BCCI ಕೆಣಕಿ ಕೆಟ್ಟ ಕಿಶನ್.. ಭಾರತದ ಬಾಗಿಲು ಶಾಶ್ವತ ಬಂದ್! – ಬಂದಷ್ಟೇ ಸ್ಪೀಡಾಗಿ ಹೋದವರೆಷ್ಟು?

BCCI ಕೆಣಕಿ ಕೆಟ್ಟ ಕಿಶನ್.. ಭಾರತದ ಬಾಗಿಲು ಶಾಶ್ವತ ಬಂದ್! – ಬಂದಷ್ಟೇ ಸ್ಪೀಡಾಗಿ ಹೋದವರೆಷ್ಟು?

ಟೀಂ ಇಂಡಿಯಾದಲ್ಲಿ ಆಟಗಾರರಿಗೇನು ಬರ ಇಲ್ಲ. ಅಟ್ ಎ ಟೈಂ ಐದು ಬಲಿಷ್ಠ ತಂಡಗಳನ್ನೇ ಸೆಟ್ ಮಾಡುವಷ್ಟು ಸ್ಟಾರ್ ಪ್ಲೇಯರ್ಸ್ ಇದ್ದಾರೆ. ಪ್ರತೀ ಸಲ ಯಾವುದಾದ್ರೂ ಟೂರ್ನಿಗೋ ಅಥವಾ ಸರಣಿಗೋ ಟೀಂ ಅನೌನ್ಸ್ ಆದಾಗ ಛೇ ಅವ್ರಿಗೆ ಚಾನ್ಸ್ ಕೊಡ್ಬೋದಿತ್ತು, ಇವ್ರನ್ನ ಕೈಬಿಡಬಾರದಿತ್ತು ಅಂತಾ ಸುದ್ದಿಯಾಗ್ತಾನೇ ಇರುತ್ತೆ. ಇನ್ನೂ ಕೆಲವ್ರು ಅವಕಾಶ ಕೊಟ್ರೂ ಅದನ್ನ ಉಳಿಸಿಕೊಳ್ಳಲ್ಲ. ಸದ್ಯ ಈ ಐದು ಆಟಗಾರರ ಪರಿಸ್ಥಿತಿ ಹಂಗೇ ಆಗಿದೆ. ಒಂದು ಕಾಲದಲ್ಲಿ ಭಾರತದ ಪವರ್​ಫುಲ್ ಪ್ಲೇಯರ್ಸ್ ಆಗಿದ್ದವ್ರು ಈಗ ಲೆಕ್ಕಕ್ಕೇ ಇಲ್ಲದಂತಾಗಿದ್ದಾರೆ.

ಇದನ್ನೂ ಓದಿ: ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಪರಿಶಿಷ್ಟ ಜಾತಿಯವರಿಗೆ ಎಸ್‌ಸಿ ಪ್ರಮಾಣಪತ್ರ – ರಾಜ್ಯ ಸರ್ಕಾರ ಆದೇಶ

ಕಳೆದ ಶನಿವಾರವಷ್ಟೇ ಟೀಂ ಇಂಡಿಯಾ ಆಸ್ಟ್ರೇಲಿಯಾ ಸರಣಿಗೆ ತಂಡವನ್ನ ಅನೌನ್ಸ್ ಮಾಡಿದೆ. 3 ಪಂದ್ಯಗಳ ಏಕದಿನ ಸರಣಿ ಹಾಗೇ 5 ಪಂದ್ಯಗಳ ಟಿ-20ಐ ಸರಣಿಗೆ ಟೀಂ ಘೋಷಣೆಯಾಗಿದೆ. ಈ ಸರಣಿಯೇ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪಾಲಿಗೆ ಕೊನೆಯಾಗುತ್ತೆ. ಆ ನಂತ್ರ ಇಬ್ಬರು ನಿವೃತ್ತಿ ಘೋಷಣೆ ಮಾಡ್ತಾರೆ ಅಂತೆಲ್ಲಾ ಟಾಕ್ ಇದೆ. ಬಟ್ ಈ ಸರಣಿಗೆ ಸೆಲೆಕ್ಟ್ ಆಗದೇ ಇರೋ ಸಾಕಷ್ಟು ಯಂಗ್ ಪ್ಲೇಯರ್ಸ್ ಇದ್ದಾರೆ.  ಅವ್ರಿಗೆಲ್ಲಾ ಆಲ್ರೆಡಿ ಟೀಂ ಇಂಡಿಯಾ ಡೋರ್ ಕ್ಲೋಸ್ ಆದಂತೆಯೇ ಇದೆ. ಅದ್ರಲ್ಲೂ ಇಶಾನ್ ಕಿಶನ್ ಅಂತೂ ಮೆನ್ ಇನ್ ಬ್ಲ್ಯೂ ಜೆರ್ಸಿ ತೊಡೋದೇ ಇಲ್ವೇನೋ ಅನ್ನಿಸ್ತಿದೆ.

