ಆದಿತ್ಯ – ಎಲ್‌ 1 ಮಿಷನ್‌ ಉಡಾವಣೆಯಂದೇ ಇಸ್ರೋ ಅಧ್ಯಕ್ಷ ಸೋಮನಾಥ್​ ಗೆ ಕ್ಯಾನ್ಸರ್​ ಪತ್ತೆ!

ಆದಿತ್ಯ – ಎಲ್‌ 1 ಮಿಷನ್‌ ಉಡಾವಣೆಯಂದೇ ಇಸ್ರೋ ಅಧ್ಯಕ್ಷ ಸೋಮನಾಥ್​ ಗೆ ಕ್ಯಾನ್ಸರ್​ ಪತ್ತೆ!

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅಧ್ಯಕ್ಷ ಎಸ್​ ಸೋಮನಾಥ್ ಅವರಿಗೆ ಕಾನ್ಸರ್‌ ಇರುವುದು ಪತ್ತೆಯಾಗಿದೆ. ಆದಿತ್ಯ – ಎಲ್‌ 1 ಮಿಷನ್‌ ಉಡಾವಣೆಯ ದಿನವೇ ಕ್ಯಾನರ್‌ ಇರುವುದು ಗೊತ್ತಾಗಿದೆ. ಇದು ಸೋಮನಾಥ್ ಸೇರಿ ಇಡೀ ಕುಟುಂಬಕ್ಕೇ ಆಘಾತವನ್ನುಂಟು ಮಾಡಿತ್ತು.

ಹೌದು, ಸೆಪ್ಟೆಂಬರ್ 2, 2023 ರಂದು, ಭಾರತದ ಮೊದಲ ಬಾಹ್ಯಾಕಾಶ-ಆಧಾರಿತ ಸೌರ ನೌಕೆ, ಆದಿತ್ಯ ಎಲ್ 1, ಸೂರ್ಯನನ್ನು ಅಧ್ಯಯನ ಮಾಡಲು ತನ್ನ ಪ್ರಯಾಣ ಪ್ರಾರಂಭಿಸಿತ್ತು. ಇಡೀ ದೇಶವೇ ಇಸ್ರೋ ಸಾಧನೆಗೆ ಬೆಕ್ಕಸ ಬೆರಗಾಗಿತ್ತು. ಆದರೆ, ಎಸ್ ಸೋಮನಾಥ್ ಅವರಿಗೆ ಮಾತ್ರ ಕ್ಯಾನ್ಸರ್ ಇರೋದು ಗೊತ್ತಾಗಿದೆ. ಇಡೀ ದೇಶವೇ ಉಪಗ್ರಹ ಯಶಸ್ವಿಯಾಗಿ ಉಡಾವಣೆಗಿವುದಕ್ಕೆ ಸಂತಸಪಡುತ್ತಿದ್ದರೆ, ಇತ್ತ ಸೋಮನಾಥ್‌ ಹಾಗೂ ಅವರ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿತ್ತು. ರೂಟೀನ್ ಚೆಕ್ ಅಪ್ ಮಾಡಿಸಿಕೊಂಡಿದ್ದ ಸೋಮನಾಥ್ ಅವರಿಗೆ ಹೊಟ್ಟೆಯಲ್ಲಿ ಗೆಡ್ಡೆ ಇರೋದು ದೃಢಪಟ್ಟಿತ್ತು.

