಭೂ ವೀಕ್ಷಣಾ ಕಿರು ಉಪಗ್ರಹವನ್ನು (EOS-08) ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಪರಿಸರದ ಮೇಲೆ ನಿಗಾ ಇರಿಸುವ ನಿಟ್ಟಿನಲ್ಲಿ ಸುಮಾರು 176 ಕೆ.ಜಿ. ತೂಕದ ಭೂ ವೀಕ್ಷಣಾ ಕಿರು ಉಪಗ್ರಹ(Earth Observation Satellite-8) ಎಸ್‌ಎಸ್‌ಎಲ್‌ವಿ-ಡಿ3 ಇಒಎಸ್‌-08ರ ಉಡಾವಣೆ ಮಾಡಲಾಗಿದೆ.

ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಅಭಿವೃದ್ಧಿ ಮಾಡಿರುವ ಎಸ್‌ಎಸ್‌ಎಲ್‌ವಿ-ಡಿ3 ರಾಕೆಟ್ ಇದಾಗಿದೆ. ಭೂಮಿಯಿಂದ 475 ಕಿ.ಮೀ ಎತ್ತರದಲ್ಲಿರುವ ಕೆಳಹಂತದ ಕಕ್ಷೆಯಲ್ಲಿ ವೃತ್ತಾಕಾರದಲ್ಲಿ ಪರಿಭ್ರಮಣೆ ನಡೆಸಲಿದೆ. ಈ ಭೂ ವೀಕ್ಷಣಾ ಕಿರು ಉಪಗ್ರಹ ಒಂದು ವರ್ಷ ಕಾರ್ಯ ನಿರ್ವಹಿಸಲಿದೆ. ಎಸ್‌ಎಸ್‌ಎಲ್‌ವಿ ಮೂರು ಹಂತಗಳ ಕಡಿಮೆ ವೆಚ್ಚದ ಉಡ್ಡಯನ ವಾಹನ ಇದಾಗಿದೆ. ಸಣ್ಣ ಉಪಗ್ರಹ ಉಡಾವಣ ವಾಹನ ಈ ಉಪಗ್ರಹವನ್ನು ಹೊತ್ತೊಯ್ದಿದೆ.

ಇದು ಎಸ್‌ಎಸ್‌ಎಲ್‌ವಿಯ ಮೂರನೇ ಹಾಗೂ ಕೊನೆಯ ಉಡಾವಣೆಯಾಗಿದೆ. ಬಾಹ್ಯಾಕಾಶಕ್ಕೆ ಕೇವಲ 500 ಕೆಜಿ ತೂಕವನ್ನು ಸಾಗಿಸುವ ಸಾಮರ್ಥ್ಯ ಹೊಂದಿರುವ ಈ ಎಸ್‌ಎಸ್‌ಎಲ್‌ವಿ ಯನ್ನು ವಾಣಿಜ್ಯೀಕರಣಗೊಳಿಸುವ ಉದ್ದೇಶದಿಂದ ಅದನ್ನು ಇಸ್ರೋ ಅಭಿವೃದ್ಧಿಪಡಿಸಿದೆ.

ಆಗಸ್ಟ್ 7, 2022ರಂದು ಮೊದಲ ಉಡಾವಣೆ ಮಾಡಲಾಗಿತ್ತು. ಫೆಬ್ರವರಿ 10, 2023ರಂದು ಎರಡನೇ ಎಸ್ಎಸ್ಎಲ್‌ವಿ ಅಭಿವೃದ್ಧಿ ಹಾರಾಟ ನಡೆದಿತ್ತು. ಇಂದು ಮೂರನೇ ಹಾಗೂ ಅಂತಿಮ D3 ಉಡಾವಣೆ ಮಾಡಲಾಗಿದೆ. ಈ ಬಗ್ಗೆ ಇಸ್ರೋ ಸಂಸ್ಥೆಯೂ ಅಧಿಕೃತವಾಗಿ ಮಾಹಿತಿ ನೀಡಿದೆ.

Shwetha M

Leave a Reply

Your email address will not be published. Required fields are marked *