ಆದಿತ್ಯ ಎಲ್ 1 ಉಪಗ್ರಹ ಉಡಾವಣೆಗೆ ಕ್ಷಣಗಣನೆ – ತಿರುಮಲ ದೇವಸ್ಥಾನದಲ್ಲಿ ಇಸ್ರೋ ವಿಜ್ಞಾನಿಗಳಿಂದ ವಿಶೇಷ ಪೂಜೆ

ಆದಿತ್ಯ ಎಲ್ 1 ಉಪಗ್ರಹ ಉಡಾವಣೆಗೆ ಕ್ಷಣಗಣನೆ – ತಿರುಮಲ ದೇವಸ್ಥಾನದಲ್ಲಿ ಇಸ್ರೋ ವಿಜ್ಞಾನಿಗಳಿಂದ ವಿಶೇಷ ಪೂಜೆ

ಚಂದ್ರಯಾನ ಸಕ್ಸಸ್‌ ಬೆನ್ನಲ್ಲೇ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇದೀಗ ತನ್ನ ಮುಂದಿನ ಬಾಹ್ಯಾಕಾಶ ಸಾಹಸಕ್ಕೆ ಸಿದ್ದವಾಗಿದೆ. ಬಹು ನಿರೀಕ್ಷೆಯ ಆದಿತ್ಯ ಎಲ್ 1 ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಶನಿವಾರ ಆದಿತ್ಯ ಎಲ್‌ 1 ಯೋಜನೆಯ ಉಡಾವಣೆಯಾಗಲಿದ್ದು, ಶುಕ್ರವಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಿಜ್ಞಾನಿಗಳು ಆಂಧ್ರ ಪ್ರದೇಶದ ತಿರುಮಲದ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಸೆಪ್ಟೆಂಬರ್ 2ರ ಬೆಳಿಗ್ಗೆ 11.50ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೆ ತಯಾರಿ ನಡೆಸಲಾಗಿದೆ. ಈ ಯೋಜನೆ ಯಶಸ್ವಿಯಾಗಲಿ ಎಂದು ತಿರುಮಲ ಬೆಟ್ಟದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ವೇಳೆ ಆದಿತ್ಯ ಎಲ್‌1ರ ಪುಟ್ಟ ಪ್ರತಿಕೃತಿಯನ್ನು ಅವರು ದೇವಸ್ಥಾನಕ್ಕೆ ಕೊಂಡೊಯ್ದಿದ್ದರು.

ಇದನ್ನೂ ಓದಿ: ಆದಿತ್ಯ L1 ಉಡಾವಣಾ ತಾಲೀಮು ಪೂರ್ಣ – ಆಂತರಿಕ ತಪಾಸಣೆ ಯಶಸ್ವಿ

ಚಂದ್ರಯಾನ- 3 ಯೋಜನೆಯ ರಾಕೆಟ್ ಉಡಾವಣೆಗೂ ಮುನ್ನ ಕೂಡ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಸೇರಿದಂತೆ ವಿಜ್ಞಾನಿಗಳು ತಿರುಪತಿಗೆ ತೆರಳಿ ಪೂಜೆ ಸಲ್ಲಿಸಿದ್ದರು. ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ವಿಜ್ಞಾನಿಗಳು ತಮ್ಮ ಕೆಲಸ ಮೇಲೆ ನಂಬಿಕೆ ಹೊಂದಿಲ್ಲ. ಹೀಗಾಗಿ ದೇವರ ಮೊರೆ ಹೋಗುತ್ತಿದ್ದಾರೆ ಎಂದು ಕೆಲವರು ಟೀಕಿಸಿದ್ದರು. ವಿಜ್ಞಾನವು ವಾಸ್ತವಿಕ ಸಂಗತಿಗಳ ಮೇಲೆ ಬೆಳಕು ಚೆಲ್ಲುವಂತಹದ್ದು. ಇಂತಹ ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರು ಮೌಢ್ಯ ಆಚರಿಸುತ್ತಿದ್ದಾರೆ ಎಂದು ಆಕ್ಷೇಪಿಸಿದ್ದರು. ಆದರೆ ಈ ಟೀಕೆ, ಆರೋಪಗಳಿಗೆ ಕಿವಿಗೊಡದ ಇಸ್ರೋ ವಿಜ್ಞಾನಿಗಳು ಆದಿತ್ಯ- ಎಲ್‌1 ಯೋಜನೆಯ ಉಡಾವಣೆಗೆ ಮುನ್ನ ಕೂಡ ತಿರುಮಲ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

suddiyaana