ಹುಲಿ ಉಗುರು ಅಷ್ಟೊಂದು ಪವರ್ ಫುಲ್ ಇದ್ಯಾ? – ಹುಲಿ ಉಗುರು ಧರಿಸುವುದರ ಹಿಂದಿದೆ ಈ ಕಾರಣ!
ರಾಜ್ಯದಲ್ಲೀಗ ಯಾರ ಬಾಯಲ್ಲಿ ಕೇಳಿದ್ರೂ ಹುಲಿ ಉಗುರಿನದ್ದೇ ಮಾತು. ಪ್ರಾಣಿಗಳ ಅವಶೇಷಗಳಿಗೆ ಸಾವಿರಾರು ರೂಪಾಯಿ ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಪುರಾತನ ಕಾಲದಿಂದಲೂ ಪ್ರಾಣಿಗಳ ಅವಶೇಷಗಳಿಗೆ ಯಾಕಿಷ್ಟು ಬೇಡಿಕೆ ಇದೆ? ಹಾಗಿದ್ರೆ ಹುಲಿ ಉಗುರು ಅಷ್ಟು ಪವರ್ಫುಲ್ ಇದೆಯಾ..? ಎನ್ನುವ ಪ್ರಶ್ನೆ ಹಲವರಿಗೆ.
ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅರೆಸ್ಟ್ ಆದ್ಮೇಲೆ ಸಾಲು ಸಾಲು ಸೆಲೆಬ್ರಿಟಿಗಳ ಫೋಟೋಗಳು ವೈರಲ್ ಆಗಿವೆ. ದರ್ಶನ್, ಜಗ್ಗೇಶ್, ನಿಖಿಲ್ ಕುಮಾರ್ಸ್ವಾಮಿ, ರಾಕ್ಲೈನ್ ವೆಂಕಟೇಶ್ ಸೇರಿದಂತೆ ರಾಜಕಾರಣಿಗಳು ಮಕ್ಕಳು ಹುಲಿ ಉಗುರು ಧರಿಸಿರುವ ಆರೋಪವಿದೆ. ಹಾಗಾದ್ರೆ ಹುಲಿ ಉಗುರು ಅಷ್ಟೊಂದು ಪವರ್ಫುಲ್ಲಾ ಅಂತಾ ನಿಮಗೆ ಅನ್ನಿಸಬಹುದು. ಆದ್ರೆ ಹಿಂದಿನ ಕಾಲದಲ್ಲಿ ಇದು ಪ್ರತಿಷ್ಠೆಯ ಸಂಕೇತವಾಗಿತ್ತು. ರಾಜರು ಕಾಡಿನ ಪ್ರಾಣಿಗಳನ್ನು ಬೇಟೆಯಾಡಿದ ಪರಾಕ್ರಮಕ್ಕಾಗಿ ಹುಲಿ ಉಗುರುಗಳನ್ನ ಧರಿಸುತ್ತಿದ್ದರು. ವ್ಯಾಘ್ರ ಉಗುರನ್ನು ಪದಕವನ್ನಾಗಿ ಧರಿಸುವುದರಿಂದ ಅದೃಷ್ಟ ಮತ್ತು ರಕ್ಷಣೆ ನೀಡುತ್ತದೆ ಅನ್ನೋದು ಕೆಲವರ ನಂಬಿಕೆ.
ಇದನ್ನೂ ಓದಿ: ಭೂತದ ಜೊತೆಯಲ್ಲೇ ಬೆಳೆದು ದೊಡ್ಡವಳಾದ ಯುವತಿ – ಮನೆಯಲ್ಲಿ ಪಿಶಾಚಿ ಜೊತೆ ಸೇರಿ ಲಕ್ಷ ಲಕ್ಷ ಸಂಪಾದನೆ..!
ಇನ್ನು ಹುಲಿ ಉಗುರು ಮಾಂತ್ರಿಕ ಗುಣಗಳನ್ನು, ನಕಾರಾತ್ಮಕ ಶಕ್ತಿಗಳು ಹತ್ತಿರ ಸುಳಿಯದಂತೆ ಕಾಪಾಡುತ್ತದೆ. ಕಷ್ಟದ ಸಮಯದಲ್ಲಿ ಧೈರ್ಯ, ಶಕ್ತಿ ದೊರೆಯುತ್ತದೆ, ರಾಜಯೋಗ ಬರುತ್ತದೆ. ರೋಗ ಅಥವಾ ಅನಾರೋಗ್ಯದಿಂದ ದೂರವಿರಲು ಸಹಾಯ ಮಾಡುತ್ತದೆ ಎಂದು ಭಾವಿಸಲಾಗಿತ್ತು. ಆದ್ರೆ ಕಾಡುಪ್ರಾಣಿಯನ್ನ ಕೊಂದು ಅದರ ಉಗುರು ಧರಿಸೋದು ಅದ್ಯಾವ ಸೀಮೆ ಅದೃಷ್ಠ ಅನ್ನೋದು ದೇವರಿಗೇ ಗೊತ್ತು.