ಸೆಂಚೂರಿಗಾಗಿ ಸ್ವಾರ್ಥಿಯಾದರಾ ವಿರಾಟ್ ಕೊಹ್ಲಿ?- SELFISH ಟ್ಯಾಗ್‌ಲೈನ್ ಕೊಹ್ಲಿಗೆ ಯಾಕೆ?

ಸೆಂಚೂರಿಗಾಗಿ ಸ್ವಾರ್ಥಿಯಾದರಾ ವಿರಾಟ್ ಕೊಹ್ಲಿ?-  SELFISH ಟ್ಯಾಗ್‌ಲೈನ್ ಕೊಹ್ಲಿಗೆ ಯಾಕೆ?

ಈ ಬಾರಿಯ ವರ್ಲ್ಡ್​​ಕಪ್​ ಟೂರ್ನಿ ಮಧ್ಯೆ ಅತಿಹೆಚ್ಚು ಕೇಳಿಬಂದಿರುವ ಒಂದು ಪದ ಅಂದರೆ SELFISH.. ಈ ಸೆಲ್ಫಿಶ್ ವರ್ಡ್ ರನ್ ಮೆಷಿನ್ ವಿರಾಟ್ ಕೊಹ್ಲಿ ಸುತ್ತ ಗಿರಕಿ ಹೊಡೆಯುತ್ತಿತ್ತು. ಈ ವಿಶ್ವಕಪ್​ನಲ್ಲಿ ಕೊಹ್ಲಿ ಒಟ್ಟು 4 ಸೆಂಚೂರಿ ಹೊಡೆದಿದ್ದಾರೆ. ಸಚಿನ್ ತೆಂಡೂಲ್ಕರ್​ ಹೆಸರಲ್ಲಿದ್ದ ವರ್ಲ್ಡ್​​ ರೆಕಾರ್ಡ್​ನ್ನ ಕೂಡ ಬ್ರೇಕ್ ಮಾಡಿದ್ದಾರೆ. ಕೊಹ್ಲಿ ಶತಕ ಹೊಡೆದ ಮ್ಯಾಚ್​ಗಳನ್ನೆಲ್ಲಾ ಭಾರತ ಗೆದ್ದಿದೆ ಕೂಡ. ಇಷ್ಟಾದ್ರೂ ವಿರಾಟ್ ಕೊಹ್ಲಿಯನ್ನ ಒಂದು ವರ್ಗ ಸೆಲ್ಫಿಶ್ ಅಂತಾ ಕರೆಯೋದ್ಯಾಕೆ? ರೆಕಾರ್ಡ್ ಮಾಡಿದ ಮಾತ್ರಕ್ಕೆ ಕೊಹ್ಲಿ ಸ್ವಾರ್ಥಿಯಾಗಿದ್ದು ಹೇಗೆ? ಸೆಂಚೂರಿ ಮಾಡೋ ವೇಳೆಗೆ ಅಥವಾ ದಾಖಲೆಗಳನ್ನ ಬ್ರೇಕ್ ಮಾಡೋವಾಗ ಪ್ಲೇಯರ್ಸ್​ಗಳ ಮೈಂಡ್​ಸೆಟ್ ಹೇಗಿರುತ್ತೆ? ಇಲ್ಲಿ ನಿಜವಾಗಿಯೂ ಆಟಗಾರರು ಸೆಲ್ಫಿಶ್ ಆಗ್ತಾರಾ? ಇಲ್ಲಾ ನಾವು ಅಂದುಕೊಳ್ಳೋದು ತಪ್ಪಾ? ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾ ವಿಶ್ವಕಪ್ ಗೆಲ್ಲಲು ಹಿಂದಿನ ಶಕ್ತಿಯೇ ರಿಕ್ಕಿಪಾಂಟಿಂಗ್ – ರಣತಂತ್ರಗಾರ ರಿಕ್ಕಿಯ ಮೈಂಡ್ಗೇಮ್ ಸಕ್ಸಸ್ ಆಗಿದ್ದು ಹೇಗೆ? 

