PAK ಬೌಲರ್ ಗೆ ಕಿಶನ್ ವಾರ್ನಿಂಗ್ – ಕಾಂಟ್ರವರ್ಸಿ ತಾರಿಕ್ ಗೆ ಬ್ಯಾಕ್ ಫೈರ್
ಗೇಮ್ ಚೇಂಜರ್ ಪಾಕೆಟ್ ಡೈನಮೋ

ಟಿ-20ಐ ಫಾರ್ಮೆಟ್ನಲ್ಲಿ ಟೀಂ ಇಂಡಿಯಾದ ಮೇನ್ ಸ್ಟ್ರೆಂಥೇ ಬ್ಯಾಟಿಂಗ್. ಅದ್ರಲ್ಲೂ ಪವರ್ ಪ್ಲೇನಲ್ಲಿ ಬರೋ ಸ್ಕೋರ್ಗಳೇ ಗೇಮ್ ಚೇಂಜಿಂಗ್ ಆಗ್ತಿದೆ. ಕಳೆದ 20 ತಿಂಗಳಿಂದ ಅಭಿಷೇಕ್ ಶರ್ಮಾ ಈ ವಿಚಾರದಲ್ಲಿ ಫೈರ್ ಬ್ರ್ಯಾಂಡ್ ಆಗಿದ್ದಾರೆ. ಈಗ ಅಭಿಷೇಕ್ಗೆ ಒಳ್ಳೆ ಪಾರ್ಟ್ನರ್ ಸಿಕ್ಕಿದ್ದು ಪಾಕೆಟ್ ಡೈನಮೋ ಇಶಾನ್ ಕಿಶನ್ ಇನ್ನೂ ಒಂದು ಕೈ ಜಾಸ್ತಿ ಎನ್ನುವಂತೆ ಪರ್ಫಾಮ್ ಮಾಡ್ತಿದ್ದಾರೆ.
ಇದನ್ನೂ ಓದಿ : ಟಿ20 ವಿಶ್ವಕಪ್‌ನಲ್ಲಿ ಅಂಪೈರ್ ಜೊತೆ ಕಿರಿಕ್ – ಅಫ್ಘಾನಿಸ್ತಾನದ ಆಲ್‌ರೌಂಡರ್ ಮೊಹಮ್ಮದ್ ನಬಿಗೆ ಭಾರಿ ದಂಡ
ಇಶಾನ್ ಕಿಶನ್.. ಈಗ ಟೀಂ ಇಂಡಿಯಾದ ಸ್ಟಾರ್ ಓಪನರ್. 2023ರ ನವೆಂಬರ್ನಿಂದ ಹಿಡಿದು 2026ರ ಜನವರಿವರೆಗೂ ಭಾರತ ತಂಡದಿಂದ ದೂರವೇ ಇದ್ದ ಆಟಗಾರ. ಯಾವಾಗ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಸೆಲೆಕ್ಟ್ ಆಗಿ ತಿಲಕ್ ವರ್ಮಾ ಇಂಜುರಿಯಾದ್ರೂ ಕಿಶನ್ ಲಕ್ಕೇ ಬದಲಾಗಿದೆ. ಬರೋಬ್ಬರಿ 785 ದಿನಗಳ ಬಳಿಕ ಮೆನ್ ಇನ್ ಬ್ಲ್ಯೂ ಜೆರ್ಸಿಯಲ್ಲಿ ಕಣಕ್ಕಿಳಿದ ಕಿಶನ್ ಈಗ ಭಾರತದ ಬ್ಯಾಟಿಂಗ್ನಲ್ಲಿ ಬ್ಯಾಕ್ಬೋನ್ ಆಗಿದ್ದಾರೆ. ಅಭಿಷೇಕ್ ಶರ್ಮಾಗೆ ಒಂದೊಳ್ಳೆ ಪಾರ್ಟ್ನರ್ ಇಲ್ಲ ಅನ್ನೋ ಕೊರಗನ್ನ ನೀಗಿಸಿದ್ದಾರೆ.
