ಇದೇ ಮೊದಲ ಬಾರಿಗೆ ಗಾಜಾದಲ್ಲಿ ಕದನ ವಿರಾಮಕ್ಕೆ ಆಗ್ರಹಿಸಿದ ವಿಶ್ವಸಂಸ್ಥೆ ಭದ್ರತಾ ಮಂಡಳಿ!
ಪ್ಯಾಲೆಸ್ತೀನ್ನ ಹಮಾಸ್ ಉಗ್ರರ ಭೀಕರ ದಾಳಿಗೆ ಸಾಕ್ಷಿಯಾಗಿದ್ದ ವಿಶ್ವ, ಇದೀಗ ಇಸ್ರೇಲ್ನ ಪ್ರತಿದಾಳಿಯ ಉಗ್ರಾವತಾರಕ್ಕೆ ಸಾಕ್ಷಿಯಾಗುತ್ತಿದೆ. ಗಾಜಾಪಟ್ಟಿಯಲ್ಲಿ ಬಾಂಬುಗಳ ಮಳೆಯನ್ನೇ ಸುರಿಸುತ್ತಿದೆ ಇಸ್ರೇಲ್.. ಹಮಾಸ್ ಉಗ್ರರು ಯುದ್ಧ ಶುರು ಮಾಡಿದರು, ನಾವು ಹಮಾಸ್ ಬಂಡುಕೋರರನ್ನೇ ನಿರ್ನಾಮ ಮಾಡುತ್ತೇವೆ ಎಂದು ಇಸ್ರೇಲ್ ಸವಾಲು ಹಾಕಿದೆ. ಇದೀಗ ಇಸ್ರೇಲ್ ಹಾಗೂ ಪ್ಯಾಲೆಸ್ತಿನ್ ನಡುವಿನ ಸಂಘರ್ಷ ಅಂತ್ಯಗೊಳಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ಮಹತ್ವದ ಸಭೆ ನಡೆಸಿ ನಿರ್ಣಯ ಅಂಗೀಕರಿಸಿದೆ.
ಇದನ್ನೂ ಓದಿ: ಹೆಚ್ಡಿಕೆ ಸ್ಪರ್ಧೆಗೆ ಜೆಡಿಎಸ್ ನಲ್ಲೇ ಕಿತ್ತಾಟ – ಒಂಟಿಯಾಗೇ ಮಂಡ್ಯ ಗೆಲ್ತಾರಾ ಸುಮಲತಾ?
ಹೌದು, ಸದ್ಯ ಹಮಾಸ್ ಹಾಗೂ ಇಸ್ರೇಲ್ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಈ ರಣಭೀಕರ ಯುದ್ಧದಲ್ಲಿ ಈಗಾಗಲೇ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಲೆಕ್ಕವಿಲ್ಲದಷ್ಟು ಜನರು ಬೀದಿಗೆ ಬಿದ್ದಿದ್ದಾರೆ. ಇದೀಗ ಇಸ್ರೇಲ್ ಹಾಗೂ ಪ್ಯಾಲೆಸ್ತಿನ್ ನಡುವಿನ ಸಂಘರ್ಷ ಅಂತ್ಯಗೊಳಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ಮಹತ್ವದ ಸಭೆ ನಡೆಸಿ ನಿರ್ಣಯ ಅಂಗೀಕರಿಸಿದೆ. ತಕ್ಷಣವೇ ಗಾಜಾದಲ್ಲಿ ಕದನ ವಿರಾಮ ಘೋಷಿಸಬೇಕು ಎಂದು ಭದ್ರತಾ ಮಂಡಳಿಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಇದೇ ವೇಳೆ ಒತ್ತೆಯಾಳಾಗಿ ಇರಿಸಿಕೊಂಡಿರುವ ನಾಗರಿಕರನ್ನು ಹಮಾಸ್ ತಕ್ಷಣವೇ ಬಿಡುಗಡೆ ಮಾಡಬೇಕು. ಯಾವುದೇ ಷರತ್ತುಗಳಿಲ್ಲದೆ ಒತ್ತೆಯಾಳುಗಳ ಬಿಡುಗಡೆ ಮಾಡಬೇಕು ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯ ಕೈಗೊಂಡಿದೆ.
ಇದೇ ಮೊದಲ ಬಾರಿಗೆ ವಿಶ್ವಂಸ್ಥೆ ಭದ್ರತಾ ಮಂಡಳಿ ಕದನ ವಿಮಾನ ಘೋಷಣೆಗೆ ಆಗ್ರಹಿಸಿದೆ. ಭದ್ರತಾ ಮಂಡಳಿಯ ಎಲ್ಲಾ 14 ಸದಸ್ಯರು ಕದನ ವಿಮಾನ ಘೋಷಣೆಗೆ ಮತ ಚಲಾಯಿಸದರು. ಪವಿತ್ರ ರಂಜಾನ್ ತಿಂಗಳ ಕಾರಣ ತಕ್ಷಣವೇ ಕದನ ವಿಮಾನ ಘೋಷಿಸಬೇಕು ಎಂದು ಆಗ್ರಹಿಸಿದೆ.
ಇತ್ತೀಚೆಗೆ ಹಮಾಸ್ ನಡುವಿನ ಸಂಘರ್ಷ ನಿಲ್ಲಿಸುವಂತೆ ವಿಶ್ವಸಂಸ್ಥೆಯಲ್ಲಿ ಮಂಡಿಸಿದ್ದ ಗೊತ್ತುವಳಿಗೆ ಭಾರತ ಬೆಂಬಲ ವ್ಯಕ್ತಪಡಿಸಿತ್ತು. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವು ಇದೇ ಮೊದಲ ಬಾರಿಗೆ ಗಾಜಾ ಯುದ್ಧದ ವಿಷಯದಲ್ಲಿ ತಟಸ್ಥ ಧೋರಣೆ ಕೈಬಿಟ್ಟು ತತ್ವಾಧಾರಿತವಾಗಿ ಮುನ್ನಡೆದಿದೆ. ಈಜಿಪ್ಟ್ ಮಂಡಿಸಿದ ಗೊತ್ತುವಳಿ ಪರವಾಗಿ 153 ದೇಶಗಳು ಒಪ್ಪಿಗೆ ಸೂಚಿಸಿದರೆ ಆಸ್ಟ್ರಿಯಾ, ಇಸ್ರೇಲ್ ಹಾಗೂ ಅಮೆರಿಕ ಸೇರಿದಂತೆ 10 ರಾಷ್ಟ್ರಗಳು ವಿರೋಧಿಸಿದವು. 23 ರಾಷ್ಟ್ರಗಳು ಸಭೆಗೆ ಗೈರಾಗಿದ್ದವು.