ಇಶಾನ್ ಔಟ್.. ವೈಭವ್ ಓಪನರ್ – ಭುವಿ ಬೌಲಿಂಗ್ ಮೇಲೆ BCCI ಕಣ್ಣು
2ನೇ ಪಂದ್ಯಕ್ಕೆ ಹೀಗಿದೆ ಪ್ಲೇಯಿಂಗ್ 11

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ-20ಐ ಮ್ಯಾಚಲ್ಲೇ ಭಾರತ ಚರಿತ್ರೆ ಬರೆದಿದೆ. 226 ರನ್ಗಳ ಬಿಗ್ ಟಾರ್ಗೆಟ್ ಬೆನ್ನಟ್ಟಿ ಹಿಸ್ಟರಿ ಕ್ರಿಯೇಟ್ ಮಾಡಿದೆ. ಌಂಡ್ ನಾಳೆ ಸರಣಿಯ ಎರಡನೇ ಪಂದ್ಯ ಕೂಡ ಇದೇ ಮೈದಾನದಲ್ಲಿ ನಡೆಯಲಿದ್ದು ಈ ಪಂದ್ಯದಲ್ಲೂ ಮೊದಲ ಇನ್ನಿಂಗ್ಸ್ನಲ್ಲಿ ಬಿಗ್ ಸ್ಕೋರ್ ಬರೋದಂತೂ ಪಕ್ಕಾ. ಇಂಟ್ರೆಸ್ಟಿಂಗ್ ಅಂದ್ರೆ ಈ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11ನಲ್ಲಿ ಮೇಜರ್ ಸರ್ಜರಿ ಆಗ್ತಿದೆ. ಇಶಾನ್ ಕಿಶನ್ ರೂಲ್ಡ್ ಔಟ್ ಆಗಿದ್ರೆ ವಂಡರ್ ಬಾಯ್ ವೈಭವ್ ಸೂರ್ಯವಂಶಿಗೆ ಚಾನ್ಸ್ ಸಿಕ್ತಿದೆ. ಜೊತೆಗೆ ಭುವನೇಶ್ವರ್ ಕುಮಾರ್ ಮೇಲೆ ಬಿಸಿಸಿಐ ಕಣ್ಣಿಟ್ಟಿದೆ. ಹಾಗೇ ಸ್ಪೆಷಲಿಸ್ಟ್ ಸ್ಪಿನ್ನರ್ಗೆ ಚಾನ್ಸ್ ಸಿಗುತ್ತಾ ಇಲ್ವಾ ಅನ್ನೋ ಡೌಟ್ ಕೂಡ ಇದೆ.
ಇದನ್ನೂ ಓದಿ : ಸಂಜು -ಅಭಿಷೇಕ್ ಓಪನರ್ಸ್- ವೈಭವ್ OUT, ಭುವಿಗೆ BIG ಚಾನ್ಸ್
ನ್ಯೂಜಿಲೆಂಡ್ ವಿರುದ್ಧ ಫಸ್ಟ್ ಮ್ಯಾಚಲ್ಲಿ ಭರ್ಜರಿಯಾಗಿ ಗೆದ್ದಿರೋ ಭಾರತ ಈಗ ಎರಡನೇ ಪಂದ್ಯಕ್ಕೆ ಸಿದ್ಧವಾಗಿದೆ. ಅದೂ ಅಲ್ದೇ ಎರಡನೇ ಪಂದ್ಯ ಕೂಡ ಕ್ರೈಸ್ಟ್ಚರ್ಚ್ ಮೈದಾನದಲ್ಲೇ ನಡೆಯೋದ್ರಿಂದ ಎರಡೂ ತಂಡಗಳು ಫಸ್ಟ್ ಬ್ಯಾಟಿಂಗ್ ಮಾಡುವಾಗ ಬಿಗ್ ಟಾರ್ಗೆಟ್ ಸೆಟ್ ಮಾಡೋಕೇ ನೋಡ್ತಾರೆ. ಯಾಕಂದ್ರೆ ಈ ಪಿಚ್ನಲ್ಲಿ 225 ರನ್ಸ್ ಕೂಡ ಸೇಫ್ ಇಲ್ಲ ಅಂದಾಗ ಆಬಿಯಸ್ಲಿ ಇನ್ನೂ ಹೆಚ್ಚಿನ ಸ್ಕೋರ್ ಬೇಕಾಗುತ್ತೆ. ಅದೂ ಅಲ್ದೇ ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿಗೂ ಚಾನ್ಸ್ ಸಿಗ್ತಿರೋದು ಕುತೂಹಲ ಮೂಡಿಸಿದೆ.