ಭಾರತದ ಬ್ಯಾಟಿಂಗ್ ಶಕ್ತಿಯಾದ ಪಾಕೆಟ್ ಡೈನಮೋ!
ಪಾಕೆಟ್ ಡೈನಮೋ ಅಂತಾನೇ ಕರೆಸಿಕೊಳ್ಳೋ ಇಶಾನ್ ಕಿಶನ್ ಬ್ಯಾಟಿಂಗ್ಗೆ ನಿಂತ್ರೆ ಹೊಡಿಬಡಿ ಆಟಗಾರ. ವೈಯಕ್ತಿಕ ನಂಬರ್ಸ್ ಆಗ್ಲಿ ಅಥವಾ ರೆಕಾರ್ಡ್ಸ್ಗಾಗಿ ಆಗ್ಲಿ ಆಡೋದೇ ಇಲ್ಲ. ಫಸ್ಟ್ ಬಾಲ್ನಿಂದಲೇ ಅಗ್ರೆಸ್ಸಿವ್ ಮೋಡ್ನಲ್ಲಿ ಬಿಗ್ ಹಿಟ್ಗಳ ಮೇಲೇ ಫೋಕಸ್ ಮಾಡ್ತಾರೆ. ಟಿ-20ಐನಲ್ಲಿ ರನ್ಸ್ ಅಷ್ಟೇ ಇಂಪಾರ್ಟೆಂಟ್ ಅಂತಾ ಬ್ಯಾಟ್ ಬೀಸ್ತಾರೆ. ನ್ಯೂಜಿಲೆಂಡ್ ಸಿರೀಸ್ನಲ್ಲಿ ನಂಬರ್ 3ನಲ್ಲಿ ಬ್ಯಾಟ್ ಬೀಸಿ ಸರಣಿಯ ಸೆಕೆಂಡ್ ಟಾಪ್ ಸ್ಕೋರರ್ ಆಗಿದ್ದ ಕಿಶನ್ ಈಗ ವಿಶ್ವಕಪ್ನಲ್ಲೂ ಭಾರತದ ಬೆನ್ನೆಲುಬಾಗಿದ್ದಾರೆ. ನಮೀಬಿಯಾ ವಿರುದ್ಧದ ಪಂದ್ಯದಲ್ಲಿ 24 ಎಸೆತಗಳಲ್ಲೇ 61 ರನ್ ಗಳಿಸಿದ್ರು. ಈಗ ಇದೇ ಕಿಶನ್ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ಸೆಂಟ್ರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಾರೆ. ಅದೂ ಅಲ್ದೇ ಪಾಕಿಸ್ತಾನದ ಕಾಂಟ್ರವರ್ಸಿ ಬೌಲರ್ ಆಗಿರೋ ತಾರಿಕ್ ಉಸ್ಮಾನ್ ಬೌಲಿಂಗ್ ಬಗ್ಗೆಯೂ ಬೋಲ್ಡ್ ಆಗೇ ಆನ್ಸರ್ ಮಾಡಿದ್ದಾರೆ.
ಬೌಲರ್ ಯಾರಿದ್ರೂ ಹೊಡಿಬಡಿ ಅಷ್ಟೇ ಎಂದು ಗುಡುಗಿದ ಕಿಶನ್!
