ಇಸ್ರೇಲ್ ಪ್ಯಾಲೆಸ್ತೀನ್ ನಡುವೆ ಯುದ್ಧವಾದ್ರೂ ಭಾರತದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ ಗೊತ್ತಾ?

ಇಸ್ರೇಲ್ ಪ್ಯಾಲೆಸ್ತೀನ್ ನಡುವೆ ಯುದ್ಧವಾದ್ರೂ ಭಾರತದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ ಗೊತ್ತಾ?

ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವಿನ ಯುದ್ಧ ದಿನದಿನಕ್ಕೂ ಭಯಾನಕ ಸ್ವರೂಪ ಪಡೆದುಕೊಳ್ಳುತ್ತಿದೆ. ಸಾವಿರಾರು ಜನ ಈಗಾಗಲೇ ಪ್ರಾಣ ಕಳೆದುಕೊಂಡಿದ್ದರೂ ಕದನ ನಿಲ್ಲುವ ಲಕ್ಷಣಗಳು ಕಾಣುತ್ತಿದ್ದ. ಅದರಲ್ಲೂ ಹಮಾಸ್ ಬಂಡುಕೋರರ ನೆಲೆಯಾಗಿರುವ ಗಾಜಾಪಟ್ಟಿಯ ಸರ್ವನಾಶಕ್ಕೆ ಇಸ್ರೇಲ್ ಪಣ ತೊಟ್ಟಿದೆ. ಸಾವು ನೋವು ಹೆಚ್ಚಾಗುತ್ತಿದ್ದು ಇದು ಇತರೆ ರಾಷ್ಟ್ರಗಳ ಮೇಲೂ ಪರಿಣಾಮ ಬೀರುತ್ತಿದೆ. ಭಾರತದ ಮೇಲೂ ಎಫೆಕ್ಟ್ ತಟ್ಟಲಿದೆ.

ಇದನ್ನೂ ಓದಿ : ಭೂಕಂಪದಿಂದ ನಲುಗಿದ್ದ ಅಫ್ಘಾನಿಸ್ತಾನದಲ್ಲಿ ಮತ್ತೆ 6.3 ತೀವ್ರತೆಯ ಭೂಕಂಪ!

