ಮಾಡೆಲ್ಗೆ ಇಶಾನ್ ಕ್ಲೀನ್ ಬೋಲ್ಡ್ – ಹುಂಡಿಯಾ ಗುಂಡಿಗೆ ಬಿದ್ದ ಕಿಶನ್

ಇಶಾನ್ ಕಿಶನ್ ಮಾದುವೆ ಆಗ್ತಾರೆ ಅನ್ನೋ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದೆ. ಇದ್ದಕ್ಕೆ ಕಾರಣವಾಗಿದ್ದು ಇಶಾನ್ ಅಜ್ಜ.. ಮೊದ್ಲು ಈ ನಾವು ಇಶಾನ್ ಕಿಶನ್ ಹುಡುಗಿ ಬಗ್ಗೆ ತಿಳಿದುಕೊಳ್ಳೋಣ.. ಇಶಾನ್ ಕಿಶನ್ ಮದುವೆಯಾಗುತ್ತಿರೋ ಹುಡುಗಿ ಅದಿತಿ ಹುಂಡಿಯಾ. ಇವರ 2017ರ ಫೆಮಿನಾ ಮಿಸ್ ಇಂಡಿಯಾ ಫೈನಲಿಸ್ಟ್. 2018ರ ಮಿಸ್ ದಿವಾ ವಿನ್ನರ್. ಮೂಲತಃ ಜೈಪುರದವರಾದ ಅದಿತಿ ಜನಪ್ರಿಯ ಫ್ಯಾಷನ್ ಇನ್ಫ್ಲುಯೆನ್ಸರ್ ಕೂಡ ಹೌದು. ಇನ್ ಸ್ಟಾಗ್ರಾಮ್ ನಲ್ಲಿ 3 ಲಕ್ಷಕ್ಕೂ ಹೆಚ್ಚಿನ ಜನ ಫಾಲೋ ಮಾಡುತ್ತಿದ್ದಾರೆ. ಉದ್ಯಮಿ ಲಲಿತ್ ಹುಂಡಿಯಾ ಅವರ ಮಗಳು. ಅದಿತಿ ಮೇಲ್ವರ್ಗದ ಜೈನ ಕುಟುಂಬದಿಂದ ಬಂದವರಾಗಿದ್ದಾರೆ ಅದಿತಿ ತನ್ನ ಸಂಪೂರ್ಣ ಶಿಕ್ಷಣವನ್ನ ಜೈಪುರದಲ್ಲಿಯೇ ಮುಗಿಸಿದ್ರು. ಮಾಡೆಲಿಂಗ್ ನ ಹೊರತಾಗಿ, ಅದಿತಿ ತನ್ನ ತಾಯಿಯೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ಅವರು ಅನಾಥರಿಗೆ ಸಹಾಯ ಮಾಡುವ ಸಂಗಿನಿ ಎಂಬ ಎನ್ಜಿಒ ಜೊತೆ ಕೂಡ ಕೆಲಸ ಮಾಡ್ತಿದ್ದಾರೆ ಎಂದು ವರದಿ ಆಗಿದೆ.
ಇಶಾನ್ ಕಿಶನ್ ಜೊತೆ ಪ್ರೀತಿ ಎಲ್ಲಿ ಹುಟ್ಟುತ್ತು ಅಂತ ಸರಿಯಾಗಿ ಗೊತ್ತಿಲ್ಲ.. 2019ರ ಐಪಿಎಲ್ ಪಂದ್ಯಾವಳಿ ಇವರ ಪ್ರೇಮಕಥೆಗೆ ಮುನ್ನುಡಿ ಬರೆಯಿತು ಎನ್ನುವ ಸುದ್ದಿ ಇದೆ. 2019ರ ಐಪಿಎಲ್ ನಲ್ಲಿ ಇಶಾನ್ ಪರ ಬಾವುಟ ಹಾರಿಸುತ್ತಾ ಇಡೀ ಟೂರ್ನಿಯೂದ್ದಕ್ಕೂ ಇಶಾನ್ ಅವರನ್ನು ಹುರಿದುಂಬಿಸಿದ್ದರು. ಇಷ್ಟೇ ಅಲ್ಲ ಒಂದೂವರೆ ವರ್ಷ ಇಶಾನ್ ಕಿಶನ್ ಫಾರ್ಮ್ ನಲ್ಲಿದೆ ಒದ್ದಾಡುತ್ತಿದ್ದಾಗ ಆಗ ಧೈರ್ಯ ತುಂಬಿದ್ದು ಇದೇ ಅದಿತಿ ಎಂದು ಸುದ್ದಿ ಕೂಡ ಆಗಿತ್ತು..
