5 ನೇ ಟೆಸ್ಟ್‌ಗೆ ಇಶಾನ್ ಎಂಟ್ರಿ? – IND ಇಂಜುರಿ ಕಿಶನ್‌ಗೆ ಪ್ಲೆಸ್ ಆಗುತ್ತಾ?
2 ವರ್ಷದ ಸ್ಟ್ರಗಲ್‌ಗೆ ಸಕ್ಸಸ್ ಸಿಗುತ್ತಾ?

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಆಡುತ್ತಿರೋ ಟೀಂ ಇಂಡಿಯಾ ಆಟಗಾರರಿಗೆ ಇಂಜುರಿ ಭೂತ ಕಾಡುತ್ತಿದೆ.. ಒಬ್ಬರ ಹಿಂದೆ ಒಬ್ಬರಂತೆ ಮೈದಾನದಿಂದ ಟೀಂ ಇಂಡಿಯಾ ಆಟಗಾರರು ಹೊರ ನಡೆಯುತ್ತಿದ್ದಾರೆ.. ನಿತೀಶ್ ಕುಮಾರ್ ರೆಡ್ಡಿ, ಆಕಾಶ್ ದೀಪ್, ಅರ್ಪದೀಪ್ ಸಿಂಗ್ ಗಾಯಕ್ಕೆ ತುತ್ತಾಗಿರೋ ಬೆನ್ನಲ್ಲೇ ಈಗ ಪಂತ್ ಕಾಲು ಬೆರಳಿನ ಇಂಜುರಿಗೆ ತುತ್ತಾಗಿದ್ದಾರೆ.. 6 ವಾರಗಳ ಕಾಲ ಡಾಕ್ಟರ್ ರೆಸ್ಟ್ ಮಾಡೋಕೆ ಹೇಳಿದ್ರೂ ಪಂತ್‌ರನ್ನ ಇಂಜುರಿ ನಡುವೆ ಮೈದಾನಕ್ಕೆ ಟೀಂ ಇಂಡಿಯಾ ಇಳಿಸಿದೆ. ಟೀಂ ಇಂಡಿಯಾದಲ್ಲಿ ಯಾವಾಗ ಏನ್ ಆಗುತ್ತೆ ಅನ್ನೋದೇ ಗೊತ್ತಾಗಲ್ಲ. ಹೀಗಾಗಿ 5ನೇ ಟೆಸ್ಟ್‌ಗೆ ಇಶಾನ್ ಕಿಶಾನ್‌ಗೆ ಚಾನ್ಸ್ ಕೊಡುವುದ್ದಕ್ಕೆ ಟೀಂ ಇಂಡಿಯಾ ಪ್ಲ್ಯಾನ್ ಮಾಡಿದೆ ಎನ್ನಲಾಗುತ್ತಿದೆ..
