ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಮತ್ತೊಂದು ಪ್ಲಾನ್ – ಸುರಂಗ ನಿರ್ಮಿಸಲು ಸಜ್ಜಾಗುತ್ತಿದೆ ಸರ್ಕಾರ?

ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಮತ್ತೊಂದು ಪ್ಲಾನ್ – ಸುರಂಗ ನಿರ್ಮಿಸಲು ಸಜ್ಜಾಗುತ್ತಿದೆ ಸರ್ಕಾರ?

ಬೆಂಗಳೂರಿನ ಜನತೆಗೆ ಟ್ರಾಫಿಕ್ ತಲೆನೋವು ತಪ್ಪಿದ್ದಲ್ಲ. ಟ್ರಾಫಿಕ್ ಕಂಟ್ರೋಲ್ ಮಾಡಲು ಏನೇ ಹರಸಾಹಸ ಮಾಡಿದರೂ ಕೂಡಾ ಸಮಸ್ಯೆ ಪರಿಹಾರವಾಗಿದ್ದು ಮಾತ್ರ ಇಲ್ಲ. ಇದೀಗ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಪರಿಹರಿಸಲು ಮತ್ತೊಂದು ಹೊಸ ಯೋಜನೆಯೊಂದು ಸಿದ್ಧವಾಗುತ್ತಿದೆ. ಟ್ರಾಫಿಕ್ ಸಮಸ್ಯೆ ಮುಕ್ತಿಗೆ ಸುರಂಗ‌ ರಸ್ತೆ ನಿರ್ಮಿಸಲು ಡಿಸಿಎಂ ಡಿಕೆ ಶಿವಕುಮಾರ್ ಪ್ಲಾನ್ ಮಾಡಿದ್ದಾರೆ. ಈ ಸಂಬಂಧ ಬೆಂಗಳೂರು ಉಸ್ತುವಾರಿ ಡಿಸಿಎಂ ಡಿಕೆ ಶಿವಕುಮಾರ್, ಸುರಂಗ ರಸ್ತೆ ಸಲಹಾ ಸಂಸ್ಥೆ ಜೊತೆಗೆ ಸಭೆ ನಡೆಸಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಗೆ ಮುಹೂರ್ತ ಫಿಕ್ಸ್‌? – ಸರ್ವರ್ ಸಮಸ್ಯೆಗೆ ಸರ್ಕಾರದಿಂದ ಹೊಸ ಪ್ಲಾನ್‌!

ಸುರಂಗಗಳನ್ನು ನಿರ್ಮಿಸುವ ಮೂಲಕ ಬೆಂಗಳೂರು ನಗರದ ಹೊರ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಕುರಿತು ಯೋಜನೆ ರೂಪಿಸಲಾಗುತ್ತಿದೆ. 50 ಕಿಲೋ ಮೀಟರ್ ದೂರದ ಸುರಂಗ ನಿರ್ಮಿಸುವಲ್ಲಿ ಖಾಸಗಿ ಕಂಪನಿಗಳ ಸಹಯೋಗವನ್ನು ಒಳಗೊಂಡಂತೆ ಆರಂಭಿಕ ಹಂತಕ್ಕೆ 22 ಸಾವಿರ ಕೋಟಿಗಳನ್ನು ವಿನಿಯೋಗಿಸಲು ಯೋಜಿಸಲಾಗಿದೆ ಫ್ಲೈಓವರ್ಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೇ ಫ್ಲೈಓವರ್ ನಿರ್ಮಾಣಕ್ಕೆ ಹೆಚ್ಚಿನ ಭೂಮಿಯ ಅಗತ್ಯವಿದೆ. ಆದರೆ ಸುರಂಗಗಳ ನಿರ್ಮಾಣದಿಂದ ಸಂಚಾರಕ್ಕೆ ತೊಂದರೆಯಾಗುವುದಿಲ್ಲ. ಈ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಪಾಲುದಾರ (PPP) ಜಂಟಿ ಸಹಭಾಗಿತ್ವ ಅಥವಾ ಬಿಲ್ಟ್ ಆಪರೇಟ್ ವರ್ಗಾವಣೆ (BOT) ಮೂಲಕ ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಅಲ್ಲದೇ, ಈ ಸುರಂಗ ಮಾರ್ಗವು ಟೋಲ್ಗಳನ್ನು ಒಳಗೊಂಡಿರುತ್ತದೆ. ಒಟ್ಟು 100 ಕಿಲೋ ಮೀಟರ್ ಉದ್ದದ ಸುರಂಗ ಮಾರ್ಗ ನಿರ್ಮಿಸಲಾ ಉದ್ದೇಶಿಸಲಾಗಿದ್ದು, ಮೊದಲ ಹಂತದಲ್ಲಿ 50 ಕಿಲೋ ಮೀಟರ್ ಮಾರ್ಗ ನಿರ್ಮಿಸಲಾಗುತ್ತದೆ.