ವರ್ಲ್ಡ್​ಕಪ್​ ಮ್ಯಾಚ್​​ನಲ್ಲಿ ಧರ್ಮಶಾಲಾದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಚೇಸ್ ಮಾಡುವಾಗ ಕೊಹ್ಲಿ ಆಡಿದ ರೀತಿ. ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸೆಂಚೂರಿ ಹೊಡೆದಾಗ. ನ್ಯೂಜಿಲ್ಯಾಂಡ್ ವಿರುದ್ಧ ಸೆಮಿಫೈನಲ್​​ನಲ್ಲಿ 50ನೇ ಶತಕ ಬಾರಿಸಿದಾಗ, ಹೀಗೆ ಈ ಬಾರಿಯ ವರ್ಲ್ಡ್​​ಕಪ್​​ನಲ್ಲಿ ಕೊಹ್ಲಿ ಸೆಂಚೂರಿ ಬಾರಿಸಿದಾಗಲೆಲ್ಲಾ ಕೆಲವರು ಸೆಲ್ಫಿಶ್ ಅಂತಾನೆ ಲೇಬಲ್ ಮಾಡುವ ಪ್ರಯತ್ನ ಮಾಡಿದ್ದರು. ಅದ್ರೆ ಇಲ್ಲಿ ಕೊಹ್ಲಿಯನ್ನ ಸೆಲ್ಫಿಶ್ ಎಂದು ಕರೆಯುವುದಕ್ಕೆ ಯಾವುದೇ ಅರ್ಥ ಇಲ್ಲ. ಚೇಸಿಂಗ್ ವೇಳೆ ಕೊಹ್ಲಿ ಸೆಂಚೂರಿ ಬಾರಿಸಿದಾಗ ಅತೀ ಹೆಚ್ಚು ಪಂದ್ಯಗಳನ್ನ ಟೀಂ ಇಂಡಿಯಾ ಗೆದ್ದಿದೆ. ಇದೇ ಕಾರಣಕ್ಕೆ ಕೊಹ್ಲಿಗೆ ಚೇಸ್ ಮಾಸ್ಟರ್ ಅನ್ನೋ ಹೆಸರು ಕೂಡ ಬಂದಿದೆ. ಆಸ್ಟ್ರೇಲಿಯಾ ವಿರುದ್ಧ ವರ್ಲ್ಡ್​​ಕಪ್​ ಫೈನಲ್​ನಲ್ಲಿ ಟಾಸ್​ ಗೆದ್ದರೆ ಭಾರತ ಕೂಡ ಚೇಸ್ ಮಾಡ್ತಿತ್ತೋ ಏನೊ. ಚೇಸಿಂಗ್ ಮೂಲಕ ಕೊಹ್ಲಿ ಮತ್ತೊಮ್ಮೆ ವರ್ಲ್ಡ್​ಕಪ್​​ನ್ನ ಕೂಡ ಗೆಲ್ಲಿಸಲು ಸಾಧ್ಯವಾಗುತ್ತಿತ್ತೋ ಏನೊ. 2011ರ ಫೈನಲ್​ನಲ್ಲೂ ಚೇಸಿಂಗ್​ ವೇಳೆ ಕೊಹ್ಲಿ ಕ್ರೂಶಿಯಲ್ ಇನ್ನಿಂಗ್ಸ್ ಆಡಿದ್ದರು. ಆದ್ರೆ ಈಗಿನ ವಿಚಾರ ಅದಲ್ಲ. ಕೊಹ್ಲಿ ಸೆಂಚೂರಿ ಹೊಡೆದಿದ್ದಕ್ಕೂ.. ಭಾರತ ವಿನ್ ಆಗಿದ್ದಕ್ಕೂ ಡೇಟಾಗಳನ್ನ ತೆಗೆದು ನೋಡಿದ್ರೆ ಸಾಕು ವಿರಾಟ್ ಕೊಹ್ಲಿ ಸೆಲ್ಫಿಶ್ ಪ್ಲೇಯರ್​ ಅಲ್ಲ, ಮ್ಯಾಚ್​​ ವಿನ್ನಿಂಗ್ ಕ್ರಿಕೆಟರ್ ಅನ್ನೋದು ಸಾಬೀತಾಗುತ್ತೆ. ಆದ್ರೂ ಕೊಹ್ಲಿಯನ್ನ ಸೆಲ್ಫಿಶ್ ಅಂತಾರೆ ಅಂದ್ರೆ ಇಲ್ಲಿ ಪ್ರಾಬ್ಲಂ ಇರೋದು ಮೈಂಡ್​ಸೆಟ್​ನಲ್ಲಿ. ಈ ಸೆಲ್ಫಿಶ್ ಸೆಲ್ಫಿಶ್ ಅಂತಾ ಶರಾ ಎಳಿಯೋರೆಲ್ಲಾ ತಮ್ಮ ಜೀವನದಲ್ಲಿ ಯಾವತ್ತೂ ತ್ಯಾಗಮಯಿಗಳಾಗಿರೋದಿಲ್ಲ. ಅದು ಬೇರೆ ಪ್ರಶ್ನೆ.. ಆ್ಯಕ್ಚುವಲಿ ಸೆಲ್ಫಿಶ್ ಅನ್ನೋ ಹಣೆಪಟ್ಟಿ ಅಂಟಿಕೊಂಡಿದ್ದೇ ಈ ವರ್ಲ್ಡ್​​ಕಪ್ ಸಂದರ್ಭದಲ್ಲಿ. ಅದಕ್ಕೆ ಕಾರಣ ಕೊಹ್ಲಿಗೆ ಸಚಿನ್ ಹೆಸರಲ್ಲಿದ್ದ ದಾಖಲೆಯನ್ನ ಬ್ರೇಕ್ ಅವಕಾಶ ಸಿಕ್ಕಿತ್ತು. 50ನೇ ಶತಕದ ಮೈಲ್​ಸ್ಟೋನ್ ರೀಚ್​ ಆಗೋಕೆ ವರ್ಲ್ಡ್​​ಕಪ್​ಗಿಂತ ಬೆಸ್ಟ್ ಸ್ಟೇಜ್​​ ಇನ್ನೊಂದಿಲ್ಲ. ಒಂದು ವೇಳೆ ವಿಶ್ವಕಪ್ ಗೆಲ್ತಿದ್ರೆ ಕೊಹ್ಲಿಯನ್ನ ಯಾವೊಬ್ಬನೂ ಕೂಡ ಸೆಲ್ಫಿಶ್ ಅನ್ನೋ ರೀತಿ ಬಿಂಬಿಸ್ತಾ ಇರಲಿಲ್ಲ. ಈ ಸೆಲ್ಫಿಶ್ ಅನ್ನೋ ಲೇಬಲ್​ ಕೊಹ್ಲಿಯನ್ನ ಈಗ ಅಂಟಿಕೊಂಡಿರಬಹುದು. ಆದ್ರೆ, ಇಂಥದ್ದೊಂದು ಆರೋಪಕ್ಕೆ ಒಳಗಾಗಿರೋ ಕ್ರಿಕೆಟರ್ ಕೇವಲ ಕೊಹ್ಲಿ ಮಾತ್ರವಲ್ಲ. ಈ ಹಿಂದೆ ಸಚಿನ್ ತೆಂಡೂಲ್ಕರ್​​ರನ್ನ ಕೂಡ ಸ್ವಾರ್ಥಕ್ಕಾಗಿ ಆಡಿದ್ರು. ಸೆಂಚೂರಿಗಾಗಿ ಆಡಿದ್ರು ಅಂತಾನೆ ದೂಷಿಸಲಾಗ್ತಿತ್ತು. ಆದ್ರೆ ಈ ಮಾತು ಕೇಳಿ ಬರ್ತಿದ್ದಿದ್ದು ಸಚಿನ್​ 90 ರನ್​ ಹೊಡೆದ ಮೇಲೆ ಮಾತ್ರ. 90 ರಿಂದ 100 ತಲುಪೋ ವೇಳೆ ಸಚಿನ್ ಹಲವು ಬಾಲ್​​ಗಳನ್ನ ವೇಸ್ಟ್ ಮಾಡ್ತಿದ್ರು. ಅಂದ್ರೆ ಎಲ್ಲಿ ಔಟಾಗ್ತೀನೋ ಅಂತಾ ಡಿಫೆನ್ಸ್ ಮೋಡ್​​ನಲ್ಲಿ ಬ್ಯಾಟಿಂಗ್ ಮಾಡ್ತಿದ್ರು. ಅದೆಷ್ಟೋ ಸಂದರ್ಭದಲ್ಲಿ ಸಚಿನ್​ ನರ್ವಸ್ 90ಗೆ ಔಟಾಗಿದ್ದೂ ಇದೆ. ಆಗೆಲ್ಲಾ ನರ್ವಸ್ 90 ಅನ್ನೋದೆ ಪೇಪರ್​ಗಳ ಹೆಡ್​​​ಲೈನ್ ಆಗಿರ್ತಿತ್ತು. ಸೆಂಚೂರಿ ಹೊಡೀಲೇಬೇಕು ಅನ್ನೋ ದೇಶದ ಜನರ ನಿರೀಕ್ಷೆಯ ಮೂಟೆ ಹೊತ್ತುಕೊಂಡೇ ಸಚಿನ್ ಕ್ರೀಸ್​ಗಿಳಿಯುತ್ತಿದ್ರು. ಸಚಿನ್ ಸೆಂಚೂರಿ ಹೊಡೆದ್ರಷ್ಟೇ ಸಮಾಧಾನ ಎಂಬಂತಾಗಿತ್ತು. ಹೀಗಾಗಿ ಸೆಂಚೂರಿ ಹೊಡೆಯೋ ಪ್ರೆಷರ್ ಸಚಿನ್ ಕೂಡ ಸಿಲುಕಿದ್ದು ಸುಳ್ಳಲ್ಲ. ಸೆಂಚೂರಿ ಹೊಡೆಯೋ ಸಂದರ್ಭದಲ್ಲಿ ಬಾಲ್ ತಿಂದಿದ್ದು ಕೂಡ ಸುಳ್ಳಲ್ಲ. ಈ ಬಾರಿ ವರ್ಲ್ಡ್​​ಕಪ್​​​ನಲ್ಲಿ ಕೆಲ ಮ್ಯಾಚ್​ಗಳಲ್ಲಿ ಕೊಹ್ಲಿ ಕೂಡ ಸೆಂಚೂರಿ ಹೊಡೀಲೇಬೇಕು ಅನ್ನೋ ಹಠದಲ್ಲೇ ಆಡಿದ್ರು. ಕೊಹ್ಲಿ ದಾಖಲೆಗಾಗಿ ಇಡೀ ದೇಶವೇ ಕಾಯ್ತಿತ್ತು. ಭಾರತ ಗೆಲ್ಲಬೇಕು ಅನ್ನೋದ್ರ ಜೊತೆಗೆ ಕೊಹ್ಲಿ ರೆಕಾರ್ಡ್​ಮಾಡಬೇಕು ಅನ್ನೋದೆ ಎಲ್ಲರ ಭಾವನೆಯಾಗಿತ್ತು. ನಾವು-ನೀವೆಲ್ಲಾ ಏನೇ ಹೇಳಿದ್ರೂ, ಒಬ್ಬ ಬ್ಯಾಟ್ಸ್​ಮನ್ 80ರ ಗಡಿ ದಾಟಿದ ಬಳಿಕ ಸೆಂಚೂರಿ ಹೊಡೀಬೇಕು ಅನ್ನೋದು ಆತನ ಮೈಂಡ್​ಗೆ ಬರೋದು ಸಹಜ. ಅದು ನ್ಯಾಚ್ಯುರಲ್. ಆ ಜಾಗದಲ್ಲಿ ನಾವ-ನೀವಿರ್ತಿದ್ರೂ ಅದೇ ರೀತಿ ಯೋಚನೆ ಮಾಡ್ತಿದ್ವಿ. ಯಾಕಂದ್ರೆ ಸೆಂಚೂರಿ ಹೊಡೆಯೋದು ಅಂದ್ರೆ ಬ್ಯಾಟ್ಸ್​​ಮನ್​ ಪಾಲಿಗೆ ಅತೀ ದೊಡ್ಡ ಅಚೀವ್​ಮೆಂಟ್ ಆಗಿರುತ್ತೆ. ಹೇಗೆ ಬೌಲರ್ಸ್​​ಗಳು ಐದು ವಿಕೆಟ್ ಸಿಕ್ಕಾಗ ಸಂಭ್ರಮಿಸ್ತಾರೋ..ಬೇಕಿದ್ರೆ ಈ ಬಾರಿ ಮೊಹಮ್ಮದ್ ಶಮಿಯನ್ನೇ ತೆಗೆದುಕೊಳ್ಳಿ. 5 ವಿಕೆಟ್​ ಪಡೆದಾಗಲೆಲ್ಲಾ ಶಮಿಯ ಸಂಭ್ರಮವೇ ಬೇರೆಯಾಗಿತ್ತು. ಶಮಿ 5 ಪಡೆದಿದ್ದನ್ನ ಇಡೀ ದೇಶವೇ ಎಂಜಾಯ್ ಮಾಡಿತ್ತು. 