SMATನಲ್ಲಿ ಕಿಶನ್ ಖದರ್.. T-20I ರೇಸ್ ​​ಗೆ ಸೆಂಚುರಿ ಸ್ಟಾರ್ – ಇಶಾನ್ ಗತ್ತು BCCIಗೆ ತಲೆ ಬಾಗುತ್ತಾ?

SMATನಲ್ಲಿ ಕಿಶನ್ ಖದರ್.. T-20I ರೇಸ್ ​​ಗೆ ಸೆಂಚುರಿ ಸ್ಟಾರ್ – ಇಶಾನ್ ಗತ್ತು BCCIಗೆ ತಲೆ ಬಾಗುತ್ತಾ?

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ ಮ್ಯಾಚಲ್ಲಿ ಜಾರ್ಖಂಡ್ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್​ ಪಟ್ಟಕ್ಕೇರಿದೆ. ಬ್ಯಾಟಿಂಗ್​ನಲ್ಲಿ ಅಬ್ಬರಿಸಿ ಬೊಬ್ಬಿರಿದ ಆಟಗಾರರು ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಇದೇ ಮ್ಯಾಚಲ್ಲಿ ಹೀರೋ ಆಗಿದ್ದು ಇಶಾನ್ ಕಿಶನ್. ಸ್ಫೋಟಕ ಬ್ಯಾಟಿಂಗ್ ಮೂಲಕ ಸೆಂಚುರಿ ಸಿಡಿಸಿದ ಕಿಶನ್ ಈಗ ಟಿ-20ಐ ಕ್ರಿಕೆಟ್​ಗೆ ನಾನೂ ಕೂಡ ರೇಸ್​ನಲ್ಲಿದ್ದೇನೆ ಅಂತಾ ಬಿಗ್ ಮೆಸೇಜ್ ಪಾಸ್ ಮಾಡಿದ್ದಾರೆ. ಮೊದ್ಲೇ ಬ್ಯಾಟಿಂಗ್​ನಲ್ಲಿ ಸೊರಗಿರೋ ಭಾರತ ತಂಡಕ್ಕೆ ನಾನೂ ಸ್ಟ್ರೆಂಥ್ ಆಗಬಲ್ಲೆ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: ಬಾಯಿ ಇದೆ ಅಂತ ಬಾಯಿಗೆ ಬಂದ ಹಾಗೆ ಮಾತಾಡ್ತಿಯಾ? – ಮತ್ತೆ ಕಿತ್ತಾಡಿಕೊಂಡ ರಘು- ಗಿಲ್ಲಿ!

ಇಶಾನ್ ಕಿಶನ್ ಒನ್ ಆಫ್ ದಿ ಟ್ಯಾಲೆಂಟೆಡ್ ಪ್ಲೇಯರ್. ಟೀಂ ಇಂಡಿಯಾ ಪರವೂ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಸದ್ದು ಮಾಡಿದ ಆಟಗಾರ. ಆದ್ರೆ ಕರಿಯರ್ ಪೀಕ್​ನಲ್ಲಿದ್ದಾಗ್ಲೇ ತಮ್ಮದೇ ಒಂದು ತಪ್ಪಿನಿಂದ ತಂಡದಿಂದ ಹೊರಬಂದ್ರು. ಅಲ್ಲಿಂದ ಈಚೆಗೆ ಮೆನ್ ಇನ್ ಬ್ಲ್ಯೂ ಜೆರ್ಸಿಯಲ್ಲಿ ಆಡೋದು ಕನಸಾಗೇ ಉಳಿದಿದೆ. ಬಟ್ ಡೊಮೆಸ್ಟಿಕ್​ನಲ್ಲಿ ಸದ್ದು ಮಾಡ್ತಾನೇ ಇದ್ದಾರೆ. ಇದೀಗ ಇಶಾನ್ ಕಿಶನ್ ಕ್ಯಾಪ್ಟನ್ಸಿ ಹಾಗೇ ಸ್ಫೋಟಕ ಶತಕದ ನೆರವಿನಿಂದ ಜಾರ್ಖಂಡ್ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ. 2010-11 ರಲ್ಲಿ ವಿಜಯ್ ಹಜಾರೆ ಟ್ರೋಫಿ ಗೆದ್ದ ಬಳಿಕ ಜಾರ್ಖಂಡ್​ಗೆ ಇದು ದೇಶೀಯ ಟೂರ್ನಿಯ ಸೆಕೆಂಡ್ ವಿಕ್ಟರಿ ಆಗಿದೆ.

ಕಿಶನ್ ಶತಕ.. 262 ರನ್ ಗಳಿಸಿದ ಜಾರ್ಖಂಡ್!

