ಚಂದ್ರಯಾನಕ್ಕಾಗಿ ಜೀವ ಪಣಕ್ಕಿಟ್ರಾ ಇಸ್ರೋ ಅಧ್ಯಕ್ಷ –  ಎಸ್.ಸೋಮನಾಥ್ ಅವರ ಈ ಸಂಗತಿ ಗೊತ್ತಾದ್ರೆ ಸೆಲ್ಯೂಟ್ ಹೊಡೀತೀರಾ!

ಚಂದ್ರಯಾನಕ್ಕಾಗಿ ಜೀವ ಪಣಕ್ಕಿಟ್ರಾ ಇಸ್ರೋ ಅಧ್ಯಕ್ಷ –  ಎಸ್.ಸೋಮನಾಥ್ ಅವರ ಈ ಸಂಗತಿ ಗೊತ್ತಾದ್ರೆ ಸೆಲ್ಯೂಟ್ ಹೊಡೀತೀರಾ!

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸಾಧನೆಯ ಶಿಖರವನ್ನೇರುತ್ತಿದೆ. ಚಂದ್ರನ ದಕ್ಷಿಣ ಧ್ರುವ ತಲುಪಿದ ಮೊದಲ ದೇಶ ಭಾರತ ಅನ್ನೋ ಹೆಸರು ಬರೋಕೆ ಕಾರಣವೇ ನಮ್ಮ ಇಸ್ರೋ ವಿಜ್ಞಾನಿಗಳು. 2025ಕ್ಕೆ ನಮ್ಮ ಗಗನಯಾತ್ರಿಗಳನ್ನ ಕೂಡ ಬಾಹ್ಯಾಕಾಶಕ್ಕೆ ಕಳುಹಿಸಿಕೊಡಲಾಗ್ತಿದೆ. 2035ಕ್ಕೆ ಬಾಹ್ಯಾಕಾಶದಲ್ಲಿ ಭಾರತದ ಸ್ಟೇಷನ್​ ಕೂಡ ನಿರ್ಮಾಣವಾಗಲಿದೆ. ಹಾಗೆಯೇ ಶುಕ್ರ ಗ್ರಹದ ಅಧ್ಯಯನಕ್ಕೂ ಇಸ್ರೋ ಪ್ಲ್ಯಾನ್ ಮಾಡಿದೆ. ಇಷ್ಟೆಲ್ಲಾ ಯೋಜನೆಗಳನ್ನ ಕೈಗೊಂಡು ಟೀಮ್ ಲೀಡ್ ಮಾಡ್ತಾ ಇರೋದು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಭವಿಷ್ಯವನ್ನೇ ಬರೀತಾ ಇರೋ ವಿಜ್ಞಾನಿ ಸೋಮನಾಥ್‌ ಅವರ  ಬಗ್ಗೆ ಇನ್ನೊಂದಷ್ಟು ಸಂಗತಿಗಳನ್ನ ಹೇಳಲೇಬೇಕು.

ಇದನ್ನೂ ಓದಿ: ಇಸ್ರೋ ಅಧ್ಯಕ್ಷರಿಗೆ ಕ್ಯಾನ್ಸರ್! – ಲಾಂಚ್ ದಿನವೇ ಏನಾಯ್ತು?

