ಈ ಟೀ ಹಾವಿನ ವಿಷದಷ್ಟೇ ಡೇಂಜರ್! – ಚಹಾ ಮಾಡುವಾಗ ಈ ತಪ್ಪು ಮಾಡ್ಲೇಬೇಡಿ!

ಬೆಳಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಟೀ ಕುಡಿತಾ ಇದ್ರೆ ಮೈಂಡ್ ಪ್ರೆಶ್ ಅನ್ನಿಸುತ್ತೆ. ಇದು ಜಸ್ಟ್ ಒಂದು ಡ್ರಿಂಕ್ ಅಲ್ಲ.. ಎಮೋಷನ್ ಅಂತ ಅನೇಕರು ಭಾವಿಸ್ತಾರೆ. ಆದ್ರೆ ನಾವು ಟೀ ಕುಡಿವಾಗ ಮಾಡೋ ಒಂದು ತಪ್ಪು ನಮ್ಮ ಆರೋಗ್ಯಕ್ಕೆ ದೊಡ್ಡ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ಟ್ರಿಗರ್ ಮಾಡಿದ್ರೆ ಉಗುರಲ್ಲೇ ಹೊಡೆದು ಸಾಯಿಸ್ತೀನಿ! – ತನ್ನ ತಂಟೆಗೆ ಬಂದ ಧ್ರುವಂತ್‌ಗೆ ಗಿಲ್ಲಿ ವಾರ್ನ್!
ಹೌದು, ಕೆಲವರು ಬೆಳಗ್ಗೆ ಎದ್ದ ಕೂಡ್ಲೇ ಒಂದು ಪಾತ್ರೆಯಲ್ಲಿ ಫುಲ್ ಟೀ ಮಾಡಿ ಅದನ್ನೇ ಆಗಾಗ ಬಿಸಿ ಮಾಡಿ ಕುಡಿಯುತ್ತಾ ಇರುತ್ತಾರೆ. ಹೀಗೆ ಮಾಡಿದ್ರೆ ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀಳುತ್ತೆ. ಇತ್ತೀಚೆಗೆ ಪ್ರಕಟವಾದ ಅಧ್ಯಯನದ ವರದಿ ಪ್ರಕಾರ, ಚಹಾ ರೆಡಿ ಮಾಡಿದ 15 ರಿಂದ 20 ನಿಮಿಷಗಳ ಒಳಗೆ ಟೋ ಕುಡಿಯಬೇಕು. ಟೀ ತಯಾರಿಸಿದ ನಂತರ ಉಳಿದ ಚಹಾ ಎಲೆಗಳು ಬ್ಯಾಕ್ಟೀರಿಯಾಗಳಿಗೆ ಸಂತಾನೋತ್ಪತ್ತಿ ಮಾಡುವ ಸ್ಥಳವಾಗಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಆರಿ ಹೋದ ಟೀ ಕುಡಿಯುವುದರಿಂದ ಲಿವರ್ ಹಾಗೇ ಜೀರ್ಣಾಂಗ ಮೇಲೆ ಎಫೆಕ್ಟ್ ಬೀಳುತ್ತೆ ಎಂದು ತಜ್ಞರು ತಿಳಿಸಿದ್ದಾರೆ. ಹೀಗಾಗೇ ಜಪಾನ್ ಮತ್ತು ಚೀನಾದಂತಹ ದೇಶಗಳಲ್ಲಿ, ಸಂಗ್ರಹಿಸಿದ ಚಹಾವನ್ನು ವಿಷದಷ್ಟೇ ಹಾನಿಕಾರಕವೆಂದು ಪರಿಗಣಿಸಲಾಗುತ್ತದೆ. 24 ಗಂಟೆಗಳಿಗಿಂತ ಹೆಚ್ಚು ಕಾಲ ಸಂಗ್ರಹಿಸಿದ ಚಹಾವನ್ನು ಕುಡಿಯುವುದು ಹಾವು ಕಡಿತಕ್ಕಿಂತ ಅಪಾಯಕಾರಿ ಎಂದು ಜಪಾನಿಯರು ಹೇಳುತ್ತಾರೆ. ಹೀಗಾಗೇ ಕೆಲ ದೇಶಗಳಲ್ಲಿ ಸ್ಟೋರ್ ಮಾಡಿದ ಟೀಯನ್ನ ಯಾವುದೇ ಕಾರಣಕ್ಕೆ ಕುಡಿಯೋದಿಲ್ಲ.
ಇನ್ನು ಟೀಗೆ ಹಾಲು ಹಾಕಿರೋದ್ರಿಂದ ಟೀ ಬೇಗನೆ ಹಾಳಾಗುತ್ತದೆ. ಹಾಲಿನಿಂದ ತಯಾರಿಸಿದ ಚಹಾವನ್ನು ಕೋಣೆಯ ಉಷ್ಣಾಂಶದಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಇಡಬಾರದು. ಫ್ರಿಡ್ಜ್ ನಲ್ಲಿ ಇಟ್ಟರೆ ಒಂದರಿಂದ ಮೂರು ದಿನಗಳವರೆಗೆ ಸಂಗ್ರಹಿಸಬಹುದು. ಆದರೆ ಚಹಾವನ್ನು ಮತ್ತೆ ಬಿಸಿ ಮಾಡುವುದರಿಂದ ಪೋಷಕಾಂಶಗಳು ನಾಶವಾಗುತ್ತವೆ. ಅಷ್ಟೇ ಅಲ್ಲ, ಆಮ್ಲೀಯತೆಯೂ ಹೆಚ್ಚಾಗುತ್ತದೆ. ಹೀಗಾಗಿ ಆದಷ್ಟು ಫ್ರೆಶ್ ಟೀನ ಕುಡಿಯಿರಿ.

ನೋಡಿರಿ