ಇಶಾನ್ ಕಿಶನ್ ಗೆ ಭಾರತ ಬಾಗಿಲು ಮುಚ್ಚೇ ಬಿಡ್ತಾ?

2023ರ ವಿಶ್ವಕಪ್​ ಅಂತ್ಯವರೆಗೆ ಇಶಾನ್​ ಕಿಶನ್​ ಭಾರತದ ಪರ ಮೂರೂ ಫಾರ್ಮೆಟ್​​ನಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ರು.  ಆ ಬಳಿಕ ಸೌತ್​ ಆಫ್ರಿಕಾ ಪ್ರವಾಸದಿಂದ ಅರ್ಧಕ್ಕೆ ವಾಪಾಸ್ಸಾದ ಕಿಶನ್​, ಡೊಮೆಸ್ಟಿಕ್​ ಕ್ರಿಕೆಟ್​ ಆಡೋದು ಬಿಟ್ಟು ಐಪಿಎಲ್​ಗೆ ಪ್ರಾಕ್ಟೀಸ್ ಶುರು ಮಾಡಿದ್ರು. ಅಷ್ಟೇ ಕಿಶನ್ ವಿರುದ್ಧ ಸಿಟ್ಟಾದ ಬಿಸಿಸಿಐ ಅಲ್ಲಿಂದ ಈಚೆಗೆ ಭಾರತ ತಂಡದಲ್ಲಿ ಕಿಶನ್​ಗೆ ಚಾನ್ಸ್ ಕೊಟ್ಟೇ ಇಲ್ಲ. ಌಕ್ಚುಲಿ ಕಿಶನ್ ಪವರ್​ಫುಲ್ ಬ್ಯಾಟರ್. ಏಕದಿನ ಮಾದರಿಯಲ್ಲಿ ಕಿಶನ್ ಮಾಡಿರೋ ರೆಕಾರ್ಡ್​ನ ಬ್ರೇಕ್ ಮಾಡೋಕೆ ಆಗಿಲ್ಲ. ಏಕದಿನ ಮಾದರಿಯಲ್ಲಿ ಸೆಂಚುರಿ ಹೊಡ್ಯೋದೇ ದೊಡ್ದು. ಅದ್ರಲ್ಲೂ ಕಿಶನ್ ಫಾಸ್ಟೆಸ್ಟ್ ಡಬಲ್ ಸೆಂಚುರಿ ಸಿಡಿಸಿದ್ದಾರೆ. ODI ಕ್ರಿಕೆಟ್​ನಲ್ಲಿ ಫಸ್ಟ್ ಟೈಂ ಡಬಲ್ ಸೆಂಚುರಿ ಬಾರಿಸಿದ್ದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಆನಂತ್ರ ಸಾಕಷ್ಟು ಪ್ಲೇಯರ್ಸ್ ಡಬಲ್ ಸೆಂಚುರಿ ಹೊಡೆದ್ರೂ ಕೂಡ ಫಾಸ್ಟೆಸ್ಟ್ ಡಬಲ್ ಸೆಂಚುರಿ ರೆಕಾರ್ಡ್ ಇರೋದು ಇಶಾನ್ ಕಿಶನ್ ಹೆಸ್ರಲ್ಲಿ.

126 ಎಸೆತಗಳಲ್ಲಿ ಡಬಲ್ ಸೆಂಚುರಿ ಸಿಡಿಸಿದ್ದ ಇಶಾನ್ ಕಿಶನ್!

