ಫಿಫಾ ವಿಶ್ವಕಪ್ ಫಿಕ್ಸ್ ಆಗಿದ್ಯಾ? – ಈ ಬಾರಿ ಕಪ್ ಅರ್ಜೆಂಟೀನಾಗೆ ಗ್ಯಾರಂಟಿನಾ?
ಅರ್ಜೆಂಟೀನಾ ಪರ ರೆಫರಿಗಳ ಆಟ– ಈಜಿಪ್ಟ್ ಆಟಗಾರರ ಗಂಭೀರ ಆರೋಪ

ಫಿಫಾ ವಿಶ್ವಕಪ್ ಫಿಕ್ಸ್ ಆಗಿದ್ಯಾ? – ಈ ಬಾರಿ ಕಪ್ ಅರ್ಜೆಂಟೀನಾಗೆ ಗ್ಯಾರಂಟಿನಾ?ಅರ್ಜೆಂಟೀನಾ ಪರ ರೆಫರಿಗಳ ಆಟ– ಈಜಿಪ್ಟ್ ಆಟಗಾರರ ಗಂಭೀರ ಆರೋಪ

ಫಿಫಾ ವಿಶ್ವಕಪ್​ನ ಪ್ರಿ-ಕ್ವಾರ್ಟರ್ ಫೈನಲ್​ನಲ್ಲಿ ಈಜಿಪ್ಟ್ ಮತ್ತು ಅರ್ಜೆಂಟೀನಾ ತಂಡಗಳು ಕಣಕ್ಕಿಳಿದಿದ್ದವು. ಇಲ್ಲಿ ಕಾಲ್ಚೆಂಡಿನ ಕಾಳಗ ಎಷ್ಟು ರೋಚಕವಾಗಿತ್ತೋ ಅಷ್ಟೇ ಎದುರಾಳಿ ತಂಡಗಳ ಕಾದಾಟ ಕೂಡಾ ಜೋರಾಗಿಯೇ ಸಾಗಿತ್ತು. ರೆಫರಿಗಳು ಅರ್ಜೆಂಟೀನಾ ಪರವಾಗಿದ್ದರು, ಇಡೀ ಟೂರ್ನ್‌ಮೆಂಟ್ ಫಿಕ್ಸ್ ಆಗಿದೆ ಎಂಬ ಬಲವಾದ ಆರೋಪ ಈಗ ಕೇಳಿಬಂದಿದೆ.

ಇದನ್ನೂ ಓದಿ:ಈಜಿಪ್ಟ್ ವಿರುದ್ಧ ಅರ್ಜೆಂಟೀನಾಗೆ ರೋಚಕ ಜಯ – ಜಸ್ಟ್ 11 ನಿಮಿಷದಲ್ಲಿ ಮೆಸ್ಸಿ ಮ್ಯಾಜಿಕ್

ಅರ್ಜೆಂಟೀನಾ ತಂಡದ ವಿರುದ್ಧ ಹಾಗೂ ಫಿಫಾ ವಿಶ್ವಕಪ್ ಟೂರ್ನಮೆಂಟ್ ವಿರುದ್ದ ಗಂಭೀರ ಆರೋಪ ಕೇಳಿಬಂದಿದೆ. ಫಿಫಾ ವಿಶ್ವಕಪ್ ಫಿಕ್ಸ್​ ಆಗಿದೆ. ಈ ಫಿಕ್ಸಿಂಗ್​ನಂತೆ ಈ ಬಾರಿಯ ವಿಶ್ವಕಪ್​ ಅರ್ಜೆಂಟೀನಾ ತಂಡಕ್ಕೆ ಸಿಗಲಿದೆ ಎಂದು ಈಜಿಪ್ಟ್ ತಂಡದ ಸ್ಟಾರ್ ಫಾರ್ವರ್ಡ್ ಆಟಗಾರ ಮೊಸ್ತಫ ಝಿಕೊ ಗಂಭೀರ ಆರೋಪ ಮಾಡಿದ್ದಾದರೆ. ಜೊತೆಗೆ ಅರ್ಜೆಂಟೀನಾ ಪರ ರೆಫರಿಗಳೇ ಆಟವಾಡುತ್ತಿದ್ದಾರೆ. ಅರ್ಜೆಂಟೀನಾ ಪರ ತಪ್ಪು ತೀರ್ಪುಗಳನ್ನು ನೀಡುತ್ತಿದ್ದಾರೆ. ಇದರಿಂದ ನಮಗೆ ಸೋಲಾಗಿದೆ ಎಂದು ಈಜಿಪ್ಟ್ ತಂಡದ ಮ್ಯಾನೇಜ್‌ಮೆಂಟ್ ಕೂಡಾ ಗಂಭೀರ ಆರೋಪ ಮಾಡಿದ್ದಾರೆ. ಪಂದ್ಯ ಮುಗಿದ ತಕ್ಷಣ ಈಜಿಪ್ಟ್ ಕೋಚ್ ಹೊಸಾಮ್ ಹಸ್ಸನ್, ಈ ವಿಶ್ವಕಪ್ ಅನ್ನು ಅರ್ಜೆಂಟೀನಾ ಪರವಾಗಿಯೇ ನಿರ್ದೇಶಿಸಲಾಗಿದೆ ಎಂದು ಆರೋಪ ಮಾಡಿದ್ದಲ್ಲದೇ, ಈಜಿಪ್ಟ್ ಫುಟ್‌ಬಾಲ್ ಫೆಡರೇಶನ್ ಫಿಫಾಗೆ (FIFA)  ಈ ಬಗ್ಗೆ ಅಧಿಕೃತ ದೂರು ನೀಡಿದೆ.