ನಮೀಬಿಯಾ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಇಶಾನ್ ಕಿಶನ್ ಬಾಲ್ ನೋಡೋದು ಬಾರಿಸೋದು ಅಷ್ಟೇ ನಮ್ಮ ಕೆಲ್ಸ ಎಂದಿದ್ದಾರೆ. ಹೊಡಿಬಡಿ ಆಟದ ರೀತಿಯಲ್ಲೇ ನಾವು ಆಡುತ್ತಿದ್ದೇವೆ. ನಮ್ಮ ಟೀಂ ಸ್ಟ್ರೆಂಥ್ ಮೇಲೆ ನಮಗೆ ನಂಬಿಕೆ ಇದೆ. ಇಷ್ಟೊಂದು ಕಾನ್ಫಿಡೆಂಟಾಗಿ ಆಡುವಾಗ ನಾವು ಎಲ್ಲ ಪಂದ್ಯಗಳಿಗೂ ರೆಡಿ ಇರ್ತೇವೆ. ಕೆಲವು ಸಲ ಬೌಲರ್ಗಳ ವಿಡಿಯೋಗಳನ್ನ ನೋಡಿ ಅವ್ರ ವೀಕ್ನೆಸ್ ಏನು ಅನ್ನೋದನ್ನ ಅನಲಿಸಿಸಿಸ್ ಮಾಡಿ ಬೌಲರ್ನ ಫೇಸ್ ಮಾಡ್ತೇವೆ ಎಂದಿದ್ದಾರೆ. ಅಲ್ಲಿಗೆ ಉಸ್ಮಾನ್ ತಾರಿಕ್ ಬೌಲಿಂಗ್ ನಮಗೇನು ಎಫೆಕ್ಟ್ ಆಗಲ್ಲ ಅಂತಾ ಟಾಂಟ್ ಕೊಟ್ಟಿದ್ದಾರೆ. ಹಾಗೇ ಪಾಕ್ ವಿರುದ್ಧದ ಪಂದ್ಯ ಸ್ಪೆಷಲ್ ಹಾಗಂತ ವರಿ ಆಗೋವಂಥದ್ದು ಏನಿಲ್ಲ ಎಂದಿದ್ದಾರೆ. ಇನ್ನು ಪಾಕಿಸ್ತಾನದ ವಿರುದ್ಧ ಇಶಾನ್ ಕಿಶನ್ 1 ಪಂದ್ಯ ಆಡಿದ್ದಾರೆ. 2023ರ ಏಷ್ಯಾಕಪ್ನಲ್ಲಿ. ಏಕದಿನ ಮಾದರಿಯ ಈ ಪಂದ್ಯದಲ್ಲಿ ನಂಬರ್ 5ನಲ್ಲಿ ಕ್ರೂಶಿಯಲ್ ಟೈಮಲ್ಲಿ 81 ಎಸೆತಗಳಲ್ಲಿ 82 ರನ್ ಕಲೆ ಹಾಕಿದ್ರು. ಬಟ್ ಬ್ಯಾಡ್ಲಕ್ ಮಳೆಯಿಂದಾಗಿ ಆ ಪಂದ್ಯದಲ್ಲಿ ಪಾಕಿಸ್ತಾನ ಬ್ಯಾಟಿಂಗ್ ಮಾಡ್ಲಿಲ್ಲ. ಹೀಗಾಗಿ ಪಂದ್ಯವನ್ನ ರದ್ದುಗೊಳಿಸಲಾಗಿತ್ತು.
ಇಶಾನ್ ಕಿಶನ್ ಟಿ-20ಐ ಟೀಮ್ಗೆ ಬಂದ್ಮೇಲೆ ಭಾರತ ಇನ್ನೂ ಡೇಂಜರಸ್ ಆಗಿದೆ. ಒಂದ್ಕಡೆ ಅಭಿಷೇಕ್ ಶರ್ಮಾ ಇನ್ನೊಂದ್ಕಡೆ ಇಶಾನ್ ಕಿಶನ್ ಎದುರಾಳಿ ಬೌಲರ್ಗಳನ್ನ ಬೆಂಡೆತ್ತುತ್ತಿದ್ದಾರೆ. ಈ ಜೋಡಿ ಈಗ ಪಾಕಿಸ್ತಾನ ವಿರುದ್ಧ ಕ್ರೀಸ್ ಕಚ್ಚಿ ನಿಂತ್ರೆ ಪಾಕ್ ಬೌಲರ್ಗಳ ಬೆವರಿಳಿಯೋದು ಪಕ್ಕಾ.

ನೋಡಿರಿ

