ಆಹಾರಕ್ಕಾಗಿ ಕಾಯುತ್ತಿದ್ದ ಸಂತ್ರಸ್ತರ ಮೇಲೆ ದಾಳಿ ನಡೆಸಿದ ಇಸ್ರೇಲ್‌  – 20 ಮಂದಿ ಸಾವು

ಆಹಾರಕ್ಕಾಗಿ ಕಾಯುತ್ತಿದ್ದ ಸಂತ್ರಸ್ತರ ಮೇಲೆ ದಾಳಿ ನಡೆಸಿದ ಇಸ್ರೇಲ್‌  – 20 ಮಂದಿ ಸಾವು

ಹಮಾಸ್‌ ಹಾಗೂ ಇಸ್ರೇಲ್‌ ನಡುವಿನ ಕದನ ನಿಲ್ಲುವಂತೆ ಕಾಣುತ್ತಿಲ್ಲ. ಇಸ್ರೇಲ್‌ ಗಾಜಾದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಲೇ ಇದೆ. ಇದೀಗ ಆಹಾರದ ನೆರವಿಗಾಗಿ ಕಾಯುತ್ತಿದ್ದ ಸಂತ್ರಸ್ತರಿದ್ದ ಶೆಲ್ ಮೇಲೆ ದಾಳಿ ನಡೆದಿದೆ. ಈ ದಾಳಿಯಲ್ಲಿ ಸುಮಾರು 20 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮತ್ತೆ ರಿಲೀಸ್ ಆಯ್ತು ‘ಜಾಕಿ’ ಸಿನಿಮಾ – ಮಧ್ಯರಾತ್ರಿಯಿಂದಲೇ ಥಿಯೇಟರ್‌ಗಳಲ್ಲಿ ಹಬ್ಬ  

ಇಸ್ರೇಲ್‌ ಹಮಾಸ್‌ ಬಂಡುಕೋರರನ್ನು ನಿರ್ನಾಮ ಮಾಡೋದಾಗಿ ಪಣ ತೊಟ್ಟಿದೆ. ಈ ಹಿನ್ನೆಲೆಯಲ್ಲಿ ಮನಬಂದಂತೆ ದಾಳಿ ನಡೆಸುತ್ತಿದೆ. ಇದೀಗ ಗಾಜಾದಲ್ಲಿನ ಕುವೈತ್ ವೃತ್ತದಲ್ಲಿ ಆಹಾರಕ್ಕಾಗಿ ಕಾಯುತ್ತಿದ್ದ ಸಂತ್ರಸ್ತರ ಮೇಲೆ ಇಸ್ರೇಲಿ ಆಕ್ರಮಣ ಪಡೆಗಳು ದಾಳಿ ನಡೆಸಿವೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯವು ಗಂಭೀರ ಆರೋಪ ಮಾಡಿದೆ. ದಾಳಿಗೆ ಇಸ್ರೇಲ್‌ ಹೊಣೆ ಎಂದು ಗಾಜಾ ಸಿವಿಲ್‌ ಡಿಫೆನ್ಸ್‌ ವಕ್ತಾರ ಮಹಮೂದ್‌ ಬಸಲ್‌ ಆರೋಪಿಸಿದ್ದಾರೆ.

ಈ ಭೀಕರ ದಾಳಿಗೆ ಸುಮಾರು 20 ಮಂದಿ ಬಲಿಯಾಗಿದ್ದಾರೆ. 155 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಅಲ್ ಶಿಫಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ವೈದ್ಯ ಮೊಹಮ್ಮದ್ ಘ್ರಾಬ್ ತಿಳಿಸಿದ್ದಾರೆ.

ಉತ್ತರ ಗಾಜಾ ಪಟ್ಟಿಯಲ್ಲಿ ಸಂಭವಿಸುವ ಕ್ಷಾಮದ ಪರಿಣಾಮವಾಗಿ ಪರಿಹಾರದ ನೆರವಿಗಾಗಿ ಕಾಯುತ್ತಿರುವ ಮುಗ್ಧ ನಾಗರಿಕರನ್ನು ಕೊಲ್ಲುವ ನೀತಿಯನ್ನು ಇಸ್ರೇಲಿ ಆಕ್ರಮಣ ಪಡೆಗಳು ಇನ್ನೂ ಅಭ್ಯಾಸ ಮಾಡುತ್ತಿವೆ ಎಂದು ಮಹಮೂದ್ ಬಸಲ್ ಅಸಮಾಧಾನ ಹೊರಹಾಕಿದ್ದಾರೆ.

Shwetha M