1963ರಲ್ಲಿ ಕೇರಳದ ಅಲಪ್ಪುಜಾದಲ್ಲಿ ಎಸ್​.ಸೋಮನಾಥ್ ಜನಿಸ್ತಾರೆ. ಕೊಲ್ಲಂನಲ್ಲಿ ಮೆಕ್ಯಾನಿಕಲ್​ ಇಂಜಿನಿಯರಿಂಗ್ ಮಾಡ್ತಾರೆ. ನಂತ್ರ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್​​ ನಲ್ಲಿ ಏರೋಸ್ಪೇಸ್​​ ಇಂಜಿನಿಯರಿಂಗ್​ನಲ್ಲಿ ಮಾಸ್ಟರ್ಸ್ ಮಾಡ್ತಾರೆ. ಬಳಿಕ ಏರೋಸ್ಪೇಸ್ ಕ್ಷೇತ್ರಕ್ಕೆ ಸಂಬಂಧಿಸಿ ಸಾಕಷ್ಟು ಕೆಲಸಗಳನ್ನ ಮಾಡ್ತಾರೆ. ಆದ್ರೂ ಮೆಕ್ಯಾನಿಕಲ್ ಇಂಜಿನಿಯರಿಂಗ್​ ನಲ್ಲಿ ಪಿಹೆಚ್ ​ಡಿ ಮಾಡಬೇಕು ಅನ್ನೋ ಆಸೆ ಸೋಮನಾಥ್ ಅವರಿಗಿರುತ್ತೆ. ಹೀಗಾಗಿ ಕೆಲಸ ಬಿಟ್ಟು ಐಐಟಿ ಮದ್ರಾಸ್​​ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್​ನಲ್ಲಿ ​​ಪಿಹೆಚ್​ಡಿ ಕಂಪ್ಲೀಟ್ ಮಾಡ್ತಾರೆ. ನಂತ್ರ 1985ರಲ್ಲಿ ಸೋಮನಾಥ್ ಅವರು ಇಸ್ರೋ ಜಾಯಿನ್ ಆಗ್ತಾರೆ. ಇಸ್ರೋದಲ್ಲಿ ಬೇರೆ ಬೇರೆ ಪೊಸೀಶನ್​​​ಗಳಲ್ಲಿ ಕೆಲಸ ಮಾಡ್ತಾರೆ.

ಆರಂಭದಲ್ಲಿ ಪಿಎಸ್​​ಎಲ್​ವಿ ರಾಕೆಟ್ ಪ್ರಾಜೆಕ್ಟ್ ಮ್ಯಾನೇಜರ್ ಆಗಿರ್ತಾರೆ. ಪಿಎಸ್​ಎಲ್​​ವಿ ರಾಕೆಟ್​ ತಯಾರಿಕೆಯ ಹೊಣೆ ಸೋಮನಾಥ್ ಮೇಲಿರುತ್ತೆ. ಸೋಮನಾಥ್ ಲೀಡರ್​ಶಿಪ್​ನಲ್ಲಿ ಪಿಎಸ್​ಎಲ್​ವಿಯ ಎಲ್ಲಾ ಪ್ರಾಜೆಕ್ಟ್​​ಗಳು ಕೂಡ ಸಕ್ಸಸ್ ಆಗುತ್ತೆ. ನಂತ್ರ ಇಸ್ರೋದ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಸೆಂಟರ್​​ನಲ್ಲಿ ಕೆಲಸ ಮಾಡ್ತಾರೆ. ಹಾಗೆಯೇ ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್​​ನಲ್ಲೂ ಸೇವೆ ಸಲ್ಲಿಸ್ತಾರೆ. ಇದಾದ್ಮೇಲೆ ಜಿಎಸ್ ​​ಎಲ್ ​​ವಿ ಎಂಕೆ-3 ಪ್ರಾಜೆಕ್ಟ್​ ನ ಡೈರೆಕ್ಟರ್ ಆಗಿರ್ತಾರೆ. ಸೋಮನಾಥ್ ಅವರ ನೇತೃತ್ವದಲ್ಲಿ ಅತ್ಯಂತ ಭಾರವಾದ ಪೇಲೋಡ್ಸ್​ಗಳನ್ನ ಇಸ್ರೋ ಲಾಂಚ್ ಮಾಡೋಕೆ ಶುರು ಮಾಡುತ್ತೆ. ಇದು ಇಸ್ರೋ ಮತ್ತು ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ದೊಡ್ಡ ಟರ್ನಿಂಗ್ ಪಾಯಿಂಟ್ ಆಗುತ್ತೆ. ವಿದೇಶಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ತಮ್ಮ ಸ್ಯಾಟ್​​ಲೈಟ್​ಗಳ ಉಡಾವಣೆಗೆ ಭಾರತವನ್ನ ಅಪ್ರೋಚ್ ಮಾಡೋಕೆ ಶುರು ಮಾಡ್ತಾವೆ.

