ಇಸ್ರೋ ಅಧ್ಯಕ್ಷರಿಗೆ ಕ್ಯಾನ್ಸರ್! – ಲಾಂಚ್ ದಿನವೇ ಏನಾಯ್ತು?

ಇಸ್ರೋ ಅಧ್ಯಕ್ಷರಿಗೆ ಕ್ಯಾನ್ಸರ್! – ಲಾಂಚ್ ದಿನವೇ ಏನಾಯ್ತು?

ಬಾಹ್ಯಾಕಾಶ ಕ್ಷೇತ್ರದಲ್ಲಿ ನಮ್ಮ ಇಸ್ರೋ ವಿಜ್ಞಾನಿಗಳು ಇಡೀ ಜಗತ್ತಿನಲ್ಲೇ ಯಾವ ರೀತಿ ಸಂಚಲನ ಸೃಷ್ಟಿಸ್ತಾ ಇದ್ದಾರೆ ಅನ್ನೋದು ನಿಮಗೆ ಗೊತ್ತಿರುವಂಥದ್ದೇ. ಚಂದ್ರನ ದಕ್ಷಿಣ ಧ್ರುವ ತಲುಪಿದ ಮೊದಲ ದೇಶ ಭಾರತ ಅನ್ನೋ ಹೆಸರು ಬರೋಕೆ ಕಾರಣವೇ ನಮ್ಮ ಇಸ್ರೋ ವಿಜ್ಞಾನಿಗಳು. 2025ಕ್ಕೆ ನಮ್ಮ ಗಗನಯಾತ್ರಿಗಳನ್ನ ಕೂಡ ಬಾಹ್ಯಾಕಾಶಕ್ಕೆ ಕಳುಹಿಸಿಕೊಡಲಾಗ್ತಿದೆ. 2035ಕ್ಕೆ ಬಾಹ್ಯಾಕಾಶದಲ್ಲಿ ಭಾರತದ ಸ್ಟೇಷನ್​ ಕೂಡ ನಿರ್ಮಾಣವಾಗಲಿದೆ. ಹಾಗೆಯೇ ಶುಕ್ರ ಗ್ರಹದ ಅಧ್ಯಯನಕ್ಕೂ ಇಸ್ರೋ ಪ್ಲ್ಯಾನ್ ಮಾಡಿದೆ. ಆದ್ರೆ ಇಷ್ಟೆಲ್ಲಾ ಯೋಜನೆಗಳನ್ನ ಕೈಗೊಂಡು ಟೀಮ್ ಲೀಡ್ ಮಾಡ್ತಾ ಇರೋ ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ವಿಚಾರವಾಗಿ ಶಾಕಿಂಗ್ ಸಂಗತಿಯೊಂದು ಬೆಳಕಿಗೆ ಬಂದಿದೆ. ಹಾಗೆಯೇ ಸೋಮನಾಥ್ ಅವರ ಶಾಕಿಂಗ್ ಸ್ಟೋರಿಯನ್ನ ಸಂಪೂರ್ಣವಾಗಿ ಕೇಳಿದ್ರೆ ಕೊನೆಗೆ ನೀವು ಖಂಡಿತಾ ಸೆಲ್ಯೂಟ್ ಕೂಡ ಹೊಡೀತೀರ. ಎಸ್.ಸೋಮನಾಥ್ ಬಗ್ಗೆ ಈಗ ಬೆಳಕಿಗೆ ಬಂದಿರೋ ಸಂಗತಿಯೇನು ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಪಾಕ್‌ ಪರ ಘೋಷಣೆ ಪ್ರಕರಣ – ನಾಸೀರ್ ಹುಸೇನ್ ಗೆ ಪ್ರಮಾಣ ವಚನ ಬೋಧನೆ ಮಾಡದಂತೆ ಉಪ ರಾಷ್ಟ್ರಪತಿಗೆ ಬಿಜೆಪಿಯಿಂದ ಪತ್ರ!

