ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಬಹುನಿರೀಕ್ಷಿತ ಭಾರತ ಭೇಟಿ ಮತ್ತೊಮ್ಮೆ ಮುಂದೂಡಿಕೆ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಬಹುನಿರೀಕ್ಷಿತ ಭಾರತ ಭೇಟಿ ಮತ್ತೊಮ್ಮೆ ಮುಂದೂಡಿಕೆ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಬಹುನಿರೀಕ್ಷಿತ ಭಾರತ ಭೇಟಿ ಮತ್ತೊಮ್ಮೆ ಮುಂದೂಡಲ್ಪಟ್ಟಿದೆ. ಹೊಸದಿಲ್ಲಿಯ ಕೆಂಪುಕೋಟೆ ಬಳಿ ಇತ್ತೀಚೆಗೆ ನಡೆದ ಭೀಕರ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ‘ಭದ್ರತಾ ಕಾರಣಗಳಿಗಾಗಿ’ ಈ ಭೇಟಿಯನ್ನು ರದ್ದುಗೊಳಿಸಲಾಗಿದೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆಗಾಗಿ 2025ರ ಡಿಸೆಂಬರ್‌ನಲ್ಲಿ ನೆತನ್ಯಾಹು ಭಾರತಕ್ಕೆ ಆಗಮಿಸಬೇಕಿತ್ತು. ಆದರೆ, ದಿಲ್ಲಿಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಕಳೆದ ಒಂದು ದಶಕದಲ್ಲೇ ದಿಲ್ಲಿಯಲ್ಲಿ ನಡೆದ ಅತ್ಯಂತ ದೊಡ್ಡ ದಾಳಿ ಇದಾಗಿದ್ದು, ಈ ಘಟನೆಯಿಂದ ಉಂಟಾಗಿರುವ ಭದ್ರತಾ ಆತಂಕದ ಕಾರಣ ನೆತನ್ಯಾಹು ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎಂದು  ವರದಿ ಮಾಡಿದೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಯುವಕನ‌ ಮೇಲೆ ತಲ್ವಾರ್‌ನಿಂದ ದಾಳಿ! – ಓರ್ವ ವಶಕ್ಕೆ

ಈ ವರ್ಷದಲ್ಲಿ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ಭಾರತ ಭೇಟಿ ಮುಂದೂಡಲ್ಪಡುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಈ ಹಿಂದೆ ಸೆಪ್ಟೆಂಬರ್ 9 ರಂದು ನಿಗದಿಯಾಗಿದ್ದ ಒಂದು ದಿನದ ಭೇಟಿಯನ್ನು ಇಸ್ರೇಲ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿತ್ತು. ಅದಕ್ಕೂ ಮುನ್ನ ಏಪ್ರಿಲ್‌ನಲ್ಲಿಯೂ ಇದೇ ರೀತಿಯ ಕಾರಣಕ್ಕಾಗಿ ಭೇಟಿ ರದ್ದಾಗಿತ್ತು. ಇದೀಗ 2018ರ ನಂತರ ಮತ್ತೊಮ್ಮೆ ಭಾರತಕ್ಕೆ ಭೇಟಿ ನೀಡಬೇಕಿದ್ದ ಅವರು, ಮುಂದಿನ ವರ್ಷ ಹೊಸ ದಿನಾಂಕವನ್ನು ನಿಗದಿಪಡಿಸುವ ಸಾಧ್ಯತೆ ಇದೆ.

ಇಸ್ರೇಲ್‌ನ ಆಂತರಿಕ ರಾಜಕೀಯದಲ್ಲಿ, ಬೆಂಜಮಿನ್‌ ನೆತನ್ಯಾಹು ಅವರ ವಿದೇಶಿ ನಾಯಕರೊಂದಿಗಿನ ಬಾಂಧವ್ಯ ಪ್ರಮುಖ ವಿಷಯವಾಗಿದೆ. ಕಳೆದ ಜುಲೈನಲ್ಲಿ ಅವರ ಪಕ್ಷದ ಪ್ರಚಾರದ ಬ್ಯಾನರ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಫೋಟೋಗಳನ್ನು ಬಳಸಿ, ನೆತನ್ಯಾಹು ಅವರನ್ನು ಜಾಗತಿಕ ಮಟ್ಟದ ಪ್ರಭಾವಿ ನಾಯಕ ಎಂದು ಬಿಂಬಿಸಲಾಗಿತ್ತು.

Kishor KV