ಟೆಸ್ಟ್ ನಲ್ಲಿ ಸದ್ದೇ ಮಾಡುತ್ತಿಲ್ಲ ರೋಹಿತ್ ಶರ್ಮಾ ಬ್ಯಾಟ್ – ಸಿಡ್ನಿ ಪಂದ್ಯವೇ ಹಿಟ್‌ಮ್ಯಾನ್ ಬದುಕಿನ ಕೊನೇ ಟೆಸ್ಟ್ ಮ್ಯಾಚ್?
ಸಿಡ್ನಿ ಪಂದ್ಯದ ಬಳಿಕ ಟೆಸ್ಟ್ ಕ್ರಿಕೆಟ್ ಗೆ ರೋಹಿತ್ ವಿದಾಯ?

ಟೆಸ್ಟ್ ನಲ್ಲಿ ಸದ್ದೇ ಮಾಡುತ್ತಿಲ್ಲ ರೋಹಿತ್ ಶರ್ಮಾ ಬ್ಯಾಟ್ – ಸಿಡ್ನಿ ಪಂದ್ಯವೇ ಹಿಟ್‌ಮ್ಯಾನ್ ಬದುಕಿನ ಕೊನೇ ಟೆಸ್ಟ್ ಮ್ಯಾಚ್?ಸಿಡ್ನಿ ಪಂದ್ಯದ ಬಳಿಕ ಟೆಸ್ಟ್ ಕ್ರಿಕೆಟ್ ಗೆ ರೋಹಿತ್ ವಿದಾಯ?

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನ ಸೋತ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಸಿಡ್ನಿ ಪಂದ್ಯವೇ ಹಿಟ್​ಮ್ಯಾನ್ ಬದುಕಿನ ಕೊನೇ ಟೆಸ್ಟ್ ಮ್ಯಾಚ್ ಆಗುವ ಎಲ್ಲಾ ಸಾಧ್ಯತೆಯೂ ಇದೆ. ಟಿ-20 ಫಾರ್ಮೆಟ್​ಗೆ ಸಿಕ್ಕ ಗೌರವಪೂರ್ವಕ ವಿದಾಯ ಟೆಸ್ಟ್ ಕ್ರಿಕೆಟ್​ಗೆ ಸಿಗಲ್ವಾ? ಸಚಿನ್ ಬಳಿಕ ಅತ್ಯಂತ ಕಳಪೆ ನಾಯಕನ ಪಟ್ಟ ರೋಹಿತ್​ ಪಾಲಾಗಿದ್ದೇಗೆ? ಆಸ್ಟ್ರೇಲಿಯಾ ಸರಣಿ ಬಳಿಕ ಭಾರತದ ಯಾವೆಲ್ಲಾ ನಾಯಕರು ವಿದಾಯ ಘೋಷಿಸಿದ್ರು..? ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಭಾರತದ ಸೋಲಿಗೆ ಮಾಜಿ ಕ್ರಿಕೆಟಿಗರ ಅಸಮಾಧಾನ – ಮಾಡಿದ ತಪ್ಪನ್ನ ಮಾಡುತ್ತಾ ಹೋದರೆ ಹೇಗೆ ಎಂದು ಪ್ರಶ್ನಿಸಿದ ಮಾಜಿ ಆಟಗಾರರು

2023ರ ಏಕದಿನ ವಿಶ್ವಕಪ್​ನಲ್ಲಿ ಫೈನಲ್.. 2024ರ ಟಿ-20 ವಿಶ್ವಕಪ್​ನಲ್ಲಿ ಚಾಂಪಿಯನ್.. ಈ ಎರಡೂ ಮಹತ್ವದ ಐಸಿಸಿ ಟೂರ್ನಿಗಳಲ್ಲಿ ಟೀಂ ಇಂಡಿಯಾವನ್ನ ಸೋಲಿಲ್ಲದ ಸರದಾರನಾಗಿ ಮುನ್ನಡೆಸಿದ ನಾಯಕ ಹಿಟ್​ಮ್ಯಾನ್ ರೋಹಿತ್ ಶರ್ಮಾ. ರೋಹಿತ್ ಕ್ಯಾಪ್ಟನ್ಸಿಗೆ ಇಡೀ ಕ್ರಿಕೆಟ್ ಜಗತ್ತೇ ಬಹುಪರಾಕ್ ಎಂದಿತ್ತು. ಈಗ ಅದೇ ಫ್ಯಾನ್ಸ್ ಕ್ಯಾಪ್ಟನ್ಸಿಯೂ ಬೇಡ, ತಂಡಕ್ಕೆ ನಿಮ್ಮ ಅಗತ್ಯವೂ ಇಲ್ಲ ದಯವಿಟ್ಟು ನಿವೃತ್ತಿ ತಗೊಳ್ಳಿ ಅಂತಿದ್ದಾರೆ. ಸದ್ದು ಮಾಡದ ಬ್ಯಾಟ್, ಗೆಲ್ಲದ ಟೀಮ್​ನಿಂದ ರೋಹಿತ್ ಕರಿಯರ್ ಮುಕ್ತಾಯದ ಹಂತಕ್ಕೆ ಬಂದಿದೆ. ಬಿಸಿಸಿಐ ಮ್ಯಾನೇಜ್​ಮೆಂಟ್ ಕೂಡ ನಾಯಕನ ವಿದಾಯಕ್ಕೆ ವೇದಿಕೆ ಸಿದ್ಧ ಮಾಡಿಕೊಳ್ತಿದೆ.

ಮೊದ್ಲೆಲ್ಲಾ ರೋಹಿತ್ ಶರ್ಮಾ ಬ್ಯಾಟಿಂಗ್ ಅಂದ್ರೆ ಟೀಂ ಇಂಡಿಯಾ ಫ್ಯಾನ್ಸ್ ಎಂಜಾಯ್ ಮಾಡ್ಕೊಂಡು ನೋಡ್ತಿದ್ರು. ರೋಹಿತ್ ಎಷ್ಟು ಹೊತ್ತು ಕ್ರೀಸ್​ನಲ್ಲಿ ಇರ್ತಾರೋ ಅಷ್ಟು ಹೊತ್ತೂ ಸಿಕ್ಸ್, ಫೋರ್ಸ್ ಇರ್ತಿತ್ತು. ಟಿ-20 ವಿಶ್ವಕಪ್​ನಲ್ಲೂ ಕೊನೇ ಪಂದ್ಯದವರೆಗೂ ಭಾರತದ ಪರ ಸ್ಟೇಬಲ್ ಆಗಿ ಆಡಿದ್ದು ರೋಹಿತ್ ಮಾತ್ರವೇ. ಬಟ್ ಟಿ-20 ಫಾರ್ಮೆಟ್​ಗೆ ವಿದಾಯ ಹೇಳಿದ ಬಳಿಕ ರೋಹಿತ್ ಬ್ಯಾಟ್ ಕಂಪ್ಲೀಟ್ ಸೈಲೆಂಟ್ ಆಗಿದೆ. ಆಟಗಾರನಾಗಿ, ಕ್ಯಾಪ್ಟನ್ ಆಗಿ ಸತತ ವೈಫಲ್ಯ ಅನುಭವಿಸ್ತಿದ್ದಾರೆ. ಲಂಕಾ ವಿರುದ್ಧ ಏಕದಿನ ಸರಣಿ ಸೋಲು, ನ್ಯೂಜಿಲೆಂಜ್ ವಿರುದ್ಧ ವೈಟ್ ವಾಷ್.. ಇದೀಗ ಆಸಿಸ್ ನೆಲದಲ್ಲೂ ಸೋಲು. ಹೀಗೆ ಸಾಲು ಸಾಲು ಸೋಲುಗಳೇ ಎದುರಾಗ್ತಿವೆ.

ಸಿಡ್ನಿ ಪಂದ್ಯದ ಬಳಿಕ ಟೆಸ್ಟ್ ಕ್ರಿಕೆಟ್ ಗೆ ರೋಹಿತ್ ವಿದಾಯ?

ಆಸ್ಟ್ರೇಲಿಯಾದಲ್ಲಿ ತಮ್ಮ ನಾಯಕತ್ವದಲ್ಲಿ ಭಾರತ ಪದೇಪದೆ ಸೋತ ಬೆನ್ನಲ್ಲೇ ರೋಹಿತ್ ವಿರುದ್ಧ ಟೀಕೆಗಳು ಹೆಚ್ಚಾಗ್ತಿವೆ. ಹೀಗಾಗಿ ರೋಹಿತ್ ಶರ್ಮಾ ವಿದಾಯಕ್ಕೆ ರೆಡಿಯಾಗಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಿದೆ. 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಲು ಭಾರತ ವಿಫಲವಾದರೆ ಸಿಡ್ನಿಯಲ್ಲಿ ನಡೆಯಲಿರುವ 2024-25 ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಟೆಸ್ಟ್ ನಂತರ ಅವರು ನಿವೃತ್ತಿ ಘೋಷಿಸುವ ಸಾಧ್ಯೆತ ಇದೆ ಎನ್ನಲಾಗಿದೆ. ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ರೋಹಿತ್ ಗೆ ತಂಡದಲ್ಲಿ ಸ್ಥಾನದ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಚಿಂತಿಸುತ್ತಿದೆ ಎಂದು ವರದಿ ಮಾಡಿದೆ.

suddiyaana

Leave a Reply

Your email address will not be published. Required fields are marked *