ಸಂಜು ಸೈಡ್‌ಲೈನ್ ಸರಿನಾ? – ವೈಭವ್ ಎಂಟ್ರಿಗೆ ಬೇರೆ ಯಾರನ್ನೂ ಡ್ರಾಪ್ ಮಾಡಲು ಆಗಲ್ವಾ?

ಸಂಜು ಸೈಡ್‌ಲೈನ್ ಸರಿನಾ? – ವೈಭವ್ ಎಂಟ್ರಿಗೆ ಬೇರೆ ಯಾರನ್ನೂ ಡ್ರಾಪ್ ಮಾಡಲು ಆಗಲ್ವಾ?

ಬಾಸ್ ಬೇಬಿ ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾದಲ್ಲಿ ಆಡಬೇಕು. ಇದು ಕೋಟಿ ಕೋಟಿ ಭಾರತೀಯರಿಗೆ ಸಂಭ್ರಮದ ವಿಚಾರ. ಆದರೆ, ವೈಭವ್ ಎಂಟ್ರಿಯಾಗಬೇಕಾದರೆ ಸಂಜು ಸ್ಯಾಮ್ಸನ್ ಹೊರಗೆ ಯಾಕೆ ಹೋಗಬೇಕು ಅನ್ನೋ ಪ್ರಶ್ನೆ ಎದ್ದಿದೆ. ವೈಭವ್ ಗಾಗಿ ಬೇರೆ ಯಾರನ್ನೂ ಡ್ರಾಪ್ ಮಾಡಲು ಆಗಲ್ವಾ ಎಂಬ ವಿಚಾರದ ಬಗ್ಗೆ ಚರ್ಚೆಯಾಗುತ್ತಿದೆ.

ಇದನ್ನೂ ಓದಿ:ಶ್ರೇಯಸ್ ಕೈ ತಪ್ಪುತ್ತಾ ಕ್ಯಾಪ್ಟನ್ಸಿ? – 2026ರ ಸರಣಿಗಳನ್ನ ಗೆದ್ರಷ್ಟೇ ಸೇಫ್?

ಮ್ಯಾಚೆಂಸ್ಟರ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದ ಮೂಲಕ ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಿದ್ದಾರೆ. ಇತ್ತ ವೈಭವ್ ಕೆರಿಯರ್ ಶುರುವಾಗುತ್ತಿದ್ದಂತೆ, ಅತ್ತ ಸಂಜು ಸ್ಯಾಮ್ಸನ್ ಸೈಡ್ ಲೈನ್ ಆಗಿದ್ದಾರೆ. ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರ ಈ ನಿರ್ಧಾರಕ್ಕೆ  ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ಗೆದ್ದಿದ್ದ ಮ್ಯಾಚ್ ವಿನ್ನರ್ ಸ್ಯಾಮ್ಸನ್‌ನನ್ನು ಕೇವಲ 3 ಪಂದ್ಯಗಳ ವೈಫಲ್ಯದ ಆಧಾರದ ಮೇಲೆ ದಿಢೀರ್ ಆಗಿ ಕೈಬಿಟ್ಟಿರುವುದು ಅಚ್ಚರಿಯ ನಿರ್ಧಾರ. ಒಂದು ವೇಳೆ ಅವರಿಗೆ ಗಾಯವಾಗಿದ್ದರೆ ಮಾತ್ರ ಈ ನಿರ್ಧಾರ ಒಪ್ಪಬಹುದು, ಇಲ್ಲದಿದ್ದರೆ ಇದು ಕ್ರಿಕೆಟ್ ಇತಿಹಾಸದ ಅತ್ಯಂತ ದುರಾದೃಷ್ಟದ ಆಯ್ಕೆ ಎಂದು ಸಂಜಯ್ ಮಂಜ್ರೇಕರ್ ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಬರೆದುಕೊಂಡಿದ್ದಾರೆ. 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರಿಗೆ ಪಾದಾರ್ಪಣೆ ಮಾಡಲು ಮ್ಯಾನೇಜ್‌ಮೆಂಟ್ ಬಯಸಿದ್ದರೆ, ಅದಕ್ಕೆ ಸ್ಯಾಮ್ಸನ್ ಅವರನ್ನು ಬಲಿಪಶು ಮಾಡುವ ಅಗತ್ಯವಿರಲಿಲ್ಲ ಎಂಬುದು ಮಂಜ್ರೇಕರ್ ವಾದ ಮಾಡಿದ್ದಾರೆ. ಸಂಜು ಸ್ಯಾಮ್ಸನ್ ಅವರನ್ನು ಆಡುವ ಹನ್ನೊಂದರ ಬಳಗದಲ್ಲೇ ಉಳಿಸಿಕೊಂಡು, ನಂಬರ್ 3 ಬ್ಯಾಟಿಂಗ್ ಸ್ಥಾನಕ್ಕೆ ಕಳುಹಿಸಬಹುದಿತ್ತು. ಆದರೆ ಅವರನ್ನು ಏಕಾಏಕಿ ಪ್ಲೇಯಿಂಗ್ ಇಲೆವೆನ್​ನಿಂದ ಹೊರಗಿಟ್ಟಿದ್ದಾರೆ. ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಏನು ತಮಾಷೆ ಮಾಡುತ್ತಿದ್ದಾರಾ? ಎಂಬುದೇ ಅರ್ಥವಾಗುತ್ತಿಲ್ಲ.ಇದೊಂದು ನಂಬಲಾಗದ ನಿರ್ಧಾರ ಎಂದು ಮಂಜ್ರೇಕರ್ ಅಸಮಾಧಾನ ಹೊರಹಾಕಿದ್ದಾರೆ.

Sulekha

Leave a Reply

Your email address will not be published. Required fields are marked *