ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಸ್ಪತ್ರೆಗೆ ದಾಖಲು – ದೇಶದ ಅಧಿಕಾರ ತಾತ್ಕಾಲಿಕವಾಗಿ ಬೇರೆಯವರಿಗೆ ಹಸ್ತಾಂತರ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಸ್ಪತ್ರೆಗೆ ದಾಖಲು – ದೇಶದ ಅಧಿಕಾರ ತಾತ್ಕಾಲಿಕವಾಗಿ ಬೇರೆಯವರಿಗೆ ಹಸ್ತಾಂತರ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಸ್ಪತ್ರೆಗೆ ದಾಖಲಾಗಿದ್ದಾರೆಅನ್ನೋ ಬಗ್ಗೆ ವರದಿಯಾಗಿದೆ. ಗಾಜಾ ಯುದ್ಧದ ಮಧ್ಯೆ, ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮದ ಕುರಿತು ಮಾತುಕತೆ ನಡೆಯುತ್ತಿದ್ದರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶುಕ್ರವಾರ ಪ್ರಧಾನಿ ಕಚೇರಿಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ನೆತನ್ಯಾಹು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸುದ್ದಿ ಹೊರಬಂದಿದ್ದು,  ಕೋಲಾಹಲ ಉಂಟಾಯಿತು.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ವೈದ್ಯಕೀಯ ತಪಾಸಣೆಗಾಗಿ ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ವಾಸ್ತವ ಇದಕ್ಕಿಂತಲೂ ಮೀರಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ದೇಶದ ಅಧಿಕಾರವನ್ನು ತಾತ್ಕಾಲಿಕವಾಗಿ ಬೇರೆಯವರಿಗೆ ಹಸ್ತಾಂತರಿಸಲಾಗಿದೆ. ನೆತನ್ಯಾಹು ಅನುಪಸ್ಥಿತಿಯಲ್ಲಿ, ಉಪ ಪ್ರಧಾನಿ ಯಾರಿವ್ ಲೆವಿನ್ ಅವರನ್ನು ಹಂಗಾಮಿ ಪ್ರಧಾನಿಯನ್ನಾಗಿ ಮಾಡಲಾಗಿದೆ. ಅಂದರೆ ನೆತನ್ಯಾಹು ಆಪರೇಷನ್ ಥಿಯೇಟರ್‌ನಲ್ಲಿ ಇರುವವರೆಗೂ, ದೇಶದ ಉನ್ನತ ನಾಯಕತ್ವವು ಅವರ ಕೈಯಲ್ಲಿಯೇ ಇರುತ್ತದೆ. ಈ ಸಮಯದಲ್ಲಿ, ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರಿಗೆ ಭದ್ರತಾ ವಿಷಯಗಳ ಜವಾಬ್ದಾರಿಯನ್ನು ನೀಡಲಾಗಿದೆ. ನೇತನ್ಯಾಹು ಅನುಪಸ್ಥಿತಿಯಲ್ಲಿ ಅವರು ಭದ್ರತಾ ಸಂಪುಟವನ್ನು ಮುನ್ನಡೆಸಲಿದ್ದಾರೆ.

Kishor KV

Leave a Reply

Your email address will not be published. Required fields are marked *