ಏಕದಿನ ಮಾದರಿಯಲ್ಲಿ ರೋಹಿತ್ ಶರ್ಮಾ  ಹೈಯೆಸ್ಟ್ ಅಂದ್ರೆ 3 ಸಲ ದ್ವಿಶತಕಗಳನ್ನು ಬಾರಿಸಿದ್ದಾರೆ. ಹೀಗಿದ್ರೂ ಅತ್ಯಂತ ವೇಗದ ದ್ವಿಶತಕ ಸಿಡಿಸಿದ್ದು ಇಶಾನ್ ಕಿಶನ್. 2022 ರಲ್ಲಿ ಬಾಂಗ್ಲಾದೇಶ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಇಶಾನ್ ಕಿಶನ್ ತಮ್ಮ 24ನೇ ವಯಸ್ಸಲ್ಲೇ ಹಿಸ್ಟರಿ ಕ್ರಿಯೇಟ್ ಮಾಡಿದ್ರು. ಚಿತ್ತಗಾಂಗ್​ನಲ್ಲಿ ನಡೆದಿದ್ದ  ಪಂದ್ಯದಲ್ಲಿ 85 ಎಸೆತಗಳಲ್ಲಿ ಶತಕ ಸಿಡಿಸಿದ ಇಶಾನ್ ಆ ಬಳಿಕ ಕೇವಲ 41 ಎಸೆತಗಳಲ್ಲಿ 100 ರನ್ ಗಳಿಸಿದರು. ಅಂದ್ರೆ ಕೇವಲ 126 ಎಸೆತಗಳಲ್ಲೇ ಡಬಲ್ ಸೆಂಚುರಿ ಬಾರಿಸಿದ್ರು. ಅವರ ಇನ್ನಿಂಗ್ಸ್‌ನಲ್ಲಿ 24 ಬೌಂಡರಿ ಹಾಗೂ 10 ಸಿಕ್ಸರ್‌ಗಳಿದ್ದವು. ಈ ಮೂಲಕ 2015 ರಲ್ಲಿ ಕ್ರಿಸ್ ಗೇಲ್ 138 ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದ ದಾಖಲೆಯನ್ನು ಬ್ರೇಕ್ ಮಾಡಿದ್ದರು. ಇನ್ನು 2023ರಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ 128 ಎಸೆತಗಳಲ್ಲಿ ಅಫ್ಘಾನಿಸ್ತಾನ ವಿರುದ್ಧ ಡಬಲ್ ಸೆಂಚುರಿ ಸಿಡಿಸಿ ಸೆಕೆಂಡ್ ಪ್ಲೇಸ್​ನಲ್ಲಿದ್ದಾರೆ. ಹೀಗಿದ್ರೂ ವರ್ಲ್ಡ್ ರೆಕಾರ್ಡ್ ವೀರ ಕಿಶನ್​ಗೆ ಮಾತ್ರ ಭಾರತದ ಡೋರ್ ತೆರೀತಿಲ್ಲ.

ಗಾಯಕ್ವಾಡ್, ರಿಯಾನ್ ಪರಾಗ್ ಗೂ ನೋ ಚಾನ್ಸ್!