ಫೈನಲ್ ಮ್ಯಾಚಲ್ಲಿ ಟಾಸ್ ಸೋತ ಜಾರ್ಖಂಡ್ ಫಸ್ಟ್ ಬ್ಯಾಟಿಂಗ್ ಮಾಡಿತು. ಇಶಾನ್ ಕಿಶನ್ ಮತ್ತು ವಿರಾಟ್ ಸಿಂಗ್ ಇನ್ನಿಂಗ್ಸ್ ಆರಂಭಿಸಿದ್ರು. ಆದ್ರೆ ವಿರಾಟ್ 2 ರನ್​ಗೆ ವಿಕೆಟ್ ಒಪ್ಪಿಸಿದ್ರು. ಆ ಬಳಿಕ 2ನೇ ವಿಕೆಟ್​ಗೆ ಜೊತೆಯಾದ ಕುಮಾರ್ ಕುಶಾಗ್ರ ಮತ್ತು ಕಿಶನ್ ಜೋಡಿ 177 ರನ್​ಗಳ ಜೊತೆಯಾಟವಾಡಿತು. ಕಿಶನ್ 49 ಎಸೆತಗಳಲ್ಲೇ 6 ಫೋರ್, 10 ಸಿಕ್ಸ್​ರ್​ ಸಹಿತ 101 ರನ್ ಗಳಿಸಿದ್ರೆ ಕುಮಾರ್ 38 ಎಸೆತಗಳಲ್ಲೇ 81 ರನ್ಸ್ ಗಳಿಸಿದ್ರು. ಬಳಿಕ ಅಂಕುಲ್ ರಾಯ್ ಮತ್ತು ರಾಬಿನ್ ಮಿಂಝ್ 200ಪ್ಲಸ್ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ರು. ಅಂತಿಮವಾಗಿ ಜಾರ್ಖಂಡ್ 3 ವಿಕೆಟ್ ನಷ್ಟಕ್ಕೆ 20 ಓವರ್​ಗಳಲ್ಲಿ 262 ರನ್ ಸ್ಕೋರ್ ಮಾಡಿತ್ತು. 263 ರನ್​ಗಳ ಟಾರ್ಗೆಟ್ ಬೆನ್ನತ್ತಿದ್ದ ಹರ್ಯಾಣ ಪಡೆ  18.3 ಓವರ್‌ಗಳಲ್ಲಿ 193 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಜಾರ್ಖಂಡ್ ಈ ಪಂದ್ಯವನ್ನು 69 ರನ್‌ಗಳಿಂದ ಗೆದ್ದುಕೊಂಡಿತು. ಈ ಗೆಲುವಿನೊಂದಿಗೆ ಇಶಾನ್ ಕಿಶನ್ ಕೂಡ ಟ್ರೆಂಡಿಂಗ್​ನಲ್ಲಿದ್ದಾರೆ. ಟೀಂ ಇಂಡಿಯಾ ಕಂ ಬ್ಯಾಕ್​ಗೆ ಬಿಗ್ ಮೆಸೇಜ್ ಪಾಸ್ ಮಾಡಿದ್ದಾರೆ. ಯಾಕಂದ್ರೆ ಕಿಶನ್ ಪರ್ಫಾಮೆನ್ಸ್ ನೆಕ್ಸ್​ಟ್ ಲೆವೆಲ್​ನಲ್ಲಿದೆ. ಅಷ್ಟಕ್ಕೂ ಇಲ್ಲಿ ಕಿಶನ್​ಗೆ ಬಿಸಿಸಿಐ ಯಾಕೆ ಮತ್ತೊಂದು ಚಾನ್ಸ್ ಕೊಡ್ಬೋದು ಅನ್ನೋದಕ್ಕೆ ಒಂದಷ್ಟು ಕಾರಣಗಳೂ ಇವೆ.

ಡೊಮೆಸ್ಟಿಕ್ ನಲ್ಲಿ ಕಿಶನ್ ಖದರ್!

2025-26ರ SMATನಲ್ಲಿ ಹೈಯೆಸ್ಟ್ ರನ್ ಸ್ಕೋರರ್ ಕಿಶನ್

10 ಪಂದ್ಯ, 55.44ರ ಸರಾಸರಿ, 2 ಶತಕ, 197 SR, 517 ರನ್ಸ್,

ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಆಟಗಾರ, 33 ಸಿಕ್ಸ್ ಬಾರಿಸಿ ದಾಖಲೆ

2025ರಲ್ಲಿ ಡೊಮೆಸ್ಟಿಕ್ ನಲ್ಲಿ 5 ಶತಕ ಬಾರಿಸಿ ಅಭಿ ದಾಖಲೆ ಬ್ರೇಕ್

ಸ್ಫೋಟಕ ಬ್ಯಾಟಿಂಗ್ ನಡೆಸೋದ್ರಿಂದ ಟಾಪ್ ಆರ್ಡರ್ ನಲ್ಲಿ ಪ್ಲಸ್

126 ಎಸೆತಗಳಲ್ಲಿ ಡಬಲ್ ಸೆಂಚುರಿ ಸಿಡಿಸಿದ್ದ ಇಶಾನ್ ಕಿಶನ್!

