ಪ್ರೀತಿಯಲ್ಲಿ ಬಿದ್ದ ಕಾವ್ಯ ಮಾರನ್.. SRH ಮಾಲಕಿಗೆ ಶೀಘ್ರದಲ್ಲೇ ಮದುವೆ – ಕಾವ್ಯ ಬಾಯ್‌ಫ್ರೆಂಡ್ ಇವರಾ?

ಐಪಿಎಲ್ ಕಾವು ಜೋರಾಗಿದೆ. ಎಲ್ಲಾ ತಂಡದ ಆಟಗಾರರು ಹೊಡಿ ಬಡಿ ಆಟ ಆಡ್ತಿದ್ದಾರೆ. ಈ ಬಾರಿಯ ಐಪಿಎಲ್ ಹೈ ಸ್ಕೋರ್ ಪಂದ್ಯಗಳಿಗೆ ಸಾಕ್ಷಿ ಆಗ್ತಿದೆ. ಆದ್ರೆ ಕೆಲವೊಂದು ತಂಡಗಳಲ್ಲಿ ಆಟಗಾರರಿಗಿಂತ ಓನರ್ ಹೆಚ್ಚು ಶೈನಾಗಿದ್ದು ಈ ಐಪಿಎಲ್ ಸೀಸನ್ ನ ಸ್ಪೆಷಾಲಿಟಿ. ಇವರ ಪೈಕಿ ಕಾವ್ಯ ಮಾರನ್ ಕೂಡ ಒಬ್ರು.. ಸನ್‌ರೈಸರ್ಸ್ ಹೈದ್ರಾಬಾದ್ ಒಡತಿ ಕಾವ್ಯ ಮಾರನ್ ಎಲ್ಲಾ ಸೀಸನ್‌ಗಳಲ್ಲೂ ಮೈನ್ ಅಟ್ರಾಕ್ಷನ್. ಕಾವ್ಯ ಮಾರನ್ ನಗು, ಕೋಪ, ಹುಸಿ ಮುನಿಸು ಜೊತೆಗೊಂದಿಷ್ಟು ಕಣ್ಣೀರು. ಇವ್ರ ಎಲ್ಲಾ ತರಹದ ಎಕ್ಸಪ್ರೆಷನ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇರುತ್ತೆ.. ಆದ್ರೀಗ ಕಾವ್ಯಾ ಮಾರನ್ ಬೇರೆ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.. ಈ ಬ್ಯೂಟಿ ಈಗ ಪ್ರೀತಿಯಲ್ಲಿ ಬಿದ್ದಿದ್ದಾರಂತೆ.. ಸ್ಟಾರ್ ಡೈರೆಕ್ಟರ್ ಜೊತೆ ಡೇಟಿಂಗ್ ಮಾಡ್ತಿದ್ದಾರಂತೆ. ಅಷ್ಟಕ್ಕೂ ಆ ಡೈರೆಕ್ಟರ್ ಯಾರು? ಇವರಿಬ್ಬರು ಡೇಟಿಂಗ್ ನಡೆಸ್ತಿರೋದು ನಿಜಾನಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕಂಠಿ, ಸ್ನೇಹಾ ಮದ್ವೆಗೆ ಒಪ್ಪಿದ ಪುಟ್ಟಕ್ಕ.. ಮದುವೆಗೆ ಬಂಗಾರಮ್ಮನೇ ವಿಲನ್! – ಅಮ್ಮಾವ್ರಿಂದ ಪುಟ್ಟಕ್ಕ ದೂರ?
ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಸದಾ ಸುದ್ದಿಯಲ್ಲಿರುತ್ತಾರೆ. ತಮ್ಮ ತಂಡವನ್ನು ಹುರಿದುಂಬಿಸುವಲ್ಲಿ ಸದಾ ಮುಂದೆ ಇರ್ತಾರೆ ಕಾವ್ಯಾ ಮಾರನ್. ತಂಡ ಗೆದ್ದಾಗ ಕುಣಿದು ಕುಪ್ಪಳಿಸಿ ಖುಷಿ ಪಡ್ತಾರೆ.. ಸೋತಾಗ ಕಣ್ಣಿರು ಹಾಕ್ತಾರೆ.. ಸಪ್ಪೆ ಮೋರೆ ಹಾಕಿಕೊಂಡು ಕೂರ್ತಾರೆ. ಹೀಗಾಗೇ SRH ಟೀಮ್ ಆಡುವ ಮ್ಯಾಚ್ ವೇಳೆ ಗ್ಯಾಲರಿಯಲ್ಲಿ ಕುಳಿತ ಕಾವ್ಯಾ ಕಡೆ ಕ್ಯಾಮರಾ ಫೋಕಸ್ ಆಗುತ್ತಿರುತ್ತದೆ. ಆಕೆಯ ಡಿಫ್ರೆಂಟ್ ಡಿಫ್ರೆಂಟ್ ಎಕ್ಸ್‌ಪ್ರೆಷನ್ ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡ್ತಿರುತ್ತೆ. ಇದು ಮ್ಯಾಚ್ ವಿಚಾರ ಆದ್ರೆ, ಮತ್ತೊಂದು ಕಡೆ ಕಾವ್ಯ ಪರ್ಸನಲ್ ಲೈಫ್ ಕೂಡ ಚರ್ಚೆ ಆಗ್ತಾನೆ ಇರುತ್ತೆ. ಈಕೆಯ ಆಸ್ತಿ ವಿಚಾರ ಒಂದೆಡೆ ಸುದ್ದಿಯಾದ್ರೆ ಮತ್ತೊಂದೆಡೆ ಮದುವೆ ವಿಚಾರ, ಡೇಟಿಂಗ್ ಗಾಸಿಪ್ ಹರಿದಾಡ್ತಿರುತ್ತೆ.. ಇದೀಗ ಮತ್ತೆ ಅಂತಹದ್ದೇ ಒಂದು ವಿಚಾರ ಮುನ್ನೆಲೆಗೆ ಬಂದಿದೆ.
