ಕೊಹ್ಲಿ SLOTನಲ್ಲಿ ಇಶಾನ್ ಕಿಶನ್ – ವಿಕೆಟ್ ಕೀಪಿಂಗ್ KLಗೆ ಸಿಗಲ್ವಾ?
AFG ಬೇಟೆಗೆ ಹೀಗಿದೆ ಪ್ಲೇಯಿಂಗ್ 11

ಅಫ್ಘಾನಿಸ್ತಾನ ವಿರುದ್ಧ ಟೆಸ್ಟ್ ಮ್ಯಾಚಲ್ಲಿ ಭರ್ಜರಿಯಾಗಿ ಗೆದ್ದಿರೋ ಭಾರತ ಈಗ ಏಕದಿನ ಸರಣಿಯಲ್ಲೂ ಡಾಮಿನೇಟ್ ಮಾಡೋ ಮೈಂಡ್ಸೆಟ್ನಲ್ಲಿದೆ. ಮೂರು ಪಂದ್ಯಗಳ ಸರಣಿ ಶನಿವಾರದಿಂದ ಸ್ಟಾರ್ಟ್ ಆಗಲಿದೆ. ಮೊದಲ ಪಂದ್ಯ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಮ್ನಲ್ಲಿ ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ಪಂದ್ಯ ಶುರುವಾಗುತ್ತೆ. ನೆಕ್ಸ್ಟ್ ಇಯರ್ ಏಕದಿನ ವಿಶ್ವಕಪ್ ಕೂಡ ಇರೋದ್ರಿಂದ ಈ ಸರಣಿ ಗೆಲುವು ತುಂಬಾನೇ ಮುಖ್ಯ ಆಗುತ್ತೆ.
ಇದನ್ನೂ ಓದಿ : TESTಗೆ ಮಾತ್ರ ಮೊಹಮ್ಮದ್ ಸಿರಾಜ್ ಸೀಮಿತ – ಬುಮ್ರಾ ಆಡದಿದ್ರಷ್ಟೇ T-20I & ODI
ಆಫ್ಘನ್ ವಿರುದ್ಧದ ಏಕದಿನ ಸರಣಿಗೆ ಟೀಂ ಅನೌನ್ಸ್ ಆದಾಗ್ಲೇ ಬಿಸಿಸಿಐ ಸಾಕಷ್ಟು ಬದಲಾವಣೆಗಳನ್ನ ಮಾಡಿತ್ತು. ಕೆಲ ಸೀನಿಯರ್ಸ್ಗೆ ಕೊಕ್ ಕೊಟ್ಟು ಯಂಗ್ಸ್ಟರ್ಸ್ಗೆ ಚಾನ್ಸ್ ನೀಡಲಾಗಿದೆ. ಶುಭ್ಮನ್ ಗಿಲ್ ಕ್ಯಾಪ್ಟನ್ ಆಗಿ ಭಾರತವನ್ನ ಲೀಡ್ ಮಾಡ್ತಿದ್ರೆ ಶ್ರೇಯಸ್ ಅಯ್ಯರ್ ವೈಸ್ ಕ್ಯಾಪ್ಟನ್ ಆಗಿದ್ದಾರೆ. ಹಾಗೇ ಏಕದಿನ ತಂಡದಲ್ಲಿ ಫಾರ್ ದಿ ಫಸ್ಟ್ ಟೈಂ ವೇಗದ ಬೌಲರ್ಗಳಾದ ಪ್ರಿನ್ಸ್ ಯಾದವ್ ಮತ್ತು ಗುರ್ನೂರ್ ಬ್ರಾರ್, ಸ್ಪಿನ್ನರ್ ಹರ್ಷ್ ದುಬೆಗೆ ಅವಕಾಶ ನೀಡಲಾಗಿದೆ. ಮತ್ತೊಂದ್ಕಡೆ ಹಶ್ಮತುಲ್ಹಾ ಶಾಹಿದಿ ನಾಯಕತ್ವದ ಅಫ್ಘಾನಿಸ್ತಾನ ತಂಡ ಕೂಡ ಬಲಿಷ್ಠ ಭಾರತವನ್ನ ಸೋಲಿಗೆ ನಾವೂ ಸ್ಟ್ರಾಂಗ್ ಅನ್ನೋ ಮೆಸೇಜ್ ಪಾಸ್ ಮಾಡೋಕೆ ಕಾಯ್ತಾ ಇದ್ದಾರೆ. ಆದ್ರೆ ಈ ಪಂದ್ಯಕ್ಕೂ ಮುನ್ನ ಭಾರತಕ್ಕೂ ಕೆಲ ಸೆಟ್ ಬ್ಯಾಕ್ ಆಗಿದೆ.
