ಡೇಂಜರಸ್ ಟು ಡಕ್ ಔಟ್ – ಕಿಶನ್ ಬಂದ್ಮೇಲೆ ಅಭಿಗೆ ಏನಾಯ್ತು?

ಅಭಿಷೇಕ್ ಶರ್ಮಾ. ಟಿ-20ಐ ಫಾರ್ಮೆಟ್ನ ಮೋಸ್ಟ್ ಡೇಂಜರಸ್ ಬ್ಯಾಟರ್. ಭಾರತೀಯರಷ್ಟೇ ಅಲ್ಲ.. ಬೇರೆ ಬೇರೆ ದೇಶಗಳ ಲೆಜೆಂಡರಿ ಕ್ರಿಕೆಟರ್ಸ್ ಕೂಡ ಶಹಬ್ಬಾಸ್ ಅಂದಿದ್ರು. ಆಸ್ಟ್ರೇಲಿಯಾ ತಂಡದ ದಂತಕಥೆ ರಿಕಿ ಪಾಂಟಿಂಗ್ ಅಂತೂ ಈ ಬಾರಿ ವಿಶ್ವಕಪ್‌ನಲ್ಲಿ ಅಭಿಷೇಕ್ ಶರ್ಮಾನೇ ಹೈಯೆಸ್ಟ್ ರನ್ ಸ್ಕೋರರ್ ಬರೆದಿಟ್ಟುಕೊಳ್ಳಿ ಅಂತಾ ಫುಲ್ ಕಾನ್ಫಿಡೆಂಟ್ನಲ್ಲಿ ಹೇಳಿದ್ರು. ಬಟ್ ಈಗ ಸೀನೇ ಉಲ್ಟಾ. ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ಸೂಪರ್ 8ಗೆ ಕ್ವಾಲಿಫೈ ಆಗಿದ್ರೂ ಅಭಿಷೇಕ್ ಬ್ಯಾಟಿಂದ ಒಂದೇ ಒಂದು ರನ್ಸ್ ಬಂದಿಲ್ಲ. ಅದಕ್ಕಿಂತ ಇಂಟ್ರೆಸ್ಟಿಂಗ್ ಅಂದ್ರೆ ಇಶಾನ್ ಕಿಶನ್ ಬಂದ್ಮೇಲೆ ಅಭಿಷೇಕ್ ಡಲ್ ಅನ್ನಿಸ್ತಿದ್ದಾರೆ.
ಇದನ್ನೂ ಓದಿ : ದ್ವಿಶತಕ ಸಿಡಿಸಿದ ದೇವದತ್ ಪಡಿಕ್ಕಲ್ – ಸೆಂಚುರಿ ಹೊಡೆದು ಅಬ್ಬರಿಸಿದ ಕೆ.ಎಲ್ ರಾಹುಲ್
ಭಾರತದ ಪರ ಮೊದಲ ಐಸಿಸಿ ಟೂರ್ನಿ ಆಡ್ತಿರೋ ಅಭಿಷೇಕ್ ಶರ್ಮಾ ಮೇಲೆ ಈ ಬಾರಿಯ ವಿಶ್ವಕಪ್‌ನಲ್ಲಿ ತುಂಬಾನೇ ಹೋಪ್ಸ್ ಇತ್ತು. ಅವ್ರು ಇದ್ದಂಥ ಫಾರ್ಮ್, ಅವ್ರ ಅಗ್ರೆಶನ್, ಪವರ್ ಹಿಟ್ಟಿಂಗ್ ಪರ್ಫಾಮೆನ್ಸ್ ನೋಡಿ ಕ್ರಿಕೆಟ್ ಜಗತ್ತೇ ಇವ್ರ ಮೇಲೆ ಕಣ್ಣಿಟ್ಟಿತ್ತು. ಬಟ್ ಅಭಿಷೇಕ್ ಈಗ ಆಡಿರುವಂತ ಎರಡೂ ಪಂದ್ಯಗಳಲ್ಲೂ ಸೊನ್ನೆ ಸುತ್ತಿದ್ದಾರೆ. ಒಂದೂವರೆ ವರ್ಷದಿಂದ ಅಭಿಷೇಕ್ 30ಪ್ಲಸ್ ಸ್ಕೋರ್ ಮಾಡಿದ್ರೆ ಭಾರತ 90 ಪರ್ಸೆಂಟ್ ವಿನ್ನಿಂಗ್ ಪರ್ಸೆಂಟೇಜ್ ಇತ್ತು. ಬಟ್ ನ್ಯೂಜಿಲೆಂಡ್ ವಿರುದ್ಧದ ಸರಣಿ ಬಳಿಕ ಅಭಿಷೇಕ್ ಯಾಕೋ ಡಲ್ ಆದಂತಿದೆ.
