ವೈಭವ್ ವೈಸ್ ಕ್ಯಾಪ್ಟನ್ – Top-50ಯಲ್ಲಿ ಸೂರ್ಯವಂಶಿ
BOSS BABY ಸುನಾಮಿ ಶುರು!

ಕ್ರಿಕೆಟ್ ಲೋಕದ ಸೆನ್ಸೇಷನಲ್ ಸ್ಟಾರ್ ವೈಭವ್ ಸೂರ್ಯವಂಶಿ ಈಗ ಶೈನಿಂಗ್ ಸ್ಟಾರ್ ಆಗಿದ್ದಾರೆ. ಟೀಂ ಇಂಡಿಯಾಗೆ ಎಷ್ಟು ಫಾಸ್ಟ್ ಆಗಿ ಕಾಲಿಟ್ರೋ ಅದೇ ಸ್ಪೀಡ್ನಲ್ಲೇ ಹೊಸ ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಈಗ ವೈಸ್ ಕ್ಯಾಪ್ಟನ್ಸಿಯೂ ಸಿಕ್ಕಿದೆ. ರ್ಯಾಂಕಿಂಗ್ ನಲ್ಲೂ ಧಮಾಕ ಮಾಡಿದ್ದಾರೆ.
ಇದನ್ನೂ ಓದಿ : ಟೀಂ ಇಂಡಿಯಾಗೆ ರಹಾನೆ ಗುಡ್ ಬೈ – TESTನಲ್ಲಿ ಸೋಲನ್ನೇ ಕಾಣದ ಕ್ಯಾಪ್ಟನ್
ಟೀಂ ಇಂಡಿಯಾಗೆ ಕಾಲಿಟ್ಟು ತಿಂಗಳು ಕಳೆಯೋ ಮೊದ್ಲೇ ಬಾಸ್ ಬೇಬಿ ವೈಭವ್ ಸೂರ್ಯವಂಶಿಗೆ ಬಂಪರ್ ಆಫರ್ ಬಂದಿದೆ. ಮುಂಬರುವ ದುಲೀಪ್ ಟ್ರೋಫಿಯಲ್ಲಿ ಪೂರ್ವ ವಲಯದ ತಂಡಕ್ಕೆ ವೈಸ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಇಶಾನ್ ಕಿಶನ್ ನಾಯಕನಾಗಿ ತಂಡವನ್ನ ಲೀಡ್ ಮಾಡಿದ್ರೆ ವೈಭವ್ ಸೂರ್ಯವಂಶಿ ಅವರನ್ನು ಉಪನಾಯಕರನ್ನಾಗಿ ನೇಮಕ ಮಾಡ್ಲಾಗಿದೆ. ಅಲ್ದೇ ಈ ಟೂರ್ನಿ ವೈಭವ್ ಪಾಲಿಗೆ ತುಂಬಾನೇ ಮಹತ್ವದ್ದಾಗಲಿದೆ.
ಟೆಸ್ಟ್ ಮಾದರಿಯಲ್ಲೂ ಮಿಂಚಲು ವೈಭವ್ ಗೆ ಚಾನ್ಸ್!
