ಫೋನ್ ನಲ್ಲಿ ನೆಟ್ ವರ್ಕ್ ತುಂಬಾ ಸ್ಲೋ ಇದ್ಯಾ? – ಮೊಬೈಲ್‌ನಲ್ಲಿ ಈ ಸೆಟ್ಟಿಂಗ್ ಚೇಂಜ್ ಮಾಡಿ!
ಇದು ಸೋಶಿಯಲ್ ಮೀಡಿಯಾ ಜಮಾನ.. ಮೊಬೈಲ್ ಸ್ಕ್ರೋಲ್ ಮಾಡ್ತಾ ಇರ್ಬೇಕು. ಆದ್ರೆ ನೆಟ್‍ವರ್ಕ್ ಸರಿಯಾಗಿ ಸಿಗ್ತಾ ಇಲ್ಲ ಅಂದ್ರೆ ತಲೆ ಕೆಟ್ಟು ಹೋಗುತ್ತೆ. ಹೀಗಾಗಿ ನಿಮ್ಮ ಫೋನ್ ನಲ್ಲಿ ಕೆಲವೊಂದು ಸೆಟ್ಟಿಂಗ್ ಸರಿ ಮಾಡಿಕೊಳ್ಳೋದು ಉತ್ತಮ.
ನಿಮ್ಮ ಫೋನ್‍ನಲ್ಲಿ Settings > Network & Internet > Mobile networkಗೆ ಹೋಗಿ. ಇಲ್ಲಿ ನಿಮ್ಮ ನೆಟ್‌ವರ್ಕ್ ಮೋಡ್ ಅನ್ನು 4G ಅಥವಾ 5Gಗೆ ಹೊಂದಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ನೆಟ್‌ವರ್ಕ್ ಮೋಡ್ ಅನ್ನು 2G ಅಥವಾ 3Gಗೆ ಹೊಂದಿಸಿದ್ದರೆ, ಅದನ್ನು 4G ಅಥವಾ 5Gಗೆ ಬದಲಾಯಿಸುವುದರಿಂದ ನಿಮ್ಮ ಇಂಟರ್ನೆಟ್ ವೇಗವನ್ನು ಸುಧಾರಿಸಬಹುದು.
ಇದನ್ನೂ ಓದಿ: ಈ ತಪ್ಪುಗಳಿಂದಲೇ ನಿಮ್ಮ ಸ್ಮಾರ್ಟ್ ಫೋನ್ ಗೆ ವೈರಸ್ ಅಟ್ಯಾಕ್ ಆಗ್ಬೋದು!
ಇನ್ನು ಫೋನ್‍ನ ಸರಿಯಾಗಿ ವರ್ಕ್ ಆಗಲು ಸಾಫ್ಟ್‌ವೇರ್ ಅಪ್‍ಡೇಟ್ ಮಾಡುವುದು ಮುಖ್ಯ. ಈ ಅಪ್‍ಡೇಟ್‍ಗಳು ಸಾಮಾನ್ಯವಾಗಿ ಫೋನ್‍ನ ಕಾರ್ಯಕ್ಷಮತೆಯನ್ನು ಸುಧಾರಿಸಲು ಪರಿಹಾರ ನೀಡುತ್ತದೆ. ಆದ್ದರಿಂದ ಇದು ನಿಮ್ಮ ಮೊಬೈಲ್ ಡೇಟಾ ವೇಗವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ನಿಮ್ಮ ಫೋನ್‌ನಿಂದ ಅನಗತ್ಯ ಫೈಲ್‌ಗಳು ಮತ್ತು ಅಪ್ಲಿಕೇಶನ್ ಇದ್ರೆ ತೆಗೆದು ಹಾಕಿ. ಇದು ನಿಮ್ಮ ಇಂಟರ್ನೆಟ್ ವೇಗವನ್ನು ಸುಧಾರಿಸಬಹುದು.
ಇನ್ನು ಫೋನ್ ಸ್ಲೋ ಆದ್ರೆ, ನೆಟ್ ವರ್ಕ್ ಸರಿಯಾಗಿ ಸಿಗ್ತಿಲ್ಲ ಅಂದ್ರೆ ಫೋನ್ Restart ಮಾಡಿದ್ರೆ. ಆಗ ಸಮಸ್ಯೆ ಪರಿಹಾರ ಆಗುತ್ತೆ. ನೀವು ಈ ಎಲ್ಲಾ ಹಂತಗಳನ್ನು ಪ್ರಯತ್ನಿಸಿದರೆ ಫೋನ್ ವೇಗವು ಸುಧಾರಿಸುತ್ತದೆ.