ಭಾರತಕ್ಕೆ So Sorry ಅಂದ ಇಸ್ರೇಲ್‌! – ಕಾರಣವೇನು ಗೊತ್ತಾ?

ಭಾರತಕ್ಕೆ So Sorry ಅಂದ ಇಸ್ರೇಲ್‌! – ಕಾರಣವೇನು ಗೊತ್ತಾ?

ಇರಾನ್ ಮೇಲೆ ಇಸ್ರೇಲ್ ಮಾರಣಾಂತಿಕ ದಾಳಿ ನಡೆಸಿದೆ. ಈಗಾಗಲೇ ಈ ದಾಳಿಯಿಂದಾಗಿ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ನಡುವೆ ಇಸ್ರೇಲ್‌ ದೊಡ್ಡ ಎಡವಟ್ಟು ಮಾಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಭಾರತ ನಕ್ಷೆಯನ್ನು ತಪ್ಪಾಗಿ ಚಿತ್ರಿಸಿ, ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿತ್ತು. ಜಮ್ಮು-ಕಾಶ್ಮೀರವನ್ನು ಪಾಕಿಸ್ತಾನದ ಭಾಗವಾಗಿ ಚಿತ್ರಿಸಿರುವ ನಕ್ಷೆಯನ್ನು ಇಸ್ರೇಲ್‌ ಸೇನೆ ಪೋಸ್ಟ್‌ ಮಾಡಿತ್ತು. ಇದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಇಸ್ರೇಲ್‌ ಭಾರತಕ್ಕೆ ಕ್ಷಮೆ ಕೋರಿದೆ.

ಇದನ್ನೂ ಓದಿ: ಕಸದ ಬುಟ್ಟಿಯಲ್ಲಿದ್ದ ಮಗು ಮಹಾನಟಿ.. ದಿವ್ಯಾಂಜಲಿ ಆಕ್ಟಿಂಗ್..‌ ಪ್ರೇಮಾ ಕಣ್ಣೀರು! – ಬೀದರ್ ಹುಡುಗಿ ಕರುಣಾಜನಕ ಕತೆ!

ಭಾರತ ನಕ್ಷೆಯನ್ನು ತಪ್ಪಾಗಿ ಚಿತ್ರಿಸಿ, ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ ಬೆನ್ನಲ್ಲೇ ಭಾರತೀಯರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಇಸ್ರೇಲ್‌ ರಕ್ಷಣಾ ಪಡೆ ಭಾರತದ ಕ್ಷಮೆಯಾಚಿಸಿದೆ. ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ಐಡಿಎಫ್ ನಕ್ಷೆಯು ಗಡಿಗಳನ್ನು ನಿಖರವಾಗಿ ಚಿತ್ರಿಸಲು ವಿಫಲವಾಗಿದೆ ಎಂದು ಒಪ್ಪಿಕೊಂಡಿತು.

ಭಾರತೀಯ ಬಳಕೆದಾರರು ಮಾಡಿದ ಟ್ವೀಟ್‌ಗಳನ್ನು ಅನುಸರಿಸಿ ಐಡಿಎಫ್‌ನ ಪೋಸ್ಟ್ ಬಂದಿತು, ಹಲವರು ತೀವ್ರವಾಗಿ ಕೋಪಗೊಂಡು, ದೋಷವನ್ನು ಎತ್ತಿ ತೋರಿಸಿ ಇಸ್ರೇಲಿ ಮಿಲಿಟರಿ ಪೋಸ್ಟ್ ಅನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಕೆಲವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಟ್ಯಾಗ್ ಮಾಡಿದ್ದಾರೆ. ಇಂಡಿಯನ್ ರೈಟ್ ವಿಂಗ್ ಕಮ್ಯುನಿಟಿ ಎಂಬ ಎಕ್ಸ್ ಹ್ಯಾಂಡಲ್‌ನ ಅಂತಹ ಒಂದು ಟ್ವೀಟ್‌ಗೆ ನೇರವಾಗಿ ಪ್ರತಿಕ್ರಿಯಿಸಿದ ಇಸ್ರೇಲ್ ರಕ್ಷಣಾ ಪಡೆಗಳು, “ಈ ಪೋಸ್ಟ್ ಪ್ರದೇಶದ ಚಿತ್ರಣವಾಗಿದೆ. ಈ ನಕ್ಷೆಯು ಗಡಿಗಳನ್ನು ನಿಖರವಾಗಿ ಚಿತ್ರಿಸಲು ವಿಫಲವಾಗಿದೆ. ಈ ಅಚಾತುರ್ಯಕ್ಕೆ ನಾವು ಕ್ಷಮೆಯಾಚಿಸುತ್ತೇವೆ” ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ತಾನು ಪೋಸ್ಟ್‌ ಮಾಡಿದ ಸುಮಾರು 90 ನಿಮಿಷಗಳ ನಂತರ ಇಸ್ರೇಲ್‌ ಸೇನೆ ಈ ಸ್ಪಷ್ಟನೆ ನೀಡಿದೆ.

ಇಸ್ರೇಲ್‌ನ ಪೋಸ್ಟ್‌ ಅನ್ನು ನೋಡಿರುವ ನೆಟ್ಟಿಗರೊಬ್ಬರು, “ಭಾರತ ಏಕೆ ತಟಸ್ಥವಾಗಿದೆ ಎಂದು ಈಗ ನಮಗೆ ಅರ್ಥವಾಗಿದೆ. ರಾಜತಾಂತ್ರಿಕತೆಯಲ್ಲಿ, ಯಾರೂ ನಿಜವಾಗಿಯೂ ನಿಮ್ಮ ಸ್ನೇಹಿತರಲ್ಲ ಎಂದು ವ್ಯಂಗ್ಯವಾಡಿದ್ದಾರೆ.

Shwetha M