ಆದಿತ್ಯ ಎಲ್​-1 ನೌಕೆಯನ್ನು ಕಕ್ಷೆಗೆ ಏರಿಸುವ 2ನೇ ಹಂತದ ಪ್ರಕ್ರಿಯೆ ಯಶಸ್ವಿ

ಆದಿತ್ಯ ಎಲ್​-1 ನೌಕೆಯನ್ನು ಕಕ್ಷೆಗೆ ಏರಿಸುವ 2ನೇ ಹಂತದ ಪ್ರಕ್ರಿಯೆ ಯಶಸ್ವಿ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸೆಪ್ಟೆಂಬರ್‌ 2 ರಂದು ಆದಿತ್ಯ L1 ಅನ್ನು ಯಶಸ್ವಿಯಾಗಿ ಉಡಾವಣೆಯಾಗಿದೆ. ಇದೀಗ ಆದಿತ್ಯ L1 ನೌಕೆಯ ಕಕ್ಷೆಗೆ ಏರಿಸುವ ಎರಡನೇ ಹಂತದ ಪ್ರಕ್ರಿಯೆ ಯಶಸ್ವಿಯಾಗಿದೆ ಎಂದು ಇಸ್ರೋ ಹೇಳಿದೆ.

ಈ ಬಗ್ಗೆ ಇಸ್ರೋ ಟ್ವೀಟ್‌ ಮಾಡಿದ್ದು, ಬೆಂಗಳೂರಿನ ಐಎಸ್​ಟಿಆರ್​ಎಸಿ ಇಂದ ಎರಡನೇ ಹಂತದ ಭೂಕಕ್ಷೆಗೆ ಏರಿರುವ ಕಾರ್ಯಾಚರಣೆ ಯಶಸ್ವಿಯಾಗಿದೆ. ಈ ಕಾರ್ಯಾಚರಣೆಯ ವೇಳೆ ಮಾರಿಷಸ್​, ಬೆಂಗಳೂರು ಮತ್ತು ಪೋರ್ಟ್​ ಬ್ಲೇರ್​ನಲ್ಲಿರುವ ಐಎಸ್​ಟಿಆರ್​ಎಸಿ/ಇಸ್ರೋ ಗ್ರೌಂಡ್​ ಸ್ಟೇಷನ್​ನಿಂದ ಸ್ಯಾಟಲೈಟ್​ ಅನ್ನು ಟ್ರ್ಯಾಕ್​ ಮಾಡಲಾಗಿದೆ. ಹೊಸ ಕಕ್ಷೆಯು 282 x 40,225 ಕಿ.ಮೀ ಹೊಂದಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಇದನ್ನೂ ಓದಿ: ಚಂದ್ರಯಾನಗಿಂತ, ಸೂರ್ಯಯಾನ ಕಂಪ್ಲೀಟ್ ಭಿನ್ನ! -ಲಾಗ್ರೇಂಜ್ ಪಾಯಿಂಟ್ ತಲುಪಲು ನೌಕೆ ಎಷ್ಟು ದಿನ ತೆಗೆದುಕೊಳ್ಳುತ್ತೆ?

ಕಕ್ಷೆಗೆ ಏರಿಸುವ ಮೊದಲ ಹಂತದ ಪ್ರಕ್ರಿಯೆಯನ್ನು ಸೆ. 3ರಂದು ಯಶಸ್ವಿಯಾಗಿ ನಡೆಸಲಾಗಿತ್ತು. ಕಕ್ಷೆಗೆ ಏರಿಸುವ ಮುಂದಿನ ಹಂತದ ಪ್ರಕ್ರಿಯೆ ಸೆ. 10 ರಂದು ತಡರಾತ್ರಿ 2.30ಕ್ಕೆ ನಡೆಯಲಿದೆ ಎಂದು ಇಸ್ರೋ ತಿಳಿಸಿದೆ.

ಸೋಲಾರ್​ ಅಟ್ಮಾಸ್ಪಿಯರ್​ ಅಂದ್ರೆ ಕ್ರೋಮೋಸ್ಪಿಯರ್​ ಮತ್ತು ಸೂರ್ಯನ ವಾತಾವರಣದ ಹೊರಭಾಗವಾದ ಕರೊನಾವನ್ನು ಡೀಪ್​ ಆಗಿ ಸ್ಟಡಿ ಮಾಡುವುದೇ ಈ ಆದಿತ್ಯ ಎಲ್​ 1 ಮಿಷನ್​ನ ಒಂದು ಮುಖ್ಯ ಉದ್ದೇಶವಾಗಿದೆ. ಅದಕ್ಕಾಗಿ ಆದಿತ್ಯ ಎಲ್​ 1ಗೆ 7 ಪೇಲೋಡ್​ ಅನ್ನು ಇನ್​ಸರ್ಟ್​ ಮಾಡಿದ್ದಾರೆ. ಅವುಗಳಲ್ಲಿ ನಾಲ್ಕು ಸೋಲಾರ್​ ಸರ್ಫೇಸ್​ ಅನ್ನು ಸ್ಟಡಿ ಮಾಡುತ್ತವೆ ಮತ್ತು ಉಳಿದ ಮೂರು ಸೋಲಾರ್​ ವಿಂಡ್ಸ್​ ಮತ್ತು ಮ್ಯಾಗ್ನೇಟಿಕ್​ ಫೀಲ್ಡ್​ ಅನ್ನು ಅಧ್ಯಯನ​ ಮಾಡುತ್ತವೆ.

suddiyaana