7 ಇನ್ನಿಂಗ್ಸ್ ಗಳಲ್ಲಿ 4 ಸಲ ಡಕ್ ಔಟ್ ಆದ ಅಭಿಷೇಕ್!
ಅಭಿಷೇಕ್ ಶರ್ಮಾ ಇತ್ತೀಚೆಗೆ ಡಕ್ ಔಟ್ ನಿಂದಲೇ ಸುದ್ದಿಯಾಗ್ತಿದ್ದಾರೆ. ಚೊಚ್ಚಲ ಟಿ-20 ವಿಶ್ವಕಪ್ ಆಡ್ತಿರೋ ಅಭಿಷೇಕ್ ಯುಎಸ್ಎ ವಿರುದ್ಧದ ಮೊದಲ ಮ್ಯಾಚಲ್ಲಿ ಗೋಲ್ಡನ್ ಡಕ್ ಆಗಿದ್ರು. ಆ ಬಳಿಕ ಹೆಲ್ತ್ ಇಶ್ಯೂನಿಂದಾಗಿ ನಮೀಬಿಯಾ ವಿರುದ್ಧ ಆಡಿರಲಿಲ್ಲ. ಈಗ ಪಾಕಿಸ್ತಾನ ವಿರುದ್ಧದ ಮೂರನೇ ಪಂದ್ಯದಲ್ಲೂ ಡಕ್ ಔಟ್ ಆಗಿದ್ದಾರೆ. ಈ ಮೂಲಕ ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಸತತ ಎರಡು ಪಂದ್ಯಗಳಲ್ಲಿ ಸೊನ್ನೆ ಸುತ್ತಿದ ವಿಶ್ವದ ಮೊದಲ ಆರಂಭಿಕ ಬ್ಯಾಟರ್ ಹಾಗೂ ಒಟ್ಟಾರೆ ಮೂರನೇ ಕ್ರಿಕೆಟಿಗ ಎನ್ನುವ ಬೇಡದ ದಾಖಲೆ ಬರೆದಿದ್ದಾರೆ. ಇನ್ನು ನ್ಯೂಜಿಲೆಂಡ್ ಮತ್ತು ವಿಶ್ವಕಪ್ ಪಂದ್ಯಗಳನ್ನ ಲೆಕ್ಕ ಹಾಕಿದ್ರೆ ಕಳೆದ 7 ಇನ್ನಿಂಗ್ಸ್ ಗಳಲ್ಲಿ ನಾಲ್ಕು ಸಲ ಅಭಿಷೇಕ್ ಡಕ್ ಔಟ್ ಆಗಿರೋದು ಆತಂಕ ಮೂಡಿಸಿದೆ. ನ್ಯೂಜಿಲೆಂಡ್ ವಿರುದ್ಧ 2 ಬಾರಿ ಹಾಗೇ ವಿಶ್ವಕಪ್‌ನಲ್ಲಿ 2 ಬಾರಿ ಖಾತೆ ತೆರೆಯದೇ ಔಟ್ ಆಗಿದ್ದಾರೆ.
ಅಭಿಷೇಕ್ ಶರ್ಮಾಗೆ ಟಿಪ್ಸ್ ನೀಡಿದ ರವಿಶಾಸ್ತ್ರಿ!
