ಗಿಲ್‌ ದಿಲ್‌ ಕದ್ದಿದ್ದು ಸಾರಾ ಅಲ್ವಾ? – ಸ್ಟಾರ್‌ ನಟಿ ಜೊತೆ ಶುಭ್ಮನ್‌ ಡೇಟಿಂಗ್

ಗಿಲ್‌ ದಿಲ್‌ ಕದ್ದಿದ್ದು ಸಾರಾ ಅಲ್ವಾ? – ಸ್ಟಾರ್‌ ನಟಿ ಜೊತೆ ಶುಭ್ಮನ್‌ ಡೇಟಿಂಗ್

ಗಿಲ್‌ ದಿಲ್‌ ಕದ್ದಿದ್ದು ಯಾರು? ಸದ್ಯ ಕ್ರಿಕೆಟ್‌ ಪ್ರೇಮಿಗಳನ್ನ ಕಾಡ್ತಿರೋದು ಇದೊಂದೇ ಪ್ರಶ್ನೆ.. ಒಂದೊಂದು ಟೂರ್ನಿಯಲ್ಲೂ ಗಿಲ್‌ ಜೊತೆ ಒಂದೊಂದು ಹೆಸ್ರು ತಳುಕು ಹಾಕಿಕೊಳ್ಳೋದು ಕಾಮನ್..‌ ಇದೀಗ ಚಾಂಪಿಯನ್ಸ್‌ ಟ್ರೋಫಿ ಮುಗಿದಿದೆ.. ಟ್ರೋಫಿ ಗೆದ್ದ ಖುಷಿಯಲ್ಲಿ ಶುಭ್ಮನ್‌ ಗಿಲ್‌ ಇದ್ದಾರೆ.. ಆದ್ರೆ ಫಾನ್ಸ್‌ ಮಾತ್ರ ಗಿಲ್‌ ಹುಡುಗಿ ಬಗ್ಗೆ ಚರ್ಚೆ ಮಾಡ್ತಿದ್ದಾರೆ. ಗಿಲ್‌ ದಿಲ್‌ ಕದ್ದಿದ್ದು ಸಾರಾ ಅಲ್ಲ ಮತ್ತೊಬ್ಳು ಅಂತಾ ಹೇಳ್ತಿದ್ದಾರೆ. ಹಾಗಾದ್ರೆ ಗಿಲ್‌ ಹೃದಯ ಕದ್ದ ಚೆಲುವೆ ಯಾರು? ಅವ್ರು ಏನ್‌ ಮಾಡ್ತಿದ್ದಾರೆ.

ಟೀಮ್ ಇಂಡಿಯಾದ ಪ್ರಿನ್ಸ್​ ಹಾಗೂ ಉಪನಾಯಕ ಶುಭಮನ್ ಗಿಲ್ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ರು.. ಗಿಲ್‌ ಟ್ರೋಫಿ ಗೆದ್ದ ಖುಷಿಯಲ್ಲಿ ತೇಲಾಡ್ತಿದ್ರೆ.. ಇತ್ತ ಲವ್ ಲೈಫ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.. ಹೌದು, ಗಿಲ್‌ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌  ಮಗಳು ಸಾರಾ ತೆಂಡೂಲ್ಕರ್‌ ಜೊತೆ ಡೇಟಿಂಗ್‌ ನಡೆಸ್ತಿದ್ದಾರೆ ಅಂತಾ ಹೇಳಲಾಗ್ತಿತ್ತು.. ಅವರಿಬ್ರು ಒಟ್ಟಿಗೆ ಇರೋ ಫೋಟೋ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.. ಅದಾದ್ಮೇಲೆ ಸಾರಾ ತೆಂಡೂಲ್ಕರ್‌ ಅಲ್ಲ.. ಸಾರಾ ಅಲಿಖಾನ್‌ ಜೊತೆಗೆ ಡೇಟಿಂಗ್‌ ಮಾಡ್ತಿದ್ದಾರೆ ಅನ್ನೋ ವಿಚಾರ ಸದ್ದು ಮಾಡಿತ್ತು.. ಅದಾದ್ಮೇಲೆ ಗಿಲ್‌ ಹಾಗೂ ಸಾರಾ ಸೋಶಿಯಲ್‌ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡ್ಕೊಂಡ್ರು.. ಈ ಬೆಳವಣಿಗೆ ನೋಡಿದ ಫ್ಯಾನ್ಸ್‌ ಇವರಿಬ್ರು ಬ್ರೇಕ್‌ಅಪ್‌ ಮಾಡ್ಕೊಂಡ್ರು ಅಂತಾ ಹೇಳಿದ್ರು.. ಆದ್ರೀಗ ಮನಸ್ಸು ಕದ್ದ ಚೆಲುವೆ ಸಾರಾ ಅಲ್ಲ ಬೇರೊಬ್ಬರು.. ಶುಭಮನ್​ ಈ ಯಂಗ್ ನಟಿಗೆ ಮನಸ್ಸು ಕೊಟ್ಟಿದ್ದಾರೆ ಅಂತಾ ಹೇಳಲಾಗ್ತಿದೆ.

ಗಿಲ್‌ ಡೇಟಿಂಗ್‌ ಮಾಡ್ತಿರೋದು ಬಾಲಿವುಡ್‌ ನಟಿಯೊಂದಿಗೆ ಅನ್ನೋ ಮ್ಯಾಟರ್‌ ರಿವೀಲ್‌ ಆಗಿದೆ. ಆ ನಟಿ ಬೇರೆ ಯಾರು ಅಲ್ಲ.. ಅವನೀತ್ ಕೌರ್.. ಈಕೆ ಸಿನಿಮಾ ಮಾತ್ರವಲ್ಲದೇ ಹಿಂದಿಯ ಕಿರುತೆರೆಯಲ್ಲೂ ನಟಿಸಿದ್ದಾರೆ. ಧಾರಾವಾಹಿಗಳಿಗಿಂತ ರಿಯಾಲಿಟಿ ಶೋಗಳಲ್ಲಿಯೇ ಹೆಚ್ಚು ಕಾಣಿಸಿಕೊಂಡಿರುವ ಅವನೀತ್, ಹಾಲಿವುಡ್‌ಗೆ ಲಗ್ಗೆ ಇಟ್ಟಿದ್ದಾರೆ. ಟಾಮ್ ಕ್ರೂಸ್ ಜೊತೆ ಮಿಷನ್ ಇಂಪಾಸಿಬಲ್‌ನಲ್ಲಿ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರ ಈ ವರ್ಷ ತೆರೆಗೆ ಬರೋ ಸಾಧ್ಯತೆ ಇದೆ. ಇನ್ನು ಅವನೀತ್‌ ಕೌರ್‌ ಕೆಲ ಜಾಹಿರಾತುಗಳಲ್ಲೂ ನಟಿಸಿದ್ದಾರೆ.. ಲೈಫ್‌ ಬಾಯ್‌ ಸೋಪ್‌ ಜಾಹೀರಾತಿನಲ್ಲೂ ನಟಿಸಿದ್ರು.. ಬಂಟಿ ನಿನ್ನ ಸಾಬೂನು ಸ್ಲೋ ನಾ‌ ಅನ್ನೋ ಡೈಲಾಗ್‌ ಮೂಲಕವೇ ಕೌರ್ ಸಖತ್‌ ಫೇಮಸ್‌ ಆಗಿದ್ರು.. ಅದಾದ್ಮೇಲೆ ಅವನೀತ್‌,  ಕ್ಲಿನಿಕ್‌ ಪ್ಲಸ್‌, ಹೀರೋ ಸ್ಪ್ಲೆಂಡರ್‌ ಹಾಗೂ ಕೊಕಾ ಕೋಲಾ ಮುಂತಾದ ಜಾಹೀರಾತುಗಳಲ್ಲಿಯೂ ನಟಿಸಿದ್ದಾರೆ.. ಇದೀಗ ಅವನೀತ್ ಕೌರ್ ಮತ್ತು ಶುಭಮನ್ ಗಿಲ್ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಸುದ್ದಿ ಗುಲ್ಲೆಬ್ಬಿದೆ. ಇದಕ್ಕೆ ಪೂರಕವಾಗಿ ಅವನೀತ್ ಕೌರ್ ಮೊನ್ನೆ ದುಬೈನಲ್ಲಿ ನಡೆದಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸೆಮಿ ಫೈನಲ್ ಪಂದ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಭಾರತ ತಂಡವನ್ನು ಹುರಿದುಂಬಿಸಿದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಅವನೀತ್ ಮೈದಾನದಲ್ಲಿ ಇರುವ ಫೋಟೊಗಳು ವೈರಲ್ ಆಗಿದ್ದು ಅನೇಕರು ಗಿಲ್.. ಗಿಲ್.. ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಅತ್ತಿಗೆ ಚೆನ್ನಾಗಿದ್ದಾರೆ ಅಂತಾ ಶುಭಮನ್ ಗಿಲ್ ಕಾಲೆಳೆಯುತ್ತಿದ್ದಾರೆ. ಇನ್ನು ಕೆಲವರು ಅವನೀತ್ ಕೌರ್ ಕ್ರಿಕೆಟಿಗರನ್ನು ಮೆಚ್ಚಿಸಲು ಅವರ ಗಮನವನ್ನು ಸೆಳೆಯಲು ಆಗಾಗ ಹೀಗೆ ಸ್ಟೇಡಿಯಂಗೆ ಬರ್ತಾರೆ.. ಗಿಲ್‌ ಹಾಗೂ ಕೌರ್‌ ಮಧ್ಯೆ ಏನೂ ಇಲ್ಲ ಅಂತಾ ಹೇಳಿದ್ದಾರೆ. ಆದ್ರೆ ಈ ಬಗ್ಗೆ ಗಿಲ್‌ ಆಗ್ಲೀ ಅವನೀತ್‌ ಆಗ್ಲೀ ಎಲ್ಲೂ ಸ್ಪಷ್ಟನೆ ನೀಡಿಲ್ಲ.. ಆದ್ರೆ ಶುಭಮನ್ ಗಿಲ್​ ಹಾಗೂ ಅವನೀತ್ ಕೌರ್​ ಡೇಟಿಂಗ್ ವಿಚಾರ ವೈರಲ್ ಆಗ್ತಿದ್ದಂತೆ. ಸಾರಾ ಪರ ನಿಂತ ಫ್ಯಾನ್ಸ್​, ಸಚಿನ್‌ ಮಗಳು ಸಾರಾಗೆ ಗಿಲ್ ಕೈ ಕೊಟ್ರಾ ಅಂತ ಕಮೆಂಟ್ ಮಾಡ್ತಿದ್ದಾರೆ.​

Shwetha M

Leave a Reply

Your email address will not be published. Required fields are marked *