ಗಿಲ್ ಜೊತೆ ಅಶ್ಲೀಲವಾಗಿ ನಡೆದುಕೊಂಡ ಇಶಾನ್ ಕಿಶನ್ – ಇದು ತುಂಟಾಟದ ಸಮಯವಲ್ಲ ಎಂದು ಗೆಳೆಯನಿಗೆ ಗಿಲ್ ವಾರ್ನಿಂಗ್

ಗಿಲ್ ಜೊತೆ ಅಶ್ಲೀಲವಾಗಿ ನಡೆದುಕೊಂಡ ಇಶಾನ್ ಕಿಶನ್ – ಇದು ತುಂಟಾಟದ ಸಮಯವಲ್ಲ ಎಂದು ಗೆಳೆಯನಿಗೆ ಗಿಲ್ ವಾರ್ನಿಂಗ್

ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಸತತ ಆರು ಗೆಲುವು ಸಾಧಿಸಿ ಪಾಯಿಂಟ್ ಟೇಬಲ್‌ನಲ್ಲಿ  ಟೀಮ್ ಇಂಡಿಯಾ ಅಗ್ರಸ್ಥಾನದಲ್ಲಿ ಅಲಂಕರಿಸಿದೆ. ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಭಾರತ ಕ್ರಿಕೆಡ್ ತಂಡ ಇದೀಗ ತನ್ನ ಮುಂದಿನ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇದರ ಮಧ್ಯೆ ಟೀಮ್ ಇಂಡಿಯಾ ಆಟಗಾರನ ತರಲೆ, ಮತ್ತೊಬ್ಬ ಸ್ಟಾರ್ ಆಟಗಾರನಿಗೆ ತಲೆನೋವಾಗಿರುವ ದೃಶ್ಯವೊಂದು ಕಂಡುಬಂದಿದೆ.

ಇದನ್ನೂ ಓದಿ: ಕೇವಲ ಧೋನಿಯಿಂದಾಗಿ ಮಾತ್ರ ವರ್ಲ್ಡ್‌ಕಪ್ ಗೆದ್ದಿಲ್ಲ..! – ಧೋನಿಗೆ ಮತ್ತೆ ಟಾಂಗ್ ಕೊಟ್ಟ ಗಂಭೀರ್!

ಟೀಮ್ ಇಂಡಿಯಾ ತನ್ನ ಏಳನೇ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಡಲಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಇದಕ್ಕಾಗಿ ಟೀಮ್ ಇಂಡಿಯಾ ಆಟಗಾರರು ಮುಂಬೈಗೆ ಬಂದಿಳಿದಿದ್ದಾರೆ. ಆದರೆ, ವಿಮಾನ ನಿಲ್ದಾಣದಿಂದ ಇಳಿದು ಬಸ್‌ಗೆ ಹತ್ತುವಾಗ ಒಂದು ತರಲೆ ದೃಶ್ಯವೊಂದು ಮಾಧ್ಯಮದವರ ಕಣ್ಣಿಗೆ ಬಿದ್ದಿದೆ. ಬಸ್‌ಗೆ ಹತ್ತುವ ಮುನ್ನ ಶುಭ್ಮನ್ ಗಿಲ್ ಜೊತೆ ಟೀಮ್ ಇಂಡಿಯಾದ ಮತ್ತೊಬ್ಬ ಆಟಗಾರ ಅಶ್ಲೀಲವಾಗಿ ನಡೆದುಕೊಂಡಿದ್ದಾರೆ. ಕೋಚ್ ರಾಹುಲ್ ದ್ರಾವಿಡ್, ರೋಹಿತ್ ಜೊತೆ ಅವರ ಪತ್ನಿ ರಿತಿಕಾ, ಬೂಮ್ರಾ, ಶುಭ್ಮನ್ ಗಿಲ್, ಶಮಿ, ಕಿಶನ್ ಸೇರಿದಂತೆ ಎಲ್ಲ ಆಟಗಾರರು ಮುಂಬೈ ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ಬಸ್ ನಲ್ಲಿ ಹೋಗಬೇಕಿತ್ತು. ಬಸ್ ನಿಂತಿದ್ದ ಜಾಗದಲ್ಲಿ ಶುಭಮನ್ ಗಿಲ್ ನಿಂತಿದ್ದರು. ಬಸ್‌ಗೆ ಹತ್ತುವ ಮುನ್ನ ಶುಭ್ಮನ್ ಗಿಲ್ ನಿಂತಿದ್ದಾಗ ಟೀಮ್ ಇಂಡಿಯಾದ ಮತ್ತೊಬ್ಬ ಆಟಗಾರ ಇಶಾನ್ ಕಿಶನ್ ಬರುತ್ತಾರೆ. ಹಾಗೆ ಬಂದವರು ಅಶ್ಲೀಲವಾಗಿ ನಡೆದುಕೊಂಡಿದ್ದಾರೆ. ಇದರಿಂದ ಗಿಲ್ ಒಂದು ಕ್ಷಣ ಕೋಪಗೊಂಡಂತೆ ಕಂಡಿತು. ಜೊತೆಗೆ ಮಾಧ್ಯಮದವರು, ಅಭಿಮಾನಿಗಳು ಬಸ್ ಸಮೀಪ ಇರುವ ಬಗ್ಗೆ ಇಶಾನ್ ಕಿಶನ್ ಗಮನಕ್ಕೆ ತರುತ್ತಾರೆ. ಇದು ತುಂಟಾಟದ ಸಮಯವಲ್ಲ ಎಂದು ಗೆಳೆಯನಿಗೆ ಲೈಟ್ ಆಗಿಯೇ ವಾರ್ನಿಂಗ್ ಮಾಡುತ್ತಾರೆ.  ಆಗ ತರಲೆ ಸ್ವಭಾವದ ಇಶಾನ್ ಕಿಶನ್ ಎಲ್ಲರೂ ಇರುವುದನ್ನು ಗಮನಿಸುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಂದಹಾಗೆ ಗಿಲ್-ಕಿಶನ್ ಉತ್ತಮ ಸ್ನೇಹಿತರು. ಇವರಿಬ್ಬರೂ ಈ ರೀತಿಯ ಕೀಟಲೆ ಮಾಡುತ್ತಲೇ ಇರುವುದು ಇದು ಹೊಸತೇನಲ್ಲ.

Sulekha