ಚಂದ್ರನ ಅಂಗಳದಲ್ಲಿಂದು ತ್ರಿವಿಕ್ರಮನ ಪಾದಸ್ಪರ್ಶ – ಸಂಜೆ 6:04ಕ್ಕೆ ಸಾಫ್ಟ್ ಲ್ಯಾಂಡಿಂಗ್

ಚಂದ್ರನ ಅಂಗಳದಲ್ಲಿಂದು ತ್ರಿವಿಕ್ರಮನ ಪಾದಸ್ಪರ್ಶ – ಸಂಜೆ 6:04ಕ್ಕೆ ಸಾಫ್ಟ್ ಲ್ಯಾಂಡಿಂಗ್

ಚಂದ್ರಯಾನ 3 ನೌಕೆ ಚಂದ್ರ ದಕ್ಷಿಣ ಧ್ರುವದ ಮೇಲಿಳಿಯಲು ಕ್ಷಣಗಣನೆ ಆರಂಭವಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವವೇ ಎದುರು ನೋಡುತ್ತಿದೆ. ಬುಧವಾರ ಸಂಜೆ 6.04ಕ್ಕೆ ಚಂದ್ರಯಾನ -3 ನೌಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಸಜ್ಜಾಗಿದೆ.

ಜುಲೈ 14ರಂದು ಚಂದ್ರಯಾನ -3 ನೌಕೆಯನ್ನು ಶ್ರೀಹರಿಕೋಟದಿಂದ ಉಡಾವಣೆ ಮಾಡಲಾಗಿತ್ತು. ಆಗಸ್ಟ್ 5 ರಂದು, ಚಂದ್ರಯಾನ -3 ಚಂದ್ರನ ಕಕ್ಷೆಗೆ ಪ್ರವೇಶಿಸಿತು. ಆಗಸ್ಟ್ 6,9,14 ಮತ್ತು 16ರಂದು, ಆರ್ಬಿಟ್ ರಿಡಕ್ಷನ್‍ ಮನ್ಯೂವರ್ಸ್ ನಡೆಸಲಾಗಿತ್ತು. ಇದೀಗ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಅಂಗಳದಲ್ಲಿ ಲ್ಯಾಂಡ್‌ ಆಗಲು ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಚಂದ್ರನ ದಕ್ಷಿಣ ಧ್ರುವ ಪ್ರವೇಶಿಸಿದ ಮೊದಲ ದೇಶವಾಗಿ ಭಾರತ ಗುರುತಿಸಿಕೊಳ್ಳಲಿದೆ.

ಇದನ್ನೂ ಓದಿ: ಚಂದ್ರಯಾನ -3 ಯಶಸ್ಸಿಗಾಗಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ!

ಚಂದ್ರಯಾನ-3 ರ ಲ್ಯಾಂಡರ್ ಮಾಡ್ಯೂಲ್ ಮಾನವನ ಜಾಣ್ಮೆ ಮತ್ತು ನಿರ್ಣಯಕ್ಕೆ ಸಾಕ್ಷಿಯಾಗಿದೆ. ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಗ್ಯಾನ್ ಒಳಗೊಂಡಿರುವ LM, ಚಂದ್ರನ ಭೂಪ್ರದೇಶದಲ್ಲಿ ಅತ್ಯಂತ ಸುರಕ್ಷಿತವಾಗಿ ಹಗುರವಾಗಿ ಚಂದ್ರನ ನೆಲವನ್ನು ಸ್ಪರ್ಶಿಸುವ ಮೂಲಕ ಇತಿಹಾಸ ನಿರ್ಮಿಸಲು ಸಿದ್ಧವಾಗಿದೆ. ಬುಧವಾರ ಸಂಜೆ ಅಂದೆ ಇಂದು ಸರಿಯಾಗಿ ಸಂಜೆ 6:04 ನಿಮಿಷಕ್ಕೆ ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆಗಲಿದೆ. ವಿಕ್ರಮ್‌ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ಅಂಗಳವನ್ನ ತಲುಪಿದರೆ ವಿಶ್ವದಲ್ಲಿ ವಿಕ್ರಮ ಸ್ಥಾಪಿಸಿದ ಗರಿಮೆ ಇಸ್ರೋ ಪಾಲಿಗೆ ಒದಗಿ ಬರಲಿದೆ.

ಚಂದ್ರಯಾನ-3 ರ ಲ್ಯಾಂಡಿಂಗ್ ಭಾರತಕ್ಕೆ ಐತಿಹಾಸಿಕ ಮೈಲಿಗಲ್ಲಾಗಲಿದೆ. ಏಕೆಂದರೆ ಇದು ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್‌ನ ಸಂಕೀರ್ಣ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡ ನಾಲ್ಕನೇ ರಾಷ್ಟ್ರವಾಗಿ ಗುರುತಿಸಿಕೊಳ್ಳಲಿದೆ. ಅಮೆರಿಕ, ಚೀನಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟಗಳ ಸಾಧನೆಯ ಶ್ರೇಣಿಗೆ ಸೇರಲಿದೆ. ಈ ಮೂಲಕ ಭಾರತ ಬಾಹ್ಯಾಕಾಶ ಪರಿಶೋಧನೆಯಲ್ಲಿ ವಿಕ್ರಮ ಸಾಧಿಸಿದ ಖ್ಯಾತಿ ಲಭಿಸಲಿದೆ.

suddiyaana