ಹಮಾಸ್‌ ಉಗ್ರರಿಗೆ ಶಾಕ್‌ ಕೊಟ್ಟ ಇಸ್ರೇಲ್‌ ಸೇನೆ – ಗಾಜಾದ ಸುರಂಗಗಳಲ್ಲಿ ಮಹಾ ಪ್ರವಾಹ ಸೃಷ್ಟಿಸಿದ ಇಸ್ರೇಲ್‌!

ಹಮಾಸ್‌ ಉಗ್ರರಿಗೆ ಶಾಕ್‌ ಕೊಟ್ಟ ಇಸ್ರೇಲ್‌ ಸೇನೆ – ಗಾಜಾದ ಸುರಂಗಗಳಲ್ಲಿ ಮಹಾ ಪ್ರವಾಹ ಸೃಷ್ಟಿಸಿದ ಇಸ್ರೇಲ್‌!

ಇಸ್ರೇಲ್‌ ಹಾಗೂ ಹಮಾಸ್‌ ನಡುವಿನ ದಾಳಿ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಎರಡೂ ರಾಷ್ಟ್ರಗಳ ಸೇನೆಗಳು ತಂತ್ರ – ಪ್ರತಿತಂತ್ರ ನಡೆಸುತ್ತಲೇ ಇವೆ. ಹಮಾಸ್‌ ಬಂಡುಕೋರರನ್ನು ನಿರ್ನಾಮ ಮಾಡುವ ಸಲುವಾಗಿ ಇಸ್ರೇಲ್‌ ಸೇನೆ ಕ್ಷಣ ಕ್ಷಣಕ್ಕೂ ದಾಳಿಯನ್ನು ತೀವ್ರಗೊಳಿಸುತ್ತಲೇ ಇದೆ. ಇದೀಗ ಹಮಾಸ್‌ ಉಗ್ರರು ಗಾಜಾಪಟ್ಟಿಯಲ್ಲಿ ಅಡಗಿ ಕುಳಿತಿದ್ದ ಸುರಂಗಗಳಲ್ಲಿ  ಕೃತಕ ಪ್ರವಾಹ ಸೃಷ್ಟಿಸಿ ಧ್ವಂಸಗೊಳಿಸುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: 73 ವರ್ಷದಲ್ಲೂ ಸೂಪರ್‌ಸ್ಟಾರ್ ರಜನಿಕಾಂತ್ ಸಖತ್ ಸ್ಟಂಟ್ – ‘ವೆಟ್ಟೈಯನ್’ ಸಿನಿಮಾದಲ್ಲಿ ಸಾಹಸ ದೃಶ್ಯ ಕಂಡು ಅಭಿಮಾನಿಗಳು ಪುಳಕ

ಹೌದು, ಇಸ್ರೇಲ್‌ ಸೇನೆ ಹಮಾಸ್‌ ಉಗ್ರರು ಅಡಗಿ ಕುಳಿತಿರುತ್ತಿದ್ದ ಅಡಗುತಾಣಗಳನ್ನು ಒಂದೊಂದಾಗಿಯೇ ಧ್ವಂಸಗೊಳಿಸುತ್ತಿದೆ. ಇದೀಗ ಇಸ್ರೇಲ್  ಸೇನೆ ಗಾಜಾದಲ್ಲಿನ  ಹಮಾಸ್ ಉಗ್ರರು ಅವಿತುಕೊಳ್ಳಲು ಬಳಸುತ್ತಿದ್ದ ಸುರಂಗಗಳಿಗೆ ಸಮುದ್ರದ ನೀರನ್ನು ಬಿಟ್ಟು ಕೃತಕ ಪ್ರವಾಹವನ್ನು ಸೃಷ್ಟಿಸುತ್ತಿದೆ ಎಂದು ವರದಿಯಾಗಿದೆ.

ಹಮಾಸ್ ಉಗ್ರರು ಒತ್ತೆಯಾಳುಗಳನ್ನು, ಯುದ್ಧ ಸಾಮಾಗ್ರಿಗಳನ್ನು ಅಡಗಿಸಲು ಮಾತ್ರವಲ್ಲದೇ ತಾವೂ ಕೂಡಾ ಅವಿತುಕೊಳ್ಳಲು ಬಳಸಲಾಗುತ್ತಿದೆ ಎಂದು ನಂಬಲಾಗಿರುವ ಈ ಸುರಂಗಗಳನ್ನು ನಾಶಪಡಿಸಲು ಸಮುದ್ರದ ನೀರನ್ನು ಹರಿಸಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಡಳಿತದ ಕೆಲ ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.

ಸಮುದ್ರ ನೀರು ಹರಿಸುವುದರಿಂದ ಶುದ್ಧ ಕುಡಿಯುವ ನೀರು ಪೂರೈಕೆಗೆ ಅಪಾಯವಾಗಲಿದೆ ಎಂದು ಇತರ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ವರದಿಗೆ ಇಸ್ರೇಲ್‌ನ ಸೇನೆ ಸದ್ಯ ಪ್ರತಿಕ್ರಿಯೆ ನೀಡಿಲ್ಲ.

Shwetha M