BCCIನಲ್ಲಿ ಲೆಕ್ಕಕ್ಕಿಲ್ವಾ ಇಶಾನ್ ಕಿಶನ್?  – ವಿಶ್ವಕಪ್​ ಆಡ್ಲಿಲ್ಲ.. ZIM ಸರಣಿಗೂ ಇಲ್ಲ
ಶಿಸ್ತು ಮರೆತು ಕೆಟ್ರಾ ಯಂಗ್ ಪ್ಲೇಯರ್? 

BCCIನಲ್ಲಿ ಲೆಕ್ಕಕ್ಕಿಲ್ವಾ ಇಶಾನ್ ಕಿಶನ್?  – ವಿಶ್ವಕಪ್​ ಆಡ್ಲಿಲ್ಲ.. ZIM ಸರಣಿಗೂ ಇಲ್ಲಶಿಸ್ತು ಮರೆತು ಕೆಟ್ರಾ ಯಂಗ್ ಪ್ಲೇಯರ್? 

ಟೀಂ ಇಂಡಿಯಾದ ಸೀನಿಯರ್ಸ್ ಟೀಂ ಟಿ-20 ವಿಶ್ವಕಪ್​ನಲ್ಲಿ ಜಯಭೇರಿ ಬಾರಿಸಿದೆ. ಮತ್ತೊಂದ್ಕಡೆ ಯಂಗ್ ಪ್ಲೇಯರ್ಸ್ ಜಿಂಬಾಬ್ವೆ ವಿರುದ್ಧದ ಸರಣಿಗಾಗಿ ವಿದೇಶಕ್ಕೆ ಹಾರಿದ್ದಾರೆ. ಶುಭ್ಮನ್ ಗಿಲ್ ನೇತೃತ್ವದ ತಂಡವು ಜುಲೈ 6 ರಿಂದ ಐದು ಪಂದ್ಯಗಳ ಟಿ20 ಸರಣಿ ಆಡಲಿದೆ. ಇಲ್ಲಿ ಒಂದು ವಿಶೇಷ ಅಂದ್ರೆ ಟಿ20 ವಿಶ್ವಕಪ್ ಭಾಗವಾಗಿದ್ದ ಆಟಗಾರರು ಈ ಸರಣಿಗೆ ಆಯ್ಕೆಯಾಗಿಲ್ಲ. ಸದ್ಯ ಟಿ-20 ಅಂತಾರಾಷ್ಟ್ರೀಯ ಫಾರ್ಮೇಟ್​ಗೆ ರೋಹಿತ್, ಕೊಹ್ಲಿ, ಜಡೇಜಾ ನಿವೃತ್ತಿ ಘೋಷಿಸಿದ್ದಾರೆ. ಉಳಿದಂತೆ ಸೂರ್ಯಕುಮಾರ್ ಯಾದವ್​, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ ಸೇರಿದಂತೆ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಜಿಂಬಾಂಬ್ವೆ ಸರಣಿಗೆ ವಿಶ್ವಕಪ್ ತಂಡದಲ್ಲಿದ್ದ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ನೀಡಲಾಗಿತ್ತು. ಆದ್ರೆ ನಿತೀಶ್ ಕುಮಾರ್ ರೆಡ್ಡಿ ಗಾಯಗೊಂಡಿದ್ದರಿಂದ ಅವ್ರ ಬದಲಿಗೆ ಶಿವಂ ದುಬೆ ಅವರನ್ನು ಸೇರ್ಪಡೆ ಮಾಡಲಾಯಿತು. ಇದೀಗ ಮತ್ತೆ ತಂಡದಲ್ಲಿ ಕೆಲ ಚೇಂಜಸ್ ಆಗಿದೆ. ಸಂಜು ಸ್ಯಾಮ್ಸನ್, ಶಿವಂ ದುಬೆ ಮತ್ತು ಜೈಸ್ವಾಲ್ ಭಾರತಕ್ಕೆ ಮರಳೋದು ಡಿಲೇ ಆಗಿದ್ರಿಂದ ಬದಲಿ ಆಟಗಾರರಾಗಿ ಸಾಯಿ ಸುದರ್ಶನ್, ಜಿತೇಶ್ ಶರ್ಮಾ ಮತ್ತು ಹರ್ಷಿತ್ ರಾಣಾ ಅವರನ್ನು ಆಯ್ಕೆ ಮಾಡಲಾಗಿದೆ. ಆದ್ರೆ ಇಷ್ಟೆಲ್ಲಾ ಬದಲಾವಣೆ, ಬೆಳವಣಿಗೆಗಳ ನಡುವೆಯೂ ಅದೊಬ್ಬ ಆಟಗಾರನನ್ನ ಬಿಸಿಸಿಐ ಮರೆತೇ ಬಿಡ್ತಾ ಅನ್ನೋ ಅನುಮಾನ ಮೂಡಿದೆ. ಅದು ಇನ್ಯಾರು ಅಲ್ಲ. ಇಶಾನ್ ಕಿಶನ್.