ಇಲ್ಲಿಂದ ಇಬ್ಬರ ನಡುವೆ ಸ್ನೇಹ ಚಿಗುರೊಡೆಯಿತು ಎಂದು ಹೇಳಲಾಗುತ್ತಿದ್ದು, ಇದಕ್ಕೆ ಪೂರಕವಾಗಿ ಆ ನಂತರ ಇಬ್ಬರು ಹಲವು ಬಾರಿ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದು ಇದೆ. ಅದಿತಿ ಮೇಲಿಂದ ಮೇಲೆ ಕ್ರೀಡಾಂಗಣಕ್ಕೆ ಬಂದು ಪಂದ್ಯ ಕಣ್ತುಂಬಿಕೊಂಡ ಉದಾಹರಣೆ ಕೂಡ ಇವೆ. ಇದೆಲ್ಲವನ್ನೂ ಗಮನಿಸಿದ ಕ್ರೀಡಾಭಿಮಾನಿಗಳು ಮತ್ತು ಫ್ಯಾಷನ್ ಪ್ರಿಯರು ಕಳೆದ ಕೆಲ ದಿನಗಳಿಂದ ಇವರ ಸಂಬಂಧದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದರು. ಇಬ್ಬರ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧ ಇದೆ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದರು. ಈ ಅನುಮಾನ ಈಗ ನಿಜಾ ಆಗಿದ್ದು ಇಶಾನ್ ಕಿಶನ್ ಅವರ ತಾತ ಇಬ್ಬರ ಸಂಬಂಧವನ್ನು ಖಚಿತ ಪಡಿಸಿದ್ದಾರೆ.
ಇಶಾನ್ ಮತ್ತು ಅದಿತಿ ಸಂಬಂಧದ ಕುರಿತು ಮಾತನಾಡಿರುವ ಇಶಾನ್ ಅವರ ಅಜ್ಜ ಅನುರಾಗ್ ಪಾಂಡೆ, ನನ್ನ ಮೊಮ್ಮಗನ ಆಯ್ಕೆಯೇ ಅಂತಿಮ ಎಂದು ಹೇಳಿದ್ದಾರೆ. ಇಶಾನ್ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತಾನೋ ಅವರನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದಿದ್ದಾರೆ. ಹಾಗೇ ಅದಿತಿ ಅವನ ಆಪ್ತ ಸ್ನೇಹಿತೆ ಎಂದು ಹೇಳಿದ್ದಾರೆ. ಅದಿತಿ ಒಬ್ಬಳು ಮಾಡೆಲ್, ಅವರಿಬ್ಬರು ಖುಷಿಯಾಗಿದ್ದರೆ ಅವರ ಸಂತೋಷವೇ ನಮ್ಮ ಸಂತೋಷ ಎಂದು ಹೇಳಿದ್ದಾರೆ. ಸದ್ಯ ಇಶಾನ್ ಕಿಶನ್ ಅವರ ಅಜ್ಜ ಅನುರಾಗ್ ಪಾಂಡೆ ಅವರ ಈ ಹೇಳಿಕೆಯಿಂದ ಇಶಾನ್ ಕಿಶನ್ ಮತ್ತು ಅದಿತಿ ಅವರ ಸಂಬಂಧದ ಕುರಿತು ಮತ್ತೊಮ್ಮೆ ಚರ್ಚೆ ಆಗ್ತಿದೆ..

ನೋಡಿರಿ

