ಮತ್ತೊಂದು ಮೈಲಿಗಲ್ಲಿಗೆ ಸಿದ್ಧವಾದ ಇಸ್ರೋ – ಅಕ್ಟೋಬರ್ 21 ರಂದು ಗಗನಯಾನ ಯೋಜನೆಯ ಕ್ರ್ಯೂ ಎಸ್ಕೇಪ್ ಸಿಸ್ಟಮ್ ಪರೀಕ್ಷೆ

ಮತ್ತೊಂದು ಮೈಲಿಗಲ್ಲಿಗೆ ಸಿದ್ಧವಾದ ಇಸ್ರೋ – ಅಕ್ಟೋಬರ್ 21 ರಂದು ಗಗನಯಾನ ಯೋಜನೆಯ ಕ್ರ್ಯೂ ಎಸ್ಕೇಪ್ ಸಿಸ್ಟಮ್ ಪರೀಕ್ಷೆ

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಯಶಸ್ಸು ಕಂಡಿದೆ. ಈಗಾಗಲೇ ಸೂರ್ಯನ ಅಧ್ಯಯನಕ್ಕೂ ಇಸ್ರೋ ಆದಿತ್ಯ ಎಲ್‌1 ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ. ಇದೀಗ ಮುಂದಿನ ವರ್ಷ ಕೈಗೊಳ್ಳಲು ಉದ್ದೇಶಿಸಿರುವ ಮಾನವಸಹಿತ ಗಗನ ಯಾತ್ರೆಗೆ ಇಸ್ರೋ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಗಗನಯಾನ ಯೋಜನೆಯ ಹೆಸರೇ ಹೇಳುವಂತೆ ಇದೊಂದು ಬಾಹ್ಯಾಕಾಶ ವಾಹನವಾಗಿದ್ದು, 2024 ರ ಒಳಗೆ ಕನಿಷ್ಠ ಮೂವರು ಗಗನಯಾತ್ರಿಗಳನ್ನು ಲೋ ಅರ್ತ್ ಆರ್ಬಿಟ್‌ಗೆ ಕಳುಹಿಸುವ ಗುರಿ ಹೊಂದಿದೆ. ಈ ಯೋಜನೆಯ ನಿರ್ದಿಷ್ಟ ಉಡಾವಣಾ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ, ಗಗನಯಾನ ಯೋಜನೆಯ ಪೂರ್ವಭಾವಿ ಪರೀಕ್ಷಾ ಯೋಜನೆಯ ದಿನಾಂಕವನ್ನು ಮಾತ್ರ ಈಗಾಗಲೇ ನಿಗದಿಪಡಿಸಲಾಗಿದೆ. ಈ ಪರೀಕ್ಷಾ ಯೋಜನೆಯನ್ನು ಸಿಬ್ಬಂದಿಗಳ ಕ್ಯಾಪ್ಸೂಲಿನ ಎಮರ್ಜೆನ್ಸಿ ಎಸ್ಕೇಪ್ ಸಿಸ್ಟಮ್ ಅನ್ನು ಪರೀಕ್ಷಿಸಲು ಕೈಗೊಳ್ಳಲಾಗುತ್ತಿದೆ ಎಂದು ಇಸ್ರೋ ತಿಳಿಸಿದೆ.

ಇದನ್ನೂ ಓದಿ: ಸೂರ್ಯ, ಚಂದ್ರ ಮಿಷನ್‌ ಆಯ್ತು.. ಇಸ್ರೋ ಮುಂದಿನ ಆಪರೇಷನ್‌ ಯಾವುದು?

ಕ್ರ್ಯೂ ಎಸ್ಕೇಪ್‌ ಸಿಸ್ಟಮ್ ಅನ್ನು‌ ಇದೇ ಅ. 21 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಮೊದಲ ಹಂತದ ಸರಣಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಗಗನ ನೌಕೆಯ ಮಾದರಿ ಯನ್ನು ನಭಕ್ಕೆ ಉಡಾವಣೆಗೊಳಿಸಿ ಅದು ಯಶಸ್ವಿಯಾಗಿ ಬಂಗಾಳಕೊಲ್ಲಿಯಲ್ಲಿ ಇಳಿಯುವಂತೆ ಮಾಡುವ ಪ್ರಯತ್ನಗಳನ್ನು ನಡೆಸಲಾಗುತ್ತದೆ ಎಂದು ಇಸ್ರೋ ತಿಳಿಸಿದೆ.

ಕ್ರ್ಯೂ ಎಸ್ಕೇಪ್ಸಿಸ್ಟಮ್ಎಂದರೇನು?

ಟಿವಿ-ಡಿ1 ಪರೀಕ್ಷಾರ್ಥ ಗಗನನೌಕೆಯ ಮಾದರಿಯಲ್ಲಿ ಇರುವ ಪೇ ಲೋಡ್‌ನ‌ಲ್ಲಿ ಗಗನಯಾನದಲ್ಲಿ ತೆರಳುವವರು, ಕ್ರ್ಯೂ ಎಸ್ಕೇಪ್‌ ಸಿಸ್ಟಮ್‌ ಸೇರ್ಪಡೆ ಮಾಡಲಾಗಿದೆ. ಗಗನನೌಕೆಯ ಮಾದರಿ ಬಂಗಾಳಕೊಲ್ಲಿಯಿಂದ 17 ಕಿ.ಮೀ. ಎತ್ತರದಲ್ಲಿರುವಾಗಲೇ ಅದರಲ್ಲಿ ಇರುವ ಸಿಬಂದಿ ಸುರಕ್ಷಿತವಾಗಿ ಇಳಿಯುವಂತೆ ಮಾಡಲಾಗುತ್ತದೆ. ಅದು ಯಶಸ್ವಿಯಾದರೆ ಮಾನವ ಸಹಿತ ಯಾತ್ರೆಯ ಒಂದು ಹಂತ ಯಶಸ್ವಿಯಾದಂತಾಗುತ್ತದೆ ಎಂದು ಇಸ್ರೋ ತಿಳಿಸಿದೆ.

Shwetha M