ಇದನ್ನೂ ಓದಿ: ತಿರುಪತಿ ಗಿರಿವಾಸ ಮತ್ತಷ್ಟು ಶ್ರೀಮಂತ! – ಸತತ 24ನೇ ತಿಂಗಳು ತಿರುಪತಿ ಹುಂಡಿಯಲ್ಲಿ ಶತಕೋಟಿಗೂ ಅಧಿಕ ಕಾಣಿಕೆ ಸಂಗ್ರಹ

ಈ ಬಗ್ಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಚಂದ್ರಯಾನ-3 ಮಿಷನ್ ಉಡಾವಣೆ ಸಮಯದಲ್ಲಿ ಕೆಲವು ಆರೋಗ್ಯ ಸಮಸ್ಯೆಗಳಿದ್ದವು. ಆದರೆ ಆ ಸಮಯದಲ್ಲಿ ನನಗೆ ಸ್ಪಷ್ಟವಾದ ಮಾಹಿತಿ ಇರಲಿಲ್ಲ. ಆದಿತ್ಯ-ಎಲ್1 ಮಿಷನ್ ಉಡಾವಣೆಯಾದ ದಿನ ಸ್ಕ್ಯಾನಿಂಗ್‌ ಮಾಡಿದಾಗ ಕ್ಯಾನ್ಸರ್‌ ಇರುವುದು ದೃಢಪಟ್ಟಿತು. ಕ್ಯಾನ್ಸರ್‌ ಇರುವುದು ದೃಢಪಡುತ್ತಿದ್ದಂತೆ ನನಗೆ ಮಾತ್ರವಲ್ಲ ಈ ಸವಾಲಿನ ಅವಧಿಯಲ್ಲಿ ನನ್ನ ಕುಟುಂಬ ಮತ್ತು ಸಹೋದ್ಯೋಗಿಗಳಿಗೂ ಆಘಾತವಾಯಿತು ಎಂದು ಹೇಳಿದರು.

ಆದಿತ್ಯ ಎಲ್ 1, ಸೂರ್ಯನನ್ನು ಅಧ್ಯಯನ ಮಾಡಲು ತನ್ನ ಪ್ರಯಾಣವನ್ನು ಪ್ರಾರಂಭಿಸಿದಾಗ ಬಳಿಕ ಸೋಮನಾಥ್‌ ರೂಟಿನ್‌ ಸ್ಕ್ಯಾನ್‌ಗೆ ಒಳಗಾದರು. ಈ ವೇಳೆ ಕ್ಯಾನ್ಸರ್‌ ಇರುವುದು ದೃಢಪಡುತ್ತಿದ್ದಂತೆ ಹೆಚ್ಚಿನ ಚಿಕಿತ್ಸೆಗೆ ಚೆನ್ನೈಯ ಆಸ್ಪತ್ರೆಗೆ ದಾಖಲಾದರು. ಈ ಕ್ಯಾನ್ಸರ್‌ ಅನುವಂಶೀಯತೆಯಿಂದ ಕ್ಯಾನ್ಸರ್‌ ಬಂದಿರುವುದು ಗೊತ್ತಾಯಿತು. ಸೋಮನಾಥ್ ಅವರಿಗೆ ಶಸ್ತ್ರಚಿಕಿತ್ಸೆಯ ನಂತರ ಕಿಮೊಥೆರಪಿ ಮಾಡಲಾಯಿತು.  ಆಸ್ಪತ್ರೆಯಲ್ಲಿ ಕೇವಲ ನಾಲ್ಕು ದಿನಗಳನ್ನು ಕಳೆದ ನಂತರ ಸೋಮನಾಥ್‌ ಮತ್ತೆ ಇಸ್ರೋದಲ್ಲಿ ತಮ್ಮ ಕರ್ತವ್ಯಕ್ಕೆ ಹಾಜರಾದರು. ಐದನೇ ದಿನದಿಂದ ಯಾವುದೇ ನೋವು ಇಲ್ಲದೆ ಕೆಲಸ ಮಾಡಲಾರಂಭಿಸಿದರು. ಸೋಮನಾಥ್‌ ಅವರು ನಿಯಮಿವಾಗಿ ತಪಾಸಣೆ ಮತ್ತು ಸ್ಕ್ಯಾನಿಂಗ್‌ಗೆ  ಒಳಗಾಗುತ್ತಿದ್ದಾರೆ. ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಅವರೇ ಸ್ವತಃ ಅವರೇ ಹೇಳಿದ್ದಾರೆ.

Shwetha M