ಇತ್ತ ಸೋಮನಾಥ್ ಅವರ ಕೆರಿಯರ್​​ನಲ್ಲೂ ಮಹತ್ವದ ಬದಲಾವಣೆಗಳಾಗುತ್ತೆ. ಹಿಂದೆ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಸೆಂಟರ್​ನಲ್ಲಿ ಕೆಲಸ ಮಾಡಿದ್ದ ಸೋಮನಾಥ್ ಅದೇ ವಿಭಾಗದ ಮುಖ್ಯಸ್ಥರಾಗ್ತಾರೆ. 2022ರಲ್ಲಿ ಸೋಮನಾಥ್ ಅವರನ್ನ ಇಸ್ರೋ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗುತ್ತೆ. ಈ ವೇಳೆ ಸೋಮನಾಥ್ ಅವರ ಮುಂದಿದ್ದ ಅತೀ ದೊಡ್ಡ ಚಾಲೆಂಜ್ ಅಂದ್ರೆ ಚಂದ್ರಯಾನ-3. ಯಾಕಂದ್ರೆ ಚಂದ್ರಯಾನ-2 ವೇಳೆ ಆಗಿದ್ದ ಸಮಸ್ಯೆ ಚಂದ್ರಯಾನ-3ನಲ್ಲಿ ರಿಪೀಟ್ ಆಗದಂತೆ ನೋಡಿಕೊಳ್ಳೋ ಜವಾಬ್ದಾರಿ ಸೋಮನಾಥ್ ಮೇಲೆಯೇ ಇತ್ತು. ಚಂದ್ರಯಾನ-2 ವೇಳೆ ಆಗಿದ್ದ ಕಮ್ಯುನಿಕೇಷನ್ ಪ್ರಾಬ್ಲಂನ್ನ ಸರಿಪಡಿಸಬೇಕಿತ್ತು. ಹೀಗಾಗಿ ವಿಕ್ರಮ ಲ್ಯಾಂಡರ್ ಚಂದಿರನ ದಕ್ಷಿಣ ಧ್ರುವದ ಮೇಲೆ ಲ್ಯಾಂಡ್ ಆಗೋಕೆ ಸೋಮನಾಥ್ & ಟೀಮ್ ಒಟ್ಟು ನಾಲ್ಕು ಸ್ಟೇಜ್​ಗಳನ್ನ ಪ್ಲ್ಯಾನ್ ಮಾಡಿತ್ತು. ಸೋಮನಾಥ್ ಲೀಡರ್​ಶಿಪ್​​ನಲ್ಲಿ ಚಂದ್ರಯಾನ-3 ಸಕ್ಸಸ್ ಆಯ್ತು ಕೂಡ. ಈ ಪ್ರಾಜೆಕ್ಟ್​ನಲ್ಲಿ ಸೋಮನಾಥ್ ಅವರಿಗೆ ದೊಡ್ಡ ಮಟ್ಟದ ಕ್ರೆಡಿಟ್ ಸಲ್ಲುತ್ತೆ. ಅದು ಕೂಡ ತಮ್ಮ ಆರೋಗ್ಯದಲ್ಲಿ ಸಮಸ್ಯೆ ಇದ್ರೂ ಮೊದಲು ಚಂದ್ರಯಾನ ಮಿಷನ್ ಕಂಪ್ಲೀಟ್ ಮಾಡಲೇಬೇಕು ಅನ್ನೋ ಏಕೈಕ ಹಠದಿಂದ ಸೋಮನಾಥ್ ಕೆಲಸ ಮಾಡಿದ್ರು. ಅದೃಷ್ಟಕ್ಕೆ ಕ್ಯಾನ್ಸರ್​​ ಮೊದಲ ಹಂತದಲ್ಲಿದ್ದಾಗಲೇ ಪತ್ತೆಯಾಗಿದೆ. ಕೂಡಲೇ ಸರ್ಜರಿ ಕೂಡ ಆಗಿರೋದ್ರಿಂದ ಸೇಫ್ ಆಗಿದ್ದಾರೆ.

ಸೋಮನಾಥ್ ಅವರಿಗೆ ನಿಜಕ್ಕೂ ಏನಾಗಿತ್ತು?