ಟೀಂ ಇಂಡಿಯಾದಲ್ಲಿ ಫ್ಯೂಚರ್ ಸ್ಟಾರ್ ಅಂತಾನೇ ಕರೆಸಿಕೊಳ್ತಿದ್ದ ರುತುರಾಜ್ ಗಾಯಕ್ವಾಡ್ ಕೂಡ ಈಗ ಟೀಂ ಇಂಡಿಯಾಗೆ ಸೆಲೆಕ್ಟ್ ಆಗ್ತಿಲ್ಲ. 2021ರಲ್ಲಿ ಟೀಮ್​ ಇಂಡಿಯಾಗೆ ಡೆಬ್ಯೂ ಮಾಡಿದ್ದ ಗಾಯಕ್ವಾಡ್ ಮೇಲೆ ಸಾಕಷ್ಟು ಹೋಪ್ಸ್ ಇತ್ತು. ನಾಯಕನಾಗಿಯೂ ಏಷ್ಯನ್​ ಗೇಮ್​ನಲ್ಲಿ ತಂಡವನ್ನ ಮುನ್ನಡೆಸಿದ್ರು. ಆದ್ರೆ ಗಾಯಕ್ವಾಡ್​ರಿಂದ ನಿರೀಕ್ಷಿತ ಪ್ರದರ್ಶನ ಬರ್ಲಿಲ್ಲ. 2024ರ ಜಿಂಬಾಬ್ವೆ ಪ್ರವಾಸದ ಬಳಿಕ ತಂಡಕ್ಕೆ ಆಯ್ಕೆಯಾಗ್ತಿಲ್ಲ. ಇನ್ನು ರಿಯಾನ್​ ಪರಾಗ್​​ಗೆ ಕಳೆದ ವರ್ಷ ಟೀಮ್​ ಇಂಡಿಯಾ ಡೋರ್​​ ಓಪನ್​ ಆಗಿತ್ತು. ಶ್ರೀಲಂಕಾ ಪ್ರವಾಸದಲ್ಲಿ ಚಾನ್ಸ್​ ಗಿಟ್ಟಿಸಿಕೊಂಡಿದ್ದ ಪರಾಗ್​ ಅಷ್ಟೇನು ಸೌಂಡ್ ಮಾಡ್ಲಿಲ್ಲ. ಇತ್ತ ಐಪಿಎಲ್​ ಹಾಗೂ ಡೊಮೆಸ್ಟಿಕ್​ ಕ್ರಿಕೆಟ್​ನಲ್ಲೂ ಫೇಲ್ಯೂರ್ ಕಾಣ್ತಿದ್ದಾರೆ. ಹೀಗಾಗಿ ಪರಾಗ್ ಮತ್ತೆ ಮೆನ್ ಇನ್ ಬ್ಲ್ಯೂ ಜೆರ್ಸಿ ತೊಡೋದು ಕಷ್ಟವೇ. ಇನ್ನು ರವಿಬಿಷ್ಣೋಯ್ ಕಥೆ ಕೂಡ ಹಿಂಗೇ ಆಗಿದೆ. ಭಾರತದ 42 ಟಿ20 ಪಂದ್ಯಗಳನ್ನ ಆಡಿದ್ದ ಬಿಷ್ನೋಯ್​​, ಟೀಮ್​ ಇಂಡಿಯಾದ ಮ್ಯಾಚ್​ ವಿನ್ನರ್​ ಆಗಿದ್ರು. ಗೌತಮ್​ ಗಂಭೀರ್​​ ಹೆಡ್​​ಕೋಚ್​ ಆದ ಬಳಿಕ ಬಿಷ್ನೋಯ್​​ ಆಟಕ್ಕಂಟು ಲೆಕ್ಕಕ್ಕಿಲ್ಲ ಎಂಬಂತೆ ಆಗಿದೆ. ಇನ್ನು 150+ ಕಿಲೋ ಮೀಟರ್​​ ವೇಗದಲ್ಲಿ ಬೌಲಿಂಗ್​ ಮಾಡ್ತಿದ್ದ ಉಮ್ರಾನ್​ ಮಲ್ಲಿಕ್​ ಭಾರತೀಯ ಕ್ರಿಕೆಟ್​ ವಲಯದಲ್ಲಿ ಸೆನ್ಸೇಷನ್​ ಕ್ರಿಯೇಟ್​ ಮಾಡಿದ್ರು. ಬಟ್ ಈಗ ಎಷ್ಟೋ ಆಟಗಾರರಿಗೆ ಅವ್ರ ಹೆಸ್ರೇ ಗೊತ್ತಿಲ್ಲ. ಹೀಗೆ ಸಾಕಷ್ಟು ಪ್ಲೇಯರ್ಸ್ ಭಾರತ ತಂಡಕ್ಕೆ ಬಂದಷ್ಟೇ ವೇಗವಾಗಿ ಮರೆಯಾಗಿದ್ದಾರೆ. ಬಟ್ ಇಶಾನ್ ಕಿಶನ್ ಮರೆಯಾಗಿದ್ದೇ ಬೇಸರದ ಸಂಗತಿ.

Shwetha M