SRHಗೆ ಕಿಶನ್ ಕ್ಯಾಪ್ಟನ್ – RCB ವಿರುದ್ಧ ಗೆಲ್ತಾರಾ ಇಶಾನ್?
ಪ್ಯಾಟ್ ಕಮಿನ್ಸ್ ಕೈಕೊಟ್ಟಿದ್ದೇಕೆ?

19ನೇ ಸೀಸನ್ ಐಪಿಎಲ್ ಫೀವರ್ ಜೋರಾಗ್ತಿದೆ. ಮಾರ್ಚ್ 28ಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲೇ ಅದ್ಧೂರಿಯಾಗಿ ಕಿಕ್ ಸ್ಟಾರ್ಟ್ ಆಗಲಿದೆ. ಫಸ್ಟ್ ಫೈಟಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದ್ರಾಬಾದ್ ತಂಡಗಳು ಮುಖಾಮುಖಿ ಆಗ್ತಾರೆ. ಆದ್ರೆ ಮೊದಲ ಪಂದ್ಯದಲ್ಲೇ ಹೈದ್ರಾಬಾದ್ ತಂಡದಲ್ಲಿ ಅತಿದೊಡ್ಡ ಬದಲಾವಣೆಯಾಗೋದು ಪಕ್ಕಾ ಆಗಿದೆ.
ಇದನ್ನೂ ಓದಿ : ಐಪಿಎಲ್ ಆರಂಭಕ್ಕೂ ಮುನ್ನವೇ ಆರ್‌ಸಿಬಿಗೆ ಬಿಗ್ ಶಾಕ್ – ಆರಂಭಿಕ ಪಂದ್ಯ ಆಡಲ್ಲ ಜೋಶ್ ಹೇಝಲ್ವುಡ್
2026ರ ಐಪಿಎಲ್ ಆರಂಭದ ಹೊಸ್ತಿಲಲ್ಲೇ ಎಸ್ಆರ್ಹೆಚ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಗೆ ಇಂಜುರಿ ಕಾರಣದಿಂದ ಆರಂಭದ ಕೆಲ ಪಂದ್ಯಗಳನ್ನ ಮಿಸ್ ಮಾಡಿಕೊಳ್ತಿದ್ದಾರೆ. ಹೀಗಾಗಿ ಕಮಿನ್ಸ್ ಆಡದೇ ಇದ್ರೆ ನಾಯಕ ಯಾರು ಅನ್ನೋ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಟಿ-20 ವಿಶ್ವಕಪ್ ಹೀರೋ, ಪಾಕೆಟ್ ಡೈನಮೋ ಇಶಾನ್ ಕಿಶನ್ ಗೆ ಕ್ಯಾಪ್ಟನ್ಸಿ ನೀಡೋದು ಕನ್ಫರ್ಮ್ ಆಗಿದೆ.
ಪ್ಯಾಟ್ ಕಮಿನ್ಸ್ ಆಬ್ಸೆನ್ಸ್ ನಲ್ಲಿ ಇಶಾನ್ ಕಿಶನ್ ಗೆ ಪಟ್ಟ!
ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಪ್ಯಾಟ್ ಕಮಿನ್ಸ್ ಕಳೆದ ಎರಡು ಆವೃತ್ತಿಗಳಿಂದ ಸನ್ ರೈಸರ್ಸ್ ಹೈದ್ರಾಬಾದ್ ತಂಡವನ್ನ ಲೀಡ್ ಮಾಡ್ತಿದ್ದಾರೆ. ಆದ್ರೆ ಕಳೆದ ಎರಡು ತಿಂಗಳಿಂದ ಬೆನ್ನು ನೋವಿನಿಂದ ಬಳಲ್ತಿರೋ ಕಮಿನ್ಸ್ 2025-26 ರ ಆಶಸ್ ಸರಣಿಯ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ರು. ಆ ನಂತ್ರ 2026 ರ ಐಸಿಸಿ ಪುರುಷರ T20 ವಿಶ್ವಕಪ್‌ನಿಂದಲೂ ಹೊರಗಿದ್ರು. ಸ್ಟಿಲ್ ಈವರೆಗೂ ರಿಕವರ್ ಆಗಿಲ್ಲ. ಹೀಗಾಗಿ ಐಪಿಎಲ್ನಲ್ಲೂ ಆರಂಭದ ಪಂದ್ಯಗಳನ್ನ ಮಿಸ್ ಮಾಡಿಕೊಳ್ತಾರೆ. ಸೋ ಕಮಿನ್ಸ್ ಆಬ್ಸೆನ್ಸ್ನಲ್ಲಿ ಇಶಾನ್ ಕಿಶನ್ ನಾಯಕನಾಗಿ ನೇಮಕ ಮಾಡಲಿದ್ದಾರೆ. ಆರಂಭದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡಕ್ಕೆ ವಿಶ್ವದ ನಂ. 1 ಟಿ20 ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾರನ್ನ ಕ್ಯಾಪ್ಟನ್ ಮಾಡ್ತಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಆದ್ರೆ ಎಸ್‌ಆರ್‌ಎಚ್ ಫ್ರಾಂಚೈಸಿಯಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಕೊನೆಗೆ ಎಲ್ಲರ ಕಣ್ಣು ಇಶಾನ್ ಕಿಶನ್ ಮೇಲೆ ಬಿದ್ದಿದೆ. ಅದಕ್ಕೆ ಕಾರಣವೂ ಇದೆ.
ಕಿಶನ್ ಗೆ ಕ್ಯಾಪ್ಟನ್ಸಿ?
ಟಿ-20 ವಿಶ್ವಕಪ್ ನಲ್ಲಿ ಇಶಾನ್ ಕಿಶನ್ ಅದ್ಭುತ ಪ್ರದರ್ಶನ
ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಟಿ-20ಐ ತಂಡಕ್ಕೆ ಕಂ ಬ್ಯಾಕ್
ಟಿ-20 ವಿಶ್ವಕಪ್ 317 ರನ್ ಗಳಿಸಿ ಭಾರತ ಪರ 2ನೇ ಹೈಸ್ಕೋರ್
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಜಾರ್ಖಂಡ್ ತಂಡಕ್ಕೆ ಕಪ್
10 ಇನಿಂಗ್ಸ್ ಗಳಲ್ಲಿ ಎರಡು ಶತಕ, 2 ಅರ್ಧಶತಕಗಳ ಜೊತೆ 517 ರನ್
ಬ್ಯಾಟಿಂಗ್ ಜೊತೆ ವಿಕೆಟ್ ಕೀಪಿಂಗ್ ಕೂಡ ಮಾಡೋದ್ರಿಂದ ಪ್ಲಸ್
2025ರಲ್ಲಿ 11.25 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದ್ದ ತಂಡ
ಕ್ಯಾಪ್ಟನ್ಸಿ ನೀಡಿದ್ರೆ ಮುಂದಿನ ಸೀಸನ್ ಗಳಲ್ಲೂ ಬದಲಾವಣೆಗೆ ಕ್ಲಾರಿಟಿ
ಇನ್ನು ಈ ಸೀಸನ್ನಲ್ಲಿ ಹೈದ್ರಾಬಾದ್ ತಂಡ ಉದ್ಘಾಟನಾ ಮ್ಯಾಚಲ್ಲೇ ಆರ್ಸಿಬಿ ವಿರುದ್ಧ ಕಣಕ್ಕಿಳಿಯಲಿದೆ. ಕಿಶನ್ ಕ್ಯಾಪ್ಟನ್ಸಿಯಲ್ಲಿ ಚಾಂಪಿಯನ್ಸ್ ಟೀಂ ಆರ್ಸಿಬಿ ವಿರುದ್ಧ ಮೊದಲ ಗೆಲುವಿಗಾಗಿ ಫೈಟ್ ನಡೆಸ್ತಿದ್ದಾರೆ. ಇನ್ನು ಈ ಆವೃತ್ತಿಯಲ್ಲಿ ಸದ್ಯಕ್ಕೆ ಫಸ್ಟ್ ಪೇಸ್ ಶೆಡ್ಯೂಲ್ನಲ್ಲಿ ನಾಲ್ಕು ಪಂದ್ಯಗಳ ಲಿಸ್ಟ್ ಅನೌನ್ಸ್ ಆಗಿದೆ.
ಹೈದರಾಬಾದ್ ಪಂದ್ಯಗಳು! (ಮೊದಲ ಹಂತ)
ಮಾರ್ಚ್ 28 – ಆರ್ ಸಿಬಿ ವಿರುದ್ಧ, ಬೆಂಗಳೂರು – ರಾತ್ರಿ 7:30
ಏಪ್ರಿಲ್ 2 – ಕೆಕೆಆರ್, ಕೋಲ್ಕತ್ತಾ – ರಾತ್ರಿ 7:30
ಏಪ್ರಿಲ್ 5 – ಎಲ್ ಎಸ್ ಜಿ, ಹೈದರಾಬಾದ್ – ಮಧ್ಯಾಹ್ನ 3:30
ಏಪ್ರಿಲ್ 11 – ಪಂಜಾಬ್ ಕಿಂಗ್ಸ್, ಮುಲ್ಲನ್ಪುರ – ಮಧ್ಯಾಹ್ನ 3:30
ಸೋ ಮೊದಲ ಹಂತದಲ್ಲಿ ಹೈದ್ರಾಬಾದ್ ತಂಡಗಳ ಶೆಡ್ಯೂಲ್ ಹೀಗಿದೆ. ಪ್ಯಾಟ್ ಕಮಿನ್ಸ್ ಆಲ್ಮೊಸ್ಟ್ ಮೊದಲ ಹಂತದ ಎಲ್ಲಾ ಪಂದ್ಯಗಳನ್ನ ಮಿಸ್ ಮಾಡಿಕೊಲ್ಳೋ ಚಾನ್ಸಸ್ ಇದೆ. ಹಾಗೇನಾದ್ರೂ ಆದ್ರೆ ಕಿಶನ್ ಕ್ಯಾಪ್ಟನ್ ಆಗಿ ಕಂಟಿನ್ಯೂ ಆಗ್ಬೋದು. ಅದೂ ಅಲ್ದೇ ಸನ್ ರೈಸರ್ಸ್ ಹೈದ್ರಾಬಾದ್ ತಂಡದ ಮೇನ್ ಸ್ಟ್ರೆಂಥೇ ಬ್ಯಾಟಿಂಗ್. ಐಪಿಎಲ್ ಇತಿಹಾಸದಲ್ಲಿ ಟಾಪ್ 5 ಹೈಯೆಸ್ಟ್ ಸ್ಕೋರ್ಗಳ ಲಿಸ್ಟ್ನಲ್ಲಿ ಅವ್ರದ್ದೇ ಟಾಪ್-4 ಸ್ಕೋರ್ಗಳಿವೆ.

ನೋಡಿರಿ

