ಇಸ್ರೇಲ್- ಹಮಾಸ್‌ ಕದನ ವಿರಾಮ – 12 ಒತ್ತೆಯಾಳು ಬಿಡುಗಡೆಗೆ ಪ್ರತಿಯಾಗಿ ಇಸ್ರೇಲ್ ನಿಂದ 30 ಪ್ಯಾಲೇಸ್ಟಿನಿಯನ್ ಕೈದಿಗಳು ರಿಲೀಸ್

ಇಸ್ರೇಲ್- ಹಮಾಸ್‌ ಕದನ ವಿರಾಮ – 12 ಒತ್ತೆಯಾಳು ಬಿಡುಗಡೆಗೆ ಪ್ರತಿಯಾಗಿ ಇಸ್ರೇಲ್ ನಿಂದ 30 ಪ್ಯಾಲೇಸ್ಟಿನಿಯನ್ ಕೈದಿಗಳು ರಿಲೀಸ್

ಹಮಾಸ್‌ ಹಾಗೂ ಇಸ್ರೇಲ್‌ ನಡುವಿನ ಕದನ ವಿರಾಮ ಮುಂದುವರಿದಿದೆ. ಕದನ ವಿರಾಮದ ಭಾಗವಾಗಿ ಹಮಾಸ್‌ ಒತ್ತೆಯಾಳಾಗಿಸಿಕೊಂಡಿರುವವರನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಹಮಾಸ್‌ 5 ನೇ ಹಂತವಾಗಿ 12 ಇಸ್ರೇಲಿಯನ್ನರನ್ನು ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:4ನೇ ಹಂತದಲ್ಲಿ 11 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್‌! – ಇನ್ನೂ ಎರಡು ದಿನ ಕದನ ವಿರಾಮ ವಿಸ್ತರಣೆ 

ಅಕ್ಟೋಬರ್ 7 ರಂದು ಇಸ್ರೇಲ್ ಮೇಲಿನ ದಾಳಿಯ ಸಮಯದಲ್ಲಿ ಹಮಾಸ್ ಹೋರಾಟಗಾರರು ಸುಮಾರು 240 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಇದೀಗ ಕದನ ವಿರಾಮದ ಭಾಗವಾಗಿ ಈ ಹಿಂದೆ ಇಸ್ರೇಲ್ ಹಾಗೂ ಹಮಾಸ್ ಒಪ್ಪಿಕೊಂಡಂತೆ ಒತ್ತೆಯಾಳುಗಳು ಹಾಗೂ ಪ್ಯಾಲೆಸ್ತೀನಿಯನ್ ಕೈದಿಗಳ ಬಿಡುಗಡೆಯಾಗುತ್ತಿದೆ. ಹತ್ತು ಇಸ್ರೇಲಿಗಳು ಮತ್ತು ಇಬ್ಬರು ಥಾಯ ಜನರನ್ನು ಹಮಾಸ್ ಬಿಡುಗಡೆ ಮಾಡಿದ್ದರೆ, ಇಸ್ರೇಲ್ 30 ಮಂದಿ ಪ್ಯಾಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡಿದೆ ಎಂದು ಇಸ್ರೇಲಿ ಪ್ರಧಾನ ಮಂತ್ರಿ ಕಚೇರಿ ಮಾಹಿತಿ ನೀಡಿದೆ.

ಹಮಾಸ್‌ ಕೇವಲ ಇಸ್ರೇಲ್​ ಪ್ರಜೆಗಳನ್ನು ಮಾತ್ರ ಒತ್ತೆಯಾಳುಗಳನ್ನಾಗಿರಿಸಿಕೊಂಡಿಲ್ಲ. ಅದರಲ್ಲಿ ಅನೇಕ ದೇಶಗಳ ನಾಗರಿಕರೂ ಸೇರಿದ್ದಾರೆ. ಒತ್ತೆಯಾಳುಗಳಲ್ಲಿ ಹೆಚ್ಚಿನವರು ಅಕ್ಟೋಬರ್ 7 ರಂದು ಸಂಗೀತೋತ್ಸವದಲ್ಲಿ ಭಾಗವಹಿಸಿದವರಾಗಿದ್ದರು. ಗಾಜಾದಲ್ಲಿ 2.3 ಮಿಲಿಯನ್ ನಾಗರಿಕರಲ್ಲಿ ಅರ್ಧದಷ್ಟು ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ. ಹಮಾಸ್ ಹೋರಾಟಗಾರರು 200ಕ್ಕೂ ಅಧಿಕ ಜನರನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆ.

Shwetha M