ನಿಮಗೆಷ್ಟು ಕೋಪ ಬರುತ್ತೆ? – ಕೋಪಕ್ಕೂ ಆರೋಗ್ಯಕ್ಕೂ ಸಂಬಂಧ ಇದ್ಯಾ?

ನಿಮಗೆಷ್ಟು ಕೋಪ ಬರುತ್ತೆ? – ಕೋಪಕ್ಕೂ ಆರೋಗ್ಯಕ್ಕೂ ಸಂಬಂಧ ಇದ್ಯಾ?

ಮನುಷ್ಯರಿಂದ ಹಿಡಿದು ಪ್ರಾಣಿಗಳಿಗೂ ಕೋಪ ಬರೋದು ಸಾಮಾನ್ಯ ಗುಣ. ಕೆಲವ್ರಿಗಂತೂ ಮೂಗಿನ‌ ಮೇಲೆಯೇ ಕೋಪ ಇದೆ ಅಂತ ಹೇಳ್ತಿರುತ್ತೇವೆ.  ಕ್ಷಣದಲ್ಲಿ ಕೋಪಗೊಳ್ಳುವುದು ಸುಲಭ. ಆದರೆ, ಮುಂಗೋಪಿಗಳು ಕೂಡ ನಂತರ ತಮ್ಮ ಕೋಪಕ್ಕೆ ವಿಷಾದಿಸುತ್ತಾರೆ.  ಆದರೆ ಕೋಪವನ್ನು ಸಾಮಾನ್ಯ ಎಂದು ನಿರ್ಲಕ್ಷ್ಯ ಮಾಡಿದ್ರೆ ನಿಮಗೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನತ್ತಾರೆ ಆರೋಗ್ಯ ತಜ್ಞರು.

ಇದನ್ನೂ ಓದಿ:ಇದು ವಾಷಿಂಗ್ ಮೆಷಿನ್ ಅಲ್ಲ.. ಕೋಳಿ ಗೂಡು..! – ಡೋರ್‌ ಓಪನ್‌ ಮಾಡಿದ್ರೆ ಬರುತ್ತೆ ಕೋಳಿಗಳು!

ಪದೇ ಪದೆ ಕೋಪ ಮಾಡಿಕೊಳ್ಳುವವರಲ್ಲಿ  ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ  ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತೆ. ಕೋಪವು ವ್ಯಕ್ತಿಯ ಮಾನಸಿಕ, ದೈಹಿಕ ಮತ್ತು ಸಾಮಾಜಿಕ ಜೀವನದ ಮೇಲೆ  ಗಂಭೀರ  ಪರಣಾಮ ಬೀರುತ್ತೆ. ಇನ್ನು ಅತಿಯಾಗದ ಕೋಪದಿಂದ ಹಾರ್ಮೋನ್ ಸಮಸ್ಯೆಗಳೂ ಕಾಣಿಸಿಕೊಳ್ಳೋ ಸಾಧ್ಯತೆ ಇರುತೆ.

ಅತಿಯಾಗಿ ಕೋಪಗೊಳ್ಳುವ ವ್ಯಕ್ತಿಗಳ ಮೆದುಳಿನಲ್ಲಿರುವ ಸೂಕ್ಷ್ಮ ನರಗಳನ್ನು ಸಂಕುಚಿತಗೊಳಿಸುವ ಅಪಾಯವನ್ನು ಕೋಪ ಉಂಟುಮಾಡುತ್ತದೆ. ಇಷ್ಟೇ ಅಲ್ಲ ಕೋಪ ಜಾಸ್ತಿ ಮಾಡ್ಕೊಂಡರೆ ದಾಎಹದಲ್ಲಿ ರೋಗನಿರೋಧಕ ಶಕ್ತಿ ಸಹ ಕಡಿಮೆಯಾಗುತ್ತದೆ ಎಂದು ಅಧ್ಯಯನದ ವರದಿ ಹೇಳುತ್ತಿದೆ. ಇನ್ನು  ಕೋಪದಿಂದಾಗಿ ಅಧಿಕ ರಕ್ತದೊತ್ತಡ, ತಲೆನೋವು ಮತ್ತು ನಿದ್ರೆಯ ಕೊರತೆಯಂತಹ ಸಮಸ್ಯೆಗಳು ಸರ್ವೆ ಸಾಮಾನ್ಯವಾಗಿದೆ. ಆದರೆ ಕೋಪದಿಂದ ಎದುರಾಗುವ ಮಾನಸಿಕ ಸಮಸ್ಯೆಗಳು ಜನರ ನಡುವಿನ ಸಂಬಂಧಗಳ ಮೇಲೂ ಪರಿಣಾಮ ಬೀರುತ್ತದೆ.

ನಾವು ಕಾರಣವಿಲ್ಲದೆ ಇನ್ನೊಬ್ಬರ ಮೇಲೆ ಕೋಪ ಮಾಡ್ಕೊಂಡ್ರೆ, ಅವರಿಗೆ ನಮ್ಮ ಬಗ್ಗೆ ಕೆಟ್ಟ ಭಾವನೆ ಮೂಡುತ್ತೆ. ಇದ್ರಿಂದಾಗಿ ನಮ್ಮ ವ್ಯಕ್ತಿತ್ವ ಮೇಲೆ ಕಪ್ಪು ಚುಕ್ಕೆ ಬೀಳುತ್ತೆ. ಇದು ಮತ್ತಷ್ಟು ಮಾನಸಿಕ ತೊಂದರೆಗಳಿಗೆ ಕಾರಣ ಆಗಬಹುದು. ಆದ್ದರಿಂದ ಕೋಪವನ್ನು ಹತೋಟಿಯಲ್ಲಿಟ್ಟುಕೊಂಡರೆ ಆರೋಗ್ಯದ ಜೊತೆಗೆ ಮನಸ್ಸು ಕೂಡ ಶಾಂತವಾಗಿರುತ್ತೆ. ಅದಕ್ಕೆ ಕೋಪ‌ ಮಾಡದೆ ಖುಷಿಯಾಗಿರಿ, ನಗ್ತಾ ಇರಿ..‌ ಹ್ಯಾಪಿಯಾಗಿರಿ. ಯಾಕಂದರೆ ಕೋಪಕ್ಕೆ ನಮ್ಮ ಸುತ್ತಲಿರುವ ಜನರನ್ನು ದೂರ ಮಾಡುವ ಶಕ್ತಿಯಿದ್ದರೆ ನಗುವಿಗೆ ದೂರವಾದವರನ್ನೂ ಹತ್ತಿರವಾಗಿಸುವ ಶಕ್ತಿಯಿದೆ.

Shwetha M