4 ವಿಕೆಟ್ ಗಳಿಸಿದಾಗ ಶಮಿಗೆ 5ನೇ ವಿಕೆಟ್ ಸಿಗಲಿ ಅಂತಾ ಅದೆಷ್ಟೋ ಮಂದಿ ಪ್ರೇ ಮಾಡಿದ್ರು. ಕ್ಯಾಪ್ಟನ್ ರೋಹಿತ್ ಶರ್ಮಾ ಅಂತೂ ಪದೇ ಪದೆ ಶಮಿಯ ಕೈಗೆ ಬಾಲ್ ಕೊಟ್ಟಿದ್ರು. ಎಲ್ಲಾ ಬೌಲರ್​ಗಳಿಗೂ ಒಂದೇ ಮ್ಯಾಚ್​​ನಲ್ಲಿ 5 ವಿಕೆಟ್ ತೆಗೆಯೋಕೆ ಸಾಧ್ಯವಾಗೋದಿಲ್ಲ. ಈ ಹಿಂದೆ ಅನಿಲ್​​ ಕುಂಬ್ಳೆ ಪಾಕಿಸ್ತಾನದ 9 ಬ್ಯಾಟ್ಸ್​​ಮನ್​ಗಳನ್ನ ಔಟ್ ಮಾಡಿದಾಗ ಇನ್ನೊಂದು ವಿಕೆಟ್ ತೆಗೆಯಲಿ ಅಂತಾ ಎಲ್ಲರೂ ಹಾತೊರೆದಿದ್ರು. ರೆಕಾರ್ಡ್ ಆಗುತ್ತೆ ಅನ್ನೋವಾಗ ಅಲ್ಲಿ ವೈಯಕ್ತಿಕ ಭಾವನೆ.. ಅಂದ್ರೆ ಸೆಲ್ಫಿಶ್ ಫೀಲಿಂಗ್​ ಯಾವನಿಗೇ ಆದ್ರೂ ಬರೋದು ಸಹಜ. ಅದು ಮಾನವ ಸಹಜ ಗುಣ..ಅದೇ ರೀತಿ 85, 90ರ ಗಡಿ ದಾಟಿದ ಬಳಿಕ ಬ್ಯಾಟ್ಸ್​ಮನ್​ಗೆ ಸೆಂಚೂರಿ ಹಡೀಬೇಕು ಅಂತಾ ಅನ್ನಿಸುತ್ತೆ. ಆತ ಔಟಾಗದಂತೆ ಸೇಫ್ ಗೇಮ್ ಆಡ್ತಾನೆ. ಇದು ಕೂಡ ಕಾಮನ್. ಆದ್ರೆ, ಇದ್ರಿಂದ ಮ್ಯಾಚ್​​ ಸೋಲುವಂತೆ ಆಗಬಾರದು. ಅದು ಕೂಡ ವರ್ಲ್ಡ್​​ಕಪ್​ನಂಥಾ ಟೂರ್ನಿಯಲ್ಲಿ ತಂಡದ ಗೆಲುವಿಗಿಂತ ತನ್ನ ಮೈಲ್​ಸ್ಟೋನ್​ಗೆ ಇಂಪಾರ್ಟೆನ್ಸ್ ಕೊಡೋಕೆ ಸಾಧ್ಯವೇ ಇಲ್ಲ. ಈ ಬಾರಿ ವರ್ಲ್ಡ್​ಕಪ್​​ನಲ್ಲಿ ವಿರಾಟ್ ಕೊಹ್ಲಿಯನ್ನ ಸೆಲ್ಫಿಶ್ ಎಂದವರು ಕೊಹ್ಲಿ ತಂಡದ ಗೆಲುವನ್ನ ಅಡ ಇಟ್ಟು ಸೆಂಚೂರಿ ಹೊಡೆದಿಲ್ಲ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕಿದೆ. ಕೊಹ್ಲಿ ಸೆಂಚೂರಿ ಹೊಡೆದಿದ್ರಿಂದಾಗಿ ಭಾರತ ಗೆದ್ದಿದೆಯೇ ಹೊರತು ಯಾವ ಪಂದ್ಯವನ್ನ ಕೂಡ ಸೋತಿಲ್ಲ. ಇನ್ನು ಫೈನಲ್​ ಮ್ಯಾಚ್​ನಲ್ಲಿ ವಿರಾಟ್ ಕೊಹ್ಲಿ 63 ಬಾಲ್​ಗಳಲ್ಲಿ 54 ರನ್ ಹೊಡೆದಿದ್ರೆ. ರೋಹಿತ್ ಶರ್ಮಾ ಔಟಾದ ಬಳಿಕ ಕಂಪ್ಲೀಟ್ ಪ್ರೆಷರ್ ಕೊಹ್ಲಿ ಮೇಲೆಯೇ ಇತ್ತು. ಆ ಟೈಮ್​​ನಲ್ಲಿ ಕೊಹ್ಲಿ ಹೆಚ್ಚು ಅಗ್ರೆಸ್ಸಿವ್ ಆಗಿ ಆಡುವ ಪೊಸೀಷನ್​​ನಲ್ಲೇ ಇರಲಿಲ್ಲ. 2011ರ ವರ್ಲ್ಡ್​​ಕಪ್​ ಫೈನಲ್​​ನಲ್ಲಿ ಗೌತಮ್ ಗಂಭೀರ್​ 97 ರನ್​ಗೆ ಔಟಾಗಿದ್ರು. ಅಂದು ಸೆಂಚೂರಿ ಹೊಡೆಯಲಿಲ್ವಲ್ಲಾ ಅನ್ನೋ ಬೇಸರ ಗಂಭೀರ್​ಗೆ ಇವತ್ತಿಗೂ ಇದೆ. ಯಾಕಂದ್ರೆ ವರ್ಲ್ಡ್​ಕಪ್​ ಫೈನಲ್​ಗೆ ಶತಕ ಬಾರಿಸ್ತಿದ್ರೆ ಅದ್ರ ಫೇಲಿಂಗೇ ಬೇರೆಯಾಗಿರುತ್ತೆ. ಹೀಗಾಗಿ ಸೆಂಚೂರಿಗಳ ದಾಖಲೆ ಬರೆದ ಮಾತ್ರಕ್ಕೆ ಸೆಲ್ಫಿಶ್ ಅಂತಾ ಲೇಬಲ್ ಮಾಡೋದು ತಪ್ಪಾಗುತ್ತೆ.  ​​

ಇನ್ನು ಕೊಹ್ಲಿಯನ್ನ ಸ್ವಾರ್ಥಿ ಅಂತಾ ಹೇಳೋರು ಇನ್ನೊಂದು ವಿಚಾರವನ್ನ ಅರ್ಥ ಮಾಡಿಕೊಳ್ಳಲೇಬೇಕು. ಮನುಷ್ಯನಿಗೆ ಯಾವತ್ತಿಗೂ ಸ್ಯಾಟಿಸ್​ಫ್ಯಾಕ್ಷನ್ ಅನ್ನೋದೆ ಇರೋದಿಲ್ಲ. ಯಾವುದೇ ವಿಚಾರವನ್ನ ತೆಗೆದುಕೊಳ್ಳಿ. ಯಾರನ್ನೇ ತೆಗೆದುಕೊಳ್ಳಿ. ಇನ್ನಷ್ಟು ಬೇಕು ಅನ್ನೋ ಧಾವಂತವೇ ಹೆಚ್ಚು. ಸಿಕ್ಕಿದ್ದರಲ್ಲಿ ತೃಪ್ತಿ ಪಟ್ಟುಕೊಳ್ಳುವ ಜಾಯಮಾನ ಇಲ್ವೇ ಇಲ್ಲ. ಇದು ಹ್ಯೂಮನ್ ಟೆಂಡೆನ್ಸಿ. ಇನ್ನು ಸ್ಪೋರ್ಟ್ಸ್​​ಪರ್ಸನ್​ಗಳಿಗಂತೂ ಅಚೀವ್​ಮೆಂಟ್ ಮಾಡಬೇಕು ಅನ್ನೋ ಹಠ ಎಲ್ಲರಿಗಿಂತ ಹೆಚ್ಚಾಗಿರುತ್ತೆ. ಅಂಥಾ ಕಠೋರ ಹಠ ಇದ್ರಷ್ಟೇ ವಂಡೇ ಕ್ರಿಕೆಟ್​​ನಲ್ಲಿ ವಿರಾಟ್ ಕೊಹ್ಲಿಯಂತೆ 50 ಸೆಂಚೂರಿ ಬಾರಿಸೋಕೆ ಸಾಧ್ಯ. ಸಚಿನ್​ ತೆಂಡೂಲ್ಕರ್ 100 ಇಂಟರ್​​ನ್ಯಾಷನಲ್ 100 ಹೊಡೆಯೋಕೆ ಸಾಧ್ಯವಾಯ್ತು. ಆ ಮೈಂಡ್​​ಸೆಟ್ ಇರೋ ಕಾರಣಕ್ಕೆ ಆಸ್ಟ್ರೇಲಿಯಾಗೆ 6 ಬಾರಿ ವರ್ಲ್ಡ್​​ಕಪ್ ಗೆಲ್ಲೋಕೆ ಸಾಧ್ಯವಾಯ್ತು. ಅಮೆರಿಕದ ಸ್ವಿಮ್ಮಿಂಗ್ ಚಾಂಪಿಯನ್ ಮೈಕೆಲ್​ ಫೆಲ್ಫ್ಸ್​ಗೆ 23 ಒಲಿಂಪಿಕ್ಸ್ ಗೋಲ್ಡ್ ಮೆಡಲ್ ಗೆಲ್ಲೋಕೆ ಆಯ್ತು.

ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು ಒಬ್ಬರು ಭಾರತೀಯನೊಬ್ಬನ ಜೊತೆಗೆ ಕೇಳ್ತಾರಂತೆ. ಯಾಕೆ ಆಸ್ಟ್ರೇಲಿಯಾ ಕ್ರಿಕೆಟ್ ಟೀಂ ಅಷ್ಟೊಂದು ವರ್ಲ್ಡ್​​ಕಪ್​ಗಳನ್ನ ಗೆಲ್ಲೋಕೆ ಸಾಧ್ಯವಾಗುತ್ತೆ. ಟೀಂ ಇಂಡಿಯಾಗೆ ಯಾಕೆ ಆಗೋದಿಲ್ಲ ಅಂತಾ. ಅದಕ್ಕೆ ಭಾರತೀಯ ಹೇಳ್ತಾನಂತೆ, ನಮ್ಮ ದೇಶದಲ್ಲಿ ಮಗ ಫ್ರೆಂಡ್ಸ್ ಜೊತೆ ಕ್ರಿಕೆಟ್ ಆಡಿ ಮನೆಗೆ ಬಂದಾಗ ನೀನು ಎಷ್ಟು ರನ್ ಹೊಡೆದಿ? ಎಷ್ಟು ವಿಕೆಟ್ ಪಡೆದಿ ಅಂತಷ್ಟೇ ಪೋಷಕರು ಕೇಳ್ತಾರೆ. ಆದ್ರೆ ಆಸ್ಟ್ರೇಲಿಯಾದ ಪೇರೆಂಟ್ಸ್ ಹಾಗಲ್ಲ, ನಿಮ್ಮ ಟೀಂ ಮ್ಯಾಚ್ ಗೆಲ್ತಾ ಅಂತಾ ಪ್ರಶ್ನಿಸ್ತಾರೆ. ಅದು ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್​​ಗೆ ಇರುವ ಡಿಫರೆನ್ಸ್ ಅನ್ನೋದು. ಈ ಮಾತು ನಿಜ.. ನಾವು ಟೀಂಗಿಂತ ಹೆಚ್ಚಾಗಿ ಇಂಡಿವಿಜ್ಯುವಲ್ ಪ್ಲೇಯರ್ಸ್​​ಗಳಿಗೆ ಹೆಚ್ಚು ಪ್ರಿಫರೆನ್ಸ್ ಕೊಡ್ತೀವಿ. ಆ ಒಬ್ಬ ಆಟಗಾರ ಆಡಿದ್ರಷ್ಟೇ  ಗೆಲ್ಲೋಕೆ ಸಾಧ್ಯ ಅಂತಾ ಬಿಂಬಿಸ್ತೀವಿ. ಇದು ಕೂಡ ತಪ್ಪೇ.. ಎನಿವೇ.. ವಿರಾಟ್ ಕೊಹ್ಲಿಯನ್ನ ಸೆಲ್ಫಿಶ್ ಅಂತಾ ಹೀಯಾಳಿಸಿರೋದು ಎಷ್ಟು ಸರಿ? ಅನ್ನೋದನ್ನು ಕರೆದವರೇ ಹೇಳಬೇಕು.

Sulekha