ಇಶಾನ್​ ಗೆ ನಿಜಕ್ಕೂ ಆಗಿರೋದೇನು? – ದ್ರಾವಿಡ್ ಯೂ ಟರ್ನ್?

ಇಶಾನ್​ ಗೆ ನಿಜಕ್ಕೂ ಆಗಿರೋದೇನು? – ದ್ರಾವಿಡ್ ಯೂ ಟರ್ನ್?

ನಮಗೆಲ್ಲ ಗೊತ್ತಿರೋ ಹಾಗೆ ಇಶಾನ್ ಕಿಶನ್ ಈಗಾಗ್ಲೇ ಟೀಂನಿಂದ ಔಟಾಗಿದ್ದಾರೆ. ಯಾವ ಸೀರಿಸ್​​ಗೂ ಕೂಡ ಇಶಾನ್​ರನ್ನ ಪಿಕ್ ಮಾಡ್ತಾ ಇಲ್ಲ. ಈ ಹಿಂದೆಯೇ ಕೋಚ್ ರಾಹುಲ್ ದ್ರಾವಿಡ್ ಡೊಮೆಸ್ಟಿಕ್ ಕ್ರಿಕೆಟ್ ಆಡಿ ಬರುವಂತೆ ಇಶಾನ್ ಕಿಶನ್​ಗೆ ಸೂಚನೆ ಬೇರೆ ಕೊಟ್ಟಿದ್ರು. ಬಟ್ ಇಶಾನ್ ಮಾತ್ರ ಡೋಂಟ್ ಕೇರ್ ಅಂತಿದ್ದಾರೆ. ರಣಜಿಯಾಗಲಿ ಯಾವುದೇ ಫಸ್ಟ್ ಕ್ಲಾಸ್​​ ಮ್ಯಾಚ್​​ಗಳನ್ನ ಆಡ್ತಾ ಇಲ್ಲ. ಅಷ್ಟೇ ಯಾಕೆ, ಇಶಾನ್ ಕಿಶನ್ ಎಲ್ಲಿದ್ದಾರೆ? ಏನ್ಮಾಡ್ತಾ ಇದ್ದಾರೆ ಅನ್ನೋದೆ ಯಾರಿಗೂ ಗೊತ್ತಿಲ್ಲ. ಆದ್ರೆ ಕೋಚ್​ ರಾಹುಲ್ ದ್ರಾವಿಡ್​ ಮತ್ತೊಮ್ಮೆ ಇಶಾನ್​ ಕಿಶನ್​ಗೆ ವಾರ್ನಿಂಗ್ ಮಾಡಿದ್ದಾರೆ. ಜೊತೆಗೆ ಸ್ಟೇಟ್​​ಮೆಂಟ್ ಕೊಟ್ಟ ಮೇಲೆಯೂ ಟರ್ನ್ ಕೂಡ ಹೊಡೆದಿದ್ದಾರೆ. ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಆಂಗ್ಲರನ್ನು ಮಣಿಸಿ ಸೋಲಿಗೆ ಸೇಡು ತೀರಿಸಿಕೊಂಡ ಭಾರತ – ಗೆದ್ದರೂ ರೊಚ್ಚಿಗೆದ್ದಿದ್ದೇಕೆ ರೋಹಿತ್ ಶರ್ಮಾ?

ಇಶಾನ್ ಕಿಶನ್ ಒಬ್ಬ ಗ್ರೇಟ್ ಟ್ಯಾಲೆಂಟ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಬಟ್ ಇಶಾನ್​​ ಕಿಶನ್ ಅದೇನೋ ಟ್ರಬಲ್​​​ನಲ್ಲಿ ಸಿಕ್ಕಿ ಹಾಕಿಕೊಂಡಿರುವಂತೆ ಕಾಣ್ತಿದೆ. ಇಂಡಿಯನ್​​ ಟೀಮ್​ನಲ್ಲಂತೂ ಆಡ್ತಿಲ್ಲ. ಆದ್ರೆ ಫಸ್ಟ್​ ಕ್ಲಾಸ್ ಕ್ರಿಕೆಟ್​​ ಸೇರಿದಂತೆ ಇತರೆ ಯಾವುದೇ ಟೂರ್ನಿಯಲ್ಲೂ ಇಶಾನ್ ಕಿಶನ್​ ಆಡ್ತಿಲ್ಲ. ಈ ಹಿಂದೆ ಕೋಚ್ ದ್ರಾವಿಡ್ ಒಂದಷ್ಟು ಡೊಮೆಸ್ಟಿಕ್ ಮ್ಯಾಚ್​​ಗಳನ್ನ ಅಡಿ ಬರುವಂತೆ ಇಶಾನ್​ ಕಿಶನ್​​ಗೆ ಸಲಹೆ ಕೊಟ್ಟಿದ್ರು. ಆದ್ರೆ ಇಶಾನ್ ಮಾತ್ರ ಇದುವರೆಗೂ ಡೊಮೆಸ್ಟಿಕ್​ ಮ್ಯಾಚ್​​ಗಳಲ್ಲಿ ಆಡೋಕೆ ಮುಂದಾಗಿಲ್ಲ. ಇಂಗ್ಲೆಂಡ್ ವಿರುದ್ಧದ ಸೆಕೆಂಡ್ ಟೆಸ್ಟ್​ ಬಳಿಕ ಇಶಾನ್​​ ಕಿಶನ್ ವಿಚಾರವಾಗಿ ಕೋಚ್​ ರಾಹುಲ್​ ದ್ರಾವಿಡ್​​ರನ್ನ ಮತ್ತೆ ಪ್ರಶ್ನೆ ಮಾಡಲಾಗಿದ್ದು, ಈ ವೇಳೆ ದ್ರಾವಿಡ್ ನೀಡಿರೋ ಸ್ಟೇಟ್​ಮೆಂಟ್ ಈಗ ಟಾಕಿಂಗ್​ ಪಾಯಿಂಟ್ ಆಗಿದೆ. ದ್ರಾವಿಡ್ ಹೇಳಿರೋ ಪ್ರಕಾರ ಇಶಾನ್ ಕಿಶನ್ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಬ್ರೇಕ್ ಬೇಕು ಅಂತಾ ಕೇಳಿದ್ರಂತೆ. ಹೀಗಾಗಿ ಇಶಾನ್​ಗೆ ಬ್ರೇಕ್ ನೀಡಲಾಗಿದೆ. ಆದ್ರೆ ಮತ್ತೆ ಟೀಂ ಇಂಡಿಯಾ ಪರ ಆಡೋಕೆ ರೆಡಿ ಇದ್ದಾರೆ ಅನ್ನೋದಾದ್ರೆ ಒಂದಷ್ಟು ಕ್ರಿಕೆಟ್​​ ಮ್ಯಾಚ್​ಗಳನ್ನ ಆಡಲೇಬೇಕು. ಹಾಗಂತಾ ಡೊಮೆಸ್ಟಿಕ್​ ಮ್ಯಾಚ್​​ಗಳನ್ನೇ ಆಡ್ಬೇಕು ಅಂತಾ ಹೇಳ್ತಿಲ್ಲ. ಸಮ್​ ಫಾರ್ಮ್ ಆಫ್ ಕ್ರಿಕೆಟ್ ಆಡಲೇಬೇಕು ಅನ್ನೋದಾಗಿ ದ್ರಾವಿಡ್ ಹೇಳಿದ್ದಾರೆ. ಆದ್ರೆ ಈ ಹಿಂದೆ ದ್ರಾವಿಡ್ ಡೊಮೆಸ್ಟಿಕ್ ಕ್ರಿಕೆಟ್ ಆಡಿ ಮತ್ತೆ ಟೀಮ್​​ಗೆ ಕಮ್​ಬ್ಯಾಕ್ ಮಾಡಲಿ ಅಂತಾನೆ ಇಶಾನ್​ ಕಿಶನ್​ಗೆ ಸಜೆಸ್ಟ್ ಮಾಡಿದ್ರು. ಆದ್ರೆ ಇಶಾನ್ ಮಾತ್ರ ಡೊಮೆಸ್ಟಿಕ್ ಕ್ರಿಕೆಟ್​​ನತ್ತ ತಲೆ ಹಾಕಿಯೇ. ಅವರಿಗೇನಾದ್ರೂ ಇಗೋ ಹರ್ಟ್ ಆಗಿದ್ರೂ ಆಗಿರ್ಬಹುದು. ಬಟ್ ಇಲ್ಲಿ ದ್ರಾವಿಡ್ ನೀಡಿರೋ ಸಜೆಷನ್ ಮಾತ್ರ ಕರೆಕ್ಟ್ ಆಗಿಯೇ ಇದೆ. ಡೊಮೆಸ್ಟಿಕ್ ಕ್ರಿಕೆಟ್ ಸ್ಟೇಟ್​ಮೆಂಟ್ ವಿಚಾರದಲ್ಲಿ ದ್ರಾವಿಡ್ ಯೂ ಟರ್ನ್ ಹೊಡೆದ್ರೋ, ಇಲ್ವೋ ಅನ್ನೋದು ಇಲ್ಲಿ ಬೇಕಾಗಿಲ್ಲ. ಬಟ್ ಟೀಂ ಇಂಡಿಯಾಗೆ ಕಮ್​​ಬ್ಯಾಕ್ ಮಾಡಬೇಕು ಅನ್ನೋದಾದ್ರೆ ಇಶಾನ್​ ಕಿಶನ್​​ ಡೊಮೆಸ್ಟಿಕ್ ಆಗಲಿ, ಕೌಂಟಿ ಆಗಲಿ ಅಥವಾ ಇನ್ಯಾವುದೇ ಮ್ಯಾಚ್​​ಗಳಾಗಲಿ ಒಂದಷ್ಟು ಕ್ರಿಕೆಟ್ ಆಡಲೇಬೇಕು ಅನ್ನೋದು ಫ್ಯಾಕ್ಟ್. ತುಂಬಾ ಗ್ಯಾಪ್​ ಬಳಿಕ ನ್ಯಾಷನಲ್​​​ ಟೀಮ್​ನಲ್ಲಿ ಸ್ಥಾನ ಪಡೆದುಕೊಳ್ಳಬೇಕು ಅಂದ್ರೆ ಯಾವುದೇ ಪ್ಲೇಯರ್ ಆದ್ರೂ ತಮ್ಮ ಫಾರ್ಮ್, ಫಿಟ್ನೆಸ್​​ನ್ನ ಪ್ರೂವ್​​ ಮಾಡಲೇಬೇಕು. ಅದಕ್ಕಿರೋ ಬೆಸ್ಟ್ ವೇದಿಕೆ ಅಂದ್ರೆ ಡೊಮೆಸ್ಟಿಕ್ ಕ್ರಿಕೆಟ್. ಆ್ಯಕ್ಚುವಲಿ ಇಂಗ್ಲೆಂಡ್ ವಿರುದ್ಧದ ಸೀರಿಸ್​​ಗೆ ಸೆಲೆಕ್ಟ್ ಆಗೋಕೆ ಇಶಾನ್ ಕಿಶನ್​​ಗೆ ಗೋಲ್ಡನ್ ಅಪಾರ್ಚ್ಯುನಿಟಿ ಇತ್ತು. ಯಾಕಂದ್ರೆ ವಿಕೆಟ್ ಕೀಪರ್ ಬ್ಯಾಟ್ಸ್​​ಮನ್ ಕೆಎಸ್ ಭರತ್ ಇಂಗ್ಲೆಂಡ್​​ ವಿರುದ್ಧದ ಎರಡೂ ಮ್ಯಾಚ್​ಗಳಲ್ಲೂ ಫ್ಲಾಪ್ ಆಗಿದ್ದಾರೆ. ಅಷ್ಟೇ ಅಲ್ಲ, ಕಳೆದ 12 ಇನ್ನಿಂಗ್ಸ್​ಗಳಲ್ಲಿ ಭರತ್ ಹೊಡೆದಿರೋದು 221 ರನ್ ಮಾತ್ರ. ಒಂದೇ ಒಂದು ಹಾಫ್ ಸೆಂಚೂರಿ ಕೂಡ ಹೊಡೆದಿಲ್ಲ. ಬಟ್ ಕೀಪಿಂಗ್​ ತುಂಬಾ ಚೆನ್ನಾಗಿ ಮಾಡ್ತಾ ಇದ್ದಾರೆ. ಒಂದು ವೇಳೆ ಈ ಟೈಮ್​​ನಲ್ಲಿ ಇಶಾನ್ ಕಿಶನ್​​ ರಣಜಿ ಅಥವಾ ಯಾವುದೇ ಫಸ್ಟ್​ ಕ್ಲಾಸ್ ಮ್ಯಾಚ್​ಗಳನ್ನ ಆಡಿ ತಮ್ಮ ಫಾರ್ಮ್​​ನ್ನ ಪ್ರೂವ್​ ಮಾಡ್ತಿದ್ರೆ, ಇಂಗ್ಲೆಂಡ್​ ವಿರುದ್ಧದ ಮೂರನೇ ಟೆಸ್ಟ್​​ ವೇಳೆಗೆ ಟೀಂ ಇಂಡಿಯಾಗೆ ಮತ್ತೆ ಸೆಲೆಕ್ಟ್ ಆಗ್ತಾ ಇದ್ರೋ ಏನೊ. ಹೇಗೂ ರಿಷಬ್ ಪಂತ್ ಅವೈಲೇಬಲ್ ಇಲ್ಲ. ಹೀಗಾಗಿ ಕೆಎಸ್​ ಭರತ್​ರನ್ನ ಡ್ರಾಪ್ ಮಾಡಿ ಇಶಾನ್​ ಕಿಶನ್​​ರನ್ನ ಪಿಕ್ ಮಾಡೋ ಚಾನ್ಸ್ ಇತ್ತು. ಆದ್ರೆ ಇಶಾನ್ ಕಿಶನ್​ ಮಾತ್ರ ಇದುವರೆಗೂ ಬ್ಯಾಟ್ ಕೈಗೆತ್ತಿಕೊಂಡಿಲ್ಲ.

Shwetha M