ಭಾರತದಿಂದ ಇಸ್ರೇಲ್​ಗೆ ಲೋಹಗಳು ಮತ್ತು ಅಮೂಲ್ಯ ಹರಳು, ಜವಳಿ, ರಾಸಾಯನಿಕ ಉತ್ಪನ್ನಗಳನ್ನ ರವಾನಿಸಲಾಗುತ್ತದೆ. ಭಾರತವು ಮುಖ್ಯವಾಗಿ ಇಸ್ರೇಲ್‌ನಿಂದ ರಾಸಾಯನಿಕಗಳು ಮತ್ತು ಖನಿಜ ಉತ್ಪನ್ನಗಳು, ಮೂಲ ಲೋಹಗಳು ಮತ್ತು ಯಂತ್ರೋಪಕರಣಗಳು ಮತ್ತು ಸಾರಿಗೆ ಉಪಕರಣಗಳನ್ನ ಆಮದು ಮಾಡಿಕೊಳ್ಳುತ್ತದೆ. 1992 ರಲ್ಲಿ ಉಭಯ ರಾಷ್ಟ್ರಗಳ ನಡುವೆ 200 ಮಿಲಿಯನ್ ಇದ್ದ ದ್ವಿಪಕ್ಷೀಯ ವ್ಯಾಪಾರವಾಗಿತ್ತು. 2022-23 ರಲ್ಲಿ ಇಸ್ರೇಲ್‌ಗೆ ಭಾರತದಿಂದ $7.89 ಶತಕೋಟಿ ರಫ್ತು, $2.13 ಬಿಲಿಯನ್ ಆಮದು ಮಾಡಿಕೊಳ್ಳಲಾಗಿತ್ತು. ಇಸ್ರೇಲ್‌ನ ಪರಿಣತಿ ಮತ್ತು ತಂತ್ರಜ್ಞಾನಗಳಿಂದ ಭಾರತದ ಕೃಷಿ ವಲಯಕ್ಕೆ ಸಹಾಯವಾಗುತ್ತಿದೆ. 2017 ರಲ್ಲಿ ಪ್ರಧಾನಿ ಮೋದಿ ಇಸ್ರೇಲ್ ಭೇಟಿ ವೇಳೆ 5 ವರ್ಷಗಳ ಕಾಲ ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದರು. ರಕ್ಷಣಾ ತಂತ್ರಜ್ಞಾನಗಳ ವಿಚಾರದಲ್ಲೂ ಇಸ್ರೇಲ್‌ನಿಂದ ಭಾರತಕ್ಕೆ ಶಸ್ತ್ರಾಸ್ತ್ರಗಳು ಆಮದು  ಸೇರಿದಂತೆ ಭಾರತ ಮತ್ತು ಇಸ್ರೇಲ್ ನಡುವಿನ ದ್ವಿಪಕ್ಷೀಯ ಸಂಬಂಧಗಳು ಬಹುಮುಖಿ ಸಂಬಂಧ ಅಭಿವೃದ್ಧಿಯಾಗಿದೆ. ಏಪ್ರಿಲ್ 2020 ಮತ್ತು ಫೆಬ್ರವರಿ 2021 ರ ನಡುವೆ 4.14 ಬಿಲಿಯನ್ ದ್ವಿಪಕ್ಷೀಯ ವ್ಯಾಪಾರಕ್ಕೆ ಸಹಿ ಹಾಕಲಾಗಿತ್ತು. ಇಸ್ರೇಲ್ ದೇಶದಲ್ಲಿ ಅಸ್ತಿತ್ವ ಹೊಂದಿರುವ ಭಾರತೀಯ ಸಾಫ್ಟ್‌ವೇರ್ ಕಂಪನಿಗಳು, ಎರಡೂ ದೇಶಗಳು 2006 ರಲ್ಲಿ ಕೃಷಿ ವಲಯಕ್ಕೆ ಸಮಗ್ರ ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಪ್ರಸ್ತುತ ಇಸ್ರೇಲ್ ಮತ್ತು ಭಾರತದ ಮಿತ್ರರಾಷ್ಟ್ರಗಳಾಗಿವೆ. ಆದರೆ ಯಾವುದೇ ಎರಡು ರಾಷ್ಟ್ರಗಳ ನಡುವೆ ನಡೆದರೂ ಅದು ಇತರ ದೇಶಗಳ ಮೇಲೂ ದೀರ್ಘಕಾಲದ ಪರಿಣಾಮ ಬೀರುತ್ತದೆ. ಜಾಗತಿಕ ತೈಲ ಬೆಲೆ ಏರಿಕೆಗೂ ಕಾರಣವಾಗುತ್ತದೆ. ತೈಲ ಬೆಲೆಯ ಹೆಚ್ಚಳ ಮಿಕ್ಕೆಲ್ಲಾ ವಸ್ತು ಮತ್ತು ಸೇವೆಯ ಮೇಲಿನ ಬೆಲೆಯನ್ನು ಹೆಚ್ಚಿಸಲಿದೆ. ಅಷ್ಟೇ ಅಲ್ಲದೆ ದೀರ್ಘಾವಧಿ ಯುದ್ಧ ಮುಂದುವರಿದರೆ ಇಸ್ರೇಲ್ ಭಾರತದ ಮಿತ್ರ ರಾಷ್ಟ್ರವಾಗಿರೋದ್ರಿಂದ ಭಾರತ ಅನ್ಯ ಮಾರ್ಗವಿಲ್ಲದೆ ತನ್ನ ಸೈನಿಕರನ್ನು ಇಸ್ರೇಲ್ ಸಹಾಯಕ್ಕೆ ಕಳುಹಿಸಬೇಕಾಗುತ್ತದೆ. ಅಲ್ಲದೆ ಷೇರು ಮಾರುಕಟ್ಟೆಯಲ್ಲಿ ಏರಿಳಿತಗಳು ಸಹಜ. ಇದೆಲ್ಲದರ ನಡುವೆ ಯುದ್ಧಪೀಡಿತ ಇಸ್ರೇಲ್ ದೇಶದಲ್ಲಿ ಸಾವಿರಾರು ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ ಅಮೆರಿಕಾದ ಶಸ್ತ್ರಾಸ್ತ್ರಗಳು ಇಸ್ರೇಲ್​ಗೆ ಬಂದಿಳಿದಿವೆ. ಇದು ಇಸ್ರೇಲ್ ಬಲವನ್ನ ಹೆಚ್ಚಿಸೋದ್ರ ಜೊತೆಗೆ ಭವಿಷ್ಯದಲ್ಲಿ ದಾಳಿ ನಡೆಯಬಹುದು ಅನ್ನೋದಕ್ಕೂ ಮುನ್ಸೂಚನೆ ಸಿಕ್ಕಂತಾಗಿದೆ.

 

Shantha Kumari