ನಿರ್ಣಾಯಕ ಪಂದ್ಯದಲ್ಲಿ ಸೋತ ಬಳಿಕ ಮಾತನಾಡಿದ ಝಿಕೊ, ಇಡೀ ಟೂರ್ನಮೆಂಟ್ ಫಿಕ್ಸ್ ಆಗಿದೆ. ಫ್ರೆಂಚ್ ರೆಫರಿ ಫ್ರಾಂಕೋಯಿಸ್ ಲೆಟೆಕ್ಸಿಯರ್ ಅವರ ತೀರ್ಪುಗಳು ಸಂಪೂರ್ಣವಾಗಿ ಅರ್ಜೆಂಟೀನಾ ಪರವಾಗಿದ್ದವು. ಇದು ನ್ಯಾಯವಲ್ಲ, ರೆಫರಿ ಮಾಡಿದ್ದು ತಪ್ಪು. ನಮಗೆ ಸ್ಪಷ್ಟ ಅನ್ಯಾಯವಾಗಿದೆ. ಅವರು ಇಡೀ ದೇಶದ ಶ್ರಮವನ್ನು ವ್ಯರ್ಥ ಮಾಡಿದ್ದಾರೆ. ಪಂದ್ಯದ ಆರಂಭದಿಂದಲೂ ಅವರು ನಮ್ಮ ವಿರುದ್ಧವಾಗಿಯೇ ಇದ್ದರು. ನಾವು ಅರ್ಜೆಂಟೀನಾ ವಿರುದ್ಧ ಗೆಲ್ಲುವುದನ್ನು ಅವರು ಇಷ್ಟಪಡಲಿಲ್ಲ. ಈ ಟೂರ್ನಮೆಂಟ್ ಫಿಕ್ಸ್ ಆಗಿದೆ. ಕಪ್ ಅನ್ನು ಅರ್ಜೆಂಟೀನಾಗೆ ಕೊಡಲು ಮೊದಲೇ ನಿರ್ಧರಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಈ ಪಂದ್ಯದಲ್ಲಿ ಈಜಿಪ್ಟ್ ತಂಡ 2-0 ಮುನ್ನಡೆ ಸಾಧಿಸಿತ್ತು. ಇನ್ನೇನು ಪಂದ್ಯ ಈಜಿಪ್ಟ್ ಪರ ಇದೆ ಅನ್ನೋ ರೀತಿಯೇ ಸಾಗಿತ್ತು. ವಿಶ್ವಕಪ್ ಇತಿಹಾಸದಲ್ಲೇ ಈಜಿಪ್ಟ್ ಚರಿತ್ರೆ ಬರೆಯುವ ತವಕದಲ್ಲಿತ್ತು. ಆದರೆ, ಕೊನೆಯ 15 ನಿಮಿಷಗಳಲ್ಲಿ ಅರ್ಜೆಂಟೀನಾ 3 ಗೋಲುಗಳನ್ನು ಬಾರಿಸಿ ಈಜಿಪ್ಟ್ ಲೆಕ್ಕಾಚಾರವನ್ನು ತಲೆಕೆಳಗು ಮಾಡಿತ್ತು. ಆದರೆ, ಅರ್ಜೆಂಟೀನಾದ ಈ ಗೆಲುವು ನ್ಯಾಯವಾಗಿ ಸಿಕ್ಕಿದ್ದಲ್ಲ. ಇದು ರೆಫರಿಗಳು ಅರ್ಜೆಂಟೀನಾ ಪರ ಆಟವಾಡಿದ್ದಕ್ಕೆ ಸಿಕ್ಕ ಜಯ ಎಂಬ ಗಂಭೀರ ಆರೋಪ ಕೇಳಿಬಂದಿದೆ.

Sulekha

Leave a Reply

Your email address will not be published. Required fields are marked *