ಭಾರತದ ಸ್ಟಾರ್ ಎಡಗೈ ಬ್ಯಾಟರ್ ಇಶಾನ್ ಕಿಶನ್ ಟೀಮ್ ಇಂಡಿಯಾ ದಿಂದ ದೂರವಾಗಿ 19 ತಿಂಗಳುಗಳೇ ಕಳೆದಿವೆ. ಸದ್ಯ ಐಪಿಎಲ್ ಸೇರಿದಂತೆ ಡೊಮೆಸ್ಟಿಕ್ ಲೀಗ್ಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ ಇಶಾನ್. ಕಳೆದೊಂದು ವರ್ಷದಿಂದಲೂ ಕಿಶನ್ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಕಸರತ್ತು ನಡೆಸಿದ್ದಾರೆ. ಅದರಲ್ಲೂ ದೇಶಿಲೀಗ್ಗಳಲ್ಲೂ ಆಡದೆ ಇದ್ದ ಕಾರಣ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ನಿಂದಲೂ ಕೈಬಿಟ್ಟಿತ್ತು. ಇದಾದ ಬಳಿಕ ಕೇವಲ ಐಪಿಎಲ್ನಲ್ಲಿ ಮಾತ್ರ ಕಿಶನ್ ಕಾಣಿಸಿಕೊಳ್ಳುತ್ತಿದ್ದಾರೆ. 2021ರಲ್ಲಿ ಟಿ20ಗೆ ಪಾದರ್ಪಣೆ ಮಾಡುವ ಮೂಲಕ ಇಶಾನ್ ಕಿಶನ್ ಅಂತರಾಷ್ಟ್ರೀಯ ಪಂದ್ಯಕ್ಕೆ ಪಾದರ್ಪಣೆ ಮಾಡಿದ್ದರು. ಇದಾದ ಬೆನ್ನಲ್ಲೆ 2021ರಲ್ಲೇ ಏಕದಿನ ಸರಣಿಗೂ ಕಾಲಿಟ್ಟರು ನಂತರ 2023ರಲ್ಲಿ ವೆಸ್ಟ್ ಇಂಡೀಸ್ನೊಂದಿಗೆ ಟೆಸ್ಟ್ಗೂ ಪಾದಾರ್ಪಣೆ ಮಾಡಿದರು. ಟೀಂ ಇಂಡಿಯಾಕ್ಕೆ ಸೆರೋಕೆ ಸರ್ಕಸ್ ಮಾಡುತ್ತಿದ್ದ ಇಶಾನ್‌ಗೆ ಈಗ ದೊಡ್ಡ ಅವಕಾಶ ಹುಡುಕಿಕೊಂಡು ಬಂದಿದೆ.
5 ನೇ ಟೆಸ್ಟ್‌ನಲ್ಲಿ ಇಶಾನ್ ಕಿಶನ್‌ಗೆ ಚಾನ್ಸ್?
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಜೀವಂತವಾಗಿರಿಸಿಕೊಳ್ಳಬೇಕಾದಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಗೆಲ್ಲಲೇಬೇಕಾಗಿರುವ ಭಾರತ ತಂಡಕ್ಕೆ ಇದೀಗ ದೊಡ್ಡ ಹೊಡೆತ ಬಿದ್ದಿದೆ. ಪಂದ್ಯದ ಪ್ರಾರಂಭದ ದಿನವೇ ಕಾಲಿನ ಬೆರಳಿಗೆ ಗಾಯಮಾಡಿಕೊಂಡಿರೋ ರಿಷಭ್ ಪಂತ್‌ಗೆ ವೈದ್ಯರು 6 ತಿಂಗಳ ವಿಶ್ರಾಂತಿ ತೆಗೆದುಕೊಳ್ಳುವುದ್ದಕ್ಕೆ ಹೇಳಿದ್ದಾರೆ. ಆದ್ರೂ 2ನೇ ದಿನದಾಟದಲ್ಲಿ ಇಂಜುರಿಗೊಂಡಿರೋ ರಿಷಭ್ ಪಂತ್‌ರನ್ನೇ ಟೀಂ ಇಂಡಿಯಾ ಕಣಕ್ಕಿಳಿಸಿದೆ.. ಪಂತ್ ಕಣಕ್ಕಿಳಿದ್ರೂ ಯಾವಾಗ ಏನ್ ಆಗುತ್ತೆ ಅಂತ ಹೇಳುವುದ್ದಕ್ಕೆ ಆಗಲ್ಲ.. ಯಾರಿಗೆ ಇಂಜುರಿ ಆಗುತ್ತೆ ಅನ್ನೋದು ಗೊತ್ತಾಗಲ್ಲ.. ಹೀಗಾಗಿ ಐದನೇ ಪಂದ್ಯಕ್ಕೆ ಇಶಾನ್ ಕಿಶನ್ ಅವರನ್ನು ಕರೆಸಿಕೊಳ್ಳಲು ಟೀಂ ಇಂಡಿಯಾ ನಿರ್ಧಾರ ಮಾಡಿದೆ.
