ಹಮಾಸ್‌ – ಇಸ್ರೇಲ್‌ ನಡುವೆ ಭೀಕರ ಕದನ – ಬಂದೂಕು ಪರವಾನಗಿಗೆ ಅರ್ಜಿ ಸಲ್ಲಿಸಿದ 1 ಲಕ್ಷ ಇಸ್ರೇಲಿಗರು!

ಹಮಾಸ್‌ – ಇಸ್ರೇಲ್‌ ನಡುವೆ ಭೀಕರ ಕದನ – ಬಂದೂಕು ಪರವಾನಗಿಗೆ ಅರ್ಜಿ ಸಲ್ಲಿಸಿದ 1 ಲಕ್ಷ ಇಸ್ರೇಲಿಗರು!

ಇಸ್ರೇಲ್ – ಹಮಾಸ್‌ ಮಧ್ಯೆ ಭೀಕರ ಕದನ ನಡೆಯುತ್ತಿದೆ. ಹಮಾಸ್‌ ಅನೇಕ ಇಸ್ರೇಲ್‌ ಪ್ರಜೆಗಳನ್ನು ಒತ್ತೆಯಾಳಾಗಿರಿಕೊಂಡಿದೆ. ಹಮಾಸ್‌ ಉಗ್ರರನ್ನು ನಿರ್ನಾಮ ಮಾಡಬೇಕೆಂದು ಇಸ್ರೇಲ್‌ ಪಣತೊಟ್ಟಿದೆ. ಈಗಾಗಲೇ ಈ ಭೀಕರ ಕದನದಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಈ ಮಧ್ಯೆಯೇ ಇಸ್ರೇಲ್‌ನಲ್ಲಿ ಮಹತ್ತರ ಬೆಳವಣಿಗೆಯೊಂದು ನಡೆಯುತ್ತಿದೆ. ಅಲ್ಲಿನ ಪ್ರಜೆಗಳು ಜೀವ ರಕ್ಷಣೆಗಾಗಿ ಬಂದೂಕು ಪರವಾನಗಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: ರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆ ಕೆನಡಾ ದೇಶದವರಿಗೆ ವೀಸಾ ಸೇವೆಗಳನ್ನು ಮರು ಆರಂಭಿಸಿದ ಭಾರತ

ದಕ್ಷಿಣ ಇಸ್ರೇಲ್ ನಲ್ಲಿ ಅಕ್ಟೋಬರ್ 07ರಂದು ಹಮಾಸ್‌ ದಾಳಿ ನಡೆಸಿದೆ. ಈ ಬೆನ್ನಲ್ಲೇ ಹಮಾಸ್ ಮೇಲೆ ಇಸ್ರೇಲ್‌ ಪ್ರತಿದಾಳಿ ನಡೆಸಿದೆ. ಯುದ್ಧ ತೀವ್ರಗೊಂಡಿದೆ. ಈ ಬೆನ್ನಲ್ಲೇ ಬಂದೂಕು ಪರವಾನಗಿಗೆ ಅರ್ಜಿ ಸಲ್ಲಿಸುತ್ತಿರುವ ಇಸ್ರೇಲಿಗರ ಸಂಖ್ಯೆ ಏರಿಕೆಯಾಗಿದೆ. ಟೆಲ್ ಅವೀವ್ ನಲ್ಲಿರುವ ರಾಷ್ಟ್ರೀಯ ಭದ್ರತಾ ಸಚಿವಾಲಯದ ಮಾಹಿತಿಯ ಪ್ರಕಾರ 18 ದಿನಗಳಲ್ಲಿ ಬರೊಬ್ಬರಿ 1 ಲಕ್ಷ ಮಂದಿ ಇಸ್ರೇಲಿಗಳು ಬಂದೂಕು ಪರವಾನಗಿ ಪಡೆಯುವುದಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಇನ್ನು ಗಾಜಾ ಗಡಿ ಸಮುದಾಯಗಳ ಮೇಲೆ ಹಮಾಸ್‌ ಪದೇ ಪದೆ ದಾಳಿ ನಡೆಸುತ್ತಿರುತ್ತದೆ. ಹೀಗಾಗಿ ಅಲ್ಲಿನ ಸಾಮಾನ್ಯ ಪ್ರಜೆಗಳಿಗೆ ಜೀವ ರಕ್ಷಣೆ ಇಲ್ಲದಂತಾಗಿದೆ. ಈ ಕಾರಣದಿಂದಾಗಿಯೇ ಬಂದೂಕುಗಳ ಪರವಾನಗಿ ಅರ್ಜಿಗಳ ಸಂಖ್ಯೆ ಹೆಚ್ಚಾಗುವಂತೆ ಮಾಡಿದೆ.

Shwetha M