ಸೆಪ್ಟೆಂಬರ್ 2, 2023.. ಸೂರ್ಯನ ಅಧ್ಯಯನಕ್ಕಾಗಿ ಇಸ್ರೋ ಆದಿತ್ಯ L-1 ರಾಕೆಟ್​​ನ್ನ ಲಾಂಚ್ ಮಾಡಲಾಗಿತ್ತು. ಈ ಮಿಷನ್ ಸಕ್ಸಸ್ ಕೂಡ ಆಗಿತ್ತು. ಇಡೀ ದೇಶವೇ ಇಸ್ರೋ ವಿಜ್ಞಾನಿಗಳ ಸಾಧನೆಯನ್ನ ಸಂಭ್ರಮಿಸಿತ್ತು. ಆದ್ರೆ ಈ ಯೋಜನೆಯ ರೂವಾರಿ, ಇಸ್ರೋವನ್ನ ವಿಜ್ಞಾನಿಗಳ ಟೀಮ್​​ನ್ನ ಲೀಡ್ ಮಾಡ್ತಾ ಇರೋ ಎಸ್.ಸೋಮನಾಥ್ ಅವರು ಇದನ್ನ ಸಂಭ್ರಮಿಸುವ ಸ್ಥಿತಿಯಲ್ಲಿ ಇರಲಿಲ್ಲ. ಯಾಕಂದ್ರೆ, ಆದಿತ್ಯ ಎಲ್-1 ರಾಕೆಟ್ ಲಾಂಚ್ ಆದ ದಿನವೇ ಸೋಮನಾಥ್ ಅವರಿಗೆ ಕ್ಯಾನ್ಸರ್​​ ತಗುಲಿರೋದು ಕನ್ಫರ್ಮ್ ಆಗಿತ್ತು. ಅತ್ತ ಆದಿತ್ಯ ಎಲ್-1 ರಾಕೆಟ್ ಲಾಂಚ್ ಆದ್ರೆ ಇತ್ತ ಇಸ್ರೋ ಅಧ್ಯಕ್ಷ ಕ್ಯಾನ್ಸರ್​ಗೆ ತುತ್ತಾಗಿದ್ರು. ಈ ವಿಚಾರವನ್ನ ಇಂಟರ್​​ವ್ಯೂ ಒಂದರಲ್ಲಿ ಸೋಮನಾಥ್ ಅವರು ಈಗ ಬಹಿರಂಗಪಡಿಸಿದ್ದಾರೆ. ಚಂದ್ರಯಾನ-3 ಮಿಷನ್​​ನನ್ನ ನಾವ್ಯಾರೂ ಮರೆಯೋಕೆ ಸಾಧ್ಯವೇ ಇಲ್ಲ. ಚಂದಿರನ ದಕ್ಷಿಣ ಧ್ರುವದಲ್ಲಿ ವಿಕ್ರಮ ಲ್ಯಾಂಡರ್​​ನ್ನ ಇಳಿಸಿ ಇಸ್ರೋ ಇತಿಹಾಸ ಸೃಷ್ಟಿಸಿತ್ತು. ಆದ್ರೆ ಆ ಟೈಮ್​​ನಲ್ಲೇ ಸೋಮನಾಥ್ ಅವರು ಅರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತಂತೆ. ಚಂದ್ರಯಾನದ ಸಂದರ್ಭದಲ್ಲಿ ಸೋಮನಾಥ್ ಸೇರಿದಂತೆ ಇಸ್ರೋ ವಿಜ್ಞಾನಿಗಳು ದಿನವಿಡೀ ಕೆಲಸ ಮಾಡಿದ್ರು. ವಿಕ್ರಮ ಲ್ಯಾಂಡರ್ ಚಂದಿರನ ಮೇಲೆ ಇಳಿದ ಬಳಿಕವೂ 14 ದಿನಗಳ ಕಾಲ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್​ ರೋವರ್​ ಜೊತೆಗೆ ನಮ್ಮ ವಿಜ್ಞಾನಿಗಳು ಸಂಪರ್ಕದಲ್ಲಿದ್ರು. ದಿನದ 24 ಗಂಟೆಯೂ ವಿಜ್ಞಾನಿಗಳು ತಮ್ಮ ಕರ್ತವ್ಯದಲ್ಲೇ ಮುಳುಗಿದ್ರು. ಸೋಮನಾಥ್ ಅವರು ಎಲ್ಲವನ್ನೂ ಹ್ಯಾಂಡಲ್​ ಮಾಡ್ತಿದ್ರು. ಇಡೀ ಜವಾಬ್ದಾರಿ ಅವರೇ ಮೇಲೆಯೇ. ಈ ಸಂದರ್ಭದಲ್ಲೇ ಸೋಮನಾಥ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಏನೋ ಎಡವಟ್ಟಾಗಿದೆ ಅನ್ನೋದು ಅವರಿಗೂ ಗೊತ್ತಾಗಿತ್ತು. ಆದ್ರೆ ಅದು ಕ್ಯಾನ್ಸರ್​ನಂಥಾ ಸೀರಿಯಸ್ ಸಮಸ್ಯೆಯಾಗಿರಬಹುದು ಅಂತಾ ಸೋಮನಾಥ್ ಅವರು ಕನಸು ಮನಸಲ್ಲೂ ಊಹಿಸಿರಲಿಲ್ಲ. ಕ್ಯಾನ್ಸರ್ ಅನ್ನೋದೆ ಹಾಗೆ, ಸುಳಿವೇ ನೀಡದೆ ದೇಹ ಸೇರಿರುತ್ತೆ. ಫಸ್ಟ್​, ಸೆಕೆಂಡ್​​ ಸ್ಟೇಜ್​​ನಲ್ಲಿರೋವಾಗ್ಲೇ ಟ್ರೀಟ್​​ಮೆಂಟ್ ಪಡ್ಕೊಂಡ್ರೆ ಬಚಾವ್. ಮೂರು, ನಾಲ್ಕನೇ ಸ್ಟೇಜ್​ಗೆ ಹೋಯ್ತು ಅಂದ್ರೆ ಏನು ಬೇಕಾದ್ರೂ ಆಗಬಹುದು. ಆದ್ರೆ ಆ ಸಂದರ್ಭದಲ್ಲಿ ಸೋಮನಾಥ್ ಅವರು ತಮ್ಮ ಅನಾರೋಗ್ಯದ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ಯಾಕಂದ್ರೆ ಸೋಮನಾಥ್ ಅವರು ಚಂದ್ರಯಾನದ ಬಳಿಕ ಇದ್ದ ಆದಿತ್ಯ ಎಲ್-1 ಮಿಷನ್​ ಮೇಲೆಯೇ ಕಂಪ್ಲೀಟ್ ಫೋಕಸ್ ಮಾಡಿದ್ರು. ಆದ್ರೆ ಆರೋಗ್ಯ ಸಮಸ್ಯೆ ಗಂಭೀರವಾಗುತ್ತಲೇ ಸೋಮನಾಥ್ ಅವರು ಕಂಪ್ಲೀಟ್ ಹೆಲ್ತ್ ಚೆಕಪ್​ಗೆ ಒಳಗಾಗ್ತಾರೆ. 