ಆಗಸ್ಟ್ 23ರಂದು ದುಲೀಫ್ ಟ್ರೋಫಿ ಶುರು ವಾಗಲಿದ್ದು, ಎಲ್ಲಾ ಪಂದ್ಯಗಳು ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆಯಲಿದ್ದು ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಪಶ್ಚಿಮ ವಲಯ ತಂಡ ಕಣಕ್ಕಿಳಿಯಲಿದೆ. ಹಾಗೇ ಟೀಂ ಇಂಡಿಯಾದಿಂದ ದೂರನೇ ಇರೋ ಮೊಹಮ್ಮದ್ ಶಮಿಯನ್ನು ಸಹ ಆಯ್ಕೆ ಮಾಡಲಾಗಿದೆ. ಇನ್ನು ಪೂರ್ವ ವಲಯ ತಂಡದಲ್ಲಿ ಇಶಾನ್ ಕಿಶನ್ ಜೊತೆಗೆ ಮೊಹಮ್ಮದ್ ಶಮಿ, ಮುಖೇಶ್ ಕುಮಾರ್, ಅಭಿಮನ್ಯು ಈಶ್ವರನ್, ಶಹಬಾಜ್ ಅಹ್ಮದ್ ಮತ್ತು ಅನುಕುಲ್ ರಾಯ್ ಇದ್ದಾರೆ. ವೈಭವ್ ಸೂರ್ಯವಂಶಿಗೆ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ತನ್ನ ಸಾಮರ್ಥ್ಯ ತೋರಿಸಿ, ಮುಂದೆ ಭಾರತೀಯ ಟೆಸ್ಟ್ ತಂಡಕ್ಕೂ ಅವಕಾಶ ಪಡೆಯೋಕೆ ಇದು ಒಳ್ಳೆ ಚಾನ್ಸ್ ಎನ್ನುವಂತಾಗಿದೆ. ಅಲ್ದೇ 15 ವರ್ಷದ ವೈಭವ್ ಸೂರ್ಯವಂಶಿ ಈ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಆಡುತ್ತಿದ್ದು, ಅವರನ್ನು ನೇರವಾಗಿ ತಂಡದ ವೈಸ್ ಕ್ಯಾಪ್ಟನ್ ಆಗಿ ನೇಮಕ ಮಾಡಿರೋದ್ರಿಂದ ಕುತೂಹಲವೂ ಜಾಸ್ತಿ ಇದೆ. ಅದೂ ಅಲ್ದೇ 15 ಸದಸ್ಯರ ಈಸ್ಟ್ ಝೋನ್ ತಂಡದಲ್ಲಿ ಬಿಹಾರ ಕ್ರಿಕೆಟ್ ಅಸೋಸಿಯೇಷನ್ನಿಂದ ಆಯ್ಕೆಯಾದ ಏಕೈಕ ಆಟಗಾರ ವೈಭವ್. ಹೀಗೆ ಡೊಮೆಸ್ಟಿಕ್ನಲ್ಲಿ ಆಲ್ರೆಡಿ ವೈಸ್ ಕ್ಯಾಪ್ಟನ್ ಆಗಿ ಜವಾಬ್ದಾರಿ ತಗೊಳ್ಳೋಕೆ ರೆಡಿ ಆಗಿದ್ರೆ ಅತ್ತ ವಿಶ್ವಮಟ್ಟದಲ್ಲೂ ವೈಭವ್ ಹವಾ ಜೋರಾಗೇ ಇದೆ.
ಟಿ-20ಐ ಶ್ರೇಯಾಂಕದಲ್ಲೂ ವೈಭವ್ ಭರ್ಜರಿ ಜಿಗಿತ!
ಇನ್ನು ಟಿ-20ಐ ಮಾದರಿಯಲ್ಲಿ ವೈಭವ್ ಸೂರ್ಯವಂಶಿ ಆಡಿರೋದೇ 6 ಮ್ಯಾಚ್.. ಇಂಗ್ಲೆಂಡ್ ಸರಣಿಯಲ್ಲಿ ಮೂರು ಹಾಗೇ ಜಿಂಬಾಬ್ವೆಯಲ್ಲಿ ಮೂರು ಪಂದ್ಯಗಳು. ಹೀಗಿದ್ರೂ ಟಿ-20ಐ ರ್ಯಾಂಕಿಂಗ್ನಲ್ಲಿ ಭರ್ಜರಿಯಾಗೇ ಜಂಪ್ ಮಾಡಿದ್ದಾರೆ. ಬರೋಬ್ಬರಿ 230 ಸ್ಥಾನ ಮೇಲೇರಿ 48ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಜಿಂಬಾಬ್ವೆ ಸರಣಿಗೂ ಮುನ್ನ 278 ನೇ ಸ್ಥಾನದಲ್ಲಿದ್ದರು. ಈಗ 536 ರೇಟಿಂಗ್ ಅಂಕಗಳೊಂದಿಗೆ ವಿಶ್ವದ 48ನೇ ರ್ಯಾಂಕಿಂಗ್ ಬ್ಯಾಟರ್ ಆಗಿದ್ದಾರೆ. ಅಂದ್ರೆ ಟಾಪ್-50ಯಲ್ಲಿ ತಮ್ಮ ಹೆಸರನ್ನ ತಂದಿದ್ದಾರೆ. ಜಿಂಬಾಬ್ವೆ ವಿರುದ್ಧದ ಸರಣಿಯ ಮೂರು ಪಂದ್ಯಗಳಲ್ಲಿ 50+ ಸರಾಸರಿಯಲ್ಲಿ 151 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದಿದ್ರು.