ಎಲ್ಲೆಲ್ಲಿ ಬರಲಿದೆ ಸುರಂಗ?

ಉತ್ತರದಿಂದ ದಕ್ಷಿಣ ಕಾರಿಡಾರ್ – ಬಳ್ಳಾರಿ ರಸ್ತೆ ಟು ಹೊಸೂರು ರೋಡ್ – ಒಟ್ಟು 27 ಕಿ.ಮೀ – ಯಲಹಂಕ – ಮೇಖ್ರಿ ಸರ್ಕಲ್ ಮಾರ್ಗವಾಗಿ ಕೇಂದ್ರೀಯ ರೇಷ್ಮೆಮಂಡಳಿವರೆಗೆ.

ಪೂರ್ವದಿಂದ ಪಶ್ಚಿಮ ಕಾರಿಡಾರ್ 1 – ಕೆ.ಆರ್ ಪುರದಿಂದ ಗೊರಗುಂಟೆ ಪಾಳ್ಯ – 29 ಕಿಮೀ – ಹಳೇ ಮದ್ರಾಸ್ ರಸ್ತೆ – ಐಟಿಪಿಎಲ್ – ವರ್ತುಲ ರಸ್ತೆ, ರಾಮಮೂರ್ತಿ ನಗರ ಕಡೆಯಿಂದ ಹೊರಗುಂಟೆ ಪಾಳ್ಯವರೆಗೆ

ಪೂರ್ವದಿಂದ ಪಶ್ಚಿಮ ಕಾರಿಡಾರ್ 2 – ಓಲ್ಡ್ ಏರ್ ಪೋರ್ಟ್ ರೋಡ್ ನಿಂದ ಮೈಸೂರು ರಸ್ತೆ – 28.90  ಕಿಮೀ – ವರ್ತೂರು ಕೋಡಿಯಿಂದ ಜ್ಞಾನಭಾರತಿವರೆಗೂ.

ಸಂಪರ್ಕ ಕಾರಿಡಾರ್ 1 – 4.5 ಕಿಮೀ – ಸೇಂಟ್ ಜಾನ್ ಆಸ್ಪತ್ರೆ ಜಂಕ್ಷನ್ ನಿಂದ ಅಗರವರೆಗು ಸಂಪರ್ಕ ಕಾರಿಡಾರ್ 2 – 2.8 ಕಿಮೀ – ಪೂರ್ವ ಪಶ್ಚಿಮ ಕಾರಿಡಾರ್ 1 ಮತ್ತು 2ಕ್ಕೂ ಸಂಪರ್ಕಿಸುವ ಸುರಂಗ ಸಂಪರ್ಕ ಕಾರಿಡಾರ್ 3 – 6.45 ಕಿಮೀ – ವೀಲರ್ಸ್ ರಸ್ತೆ ಜಂಕ್ಷನ್ ನಿಂದ ಹೊರವರ್ತುಲ ರಸ್ತೆಯ ಕಲ್ಯಾಣನಗರಕ್ಕೆ ಸಂಪರ್ಕ ಸುರಂಗ.

suddiyaana