ಚಂದ್ರಯಾನ ಮಿಷನ್ ವೇಳೆ ಸೋಮನಾಥ್‌ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು. ಆರೋಗ್ಯ ತಪಾಸಣೆ ವೇಳೆ ಹೊಟ್ಟೆಯಲ್ಲಿ ಕ್ಯಾನ್ಸರ್‌ ಇರೋದು ಪತ್ತೆಯಾಗಿದೆ. ಹೊಟ್ಟೆಯಲ್ಲಾಗೋ ಈ ಕ್ಯಾನ್ಸರ್​​ನ್ನ ಗ್ಯಾಸ್ಟ್ರಿಕ್ ಕ್ಯಾನ್ಸರ್ ಅಂತಾನೂ ಕರೀತಾರೆ. ಸಾಮಾನ್ಯವಾಗಿ 60 ವರ್ಷಕ್ಕಿಂತ ಮೇಲ್ಪಟ್ಟವರ ಹೊಟ್ಟೆಯಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತೆ. ಆಲ್ಕೋಹಾಲ್, ತಂಬಾಕು ಸೇವನೆ, ಭಾರಿ ಖಾರವಾಗಿರೋ ಉಪ್ಪಿನಾಯಿಯನ್ನ ಅತಿಯಾಗಿ ಸೇವಿಸೋದು ಇವೆಲ್ಲದರಿಂದ ಹೊಟ್ಟೆಯಲ್ಲಿ ಕ್ಯಾನ್ಸರ್ ಆಗಬಹುದು. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳನ್ನ ಮತ್ತು ತರಕಾರಿ ಸೇವಿಸೋದ್ರಿಂದ ಹೊಟ್ಟೆಯಲ್ಲಿ ಕ್ಯಾನ್ಸರ್ ಆಗೋದನ್ನ ತಪ್ಪಿಸಬಹುದಂತೆ.

ಇನ್ನು ಹೊಟ್ಟೆಯಲ್ಲಿ ಕ್ಯಾನ್ಸರ್​ ಆಗಿದ ಅನ್ನೋದಾದ್ರೆ ಅದಕ್ಕೆ ಸಂಬಂಧಿಸಿ ಒಂದಷ್ಟು ಸಿಂಪ್ಟಮ್ಸ್​​ಗಳು ಕೂಡ ಇವೆ. ಹಸಿವಾಗೋದಿಲ್ಲ.. ಆಹಾರವನ್ನ ನುಂಗೋಕೆ ಕಷ್ಟವಾಗುತ್ತೆ.. ವಾಕರಿಗೆ ಬರೋದು.. ವಾಂತಿಯಾಗೋದು.. ಆಹಾರ ಸರಿಯಾಗಿ ಜೀರ್ಣವಾಗದೆ ಇರೋದು.. ಎದೆಯುರಿ.. ದೇಹದ ತೂಕ ಇದ್ದಕ್ಕಿದ್ದಂತೆ ಕಡಿಮೆಯಾಗೋದು.. ರಕ್ತ ವಾಂತಿ.. ಹೊಟ್ಟೆ ನೋವು.. ಸ್ವಲ್ಪ ಊಟ ಮಾಡಿದ ಕೂಡಲೇ ಹೊಟ್ಟೆ ತುಂಬಿದಂತಾಗೋದು. ಇವೆಲ್ಲವೂ ಗ್ಯಾಸ್ಟ್ರಿಕ್ ಕ್ಯಾನ್ಸರ್​ನ ಲಕ್ಷಣಗಳು. ಇಂಥಾ ಲಕ್ಷಣಗಳು ಕಂಡು ಬಂದ್ರೆ ಯಾವುದೇ ಕಾರಣಕಕೂ ನೆಗ್ಲೆಕ್ಟ್ ಮಾಡಬೇಡಿ. ಅಂತೂ ಇಂಥಾ ಅಪಾಯಕಾರಿ ಕ್ಯಾನ್ಸರ್​​ನ್ನ ಮೆಟ್ಟಿನಿಂತು ಇಸ್ರೋ ಅಧ್ಯಕ್ಷ ಸೋಮನಾಥ್ ಅವರು ಈಗ ಎಲ್ಲರಿಗೂ ಮಾದರಿಯಾಗಿದ್ದಾರೆ. ಹಾಗೆಯೇ ಬಾಹ್ಯಾಕಾಶ ಲೋಕದಲ್ಲಿ ಭಾರತವನ್ನ ಇನ್ನಷ್ಟು ಎತ್ತರಕ್ಕೆ ಕರೆದೊಯ್ಯೋಕೆ ನಿರಂತರ ಕೆಲಸ ಮಾಡ್ತಾನೆ ಇದ್ದಾರೆ.

Shwetha M