2023ರ ಸೆಪ್ಟೆಂಬರ್ 2 ರಂದು ಆದಿತ್ಯ ಎಲ್​-1 ರಾಕೆಟ್ ಲಾಂಚ್ ಆದ ದಿನವೇ ಸೋಮನಾಥ್ ಹೆಲ್ತ್ ರಿಪೋರ್ಟ್ ಬಂದಿತ್ತು. ಹೊಟ್ಟೆಯಲ್ಲಿ ಕ್ಯಾನ್ಸರ್ ಗಡ್ಡೆ ಇರೋದಾಗಿ ರಿಪೋರ್ಟ್​ನಲ್ಲಿ ಮೆನ್ಷನ್​ ಆಗಿತ್ತು. ಆ ರಿಪೋರ್ಟ್ ಓದಿ ಸೋಮನಾಥ್ ಮತ್ತು ಫ್ಯಾಮಿಲಿ ಮೆಂಬರ್ಸ್ ಫುಲ್​ ಶಾಕ್​ಗೆ ಒಳಗಾಗ್ತಾರೆ. ಬಳಿಕ ಸೋಮನಾಥ್ ಅವರು ಚೆನ್ನೈಗೆ ತೆರಳಿ ಸ್ಕ್ಯಾನ್​ ಮಾಡಿಸಿಕೊಳ್ತಾರೆ. ನಂತರ ಕೆಮೋಥೆರಪಿಗೆ ಒಳಗಾಗ್ತಾರೆ. ಅದಾದ್ಮೇಲೆ ಸರ್ಜರಿ ಮಾಡಲಾಗುತ್ತೆ. ಸರ್ಜರಿ ಬಳಿಕ ನಾಲ್ಕು ದಿನಗಳ ಕಾಲ ಆಸ್ಪತ್ರೆಯಲ್ಲೇ ರೆಸ್ಟ್​ ತೆಗೆದುಕೊಳ್ತಾರೆ. ಐದನೇ ದಿನವೇ ಇಸ್ರೋ ಕಚೇರಿಗೆ ತೆರಳಿ ಡ್ಯೂಟಿ ಕಂಟಿನ್ಯೂ ಮಾಡ್ತಾರೆ. ಫೆಬ್ರವರಿ 7ರಂದು ಕೇರಳದ ವಿಕ್ರಮ್ ಸಾರಾ ಭಾಯ್ ಸ್ಪೇಸ್ ಸೆಂಟರ್​ನಲ್ಲಿ ಗಗನಯಾನ ಮಿಷನ್​ಗೆ ಕಾರ್ಯಕ್ರಮದಲ್ಲಿ ಸೋಮನಾಥ್ ಅವರು ಕೂಡ ಭಾಗಿಯಾಗಿದ್ರು. ಇಡೀ ಆಪರೇಷನ್ ಬಗ್ಗೆ ಸೋಮನಾಥ್ ಅವರೇ ಪ್ರಧಾನಿಗೆ ಮಾಹಿತಿ ನೀಡಿದ್ರು. ಈಗ ಸೋಮನಾಥ್ ಅವರು 2025ರಲ್ಲಿ ಬಾಹ್ಯಾಕಾಶಕ್ಕೆ ಮಾನವನನ್ನ ಕಳುಹಿಸೋ ಈ ಯೋಜನೆಯಲ್ಲೇ ಕಂಪ್ಲೀಟ್ ಆಗಿ ಇನ್ವಾಲ್ವ್​ ಆಗಿದ್ದಾರೆ. ಹಾಗಂತಾ ಸೋಮನಾಥ್ ಅವರೇನು ಸಂಪೂರ್ಣವಾಗಿ ರಿಕವರಿ ಆಗಿದ್ದಾರೆ ಅಂತೇನಲ್ಲ. ಈಗಲೂ ಕೂಡ ಚಿಕಿತ್ಸೆ ಪಡೀತಾ ಇದ್ದಾರೆ. ಕ್ಯಾನ್ಸರ್​​​ನ್ನ ಗೆದ್ದಿರೋ ಸೋಮನಾಥ್ ಅವರು ಈಗ ಹೊಸ ಜೋಶ್​​ನಲ್ಲಿ ಕೆಲಸ ಮಾಡ್ತಾ ಇದ್ದಾರೆ. ಅವರಲ್ಲಿ ಕಾನ್ಫಿಡೆನ್ಸ್​, ಸ್ಪಿರಿಟ್ ಇನ್ನಷ್ಟು ಹೆಚ್ಚಾಗಿದ್ಯಂತೆ. ಕ್ಯಾನ್ಸರ್ ಗೆದ್ದ ಸೋಮನಾಥ್ ಈಗ ತಮ್ಮ ಮುಂದೆ ಇರೋ ಬಾಹ್ಯಾಕಾಶದ ಸವಾಲುಗಳನ್ನ ಕೂಡ ಗೆಲ್ಲೋದ್ರತ್ತ ಫೋಕಸ್ ಮಾಡಿದ್ದಾರೆ.

Shwetha M