ಇಶಾನ್ ಕಿಶನ್ ಗೆ ಇಂಜುರಿ.. ವೈಭವ್ ಗೆ ಚಾನ್ಸ್!
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ-20ಐ ಪಂದ್ಯದಿಂದ ಭಾರತದ ವಿಕೆಟ್‌ಕೀಪರ್-ಬ್ಯಾಟರ್ ಇಶಾನ್ ಕಿಶನ್ ಹೊರಬಿದ್ದಿದ್ದಾರೆ. ಮೊದಲ ಪಂದ್ಯದ ವೇಳೆ ಅವರು ಬಲಗಡೆಯ ‘ಅಡಕ್ಟರ್ ಸ್ಟ್ರೈನ್’ ಅಂದ್ರೆ ತೊಡೆಯ ಸ್ನಾಯು ಸೆಳೆತ ಗಾಯಕ್ಕೆ ತುತ್ತಾಗಿದ್ದರಿಂದ ಶನಿವಾರ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿರುವ 2ನೇ ಪಂದ್ಯದಲ್ಲಿ ಆಡಲ್ಲ. ಸೋ ಇಶಾನ್ ಕಿಶನ್ ಆಬ್ಸೆನ್ಸ್ನಲ್ಲಿ 15 ವರ್ಷದ ವಂಡರ್ ಬಾಯ್ ವೈಭವ್ ಸೂರ್ಯವಂಶಿಗೆ ಅವಕಾಶ ಸಿಗಲಿದೆ. ಬ್ಯಾಟಿಂಗ್ ಕೋಚ್ ಸೀತಾಂಶು ಕೋಟಕ್ ಕೂಡ ಈ ಬಗ್ಗೆ ಸುಳಿವು ನೀಡಿದ್ದಾರೆ. ಅದೂ ಅಲ್ದೇ ಮೊದಲ ಪಂದ್ಯದಲ್ಲೂ ಕೂಡ ನಂಬರ್ 3 ಸ್ಲಾಟ್ ಬದಲು ನಂಬರ್ 5ನಲ್ಲಿ ಬ್ಯಾಟಿಂಗ್ಗೆ ಬಂದದ್ದು ಕೂಡ ಇದೇ ಕಾರಣಕ್ಕೆ. ಈಗ ಎರಡನೇ ಪಂದ್ಯಕ್ಕೆ ರಿಕವರ್ ಆಗದ ಕಾರಣ ಪಂದ್ಯದಲ್ಲಿ ಆಡಲ್ಲ. ಸೋ ಅಲ್ಲಿಗೆ ಬ್ಯಾಟಿಂಗ್ನಲ್ಲಿ ಬದಲಾವಣೆ ಅಂತೂ ಪಕ್ಕಾ ಆಗಿದೆ. ಈಗ ಬೌಲಿಂಗ್ನಲ್ಲೂ ಕೂಡ ಸರ್ಜರಿ ಇರುತ್ತಾ ಅನ್ನೋ ಕುತೂಹಲವೂ ಮೂಡಿದೆ.
ಭುವಿ ಮೇಲೆ ಕಣ್ಣಿಟ್ಟ ಬಿಸಿಸಿಐ!