ಇದನ್ನೂ ಓದಿ: IND Vs PAK ಕದನಕ್ಕೆ ಮುಹೂರ್ತ – ಪಾಕ್​ನಲ್ಲಿ ಚಾಂಪಿಯನ್ಸ್ ಟ್ರೋಫಿ ಫೈಟ್

ಇಶಾನ್ ಕಿಶನ್ ಗಿಲ್ಲ ಚಾನ್ಸ್!  ಇಶಾನ್ ಕಿಶನ್ ಈ ಹಿಂದೆ ಟೀಂ ಇಂಡಿಯಾದಲ್ಲಿ ಬೆಂಕಿ ಬ್ಯಾಟಿಂಗ್ ಮಾಡ್ತಿದ್ದ ಆಟಗಾರ. ಭೀಕರ ಅಪಘಾತದ ಬಳಿಕ ರಿಷಭ್ ಪಂತ್ ಟೀಂ ಇಂಡಿಯಾಗೆ ಮರಳುವುದಕ್ಕೂ ಮುನ್ನ ಇಶಾನ್ ಟಿ20ಐ ಸ್ವರೂಪದಲ್ಲಿ ಭಾರತದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದರು. ಎಡಗೈ ಬ್ಯಾಟರ್​ ಇಶಾನ್ ಯಾವ ಕ್ರಮಾಂಕದಲ್ಲಿ ಬೇಕಾದರೂ ಸಲೀಸಾಗಿ ಬ್ಯಾಟ್ ಬೀಸಬಲ್ಲರು. ಆದ್ರೂ 2023ರ ಏಕದಿನ ವಿಶ್ವಕಪ್ ನಂತರ ಇಶಾನ್ ಐಸಿಸಿ ಟಿ20 ಪಂದ್ಯಾವಳಿಗೆ ತಯಾರಿ ನಡೆಸಲು ಭಾರತ ಹೊಂದಿದ್ದ 11 ಟಿ20 ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯಗಳನ್ನು ಆಡಿದ್ದರು. ಆಸ್ಟ್ರೇಲಿಯಾ ವಿರುದ್ಧ ಸತತ ಅರ್ಧಶತಕ ಬಾರಿಸಿದರೂ ಕೂಡ ಇಶಾನ್, ಬಿಸಿಸಿಐ ಶಿಸ್ತು ಪಾಲಿಸದ ಕಾರಣಕ್ಕೆ ಸೈಡ್ ಲೈನ್ ಆಗಿದ್ರು. ಬಳಿಕ ಜಿತೇಶ್ ಶರ್ಮಾ ಮೊದಲ ಆಯ್ಕೆಯ ಕೀಪರ್ ಆಯ್ಕೆಯಾದರು.  ಆ ಬಳಿಕ ಇಶಾನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಮ್ ಬ್ಯಾಕ್ ಮಾಡಿಲ್ಲ. ಜಾರ್ಖಂಡ್​ನ ರಣಜಿ ಟ್ರೋಫಿ ಪಂದ್ಯಗಳಲ್ಲಿ ಹಾಜರಾಗುವಂತೆ ಬಿಸಿಸಿಐ, ಇಶಾನ್​ಗೆ ಸೂಚಿಸಿತ್ತು. ಆದರೆ ಇಶಾನ್ ಆದೇಶಗಳನ್ನ ಪಾಲಿಸಲಿಲ್ಲ. ಕದ್ದುಮುಚ್ಚಿ ಐಪಿಎಲ್​ಗೆ ಅಭ್ಯಾಸ ಆರಂಭಿಸಿದರು. ಹೀಗಾಗಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಬೇಕಾಯ್ತು. ಇದಾದ ನಂತ್ರ ಇಶಾನ್ ಅವರನ್ನು ಟಿ20 ವಿಶ್ವಕಪ್ ತಂಡಕ್ಕೆ ಕಡೆಗಣಿಸಲಾಗಿತ್ತು. ಈಗ ಜಿಂಬಾಬ್ವೆ ಸರಣಿಯಿಂದ್ಲೂ ಕೈ ಬಿಡಲಾಗಿದೆ. ಈ ಎಲ್ಲಾ ಬೆಳವಣಿಗೆಗಳನ್ನ ನೋಡ್ತಿದ್ರೆ ಇಶಾನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡ್ತಾರೋ ಇಲ್ವೋ ಎಂಬ ಬಗ್ಗೆ ಅನುಮಾನ ಮೂಡಿದೆ.

ಸದ್ಯ ಜಿಂಬಾಬ್ವೆ ಸರಣಿಗೆ ಐಪಿಎಲ್​ನಲ್ಲಿ ಮಿಂಚಿದ ಆಟಗಾರರಿಗೆ ಅವಕಾಶ ನೀಡಲಾಗಿದೆ.  ಈ ವರ್ಷದ ಆರಂಭದಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಧ್ರುವ್ ಜುರೆಲ್, ಆರಂಭಿಕ 3 ಪಂದ್ಯಗಳಿಗೆ ಸ್ಯಾಮ್ಸನ್ ಅನುಪಸ್ಥಿತಿಯಲ್ಲಿ ಕೀಪಿಂಗ್ ಕರ್ತವ್ಯ ವಹಿಸಿಕೊಳ್ಳುವ ಸಾಧ್ಯತೆ ಇದೆ. ಜಿತೇಶ್ ಬ್ಯಾಕಪ್ ಆಯ್ಕೆಯಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಇಲ್ಲಿ ಇಶಾನ್ ಕಿಶನ್ ಅಷ್ಟೇ ಅಲ್ಲ ಶ್ರೇಯಸ್ ಅಯ್ಯರ್​ಗೂ ಕೂಡ ಚಾನ್ಸ್ ಸಿಕ್ಕಿಲ್ಲ. ಹೀಗಾಗಿ ಗೌತಮ್ ಗಂಭೀರ್ ಟೀಂ ಇಂಡಿಯಾ ಸಾರಥ್ಯ ವಹಿಸಿಕೊಂಡ ಬಳಿಕ ಈ ಇಬ್ಬರೂ ಆಟಗಾರರು ಕಮ್​ಬ್ಯಾಕ್ ಮಾಡೋ ಚಿಂತನೆಯಲ್ಲಿದ್ದಾರೆ.

Shwetha M

Leave a Reply

Your email address will not be published. Required fields are marked *