ಕಾವ್ಯ ಮಾರನ್ ಟೀಮ್ ಇಂಡಿಯಾ ಆಟಗಾರರಾಗ ರಿಷಬ್ ಪಂತ್ ಹಾಗೂ ಅಭಿಷೇಕ್ ಶರ್ಮಾ ಜೊತೆಗೂ ಕಾವ್ಯ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಗಾಸಿಪ್ ಹರಿದಾಡಿತ್ತು. ಇದೀಗ ಕಾವ್ಯ ಮಾರನ್ ಖ್ಯಾತ ಸಂಗೀತ ನಿರ್ದೇಶಕನ ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನೋ ಸುದ್ದಿ ಜೋರಾಗಿ ಸದ್ದು ಮಾಡ್ತಿದೆ. ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ.. ಶೀಘ್ರದಲ್ಲೇ ಮದುವೆ ಕೂಡ ಆಗಲಿದ್ದಾರೆ ಅನ್ನೋ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗ್ತಿದೆ.
ಅಂದ್ಹಾಗೆ ಅನಿರುದ್ಧ್ ರವಿಚಂದರ್ ಹುಟ್ಟಿ, ಬೆಳೆದಿದ್ದೆಲ್ಲಾ ಚೆನ್ನೈನಲ್ಲೇ. ರವಿಚಂದರ್ ಚಿಕ್ಕಂದಿನಿಂದಲೂ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ರಜನಿಕಾಂತ್ ಪತ್ನಿ ಲತಾ ಅವರ ಸೋದರ ಸಂಬಂಧಿ ಈತ. ಹಾಗಾಗಿ ಚಿತ್ರರಂಗಕ್ಕೆ ಬರೋದು ಕಷ್ಟವಾಗಲಿಲ್ಲ. ಐಶ್ವರ್ಯ ರಜನಿಕಾಂತ್ ನಿರ್ದೇಶನದಲ್ಲಿ ಧನುಷ್ ನಟಿಸಿದ ‘3’ ಚಿತ್ರಕ್ಕೆ ಅನಿರುದ್ಧ್ ಮ್ಯೂಸಿಕ್ ಕಂಪೋಸ್ ಮಾಡಿದ್ರು. ಆ ಚಿತ್ರದ ‘ಕೊಲವೆರಿ ಡಿ’ ಸಾಂಗ್ ವಿಶ್ವದಾದ್ಯಂತ ಸದ್ದು ಮಾಡಿತ್ತು. ಬಳಿಕ ಸಾಲು ಸಾಲು ಹಿಟ್ ಸಿನಿಮಾಗಳಿಗೆ ಅನಿರುದ್ಧ್ ಮ್ಯೂಸಿಕ್ ಕಂಪೋಸ್ ಮಾಡಿದರು. ನೋಡ ನೋಡುತ್ತಲೇ ಸೌತ್ ಸಿನಿದುನಿಯಾದ ಟಾಪ್ ಮ್ಯೂಸಿಕ್ ಡೈರೆಕ್ಟರ್ ಪಟ್ಟಕ್ಕೇರಿದರು. ತಮ್ಮ ಸೂಪರ್ ಹಿಟ್ ಸಂಗೀತದಿಂದ ಸೌತ್ ಸಿನಿದುನಿಯಾದಲ್ಲಿ ರಾಕ್‌ಸ್ಟರ್ ಅಂತ್ಲೇ ಅನಿರುದ್ಧ್ ಜನಪ್ರಿಯರಾಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ‘ಕೂಲಿ’ ಹಾಗೂ ‘ಜೈಲರ್’-2 ಚಿತ್ರದಲ್ಲಿ ಕೂಡ ರಾಕ್‌ಸ್ಟರ್ ಮ್ಯೂಸಿಕ್ ಸೌಂಡ್ ಮಾಡಲಿದೆ.
ಅನಿರುದ್ಧ್ ಗೆ ನೇಮ್ ಫೇಮ್ ಬರ್ತಿದ್ದಂತೆ ಅವ್ರ ಹೆಸ್ರು ಬರ್ತಿದ್ದಂತೆ ಅವ್ರ ಜೊತೆ ಒಂದೊಂದು ಹೆಸ್ರು ಕೂಡ ತಳುಕು ಹಾಕಿಕೊಳ್ಳಲು ಶುರುವಾಯ್ತು. ಈ ಹಿಂದೆ ಕೀರ್ತಿ ಸುರೇಶ್ ಸೇರಿ ಕೆಲ ನಟಿಯರ ಜೊತೆ ಅನಿರುದ್ಧ್ ಹೆಸರು ತಳುಕು ಹಾಕಿಕೊಂಡಿತ್ತು. ಇದೀಗ ಕಾವ್ಯಾ ಮಾರನ್ ಹಾಗೂ ಅನಿರುದ್ಧ್ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಊಹಾಪೋಹ ಭಾರೀ ಸದ್ದು ಮಾಡ್ತಿದೆ. ಆದರೆ ಬಹುತೇಕರು ಇದನ್ನು ನಂಬಲು ಸಿದ್ಧರಿಲ್ಲ. ಮುಂದಿನ ದಿನಗಳಲ್ಲಿ ಕಾವ್ಯ ಮಾರನ್ ಹರಿದಾಡ್ತಿರೋ ಗಾಳಿ ಸುದ್ದಿಗೆ ಬ್ರೇಕ್ ಹಾಕ್ತಾರಾ ಅಂತಾ ಕಾದು ನೋಡ್ಬೇಕು.