ಇನ್ನು ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ-20ಐ ಪಂದ್ಯದಲ್ಲಿ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಪ್ರದರ್ಶನ ಅಷ್ಟೇನು ಎಫೆಕ್ಟಿವ್ ಆಗಿರಲಿಲ್ಲ. 4 ವರ್ಷಗಳ ಬಳಿಕ ಅಂದ್ರೆ 1430 ದಿನಗಳ ಬಳಿಕ ಟಿ-20ಐ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ಅವರು ರನ್ ವೇಗಕ್ಕೆ ಬ್ರೇಕ್ ಹಾಕೋಕೆ ಸಾಧ್ಯ ಆಗಿರಲಿಲ್ಲ. ತಮ್ಮ ಮೊದಲ ಓವರ್‌ನಲ್ಲಿ ಕೇವಲ 4 ರನ್ ನೀಡಿ ಉತ್ತಮ ಆರಂಭ ಪಡೆದಿದ್ದರೂ, ಎರಡನೇ ಓವರ್‌ನಲ್ಲಿ ಟಿಮ್ ಸೀಫರ್ಟ್ 2 ಬೌಂಡರಿ ಹಾಗೂ 1 ಸಿಕ್ಸರ್ ಚಚ್ಚಿ 17 ರನ್ ಲೂಟಿ ಮಾಡಿದರು. ಇನ್ನು ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲೂ ಗ್ಲೆನ್ ಫಿಲಿಪ್ಸ್ ವಿರುದ್ಧ 14 ರನ್ ಬಿಟ್ಟುಕೊಟ್ಟರು. ಟೋಟಲ್ ಆಗಿ ನಾಲ್ಕು ಓವರ್ಗಳಲ್ಲಿ 49 ರನ್ಸ್ ಕೊಟ್ಟು ಯಾವುದೇ ವಿಕೆಟ್ ಪಡೆದಿರಲಿಲ್ಲ. ಹೀಗಿದ್ರೂ ಟಿ-20ಐ ಕ್ರಿಕೆಟ್‌ನ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ಡಾಟ್ ಬಾಲ್‌ಗಳನ್ನು ಅಂದ್ರೆ 680 ಡಾಟ್ ಬಾಲ್‌ಗಳನ್ನ ಎಸೆದ ಬೌಲರ್ ಎನಿಸಿಕೊಂಡ್ರು. ಌಂಡ್ ತಮ್ಮ ಟಿ-20ಐ ಕರಿಯರ್ನಲ್ಲೇ ಫಾರ್ ದಿ ಫಸ್ಟ್ ಟೈಂ ನೋ ಬಾಲ್ ಹಾಕಿದ್ರು. ಹೀಗಾಗಿ ಎರಡನೇ ಪಂದ್ಯದಲ್ಲಿ ಭುವಿ ಪರ್ಫಾಮೆನ್ಸ್ ಮೇಲೆ ಎಲ್ಲರ ಕಣ್ಣಿದೆ. ಇದ್ರ ನಡುವೆ ಸ್ಪೆಷಲಿಸ್ಟ್ ಸ್ಪಿನ್ನರ್ಗೆ ಚಾನ್ಸ್ ಕೊಡ್ತಾರಾ ಅನ್ನೋ ಪ್ರಶ್ನೆಗಳೂ ಇವೆ. ಮೊದಲ ಮ್ಯಾಚಲ್ಲಿ ವರುಣ್ ಚಕ್ರವರ್ತಿ ಹಾಗೂ ಕುಲ್ದೀಪ್ ಇಬ್ರೂ ಕೂಡ ತಂಡದಿಂದ ಹೊರಗಿದ್ರು.
ಕಿಶನ್ ಔಟ್.. ವೈಭವ್ ಗೆ ಚಾನ್ಸ್!
ಅಭಿಷೇಕ್ ಶರ್ಮಾ
ವೈಭವ್ ಸೂರ್ಯವಂಶಿ
ಸಂಜು ಸ್ಯಾಮ್ಸನ್
ಶ್ರೇಯಸ್ ಅಯ್ಯರ್
ತಿಲಕ್ ವರ್ಮಾ
ನಿತೀಶ್ ಕುಮಾರ್ ರೆಡ್ಡಿ
ನಮನ್ ಧೀರ್
ಅಕ್ಷರ್ ಪಟೇಲ್
ಭುವನೇಶ್ವರ್ ಕುಮಾರ್
ಅರ್ಷದೀಪ್ ಸಿಂಗ್
ಮಯಾಂಕ್ ಯಾದವ್

ನೋಡಿರಿ