ಸೂರ್ಯವಂಶಿಗೆ ಯಾವ ಬೌಲರ್ ಅಂದ್ರೂ ಭಯ ಇಲ್ಲ!
ವೈಭವ್ ಸೂರ್ಯವಂಶಿ ಆನ್ಫೀಲ್ಡ್ನಲ್ಲಿ ಹೇಗೆ ಫಿಯರ್ ಲೆಸ್ ಆಗಿ ಬ್ಯಾಟ್ ಬೀಸ್ತಾರೋ ಆಫ್ ದಿ ಫೀಲ್ಡ್ ಕೂಡ ಅಷ್ಟೇ ಕಾನ್ಫಿಡೆಂಟ್ ಹಾಗೂ ಡೇರಿಂಗ್ ಆಗಿದ್ದಾರೆ. ಇತ್ತೀಚೆಗೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಆಯೋಜನೆ ಮಾಡಿದ್ದ ಸಂವಾದದಲ್ಲಿ ವೈಭವ್ ಕೂಡ ಭಾಗಿಯಾಗಿದ್ರು. ಈ ವೇಳೆ ಯಾವ ಬೌಲರ್ ಫೇಸ್ ಮಾಡಲು ನೀವು ಇಷ್ಟ ಪಡಲ್ಲ ಅಂತಾ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರ ನೀಡಿರೋ ಸೂರ್ಯವಂಶಿ ಅಂತಹ ಬೌಲರ್ ಯಾರೂ ಇಲ್ಲ ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ. ಅವ್ರ ಇದೇ ಧೈರ್ಯದ ಮಾತುಗಳಿಗೆ ಎಲ್ಲರೂ ಶಹಬ್ಬಾಸ್ ಅಂದಿದ್ದಾರೆ.
ಒಟ್ನಲ್ಲಿ ವೈಭವ್ ಸೂರ್ಯವಂಶಿ ಈಗಾಗಲೇ ತಮ್ಮ ಅಗ್ರೆಸ್ಸಿವ್ ಬ್ಯಾಟಿಂಗ್ ಇಂಟೆಂಟ್ನಲ್ಲೇ ಜಗತ್ತಿನಾದ್ಯಂತ ಕ್ರೇಜ್ ಜಾಸ್ತಿ ಮಾಡಿದ್ದಾರೆ. ವೈಭವ್ ಬ್ಯಾಟಿಂಗ್ ನೋಡೋಕಂತ್ಲೇ ಫ್ಯಾನ್ಸ್ ಮೈದಾನಗಳಿಗೆ ಬರೋ ಥರ ಮಾಡಿದ್ದಾರೆ. ಆದ್ರೆ ಅಂತಾರಾಷ್ಟ್ರೀಯ ಹಾಗೂ ಐಪಿಎಲ್ ಮಟ್ಟದಲ್ಲಿ ಲಾಂಗ್ ಟೈಂ ಸರ್ವೈವ್ ಆಗ್ಬೇಕು ಅಂದ್ರೆ ಬೇರೆ ಬೇರೆ ಪಿಚ್ಗಳಲ್ಲಿ ಹಾಗೇ ಬೇರೆ ಬೇರೆ ಬೌಲರ್ಗಳ ಎದುರು ಮಿಂಚಲೇವಬೇಕು. ಅದೆಲ್ಲಕ್ಕಿಂತ ಮುಖ್ಯವಾಗಿ ಪ್ರೆಶರ್ ಟೈಂ ಹ್ಯಾಂಡಲ್ ಮಾಡೋದು ತುಂಬಾನೇ ಮುಖ್ಯ.

ನೋಡಿರಿ

