ಎಪಿಎಲ್‌ ಸೀಸನ್ 17 ರ ಆರೆಂಜ್‌ ಕ್ಯಾಪ್ ವಿರಾಟ್‌ ಕೊಹ್ಲಿ ಪಾಲಾಗುತ್ತಾ?

ಎಪಿಎಲ್‌ ಸೀಸನ್ 17 ರ ಆರೆಂಜ್‌ ಕ್ಯಾಪ್ ವಿರಾಟ್‌ ಕೊಹ್ಲಿ ಪಾಲಾಗುತ್ತಾ?

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ರ ಆರೆಂಜ್ ಕ್ಯಾಪ್ ವಿರಾಟ್ ಕೊಹ್ಲಿ ಪಾಲಾಗುವುದು ಬಹುತೇಕ ಖಚಿತವಾಗಿದೆ. ಏಕೆಂದರೆ ಆರೆಂಜ್ ಕ್ಯಾಪ್ ರೇಸ್​ನಲ್ಲಿದ್ದ ಬಹುತೇಕ ಆಟಗಾರರು ಈಗಾಗಲೇ ಐಪಿಎಲ್​ನಿಂದ ಹೊರಬಿದ್ದಿದ್ದಾರೆ. ಹೀಗಾಗಿ ಈ ಬಾರಿಯ ರನ್​ ಸರದಾರನ ಪಟ್ಟ ಕಿಂಗ್ ಕೊಹ್ಲಿಗೆ ಒಲಿಯಲಿದೆ.

ಇದನ್ನೂ ಓದಿ: ಮೋದಿ ತಂಗಿದ್ದ ಹೋಟೆಲ್ ಬಿಲ್ 80 ಲಕ್ಷ ಬಾಕಿ! – ಕಾನೂನು ಕ್ರಮದ ಎಚ್ಚರಿಕೆ ನೀಡಿದ ಹೋಟೆಲ್‌ ವ್ಯವಸ್ಥಾಪಕರು

ಆರೆಂಜ್ ಕ್ಯಾಪ್ ರೇಸ್​ನಲ್ಲಿ ವಿರಾಟ್ ಕೊಹ್ಲಿ, ರಿಯಾನ್ ಪರಾಗ್ ಹಾಗೂ ಟ್ರಾವಿಸ್ ಹೆಡ್ ನಡುವೆ ನೇರ ಪೈಪೋಟಿ ಇತ್ತು. ಆದರೆ ಎಸ್​ಆರ್​ಹೆಚ್​ ವಿರುದ್ಧದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸೋಲನುಭವಿಸಿ RRನ ರಿಯಾನ್ ಪರಾಗ್ ರೇಸ್​ನಿಂದ ಹೊರಬಿದ್ದಿದ್ದಾರೆ. ಹೈದರಾಬಾದ್ ತಂಡದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್   ಒಟ್ಟು 567 ರನ್ ಕಲೆಹಾಕಿದ್ದಾರೆ. ಇನ್ನು ಫೈನಲ್​ ಪಂದ್ಯದಲ್ಲಿ 175 ರನ್​ ಬಾರಿಸಿದರೆ ಮಾತ್ರ ಆರೆಂಜ್ ಕ್ಯಾಪ್​ ಅನ್ನು ಮುಡಿಗೇರಿಸಿಕೊಳ್ಳಬಹುದು. ಆದರೆ ಇದು ಕಷ್ಟಸಾಧ್ಯ.

ಐಪಿಎಲ್‌ನ 17 ಸೀಸನ್‌ಗಳನ್ನು ಆಡಿರುವ ಬೆಂಗಳೂರು ತಂಡ ಮೂರು ಬಾರಿ ಫೈನಲ್ ಪ್ರವೇಶಿಸಿದೆ. ಆದರೆ ಒಮ್ಮೆಯೂ ಪ್ರಶಸ್ತಿ ಗೆಲ್ಲಲು ತಂಡಕ್ಕೆ ಸಾಧ್ಯವಾಗಿಲ್ಲ. ಅಚ್ಚರಿ ಅಂದ್ರೆ  IPL ಪ್ಲೇಆಫ್ ನಲ್ಲಿ ಬೆಂಗಳೂರು ತಂಡವನ್ನು ಮಣಿಸಿದ ಯಾವುದೇ ತಂಡವು ಆ ಋತುವಿನಲ್ಲಿ IPL ಟ್ರೋಫಿಯನ್ನು ಗೆದ್ದೇ ಇಲ್ಲ. ಇದುವರೆಗಿನ ಐಪಿಎಲ್ ಇತಿಹಾಸದಲ್ಲಿ ಒಂದಲ್ಲ ಎರಡಲ್ಲ, 5 ಬಾರಿ ಕ್ವಾಲಿಫೈಯರ್ ಅಥವಾ ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ ಸೋಲಿಸಿರುವ ತಂಡ ಫೈನಲ್​ನಲ್ಲಿ ಗೆದ್ದಿಲ್ಲ. 2024ರ ಐಪಿಎಲ್​ನಲ್ಲೂ ಎಲಿಮಿನೇಟರ್​ನಲ್ಲಿ ರಾಜಸ್ಥಾನ್ ರಾಯಲ್ಸ್ 4 ವಿಕೆಟ್​ಗಳಿಂದ ಬೆಂಗಳೂರು ವಿರುದ್ಧ ಗೆದ್ದಿತ್ತು. ಇದೀಗ ಕ್ವಾಲಿಫೈಯರ್​ 2 ರಲ್ಲಿ ರಾಜಸ್ಥಾನ್ ರಾಯಲ್ಸ್ ಸನ್​ರೈಸರ್ಸ್ ವಿರುದ್ಧ ಸೋಲು ಕಂಡಿದೆ. ಪ್ಲೇ ಆಫ್​ನಲ್ಲಿ ಆರ್​ಸಿಬಿ ಮಣಿಸಿದ ಯಾವುದೇ ತಂಡ ಟ್ರೋಫಿ ಗೆಲ್ಲದ ಸ್ಟ್ರೀಕ್ ಈ ವರ್ಷವೂ ಮುಂದುವರಿದಿದೆ.

Shwetha M