ಕೊಹ್ಲಿ ಮತ್ತು ಹಾರ್ದಿಕ್ ಅನುಪಸ್ಥಿತಿ ಭಾರತವನ್ನು ಕಾಡುತ್ತಾ?
ಟೀಂ ಇಂಡಿಯಾದ ಬ್ಯಾಟಿಂಗ್ ಸೂಪರ್ಸ್ಟಾರ್ ವಿರಾಟ್ ಕೊಹ್ಲಿ ಮತ್ತು ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇಂಜುರಿ ಕಾರಣದಿಂದಾಗಿ ಸರಣಿಯಿಂದಲೇ ರೂಲ್ಡ್ ಔಟ್ ಆಗಿದ್ದಾರೆ. ವೈಟ್ ಬಾಲ್ ಕ್ರಿಕೆಟ್ನಲ್ಲಿ ಈ ಇಬ್ಬರು ಅನುಭವಿಗಳ ಇಂಪಾರ್ಟೆನ್ಸ್ ನೋಡಿದ್ರೆ ತಂಡಕ್ಕೆ ಸ್ವಲ್ಪ ಹೊಡೆತ ನೀಡಬಹುದು. 2026ರ ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಕೊನೆಯ ಏಕದಿನ ಸರಣಿ ಆಡಿದ ತಂಡಕ್ಕೆ ಕಂಪೇರ್ ಮಾಡಿದ್ರೆ ರಿಷಭ್ ಪಂತ್, ರವೀಂದ್ರ ಜಡೇಜಾ, ಆಯುಷ್ ಬದೋನಿ, ಧ್ರುವ್ ಜುರೆಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಹೀಗಾಗಿ ಈ ಪಂದ್ಯಕ್ಕೆ ಹೇಗಿರುತ್ತೆ ಪ್ಲೇಯಿಂಗ್ 11 ಅನ್ನೋದು ಕೂಡ ಕುತೂಹಲ ಮೂಡಿಸಿದೆ. ಅಫ್ಘಾನಿಸ್ತಾನ ವಿರುದ್ಧ ಯಾರೆಲ್ಲಾ ಕಣಕ್ಕಿಳಿಬೋದು ಅನ್ನೋದನ್ನ ನೋಡ್ತಾ ಹೋಗೋಣ.
ಅಫ್ಘನ್ ಬೇಟೆಗೆ ಸಂಭಾವ್ಯ ಪ್ಲೇಯಿಂಗ್ 11
ರೋಹಿತ್ ಶರ್ಮಾ
ಶುಭ್ ಮನ್ ಗಿಲ್
ಇಶಾನ್ ಕಿಶನ್
ಶ್ರೇಯಸ್ ಅಯ್ಯರ್
ಕೆಎಲ್ ರಾಹುಲ್
ನಿತೀಶ್ ಕುಮಾರ್ ರೆಡ್ಡಿ
ವಾಷಿಂಗ್ಟನ್ ಸುಂದರ್
ಕುಲ್ದೀಪ್ ಯಾದವ್
ಅರ್ಶದೀಪ್ ಸಿಂಗ್
ಪ್ರಿನ್ಸ್ ಯಾದವ್
ಪ್ರಸಿದ್ಧ್ ಕೃಷ್ಣ
ಇಷ್ಟು ಆಟಗಾರರು ಅಫ್ಘನ್ ವಿರುದ್ಧ ಕಣಕ್ಕಿಳಿಯಬಹುದು. ಬ್ಯಾಟಿಂಗ್ ಮತ್ತು ಬೌಲಿಂಗ್ ಅಂತಾ ನೋಡಿದ್ರೆ ಬ್ಯಾಟಿಂಗ್ ಲೈನಪ್ ಆಲ್ಮೋಸ್ಟ್ ಹಾಗೇ ಇದೆ. ಬಟ್ ಬೌಲಿಂಗ್ನಲ್ಲಿ ಸಿರಾಜ್, ಬುಮ್ರಾ ಇಬ್ಬರ ಆಬ್ಸೆನ್ಸ್ ಕೂಡ ಇದೆ. ಹೀಗಾಗಿ ಈ ಕಾಂಬಿನೇಷನ್ ವರ್ಕೌಟ್ ಆಗುತ್ತಾ ನೋಡ್ಬೇಕು. ಇನ್ನು ಸರಣಿಯ ಎರಡನೇ ಏಕದಿನ ಪಂದ್ಯ ಜೂನ್ 17 ರಂದು ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆಯಲಿದೆ ಮತ್ತು ಕೊನೇ ಮ್ಯಾಚ್ ಜೂನ್ 20 ರಂದು ಚೆನ್ನೈನ ಐತಿಹಾಸಿಕ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.

ನೋಡಿರಿ