ಇನ್ನು ಅಭಿಷೇಕ್ ಶರ್ಮಾ ಪ್ರದರ್ಶನದ ಬಗ್ಗೆ ಚರ್ಚೆಯಾಗ್ತಿದೆ. ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಈ ವಿಚಾರವಾಗಿ ಕೆಲ ಸಜೇಷನ್ಸ್ ನೀಡಿದ್ದಾರೆ. ಅಭಿಷೇಕ್ ಶರ್ಮಾ ತಮ್ಮ ಆಟದ ಶೈಲಿಯನ್ನು ಬದಲಾಯಿಸಿಕೊಳ್ಳೋದಾಗ್ಲಿ ಅಥವಾ ಹೊಸದನ್ನ ಟ್ರೈ ಮಾಡೋ ಅವಶ್ಯಕತೆ ಇಲ್ಲ. ಜಸ್ಟ್ ಪೇಷನ್ಸ್ ಹಾಗೇ ಕೂಲ್ ಆಗಿದ್ರೆ ಸಾಕು. ಓವರ್ ಆಗಿ ಥಿಂಕ್ ಮಾಡೋ ಅಗತ್ಯ ಇಲ್ಲ. ಅಭಿಷೇಕ್ ಶರ್ಮಾ ಬ್ಯಾಟಿಂಗ್ ನಲ್ಲಿ ಶೀಘ್ರದಲ್ಲೇ ಒಂದು ಬಿಗ್ ಸ್ಕೋರ್ ಬರುತ್ತೆ. ಅದಕ್ಕೆ ಸ್ವಲ್ಪ ಟೈಂ ಬೇಕು ಎಂದಿದ್ದಾರೆ. ಅಭಿಷೇಕ್ ಈಗ ನಾಲ್ಕೈದು ಮ್ಯಾಚ್ಗಳಲ್ಲಿ ಸ್ವಲ್ಪ ಔಟ್ ಆಫ್ ಫಾರ್ಮ್ ಇರ್ಬೋದು. ಬಟ್ ಅವ್ರನ್ನ ಮ್ಯಾಚ್ ಮಾಡುವಂಥ ಪಾಕೆಟ್ ಡೈನಮೋ ಇಶಾನ್ ಕಿಶನ್ ಇರೋದೇ ತಂಡಕ್ಕೆ ಪ್ಲಸ್ ಆಗಿದೆ.
ಅಭಿಷೇಕ್ ಔಟ್ ಆದ್ರೂ ಕಿಶನ್ ಸ್ಫೋಟಕ ಬ್ಯಾಟಿಂಗ್!
ಬಹುಶಃ ಇಶಾನ್ ಕಿಶನ್ ತಂಡದಲ್ಲಿ ಇರ್ಲಿಲ್ಲ ಅಂದಿದ್ರೆ ಅಭಿಷೇಕ್ ಶರ್ಮಾ ಔಟ್ ಆಗಿದ್ದರ ಎಫೆಕ್ಟ್ ಖಂಡಿತವಾಗಿಯೂ ಭಾರತಕ್ಕೆ ತಟ್ಟುತ್ತಿತ್ತು. ಆದ್ರೆ ಅಭಿ ಕಡೆಯಿಂದ ಬಿಗ್ ಇನ್ನಿಂಗ್ಸ್ ಬಂದಿಲ್ಲ ಅನ್ನೋ ಕೊರಗನ್ನ ಕಿಶನ್ ನೀಗಿಸ್ತಿದ್ದಾರೆ. ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಸೆಕೆಂಡ್ ಹೈಯೆಸ್ಟ್ ಸ್ಕೋರರ್ ಆಗಿದ್ದ ಇಶಾನ್ ಕಿಶನ್ ವಿಶ್ವಕಪ್ನಲ್ಲೂ ಮಿಂಚು ಹರಿಸ್ತಿದ್ದಾರೆ. ಸಂಜು ಸ್ಯಾಮ್ಸನ್ಗೆ ಸೈಡ್ ಹೊಡೆದು ಓಪನರ್ ಆಗಿ ಬಂದ ಕಿಶನ್ ಬ್ಯಾಕ್ ಟು ಬ್ಯಾಕ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗೆದ್ದಿದ್ದಾರೆ. ಯುಎಸ್ಎ ವಿರುದ್ಧದ ಮೊದಲ ಮ್ಯಾಚಲ್ಲಿ 20 ರನ್ ಗಳಿಸಿದ್ರು. ನೆಕ್ಸ್ಟ್ ನಮೀಬಿಯಾ ವಿರುದ್ಧ 24 ಬಾಲಲ್ಲೇ 61 ರನ್ ಸಿಡಿಸಿ ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ರು. ಈಗ ಪಾಕ್ ವಿರುದ್ಧವೇ ಅಂಥದ್ದೇ ಸ್ಫೋಟಕ ಇನ್ನಿಂಗ್ಸ್ ಆಡಿದ್ರು. ಸ್ಪಿನ್ ಫ್ರೆಂಡ್ಲಿ ಪಿಚ್ ಬಿಗ್ ಸ್ಕೋರ್ ಬರಲ್ಲ ಅಂತಾ ಎಲ್ರೂ ಲೆಕ್ಕಾಚಾರ ಹಾಕ್ತಿದ್ರೆ ಕಿಶನ್ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ 40 ಬಾಲಲ್ಲೇ 77 ರನ್ ಸಿಡಿಸಿ ಪಾಕಿಸ್ತಾನವನ್ನ ಬಗ್ಗುಬಡಿಯೋಕೆ ಅರ್ಧ ಕೆಲಸ ಮಾಡಿ ಮುಗಿಸಿದ್ರು. ಈಗ ಮುಂದಿನ ಪಂದ್ಯಗಳಲ್ಲೂ ಅಭಿಷೇಕ್ ಗಿಂತ ಜಾಸ್ತಿ ಎಲ್ರೂ ಕಿಶನ್ ಬ್ಯಾಟಿಂಗ್ ಬಗ್ಗೆ ಕ್ಯೂರಿಯಸ್ ಆಗುವಂಥೆ ಪರ್ಫಾಮ್ ಮಾಡ್ತಿದ್ದಾರೆ.
ಮಾರ್ಡ್ರೆನ್ ಕ್ರಿಕೆಟ್ನಲ್ಲಿ ಬಿಗ್ ಹಿಟ್ಟರ್ಗಳೇ ಗೇಮ್ ಚೇಂಜರ್ಸ್ ಆಗ್ತಿದ್ದಾರೆ. ಇಷ್ಟು ದಿನ ಭಾರತಕ್ಕೆ ಅಭಿಷೇಕ್ ಶರ್ಮಾ ಆ ಕೆಲಸ ಮಾಡ್ತಿದ್ರು. ಈಗ ಇಶಾನ್ ಕಿಶನ್ ಕೂಡ ಸೇರಿಕೊಂಡಿದ್ದಾರೆ. ಆಲ್ರೆಡಿ ಮೂರು ಪಂದ್ಯಗಳಿಂದ 158 ರನ್ ಕಲೆ ಹಾಕಿದ್ದಾರೆ. ಹಾಗೇ ಟೂರ್ನಿಯ ಹೈಯೆಸ್ಟ್ ಸ್ಕೋರರ್ಗಳ ಲಿಸ್ಟ್ನಲ್ಲಿ ಸೆಕೆಂಡ್ ಪ್ಲೇಸ್ನಲ್ಲಿದ್ದಾರೆ. 167 ರನ್ ಗಳಿಸಿರೋ ನ್ಯೂಜಿಲೆಂಡ್ನ ಟಿಮ್ ಸೈಫರ್ಟ್ ಮೊದಲ ಸ್ಥಾನದಲ್ಲಿದ್ದಾರೆ. ಮುಂದಿನ ಪಂದ್ಯಗಳಲ್ಲೂ ಕಿಶನ್ ಬಗ್ಗೆ ತುಂಬಾನೇ ನಿರೀಕ್ಷೆ ಇದೆ. ಌಂಡ್ ಅಭಿಷೇಕ್ ಶರ್ಮಾ ಮತ್ತೆ ಡೇಂಜರಸ್ ಆಗಿ ಕಂ ಬ್ಯಾಕ್ ಮಾಡೋದನ್ನ ನೋಡೋಕೆ ಫ್ಯಾನ್ಸ್ ಕೂಡ ಕಾಯ್ತಿದ್ದಾರೆ.

ನೋಡಿರಿ

