ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹುಗೆ ಪ್ರೋಸ್ಟೇಟ್ ಕ್ಯಾನ್ಸರ್!

ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಆರೋಗ್ಯದ ಕುರಿತು ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದ್ದು, ತಾವು ಪ್ರೋಸ್ಟೇಟ್ ಕ್ಯಾನ್ಸರ್ಗೆ ಚಿಕಿತ್ಸೆ ಪಡೆದಿದ್ದು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, ‘ನಾನು ಪ್ರಾಸ್ಟೇಟ್ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದು, ಈಗ ಆರೋಗ್ಯವಾಗಿದ್ದೇನೆಂದು ಹೇಳಿದ್ದಾರೆ.
ನನಗೆ 1.5 ವರ್ಷಗಳ ಹಿಂದೆ ನನಗೆ ಪ್ರೋಸ್ಟೇಟ್ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. 2.5 ತಿಂಗಳ ಹಿಂದೆ, ವೈದ್ಯರು ಜೆರುಸಲೆಂ ಹಡಸ್ಸಾ ಆಸ್ಪತ್ರೆಯಲ್ಲಿ ಸಣ್ಣ ಗೆಡ್ಡೆ ಕಂಡು ಹಿಡಿದು ವಿಕಿರಣ ಚಿಕಿತ್ಸೆ ನೀಡಿದ್ದರು ಎಂದು ತಿಳಿಸಿದ್ದಾರೆ. ಇರಾನ್ ವಿರುದ್ಧ ನಡೆಯುತ್ತಿದ್ದ ಯುದ್ಧದ ಉತ್ತುಂಗದಲ್ಲಿದ್ದ ಹಂತದಲ್ಲಿ ಈ ವಿಚಾರ ಬಹಿರಂಗವಾದರೆ ಇಸ್ರೇಲ್ ವಿರುದ್ಧ ತಪ್ಪು ಪ್ರಚಾರ ಹೆಚ್ಚಾಗಬಹುದು ಎಂಬ ಕಾರಣದಿಂದಾಗಿ ಎರಡು ತಿಂಗಳು ವಿಳಂಬಗೊಳಿಸಲು ವಿನಂತಿಸಿದ್ದೆ. ಇದು ದೊಡ್ಡ ಆರೋಗ್ಯ ಸಮಸ್ಯೆಯಲ್ಲ, ಸಣ್ಣ ವೈದ್ಯಕೀಯ ಸಮಸ್ಯೆಯಷ್ಟೇ ಎಂದು ಹೇಳಿದ್ದಾರೆ.
ಯುದ್ಧಾರಂಭದ ನಂತರ ಕೆಲ ದಿನ ನೆತನ್ಯಾಹು ಸಾರ್ವಜನಿಕವಾಗಿ ಕಂಡಿರಲಿಲ್ಲ. ಈವೇಳೆ ಅವರ ಹತ್ಯೆ ಆಗಿದೆ ಎಂಬ ದಂತಿ ಹಬ್ಬಿತ್ತು. ಕೃತಕ ಬುದ್ಧಿಮತ್ತೆ ಬಳಸಿ ತಯಾರಿಸಲಾದ ನಕಲಿ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದು, ನೆತನ್ಯಾಹು ಮೃತಪಟ್ಟಿದ್ದಾರೆ ಎಂಬ ತಪ್ಪು ಸುದ್ದಿಗಳು ಕೂಡ ಪ್ರಸಾರವಾಗಿದ್ದವು. ಇದಾದ ಕೆಲ ದಿನಗಳ ಬಳಿಕ ನೆತನ್ಯಾಹು ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡು, ಊಹಾಪೋಹಗಳಿಗೆ ತೆರೆ ಎಳೆದಿದ್ದರು.
ಇದನ್ನೂ ಓದಿ: ಮದುವೆ ಮನೆಯಲ್ಲೇ 1 ಕೋಟಿ ಮೌಲ್ಯದ ಚಿನ್ನ ಕಳವು – ಮಂಟಪದ ಸಿಬ್ಬಂದಿಯಿಂದಲೇ ನಡೀತಾ ಕೃತ್ಯ?
ಹಡಸ್ಸಾ ಆಸ್ಪತ್ರೆಯ ಆಂಕಾಲಜಿ ವಿಭಾಗದ ನಿರ್ದೇಶಕ ಅಹರೋನ್ ಪೊಪೋವ್ಟ್ಸರ್ ಅವರು ಮಾತನಾಡಿ, ನೆತನ್ಯಾಹು ಅವರಿಗೆ ಪ್ರಾರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆಯಾಗಿತ್ತು.. ಈ ವಯಸ್ಸಿನ ಪುರುಷರಲ್ಲಿ ಪ್ರೋಸ್ಟೇಟ್ ಕ್ಯಾನ್ಸರ್ ಸಾಮಾನ್ಯವಾಗಿದ್ದು, ಪರೀಕ್ಷೆಗಳ ಫಲಿತಾಂಶದ ಪ್ರಕಾರ ಇದೀಗ ರೋಗ ಸಂಪೂರ್ಣವಾಗಿ ಗುಣಮುಖವಾಗಿದೆ ಎಂದು ತಿಳಿಸಿದ್ದಾರೆ.
ಇಸ್ರೇಲ್ನ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿಯಾಗಿರುವ ನೆತನ್ಯಾಹು ಅವರು, ಇರಾನ್ ಯುದ್ಧದ ಜೊತೆಗೆ ಗಾಜಾ ಮತ್ತು ಲೆಬನಾನ್ ಸಂಘರ್ಷಗಳನ್ನೂ ಎದುರಿಸುತ್ತಿದ್ದಾರೆ.

ನೋಡಿರಿ

