ಯುದ್ಧ ನಿಲ್ಲಿಸಲು ಸಾಧ್ಯವೇ ಇಲ್ಲ! – ಕದನ ವಿರಾಮ ಕುರಿತು ತನ್ನ ನಿಲುವು ಸ್ಪಷ್ಟಪಡಿಸಿದ ಇಸ್ರೇಲ್

ಯುದ್ಧ ನಿಲ್ಲಿಸಲು ಸಾಧ್ಯವೇ ಇಲ್ಲ! – ಕದನ ವಿರಾಮ ಕುರಿತು ತನ್ನ ನಿಲುವು ಸ್ಪಷ್ಟಪಡಿಸಿದ ಇಸ್ರೇಲ್

ಇಸ್ರೇಲ್‌ ಹಾಗೂ ಹಮಾಸ್‌ ನಡುವಿನ ಕದನ ತೀವ್ರಗೊಳ್ಳುತ್ತಿದೆ. ಈ ಭೀಕರ ಯುದ್ಧ ಪ್ರಾರಂಭವಾಗಿ 25ದಿನಗಳಾಗಿವೆ.  ವಿಶ್ವಸಂಸ್ಥೆ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಗಾಜಾದಲ್ಲಿ ಸುಮಾರು 420 ಮಕ್ಕಳು ಪ್ರತಿದಿನ ಇಸ್ರೇಲ್‌ ಸೇನೆಯಿಂದ ದಾಳಿಗೆ ಒಳಗಾಗುತ್ತಿದ್ದಾರೆ. ಮತ್ತೊಂದೆಡೆ, ಕದನ ವಿರಾಮಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ದೇಶದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಅಕ್ಟೋಬರ್ 7 ರಂದು ಪ್ರಾರಂಭವಾದ ಯುದ್ಧದಲ್ಲಿ ಇಸ್ರೇಲ್ ಕದನ ವಿರಾಮವನ್ನು ಘೋಷಿಸಲು ಸಾಧ್ಯವಿಲ್ಲ. ಕದನ ವಿರಾಮಕ್ಕೆ ಕರೆ ನೀಡುವುದು ಇಸ್ರೇಲ್‌ ಹಮಾಸ್​ಗೆ ಶರಣಾದಂತೆ ಭಾಸವಾಗುತ್ತದೆ ಎಂದಿದ್ದಾರೆ. ಭಯೋತ್ಪಾದನೆಗೆ ಶರಣಾದಂತೆ ಹಾಗಾಗಿ ಗೆಲ್ಲುವವರೆಗೆ ಯುದ್ಧ ಮುಂದುವರೆಸಲಾಗುವುದು  ಎಂದು ಹೇಳುವ ಮೂಲಕ ಪ್ರಧಾನಿ ಬೆಂಜಮಿನ್ ನೇತನ್ಯಾಹು ದೇಶದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಕುರ್ಕುರೆ, ಬಿಸ್ಕೆಟ್‌ ಪ್ಯಾಕೆಟ್‌ ಕದ್ದ ಆರೋಪ – ಮಕ್ಕಳನ್ನು ಕಂಬಕ್ಕೆ ಕಟ್ಟಿ ಥಳಿಸಿದ ಅಂಗಡಿ ಮಾಲೀಕ!

ಅಕ್ಟೋಬರ್ 7 ರಂದು ಹಮಾಸ್ ಮೊದಲ ಬಾರಿಗೆ ನಮ್ಮ ಮೇಲೆ ದಾಳಿ ನಡೆಸಿತು, ಹಲವು ಮುಗ್ಧ ಜೀವಗಳನ್ನು ಹತ್ಯೆ ಮಾಡಿತ್ತು. ನಮ್ಮ ನಾಗರಿಕರ ರಕ್ಷಣೆ ಕೂಡ ನಮ್ಮ ಹೊಣೆ. ನಮಗೆ ಯುದ್ಧ ಬೇಡ. ಆದರೆ ನಾವು ಈ ಯುದ್ಧವನ್ನು ಗೆಲ್ಲುತ್ತೇವೆ. ಜನರು ಭವಿಷ್ಯಕ್ಕಾಗಿ ಹೋರಾಡಲು ಸಿದ್ಧರಿದ್ದಾರೆಯೇ ಅಥವಾ ದಬ್ಬಾಳಿಕೆ ಮತ್ತು ಭಯೋತ್ಪಾದನೆಗೆ ಶರಣಾಗುತ್ತಾರೆಯೇ ಎಂದು ನಿರ್ಧರಿಸುವ ಸಮಯ ಇದೀಗ ಬಂದಿದೆ ಎಂದು ನೆತನ್ಯಾಹು ಹೇಳಿದರು.

ಹಮಾಸ್ ಚಿಕ್ಕ ಮಕ್ಕಳನ್ನು ಅವರ ತಾಯಂದಿರಿಂದ ಕಸಿದುಕೊಂಡಿತು. ಹಮಾಸ್ ಉಗ್ರರು ಜನರನ್ನು ಜೀವಂತ ಸುಟ್ಟು ಹಾಕಿದರು. ಮಹಿಳೆಯರ ಮೇಲೆ ಅತ್ಯಾಚಾರ. ಪುರುಷರ ಶಿರಚ್ಛೇದ. ಯಹೂದಿಗಳ ನರಮೇಧ. ಮಕ್ಕಳನ್ನು ಅಪಹರಿಸಿದ್ದಾರೆ. ಇದು ಒಳ್ಳೆಯದು ಹಾಗೂ ಕೆಟ್ಟದ್ದರ ನಡುವೆ ನಡೆಯುತ್ತಿರುವ ಯುದ್ಧ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ. ಹಮಾಸ್ ಮಾತುಕತೆಯಲ್ಲಿ ಆಸಕ್ತಿ ಹೊಂದಿಲ್ಲ. ಹಮಾಸ್‌ನ ಏಕೈಕ ಆಸಕ್ತಿ ಯಹೂದಿಗಳನ್ನು ನಾಶಮಾಡುವುದು. ಹಮಾಸ್ ಕಳೆದ 16 ವರ್ಷಗಳಿಂದ ಫೆಲೆಸ್ತೀನಿಯರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. 2007 ರಲ್ಲಿ ಗಾಜಾದಲ್ಲಿ ಅಧಿಕಾರವನ್ನು ಪಡೆದಾಗ, ನೂರಾರು ಪ್ಯಾಲೆಸ್ತೀನ್ ನಾಗರಿಕರು ಕೊಲ್ಲಲ್ಪಟ್ಟರು ಎಂದು ಹೇಳಿದ್ದಾರೆ.

Shwetha M