‘ವಿಕ್ರಮ’ನ ಒಡಲಿಂದ ಹೊರ ಬಂದು ಚಂದ್ರನ ಮೇಲೆ ನಡೆದ ‘ಪ್ರಜ್ಞಾನ್’ – ವೈಜ್ಞಾನಿಕ ಅಧ್ಯಯನ ಆರಂಭಿಸಿದ ರೋವರ್

‘ವಿಕ್ರಮ’ನ ಒಡಲಿಂದ ಹೊರ ಬಂದು ಚಂದ್ರನ ಮೇಲೆ ನಡೆದ ‘ಪ್ರಜ್ಞಾನ್’ – ವೈಜ್ಞಾನಿಕ ಅಧ್ಯಯನ ಆರಂಭಿಸಿದ ರೋವರ್

ಬಾಹ್ಯಾಕಾಶ ಕ್ಷೇತ್ರದಲ್ಲಿ ಚರಿತ್ರೆ ಸೃಷ್ಟಿಸಿರುವ ಭಾರತ ವಿಶ್ವ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಆಗಸ್ಟ್ 23ರಂದು ನೌಕೆಯನ್ನ ಸೇಫ್ ಲ್ಯಾಂಡಿಂಗ್ ಮಾಡಿರುವ ಇಸ್ರೋ ಈಗ ಚಂದ್ರನ ಮೇಲಿನ ಅಧ್ಯಯನಕ್ಕೆ ಮುಂದಾಗಿದೆ. ಇದೀಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಶುಕ್ರವಾರ ಚಂದ್ರಯಾನ-3 (Chandrayaan-3) ರೋವರ್ ಪ್ರಗ್ಯಾನ್ (Rover Pragyaan), ವಿಕ್ರಂ ಲ್ಯಾಂಡರ್‌ನಿಂದ (Vikram Lander) ಚಂದ್ರನ (Moon) ಮೇಲೆ ಇಳಿಯುತ್ತಿರುವ ಸಂದರ್ಭದ ವೀಡಿಯೋವನ್ನು ಹಂಚಿಕೊಂಡಿದೆ.

ಚಂದ್ರನ ಅಂಗಳದಲ್ಲಿ ನಡೆಯುತ್ತಿರುವ ವಿಸ್ಮಯವನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುತ್ತಿರುವ ಇಸ್ರೋ ಇದೀಗ  ಚಂದ್ರಯಾನ-3 ರೋವರ್, ಲ್ಯಾಂಡರ್‌ನಿಂದ ಚಂದ್ರ ಮೇಲ್ಮೈಗೆ ಹೇಗೆ ಚಲಿಸಿತು ಎಂಬ ದೃಶ್ಯವನ್ನ ಶೇರ್ ಮಾಡಿದೆ.  ಹಾಗೇ ಚಂದ್ರನ (Moon) ಮೇಲ್ಮೈನಲ್ಲಿರುವ ಲ್ಯಾಂಡರ್‌ ಮಾಡ್ಯೂಲ್‌ (Lander Module) ಮತ್ತು ರೋವರ್‌ (Rover) ತಮ್ಮ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಇದೇ ಹೊತ್ತಿನಲ್ಲಿ ಚಂದ್ರನ ಮೇಲಿರುವ ಚಂದ್ರಯಾನ-3ರ (Chandrayaan-3) ವಿಕ್ರಮ್‌ ಲ್ಯಾಂಡರ್‌ನ ಫೋಟೋವನ್ನು ಚಂದ್ರಯಾನ-2ರ ಆರ್ಬಿಟರ್‌ (Chandrayaan-2 Orbiter) ಸೆರೆ ಹಿಡಿದಿದೆ.

ಇದನ್ನೂ ಓದಿ : ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಬೆಂಗಳೂರಿಗೆ ಬರುತ್ತಿದ್ದಾರೆ ಪ್ರಧಾನಿ ಮೋದಿ – ಆ. 26 ರಂದು ಪೀಣ್ಯದಲ್ಲಿ ರೋಡ್​ ಶೋ ಸಾಧ್ಯತೆ

ಚಂದ್ರಯಾನ-3 ಲ್ಯಾಂಡರ್‌ನ ಫೋಟೋವನ್ನು ಟ್ವಿಟ್ಟರ್‌ ಖಾತೆಯಲ್ಲಿ (ಎಕ್ಸ್‌) ಹಂಚಿಕೊಂಡಿರುವ ಇಸ್ರೋ, ನಾನು ನಿನ್ನ ಮೇಲೆ ಕಣ್ಣಿಟ್ಟಿದ್ದೇನೆ. ಚಂದ್ರಯಾನ-3ರ ಲ್ಯಾಂಡರ್‌ನ ಫೋಟೋವನ್ನು ಚಂದ್ರಯಾನ-2 ಆರ್ಬಿಟರ್‌ ಸೆರೆ ಹಿಡಿದಿದೆ. ಚಂದ್ರಯಾನ-2 ನ ಆರ್ಬಿಟರ್ ಹೈ-ರೆಸಲ್ಯೂಶನ್ ಕ್ಯಾಮೆರಾ (OHRC) ಮೂಲಕ ಈ ಫೋಟೋ ತೆಗೆದಿದೆ ಎಂದು ತಿಳಿಸಿದೆ. ಲ್ಯಾಂಡರ್‌ ಮತ್ತು ರೋವರ್‌ನ ಮುಂದಿನ ಕಾರ್ಯಾಚರಣೆಯನ್ನು ನಿಗದಿಪಡಿಸಲಾಗಿದೆ. ಎಲ್ಲಾ ಸಿಸ್ಟಮ್‌ಗಳು ನಾರ್ಮಲ್‌ ಆಗಿದೆ. ಲ್ಯಾಂಡರ್ ಮಾಡ್ಯೂಲ್ ಪೇಲೋಡ್‌ಗಳಾದ ILSA, RAMBHA ಮತ್ತು ChaSTE ಅನ್ನು ಆನ್ ಮಾಡಲಾಗಿದೆ. ರೋವರ್ ಮೊಬಿಲಿಟಿ ಕಾರ್ಯಾಚರಣೆಗಳು ಪ್ರಾರಂಭವಾಗಿವೆ.  ಚಂದ್ರಯಾನ-3 ವಿಕ್ರಮ್‌ ಲ್ಯಾಂಡರ್‌ ಆ.23 ರಂದು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಿತು. ಅದಾದ ಕೆಲವೇ ಗಂಟೆಗಳಲ್ಲಿ ಪ್ರಜ್ಞಾನ್‌ ರೋವರ್‌, ಲ್ಯಾಂಡರ್‌ನಿಂದ ಹೊರಬಂದು ಚಂದ್ರನ ಮೇಲೆ ತನ್ನ ವೈಜ್ಞಾನಿಕ ಅಧ್ಯಯನ ಆರಂಭಿಸಿದೆ. ಇವು ಒಂದು ಚಂದ್ರನ ದಿನ (ಭೂಮಿಯ 14 ದಿನ) ತಮ್ಮ ಕಾರ್ಯಾಚರಣೆಯನ್ನು ನಡೆಸಲಿವೆ.

suddiyaana