ಚಂದ್ರನ ಅಂಗಳಕ್ಕಿಳಿಯಲು ಭಾರತ – ರಷ್ಯಾ ಪೈಪೋಟಿ – ವಿಜ್ಞಾನಿಗಳು ಹೇಳಿದ್ದೇನು?

ಚಂದ್ರನ ಅಂಗಳಕ್ಕಿಳಿಯಲು ಭಾರತ – ರಷ್ಯಾ ಪೈಪೋಟಿ – ವಿಜ್ಞಾನಿಗಳು ಹೇಳಿದ್ದೇನು?

ರಷ್ಯಾದ ಬಹು ಮಹತ್ವಾಕಾಂಕ್ಷೆಯ ಲೂನಾ-25 ಬಾಹ್ಯಾಕಾಶ ನೌಕೆ ಶುಕ್ರವಾರ ಚಂದ್ರನ ಅಂಗಳದತ್ತ ಹಾರಿದೆ. ಆದ್ರೆ ಈಗ ಭಾರತಕ್ಕಿಂದ ಮೊದಲೇ ರಷ್ಯಾದ ನೌಕೆ ಚಂದ್ರನ ಅಂಗಳಕ್ಕೆ ಇಳಿಯಲಿದೆ ಎನ್ನಲಾಗ್ತಿದೆ.

47 ವರ್ಷಗಳ ಬಳಿಕ ಚಂದ್ರನ ಅಂಗಳಕ್ಕೆ ರಷ್ಯಾ ಬಾಹ್ಯಾಕಾಶ ಸಂಸ್ಥೆಯು ನೌಕೆಯನ್ನು ಚಂದ್ರನ ಅಂಗಳಕ್ಕೆ ಕಳುಹಿಸಿದೆ. ಆ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿದೆ ಎನ್ನಲಾದ ಮಂಜು ರೂಪದ ನೀರಿನ ಶೋಧಕ್ಕಾಗಿ ಈಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಭಾರತ ಮತ್ತು ರಷ್ಯಾ ಸಂಸ್ಥೆಗಳು ಪೈಪೋಟಿಗಿಳಿದಿವೆ.

ಇದನ್ನೂ ಓದಿ: ಚಂದ್ರನಿಗೆ ಇನ್ನಷ್ಟು ಹತ್ತಿರ ಸಮೀಪಿಸಿದ ಚಂದ್ರಯಾನ – 3 ಗಗನನೌಕೆ – 2.6 ಲಕ್ಷ ಕಿ.ಮೀ. ಕ್ರಮಿಸಿದ ಲ್ಯಾಂಡರ್​

ಜುಲೈ 14ರಂದು ಭಾರತದ ಚಂದ್ರಯಾನ-3 ನೌಕೆ ಶ್ರೀಹರಿಕೋಟದಿಂದ ನಭಕ್ಕೆ ಚಿಮ್ಮಿತ್ತು.. ಅಚ್ಚರಿಯೆಂದರೆ, ನಮಗಿಂತ 29 ದಿನ ತಡವಾಗಿ, ಅಂದರೆ ಇಂದು ರಷ್ಯಾ ನೆಲದಿಂದ ನಭೋಮುಖಿಯಾಗಿರುವ ಲೂನಾ 25 ಆಗಸ್ಟ್‌ 23ರಂದೇ ಚಂದ್ರನ ಧರೆಯನ್ನು ಚುಂಬಿಸಲಿದೆ. ಇಸ್ರೋದ ನೌಕೆಗಿಂತ ಕೆಲವು ನಿಮಿಷಗಳ ಮೊದಲೇ ದಕ್ಷಿಣ ಧ್ರುವದಲ್ಲಿ ರಷ್ಯಾದ ಲೂನಾ-25 ನೌಕೆ ಇಳಿಯುವ ಮೂಲಕ ರಷ್ಯಾ ಚೊಚ್ಚಲ ಇತಿಹಾಸವನ್ನು ತನ್ನ ಹೆಸರಿಗೆ ಬರೆಯುವ ಸಂಭವವಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

suddiyaana