ಏಕದಿನ ಮಾದರಿಯಲ್ಲಿ ರೋಹಿತ್ ಶರ್ಮಾ ಹೈಯೆಸ್ಟ್ ಅಂದ್ರೆ 3 ಸಲ ದ್ವಿಶತಕಗಳನ್ನು ಬಾರಿಸಿದ್ದಾರೆ. ಹೀಗಿದ್ರೂ ಅತ್ಯಂತ ವೇಗದ ದ್ವಿಶತಕ ಸಿಡಿಸಿದ್ದು ಇಶಾನ್ ಕಿಶನ್. 2022 ರಲ್ಲಿ ಬಾಂಗ್ಲಾದೇಶ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಇಶಾನ್ ಕಿಶನ್ ತಮ್ಮ 24ನೇ ವಯಸ್ಸಲ್ಲೇ ಹಿಸ್ಟರಿ ಕ್ರಿಯೇಟ್ ಮಾಡಿದ್ರು. ಚಿತ್ತಗಾಂಗ್​ನಲ್ಲಿ ನಡೆದಿದ್ದ  ಪಂದ್ಯದಲ್ಲಿ 85 ಎಸೆತಗಳಲ್ಲಿ ಶತಕ ಸಿಡಿಸಿದ ಇಶಾನ್ ಆ ಬಳಿಕ ಕೇವಲ 41 ಎಸೆತಗಳಲ್ಲಿ 100 ರನ್ ಗಳಿಸಿದರು. ಅಂದ್ರೆ ಕೇವಲ 126 ಎಸೆತಗಳಲ್ಲೇ ಡಬಲ್ ಸೆಂಚುರಿ ಬಾರಿಸಿದ್ರು. ಅವರ ಇನ್ನಿಂಗ್ಸ್‌ನಲ್ಲಿ 24 ಬೌಂಡರಿ ಹಾಗೂ 10 ಸಿಕ್ಸರ್‌ಗಳಿದ್ದವು. ಈ ಮೂಲಕ 2015 ರಲ್ಲಿ ಕ್ರಿಸ್ ಗೇಲ್ 138 ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದ ದಾಖಲೆಯನ್ನು ಬ್ರೇಕ್ ಮಾಡಿದ್ದರು.

2023ರಿಂದ ಭಾರತ ತಂಡದಿಂದ ಹೊರಗಿರುವ ಕಿಶನ್!

ಇನ್ನು 2023ರ ವಿಶ್ವಕಪ್​ ಅಂತ್ಯವರೆಗೆ ಇಶಾನ್​ ಕಿಶನ್​ ಭಾರತದ ಪರ ಮೂರೂ ಫಾರ್ಮೆಟ್​​ನಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ರು. ಆದ್ರೆ ಸೌತ್​ ಆಫ್ರಿಕಾ ಸರಣಿಯಲ್ಲಿ ಅರ್ಧಕ್ಕೆ ವಾಪಾಸ್ಸಾದ ಕಿಶನ್​, ಡೊಮೆಸ್ಟಿಕ್​ ಕ್ರಿಕೆಟ್​ ಆಡೋದು ಬಿಟ್ಟು ಐಪಿಎಲ್​ಗೆ ಪ್ರಾಕ್ಟೀಸ್ ಶುರು ಮಾಡಿದ್ರು. ಇದ್ರಿಂದ ಸಿಟ್ಟಾದ ಬಿಸಿಸಿಐ ಅಲ್ಲಿಂದ ಈಚೆಗೆ ಭಾರತ ತಂಡದಲ್ಲಿ ಕಿಶನ್​ಗೆ ಚಾನ್ಸ್ ಕೊಟ್ಟೇ ಇಲ್ಲ. ಌಕ್ಚುಲಿ ಕಿಶನ್ ಪವರ್​ಫುಲ್ ಬ್ಯಾಟರ್. ಶ್ರೇಯಸ್ ಅಯ್ಯರ್​ರಂತೆ ಕಿಶನ್​ಗೂ ಮತ್ತೊಂದು ಚಾನ್ಸ್ ಕೊಡ್ಬೋದಿತ್ತು. ಪ್ರಸ್ತುತ ಬ್ಯಾಟಿಂಗ್​ನಲ್ಲಿ ಸಫರ್ ಆಗ್ತಿರೋ ಭಾರತ ತಂಡಕ್ಕೆ ಕಿಶನ್ ಒನ್ ಆಫ್ ದಿ ಬೆಸ್ಟ್ ಸೆಲೆಕ್ಷನ್ ಆಗ್ಬೋದು. ಆದ್ರೆ ಕಿಶನ್ ಗತ್ತು ಬಿಸಿಸಿಐಗೆ ಗೊತ್ತಾಗುತ್ತಾ ಅನ್ನೋದೇ ಇಲ್ಲಿರೋ ಪ್ರಶ್ನೆ.

Shwetha M