ಇಶಾನ್ ಕಿಶನ್ ಈ ಹಿಂದೆ ಟೀಮ್ ಇಂಡಿಯಾ ಪರ 2 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಈ ವೇಳೆ 3 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದ ಅವರು ಒಂದು ಅರ್ಧಶತಕದೊಂದಿಗೆ 78 ರನ್ ಕಲೆಹಾಕಿದ್ದರು. ವೆಸ್ಟ್ ಇಂಡೀಸ್ ವಿರುದ್ಧ ನಡೆದ ಈ ಸರಣಿಯ ಬಳಿಕ ಇಶಾನ್ ಕಿಶನ್ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು. 2 ವರ್ಷಗಳಿಂದ ಟೀಂ ಇಂಡಿಯಾದಲ್ಲಿ ಚಾನ್ಸ್‌ಗಾಗಿ ಕಾಯುತ್ತಿದ್ದ ಇಶಾನ್ ಕಿಶಾನ್‌ಗೆ ಈ ಪಂತ್ ಬದಲಿಗೆ ತಂಡವನ್ನ ಸೇರಿಸಿಕೊಳ್ಳೋಕೆ ಟೀಂ ಇಂಡಿಯಾ ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ. ಹೀಗಾಗಿ ಜುಲೈ 31 ರಿಂದ ಆರಂಭ ಆಗೋ ಭಾರತ-ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಇಶಾನ್ ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. ಧ್ರುವ್ ಜುರೇಲ್ ಜೊತೆ ಹೆಚ್ಚುವರಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಇಶಾನ್ ಕಿಶನ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲೇ ರಿಷಬ್ ಪಂತ್ ಅವರು ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಆಗ ಅವರು ಧ್ರುವ್ ಜುರೆಲ್ ವಿಕೆಟ್ ಕೀಪರ್ ಪಾತ್ರವನ್ನು ನಿಭಾಯಿಸಿದ್ದರು. ಆದರೆ ರಿಷಬ್ ಪಂತ್ ಅವರು ಬ್ಯಾಟಿಂಗ್ ನಡೆಸಿದ್ದರು. ಈಗ ಮತ್ತೊಮ್ಮೆ ಅವರು ಗಾಯಗೊಂಡಿದ್ರೂ ಅವರನ್ನೇ ಕಣಕ್ಕೆ ಇಳಿಸಲಾಗಿದೆ.. ಇದು ಭಾರತದ ಆತಂಕಕ್ಕೆ ಕಾರಣವಾಗಿದೆ.. ಈಗಾಗಲೇ ವೇಗಿಗಳಾದ ನಿತೀಶ್ ಕುಮಾರ್ ರೆಡ್ಡಿ, ಆಕಾಶ್ ದೀಪ್ ಮತ್ತು ಅರ್ಶದೀಪ್ ಸಿಂಗ್ ಈಗಾಗಲೇ ಗಾಯಗೊಂಡು ಪ್ಲೇಯಿಂಗ್ ಇಲೆವೆನ್ ನಿಂದ ಹೊರಗುಳಿದಿದ್ದಾರೆ. ಇದರಿಂದ ತಂಡದ ಸಮತೋಲನ ತಪ್ಪಿದೆ. ಹೀಗಾಗಿ ಯಾವುದ್ದಕ್ಕೂ ಇರಲಿ ಅಂತ ಕಿಶಾನ್ ಕಿಶನ್‌ರನ್ನ 5 ನೇ ಟೆಸ್ಟ್ ಭಾರತ ಇಂಗ್ಲೆಂಡ್‌್ಗೆ ಕರೆಸಿಕೊಳ್ಳುವುದ್ದಕ್ಕೆ ಪ್ಲ್ಯಾನ್ ಮಾಡ್ತಿದೆ ಅನ್ನೋ ಮಾತು ಕೇಳಿ ಬರ್ತಿದೆ.

ನೋಡಿರಿ

