ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆ ವಿಳಂಬ – ಕದನ ವಿರಾಮ ಪಕ್ರಿಯೆಯೂ ಮುಂದೂಡಿದ ಇಸ್ರೇಲ್‌!

ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆ ವಿಳಂಬ – ಕದನ ವಿರಾಮ ಪಕ್ರಿಯೆಯೂ ಮುಂದೂಡಿದ ಇಸ್ರೇಲ್‌!

ಹಮಾಸ್‌ ಹಾಗೂ ಇಸ್ರೇಲ್‌ ನಡುವಿನ ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಯುದ್ಧಪೀಡಿತ ಗಾಜಾದಲ್ಲಿ ಪರಿಸ್ಥಿತಿ ಭೀಕರವಾಗಿದ್ದು, ಮಾನವೀಯತೆ ಕಣ್ಮರೆಯಾಗಿದೆ. ನೀರು, ಆಹಾರ, ಶೌಚಾಲಯ ವ್ಯವಸ್ಥೆಗಳಿಲ್ಲದೆ, ಮುಗ್ಧ ಮಕ್ಕಳು, ಹಿರಿಯ ನಾಗರೀಕರು, ಯುವಕರು ಸಹಾಯಕ್ಕಾಗಿ ಮೊರೆ ಇಡುತ್ತಿದ್ದಾರೆ. ಆದರೂ ಕೂಡ ಇಸ್ರೇಲ್‌ ಗಾಜಾ ಮೇಲೆ ಭೀಕರ ದಾಳಿ ನಡೆಸುತ್ತಲೇ ಇದೆ. ಕೆಲವು ದಿನಗಳ ಹಿಂದೆ ಹಮಾಸ್ ವಶದಲ್ಲಿರುವ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 50 ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಉಗ್ರರು ಒಪ್ಪಿಗೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ಗಾಜಾದಲ್ಲಿ 4 ದಿನಗಳ ಕದನ ವಿರಾಮವನ್ನು ಇಸ್ರೇಲ್‌ ಅನುಮೋದಿಸಿತ್ತು. ಆದರೆ ಈಗ ಹಮಾಸ್‌ 50 ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಪ್ರಕ್ರಿಯೆ ಹಾಗೂ ಕದನ ವಿರಾಮ ಪಕ್ರಿಯೆ ಕೂಡ ವಿಳಂಬವಾಗಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಉಗ್ರರ ವಿರುದ್ಧ ಎನ್‌ಕೌಂಟರ್‌ – ಕರ್ನಾಟಕದ ಯೋಧ ಸೇರಿ ನಾಲ್ವರು ಹುತಾತ್ಮ

ಹೌದು,  ಇಸ್ರೇಲ್ ಹಾಗೂ ಹಮಾಸ್‌ ನಡುವೆ 4 ದಿನಗಳ ತಾತ್ಕಾಲಿಕ ಕದನ ವಿರಾಮ ಒಪ್ಪಂದ ಏರ್ಪಟ್ಟಿದೆ. ಈ ಅವಧಿಯಲ್ಲಿ 50 ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆಗೆ ಹಮಾಸ್ ಬಂಡುಕೋರರು ಒಪ್ಪಿದ್ದಾರೆ. ಅಲ್ಲದೇ, ಇಸ್ರೇಲ್ ಜೈಲುಗಳಲ್ಲಿ ಇರುವ 150 ಪ್ಯಾಲೆಸ್ಟೀನ್ ನಾಗರಿಕರ ಬಿಡುಗಡೆಗೂ ಸಮ್ಮತಿಸಲಾಗಿದೆ. ಆದರೆ ‘ಹಮಾಸ್‌ ವಶದಲ್ಲಿರುವ 50 ಇಸ್ರೇಲಿ ಹಾಗೂ ವಿದೇಶಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಮಾತುಕತೆ ಜಾರಿಯಲ್ಲಿದೆ. ಆದರೆ ಈ ಪ್ರಕ್ರಿಯೆ ಶುಕ್ರವಾರದವರೆಗೆ ಪ್ರಾರಂಭವಾಗುವುದಿಲ್ಲ ಎಂದು ವರದಿಯಾಗಿದೆ.

ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಬಗ್ಗೆ ನಮ್ಮ ಪ್ರಯತ್ನ ಸುಧಾರಿಸುತ್ತಿದೆ. ಉಭಯ ಪಕ್ಷಗಳು ಒಪ್ಪಿದ ಮೂಲ ಒಪ್ಪಂದದ ಪ್ರಕಾರ ಬಿಡುಗಡೆ ಪ್ರಕ್ರಿಯೆ ನಡೆಯಲಿದೆ’ ಎಂದು ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಝಚಿ ಹನೇಶ್ ಹೇಳಿದ್ದಾರೆ.

ಒತ್ತೆಯಾಳುಗಳ ಬಿಡುಗಡೆ ವಿಳಂಬಕ್ಕೆ ನಿಖರ ಕಾರಣ ಏನೆಂಬುದು ಖಚಿತವಾಗಿಲ್ಲ. ಹಮಾಸ್ ಬಂಡುಕೋರರು ಬಿಡುಗಡೆ ಮಾಡಲಿರುವ 50 ಮಂದಿ ಒತ್ತೆಯಾಳುಗಳ ಪೈಕಿ 3 ಅಮೆರಿಕನ್ನರು ಸೇರಿದ್ದಾರೆ. ಇಸ್ರೇಲ್‌ನ ವಿರೋಧದ ಹೊರತಾಗಿಯೂ ಗುರುವಾರದಿಂದ ಒಪ್ಪಂದ ಜಾರಿಯಾಗಲಿದೆ. ಅದುವರೆಗೆ ಕಾರ್ಯಾಚರಣೆ ನಿಲ್ಲುವುದಿಲ್ಲ ಎಂದು ಇಸ್ರೇಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕತಾರ್. ಈಜಿಪ್ಟ್ ಹಾಗೂ ಅಮೆರಿಕವು ಈ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಿತ್ತು. ಯುದ್ಧ ಆರಂಭವಾದ 47 ದಿನಗಳ ಬಳಿಕ ರಾಜತಾಂತ್ರಿಕ ಮಾತುಕತೆಗೆ ಸಿಕ್ಕಿದ ಮೊದಲ ಜಯ ಇದಾಗಿದೆ.

Shwetha M